Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Horoscope Today 7 May 2023: ಭಾನುವಾರ: ಈ ದಿನ 12 ರಾಶಿಗಳಿಗೆ ಹೇಗಿರಲಿದೆ?
ಶುಭೋದಯ..... ವೈದಿಕ ಶಾಸ್ತ್ರದ ಪ್ರಕಾರ ಮೇ 7ರ ರಾಶಿಫಲ ನೋಡೋಣ:
ಸಂವತ್ಸರ: ಶುಭಕೃತ್
ಆಯನ: ಉತ್ತರಾಯಣ
ಋತು: ವಸಂತ
ಮಾಸ: ವೈಶಾಖ
ಪಕ್ಷ: ಕೃಷ್ಣಪಕ್ಷ
ತಿಥಿ: ದ್ವಿತೀಯಾ
ನಕ್ಷತ್ರ: ಅನುರಾಧ
ರಾಹುಕಾಲ: ಸಂಜೆ 05:19ರಿಂದ 7 ಗಂಟೆಯವರೆಗೆ
ಮೇಷ ರಾಶಿ
ಉದ್ಯೋಗಸ್ಥರು ಈ ದಿನ ಜಾಗ್ರತೆಯಿಂದಿರಬೇಕು. ಮೇಲಾಧಿಕಾರಿ ನಿರ್ಧಾರ ನಿಮಗೆ ಹಿಡಿಸದೆ ಇರಬಹುದು. ನಿಮ್ಮ ಕೋಪವನ್ನು ನಿಯಂತ್ರಿಸುವುದು ಉತ್ತಮ. ದೊಡ್ಡ ಲಾಭವನ್ನು ಗಳಿಸಲು ವ್ಯಾಪಾರಿಗಳು ಅಡ್ಡಮಾರ್ಗ ಹಿಡಿಯಬೇಡಿ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಅಧಿಕ ಖರ್ಚು ಮಾಡಬೇಡಿ. ಕೌಟುಂಬಿಕ ಜೀವನ ಸುಖಮಯವಾಗಿರಲಿದೆ. ಆರೋಗ್ಯದಲ್ಲಿ ಈ ದಿನ ಮಿಶ್ರಫಲ.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 29
ಅದೃಷ್ಟದ ಸಮಯ: ಬೆಳಿಗ್ಗೆ 7:45 ರಿಂದ ಮಧ್ಯಾಹ್ನ 12:15 ರವರೆಗೆ

ವೃಷಭ ರಾಶಿ
ಕೆಲಸದ ಹೊರೆ ಕಡಿಮೆಯಾಗಿರುವುದರಿಂದ ಈ ದಿನ ವಿಶ್ರಾಂತಿಯಿಂದ ದಿನ ಕಳೆಯುವಿರಿ. ಹಣದ ವಿಷಯದಲ್ಲಿ ದಿನವು ದುಬಾರಿಯಾಗಲಿದೆ. ಹಠಾತ್ ದೊಡ್ಡ ಖರ್ಚು ನಿಮ್ಮ ಬಜೆಟ್ ಅ ಪ್ಲ್ಯಾನ್ ಹಾಳು ಮಾಡಬಹುದು. ದಿನದ ಎರಡನೇ ಭಾಗದಲ್ಲಿ, ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು, ಇದು ನಿಮ್ಮ ಮನಸ್ಸಿಗೆ ತುಂಬಾ ಸಂತೋಷ ನೀಡಲಿದೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 10
ಅದೃಷ್ಟದ ಸಮಯ: ಮಧ್ಯಾಹ್ನ 1 ರಿಂದ ಸಂಜೆ 5 ರವರೆಗೆ
ಮಿಥುನ ರಾಶಿ
ಮಕ್ಕಳ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯ ಸಾಧ್ಯತೆ ಇದೆ. ಆದರೆ, ಆಲೋಚನೆಯಿಲ್ಲದೆ ಏನನ್ನೂ ಖರ್ಚು ಮಾಡಬೇಡಿ. ನೀವು ಉಳಿತಾಯದತ್ತ ಹೆಚ್ಚು ಗಮನಹರಿಸಿದರೆ ನಿಮಗೆ ಒಳ್ಳೆಯದು. ಕೆಲಸದ ಬಗ್ಗೆ ತುಂಬಾ ತಲೆಕೆಡಿಸಿಕೊಳ್ಳಬೇಡಿ. ನೀವು ವ್ಯಾಪಾರಸ್ಥರಾಗಿದ್ದರೆ ಮತ್ತು ಪಾಲುದಾರರೊಂದಿಗೆ ವ್ಯಾಪಾರ ಮಾಡುತ್ತಿದ್ದರೆ, ಇಂದು ನಿಮಗೆ ಬಹಳ ಮುಖ್ಯವಾಗಿರುತ್ತದೆ. ಆರೋಗ್ಯದಲ್ಲಿ ದಿಢೀರ್ ಕುಸಿತ ಉಂಟಾದರೆ ನಿರ್ಲಕ್ಷ್ಯ ಮಾಡಬೇಡಿ.
