ದಿನ ಭವಿಷ್ಯ ನವೆಂಬರ್ 13: ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?

ವೈದಿಕ ಶಾಸ್ತ್ರದ ಪ್ರಕಾರ ದೀಪಾವಳಿ ದಿನದ ರಾಶಿಫಲ ನೀಡಿದ್ದು ಈ ದಿನ 13 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಸಂಗಾತಿಯೊಂದಿಗಿನ ಸಂಬಂಧದಲ್ಲಿ ಉತ್ತಮ ಹೊಂದಾಣಿಕೆ ಇರಲಿದೆ. ಇಂದು ನಿಮ್ಮ ಪ್ರೀತಿಪಾತ್ರರು ಕೆಲವು ದೊಡ್ಡ ಸಾಧನೆಗಳನ್ನು ಮಾಡಬಹುದು. ನೀವು ಅವಿವಾಹಿತರಾಗಿದ್ದರೆ ಮತ್ತು ನಿಮ್ಮ ದಾಂಪತ್ಯದಲ್ಲಿ ಯಾವುದೇ ಅಡೆತಡೆಗಳು ಕಂಡುಬಂದರೆ, ನಿಮ್ಮ ಸಮಸ್ಯೆಯು ಪರಿಹಾರವಾಗುತ್ತದೆ. ಹಣದ ವಿಷಯದಲ್ಲಿ ದಿನವು ದುಬಾರಿಯಾಗಲಿದೆ. ವೆಚ್ಚಗಳು ಅಧಿಕವಿರಬಹುದು. ಈ ಬಗ್ಗೆ ಗಮನಹರಿಸದಿದ್ದರೆ ಭವಿಷ್ಯದಲ್ಲಿ ದೊಡ್ಡ ತೊಂದರೆಯನ್ನು ಎದುರಿಸಬೇಕಾಗುತ್ತದೆ. ನಿಮ್ಮ ಎಲ್ಲಾ ಕೆಲಸವನ್ನು ನೀವು ಮುಂಚಿತವಾಗಿ ಯೋಜಿಸಿದರೆ ಅದು ಉತ್ತಮವಾಗಿರುತ್ತದೆ. ಆರೋಗ್ಯವನ್ನು ನಿರ್ಲಕ್ಷ್ಯ ಮಾಡಬೇಡಿ.
ಅದೃಷ್ಟದ ಬಣ್ಣ: ಮರೂನ್
ಅದೃಷ್ಟದ ಸಂಖ್ಯೆ: 6
ಶುಭ ಸಮಯ: ಮಧ್ಯಾಹ್ನ 2 ರಿಂದ 4:30 ರವರೆಗೆ

Dina Bhavishya

ವೃಷಭ ರಾಶಿ
ಮನೆಯ ವಾತಾವರಣ ಚೆನ್ನಾಗಿರಲಿದೆ. ಈ ದಿನ ನಿಮಗೆ ಉತ್ತಮವಾಗಿರಲಿದೆ. ನಿಮ್ಮ ಯಾವುದೇ ಕೆಲಸವು ದೀರ್ಘಕಾಲದಿಂದ ಬಾಕಿ ಉಳಿದಿದ್ದರೆ, ಅದು ಪೂರ್ಣಗೊಳ್ಳುವ ಬಲವಾದ ಸಾಧ್ಯತೆಯಿದೆ. ವ್ಯಾಪಾರದಲ್ಲಿ ತೊಡಗಿರುವವರು ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಬೇಕಾಗಬಹುದು. ಆತುರದದಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ, ನೀವು ನಿದ್ರಾಹೀನತೆಯಿಂದ ಬಳಲುತ್ತಿರಬಹುದು, ಅನಗ್ಯತ ಚಿಂತೆಗಳಿಂದ ಹೊರಬನ್ನಿ.
ಅದೃಷ್ಟದ ಬಣ್ಣ: ಪೀಚ್
ಅದೃಷ್ಟದ ಸಂಖ್ಯೆ: 19
ಶುಭ ಸಮಯ: ಬೆಳಗ್ಗೆ 6:50 ರಿಂದ 9:20 ರವರೆಗೆ