ಅದೃಷ್ಟದ ಬಣ್ಣ: ಆಕಾಶ ನೀಲಿ
ಅದೃಷ್ಟದ ಸಂಖ್ಯೆ: 27
ಅದೃಷ್ಟದ ಸಮಯ: ಮಧ್ಯಾಹ್ನ 3:30 ರಿಂದ ರಾತ್ರಿ 8 ರವರೆಗೆ
ಕರ್ಕ ರಾಶಿ
ವಿದ್ಯಾರ್ಥಿಗಳಿಗೆ ಓದಿನಲ್ಲಿ ಕೆಲ ಅಡೆತಡೆಗಳು ಎದುರಾಗಬಹುದು. ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ. ನಿಮ್ಮ ಬಜೆಟ್ ಸಮತೋಲನದಲ್ಲಿರುತ್ತದೆ. ಉದ್ಯೋಗಿಗಳಿಗೆ ಕಚೇರಿಯಲ್ಲಿ ತಮ್ಮ ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ಸಲಹೆ ನೀಡಲಾಗಿದೆ. ಅನಗತ್ಯ ವಿಷಯಗಳಲ್ಲಿ ನಿಮ್ಮ ಸಮಯ ವ್ಯರ್ಥ ಮಾಡಬೇಡಿ. ವ್ಯಾಪಾರಸ್ಥರಿಗೆ ದಿನವು ಸರಾಸರಿಯಾಗಲಿದೆ. ಸಂಗಾತಿಯ ಅನಾರೋಗ್ಯ ನಿಮ್ಮ ಚಿಂತೆ ಹೆಚ್ಚಿಸಬಹುದು.
ಅದೃಷ್ಟದ ಬಣ್ಣ: ಕೇಸರಿ
ಅದೃಷ್ಟದ ಸಂಖ್ಯೆ: 6
ಅದೃಷ್ಟದ ಸಮಯ: ಬೆಳಿಗ್ಗೆ 5 ರಿಂದ ಮಧ್ಯಾಹ್ನ 3 ರವರೆಗೆ
ಸಿಂಹ ರಾಶಿ
ಕುಟುಂಬ ಸದಸ್ಯರಿಗೆ ಈ ದಿನ ಚೆನ್ನಾಗಿರಲಿದೆ. ಕುಟುಂಬ ಸದಸ್ಯರಿಂದ ನೀವು ಭಾವನಾತ್ಮಕ ಬೆಂಬಲ ಪಡೆಯಬಹುದು. ವಿಶೇಷವಾಗಿ ಇಂದು ನೀವು ನಿಮ್ಮ ತಾಯಿಯೊಂದಿಗೆ ಉತ್ತಮ ಸಮಯ ಕಳೆಯಲು ಸಾಧ್ಯವಾಗುವುದು. ಹಣದ ಪರಿಸ್ಥಿತಿ ಉತ್ತಮವಾಗಿರಲಿದೆ. ನಿಮ್ಮ ಕೊಲೆಸ್ಟ್ರಾಲ್ ಮಟ್ಟವು ಅಧಿಕವಾಗಿದ್ದರೆ, ನಿರ್ಲಕ್ಷ್ಯ ಮಾಡಬೇಡಿ. ಆಹಾರಕ್ರಮದ ಕಡೆ ಗಮನಹರಿಸಿ.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 12
ಅದೃಷ್ಟದ ಸಮಯ: ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 2:55 ರವರೆಗೆ
ಕನ್ಯಾ ರಾಶಿ
ಆರೋಗ್ಯದ ದೃಷ್ಟಿಯಿಂದ ಈ ದಿನ ಅನುಕೂಲಕರವಾಗಿರುತ್ತದೆ. ಇಂದು ನೀವು ಕುಟುಂಬದೊಂದಿಗೆ ಸ್ವಲ್ಪ ದೂರ ಪ್ರಯಾಣಿಸಬಹುದು. ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಹೊಸ ಆದಾಯದ ಮೂಲವನ್ನೂ ಕಾಣಬಹುದು. ಇದು ಉದ್ಯೋಗ ಅಥವಾ ವ್ಯಾಪಾರ, ಇಂದು ನೀವು ಉತ್ತಮ ಅವಕಾಶವನ್ನು ಪಡೆಯಬಹುದು. ನೀವು ಈ ಅವಕಾಶವನ್ನು ಬಳಸಿದರೆ, ನೀವು ಬಯಸಿದ ಫಲಿತಾಂಶವನ್ನು ಪಡೆಯುತ್ತೀರಿ.