ಮಿಥುನ ರಾಶಿ
ವ್ಯಾಪಾರಸ್ಥರಿಗೆ ಇಂದು ಬಹಳ ಒಳ್ಳೆಯ ದಿನವಾಗಲಿದೆ. ಉದ್ಯೋಗಸ್ಥರು ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಪಡೆಯಲು ತಾಳ್ಮೆಯಿಂದಿರಬೇಕು. ಶೀಘ್ರದಲ್ಲೇ ನಿಮ್ಮ ಕಠಿಣ ಪರಿಶ್ರಮ ಯಶಸ್ವಿಯಾಗುತ್ತದೆ. ಹಣದ ವಿಷಯದಲ್ಲಿ ಇಂದು ನಿಮಗೆ ಒಳ್ಳೆಯ ದಿನವಾಗಿರುತ್ತದೆ. ನಿಮ್ಮ ಉಳಿತಾಯ ಹೆಚ್ಚಾಗಲಿದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿಯು ಪ್ರತಿಕೂಲವಾಗಿ ಕಾಣುತ್ತದೆ. ಆರೋಗ್ಯದ ಬಗ್ಗೆ ಗಮನಹರಿಸಿ.
ಅದೃಷ್ಟದ ಬಣ್ಣ: ಗಾಢ ಕೆಂಪು
ಅದೃಷ್ಟದ ಸಂಖ್ಯೆ: 21
ಶುಭ ಸಮಯ: ಸಂಜೆ 5:10 ರಿಂದ 8:10 ರವರೆಗೆ

ಕರ್ಕ ರಾಶಿ
ವಿದ್ಯಾರ್ಥಿಗಳಿಗೆ ಇಂದು ಬಹಳ ಒಳ್ಳೆಯ ದಿನವಾಗಲಿದೆ. ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ನೀವು ಯೋಜಿಸುತ್ತಿದ್ದರೆ, ನಿಮಗೆ ಹತ್ತಿರವಿರುವವರ ಸಹಾಯ ಪಡೆಯಬಹುದು. ಕುಟುಂಬ ಜೀವನದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ. ಮಕ್ಕಳೊಂದಿಗೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ ಅಂತ ಬೇಸರವಾಗಬಹುದು, ಸಾಧ್ಯವಾದರೆ, ವಾರಾಂತ್ಯದಲ್ಲಿ ಅವರ ಜೊತೆ ಚಿಕ್ಕ ಪ್ಲ್ಯಾನ್ ಮಾಡಿ. ಈ ದಿನ ಕೆಲಸದಿಂದಾಗಿ ಆಯಾಸ ಹೆಚ್ಚಾಗುವುದು.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 4
ಶುಭ ಸಮಯ: ಮಧ್ಯಾಹ್ನ 1 ರಿಂದ ಸಂಜೆ 5 ರವರೆಗೆ

ಸಿಂಹ ರಾಶಿ
ಕುಟುಂಬ ಸದಸ್ಯರ ಜೊತೆಗೆ ಮನಸ್ತಾಪವಾಗದಂತೆ ಜಾಗ್ರತೆವಹಿಸಿ. ನೀವು ಕೋಪದಿಂದ ವರ್ತಿಸಿದರೆ ಸಂಬಂಧಗಳು ಹಾಳಾಗಬಹುದು. ಕಚೇರಿಯಲ್ಲಿ, ನಿಮ್ಮ ಪ್ರಮುಖ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಸಲಹೆ ನೀಡಲಾಗುವುದು. ನೀವು ಇತ್ತೀಚೆಗೆ ನಷ್ಟವನ್ನು ಅನುಭವಿಸಿದರೆ, ಅದನ್ನು ಇಂದು ಸರಿದೂಗಿಸಬಹುದು. ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 12
ಶುಭ ಸಮಯ: ಬೆಳಗ್ಗೆ 4:30 ರಿಂದ 8:50 ರವರೆಗೆ

ಕನ್ಯಾ ರಾಶಿ
ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಹಣದ ವಿಷಯದಲ್ಲಿ ದಿನವು ಉತ್ತಮವಾಗಿರುತ್ತದೆ. ನಿಮ್ಮ ಆದಾಯವು ಉತ್ತಮವಾಗಿರಲಿದೆ. ಕಚೇರಿಯ ವಾತಾವರಣವು ಸಕಾರಾತ್ಮಕವಾಗಿರುತ್ತದೆ. ಆರ್ಥಿಕವಾಗಿ ಒಳ್ಳೆಯ ದಿನ. ವ್ಯಾಪಾರಸ್ಥರ ಪ್ರಮುಖ ಸಮಸ್ಯೆಯು ಪರಿಹರಿಸಲ್ಪಡುತ್ತದೆ, ಬರಬೇಕಾಗಿರುವಲಾಭಗಳು ಸಿಗುತ್ತವೆ. ಆರೋಗ್ಯಕ್ಕೆ ಸಂಬಂಧಿಸಿದಂತೆ, ನೀವು ಕೆಮ್ಮು, ಶೀತ, ಕಫ ಮುಂತಾದ ಸಮಸ್ಯೆಗಳಿಂದ ಬಳಲುತ್ತಿರಬಹುದು.
ಅದೃಷ್ಟದ ಬಣ್ಣ: ಬೂದು
ಅದೃಷ್ಟದ ಸಂಖ್ಯೆ: 11
ಶುಭ ಮುಹೂರ್ತ: ಮಧ್ಯಾಹ್ನ 12 ರಿಂದ 2 ರವರೆಗೆ

ತುಲಾ ರಾಶಿ
ಕೆಲಸದ ವಿಷಯದಲ್ಲಿ ಇಂದು ನಿಮಗೆ ಬಹಳ ಒಳ್ಳೆಯ ದಿನವಾಗಲಿದೆ. ನೀವು ಕೆಲಸ ಮಾಡುತ್ತಿದ್ದರೆ ಮತ್ತು ನಿಮ್ಮ ಆದಾಯವನ್ನು ಹೆಚ್ಚಿಸಲು ತುಂಬಾ ಸಮಯದಿಂದ ಪ್ರಯತ್ನಿಸುತ್ತಿದ್ದರೆ, ನೀವು ಯಶಸ್ಸನ್ನು ಪಡೆಯಬಹುದು. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರಿಗೆ ಈ ದಿನ ತುಂಬಾ ಮುಖ್ಯವಾಗಿದೆ. ಈ ದಿನ ಉತ್ತಮ ಲಾಭ ಗಳಿಸಲು ಸಾಧ್ಯವಾಗುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಆರೋಗ್ಯದ ದೃಷ್ಟಿಯಿಂದ ಇಂದು ಉತ್ತಮ ದಿನ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 15
ಶುಭ ಸಮಯ: ಸಂಜೆ 5 ರಿಂದ ರಾತ್ರಿ 8 ರವರೆಗೆ

ವೃಶ್ಚಿಕ ರಾಶಿ
ನೀವು ಉದ್ಯಮಿಯಾಗಿದ್ದರೆ, ಇತ್ತೀಚೆಗೆ ಹೂಡಿಕೆ ಮಾಡಿದ್ದರೆ, ನೀವು ಅದರಿಂದ ದುಪ್ಪಟ್ಟು ಲಾಭವನ್ನು ಪಡೆಯಬಹುದು. ಉದ್ಯೋಗಿಗಳಿಗೆ ಕಚೇರಿಯಲ್ಲಿ ಕಷ್ಟಕರವಾದ ಕಾರ್ಯಗಳನ್ನು ನಿಯೋಜಿಸಬಹುದು, ನೀವು ಹೆಚ್ಚು ಚಿಂತಿಸಬೇಕಾಗಿಲ್ಲ. ನಿಮ್ಮ ಕೆಲಸವು ಸಮಯಕ್ಕೆ ಪೂರ್ಣಗೊಳ್ಳುತ್ತದೆ. ಪ್ರಣಯ ಜೀವನದಲ್ಲಿ ಪರಿಸ್ಥಿತಿಯು ಒತ್ತಡದಿಂದ ಕೂಡಿರುತ್ತದೆ. ಆರೋಗ್ಯ ಸುಧಾರಿಸಬಹುದು, ಆದರೆ ವೈದ್ಯರನ್ನು ಸಂಪರ್ಕಿಸದೆ ಯಾವುದೇ ಔಷಧಿ ತೆಗೆದುಕೊಳ್ಳುವುದನ್ನು ತಪ್ಪಿಸಿ.
ಅದೃಷ್ಟದ ಬಣ್ಣ: ಮರೂನ್
ಅದೃಷ್ಟದ ಸಂಖ್ಯೆ: 10
ಶುಭ ಸಮಯ: ಬೆಳಿಗ್ಗೆ 6 ರಿಂದ 9 ರವರೆಗೆ

ಧನು ರಾಶಿ
ನೀವು ಇಂದು ದೂರ ಪ್ರಯಾಣವನ್ನು ಮಾಡುತ್ತಿದ್ದರೆ ನಿಮ್ಮ ವಸ್ತುಗಳ ಕಡೆ ಗಮನಹರಿಸಿ. ಕಚೇರಿಯಲ್ಲಿ ನಿಮ್ಮ ಮೇಲಧಿಕಾರಿಯ ಕೋಪವನ್ನು ನೀವು ಎದುರಿಸಬೇಕಾಗಬಹುದು. ಈ ದಿನ ನಿಮ್ಮ ಆತ್ಮವಿಶ್ವಾಸ ಕುಸಿಯಲಿದೆ. ವ್ಯಾಪಾರದಲ್ಲಿ ತೊಡಗಿರುವವರು ಹೊಸ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲು ಅವಕಾಶವನ್ನು ಪಡೆಯುತ್ತಾರೆ. ಈ ದಿನ ನೀವು ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಯಾರನ್ನೂ ಕುರುಡಾಗಿ ನಂಬಬೇಡಿ. ಮನೆಯ ವಾತಾವರಣ ಶಾಂತವಾಗಿರುತ್ತದೆ. ಭಾರವಾದ ವಸ್ತುಗಳನ್ನು ಎತ್ತದಂತೆ ಸಲಹೆ ನೀಡಲಾಗುವುದು.
ಅದೃಷ್ಟದ ಬಣ್ಣ: ಬೆಳ್ಳಿ
ಅದೃಷ್ಟದ ಸಂಖ್ಯೆ: 7
ಶುಭ ಸಮಯ: ಮಧ್ಯಾಹ್ನ 1:30 ರಿಂದ 4:30 ರವರೆಗೆ

ಮಕರ ರಾಶಿ
ಮಕರ ರಾಶಿಯವರಿಗೆ ಶುಭ ದಿನ. ವ್ಯಾಪಾರಸ್ಥರು ಇಂದು ಆರ್ಥಿಕ ಲಾಭವನ್ನು ಪಡೆಯಬಹುದು. ನೀವು ಕೆಲವು ಹೊಸ ಕೆಲಸವನ್ನು ಪ್ರಾರಂಭಿಸಲು ಸಹ ನಿರ್ಧರಿಸಬಹುದು. ಉದ್ಯೋಗಸ್ಥರಿಗೆಕಚೇರಿಯಲ್ಲಿನ ಉನ್ನತ ಅಧಿಕಾರಿಗಳಿಂದ ಸಂಪೂರ್ಣ ಬೆಂಬಲ ದೊರೆಯುತ್ತದೆ. ಇಂದು ನಿಮ್ಮ ಎಲ್ಲಾ ಕೆಲಸಗಳು ಯಾವುದೇ ಅಡೆತಡೆಗಳಿಲ್ಲದೆ ಪೂರ್ಣಗೊಳ್ಳುತ್ತವೆ. ನೀವು ಯಾರಿಗಾದರೂ ಹಣವನ್ನು ಸಾಲವಾಗಿ ನೀಡಿದ್ದರೆ ಅದು ಮರಳಿ ಸಿಗಲಿದೆ. ಭವಿಷ್ಯದಲ್ಲಿ, ನೀವು ಹಣಕಾಸಿನ ವಹಿವಾಟುಗಳನ್ನು ಬುದ್ಧಿವಂತಿಕೆಯಿಂದ ಮಾಡಬೇಕು.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 20
ಶುಭ ಸಮಯ: ಸಂಜೆ 5:95 ರಿಂದ 7:05 ರವರೆಗೆ

ಕುಂಭ ರಾಶಿ
ನಿಮ್ಮ ಮಾತಿನ ಮೇಲೆ ಹಿಡಿತವಿರಲಿ, ಇಲ್ಲದಿದ್ದರೆ ನೀವು ಬಯಸದಿದ್ದರೂ ವಿವಾದಗಳಲ್ಲಿ ಸಿಲುಕಿಕೊಳ್ಳಬಹುದು.ಕಚೇರಿಯಲ್ಲಿ ನಿಮ್ಮ ಕಾರ್ಯನಿರ್ವಹಣೆಯ ಬಗ್ಗೆ ಬಾಸ್ ಅತೃಪ್ತರಾಗಿದ್ದರೆ, ನೀವು ಕಷ್ಟಪಟ್ಟು ಕೆಲಸ ಮಾಡಲು ಸಲಹೆ ನೀಡಲಾಗುವುದು, ಇಲ್ಲದಿದ್ದರೆ ಹಿಂದೆ ಮಾಡಿದ ಶ್ರಮ ವ್ಯರ್ಥವಾಗಬಹುದು. ವ್ಯಾಪಾರಸ್ಥರು ಇಂದು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು. ಹಣದ ಕೊರತೆಯಿಂದ ನಿಮ್ಮ ಕೆಲವು ಕೆಲಸಗಳು ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಇಂದು ನೀವು ಔಷಧಿಗಳಿಗಾಗಿ ಹೆಚ್ಚು ಹಣವನ್ನು ಖರ್ಚು ಮಾಡುವ ಸಾಧ್ಯತೆಯಿದೆ.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 19
ಶುಭ ಸಮಯ: ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ

ಮೀನ ರಾಶಿ
ವ್ಯಾಪಾರಸ್ಥರಿಗೆ ಇಂದು ಅತ್ಯಂತ ಆಹ್ಲಾದಕರ ದಿನವಾಗಲಿದೆ. ಇತ್ತೀಚೆಗೆ ದೊಡ್ಡ ಕಂಪನಿಯಲ್ಲಿ ಉದ್ಯೋಗ ಸಂದರ್ಶನವನ್ನು ನೀಡಿದ್ದರೆ, ನೀವು ಸಕಾರಾತ್ಮಕ ಉತ್ತರವನ್ನು ಪಡೆಯಬಹುದು. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಇಂದು ನೀವು ಆರ್ಥಿಕ ಲಾಭವನ್ನು ಗಳಿಸುವ ಬಲವಾದ ಸಾಧ್ಯತೆಯಿದೆ. ಆದಾಗ್ಯೂ, ನೀವು ಕಷ್ಟಪಟ್ಟು ಗಳಿಸಿದ ಹಣವನ್ನು ಅನಗತ್ಯ ವಿಷಯಗಳಿಗೆ ವ್ಯರ್ಥ ಮಾಡುವುದಕ್ಕೆ ಹೋಗಬೇಡಿ. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಸಾಮರಸ್ಯ ಇರಲಿದೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 32
ಶುಭ ಸಮಯ: ಸಂಜೆ 6 ರಿಂದ ರಾತ್ರಿ 8:30 ರವರೆಗೆ

English summary

Dina Bhavishya: November 13th Daily Horoscope Prediction Of 12 Zodiac Signs 2023 in Kannada

Explore Dina Rashi Bhavishya (ದಿನ ಭವಿಷ್ಯ) Today's Astrology Prediction For Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, And Pisces In Kannada
Story first published: Sunday, November 12, 2023, 22:30 [IST]
X
Desktop Bottom Promotion