ಅದೃಷ್ಟದ ಬಣ್ಣ: ಮರೂನ್
ಅದೃಷ್ಟದ ಸಂಖ್ಯೆ: 19
ಅದೃಷ್ಟದ ಸಮಯ: ಬೆಳಗ್ಗೆ 4:20 ರಿಂದ 11 ರವರೆಗೆ
ತುಲಾ ರಾಶಿ
ಪ್ರೇಮಿಗಳಿಗೆ ಈ ದಿನ ತುಂಬಾ ರೋಮ್ಯಾಂಟಿಕ್ ಆಗಿರಲಿದೆ. ಪ್ರೇಮಿಗಳಿಗೆ ಮದುವೆಗೆ ಅನುಮತಿ ಸಿಗಬಹುದು.ಕಚೇರಿಯಲ್ಲಿ ಕಠಿಣ ಪರಿಶ್ರಮದ ಹೊರತಾಗಿಯೂ, ಉನ್ನತ ಅಧಿಕಾರಿಗಳು ನಿಮ್ಮ ಕಾರ್ಯನಿರ್ವಹಣೆಯಿಂದ ಅತೃಪ್ತರಾಗುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಆತ್ಮವಿಶ್ವಾಸ ಕುಸಿಯಬಹುದು. ಆದರೆ ನೆಗೆಟಿವ್ ಚಿಂತೆಯಿಂದ ದೂರವಿರಿ. ವ್ಯಾಪಾರಸ್ಥರು ಸಾಧಾರಣ ಲಾಭ ಪಡೆಯಬಹುದು. ಇಂದು ನೀವು ಯಾವುದೇ ಪ್ರಮುಖ ವ್ಯವಹಾರ ನಿರ್ಧಾರ ತೆಗೆದುಕೊಳ್ಳಲು ಹೋಗಬೇಡಿ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿದೆ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 7
ಅದೃಷ್ಟದ ಸಮಯ: ಸಂಜೆ 7 ರಿಂದ 9:25 ರವರೆಗೆ
ವೃಶ್ಚಿಕ ರಾಶಿ
ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿದೆ. ನಿಮ್ಮ ಕೆಲಸದಲ್ಲಿ ಉತ್ತಮ ಫಲ ಪಡೆಯುವಿರಿ. ಕುಟುಂಬ ಜೀವನದಲ್ಲಿ ಪರಿಸ್ಥಿತಿ ಅಷ್ಟು ಸರಿಯಿರಲ್ಲ, ಮನೆ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಮೂಡಬಹುದು, ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿ. ಕೋಪ, ಆತುರದ ನಿರ್ಧಾರಗಳಿಂದ ದೂರವಿರಿ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ನಿಮ್ಮ ಆಯಾಸ ಹೆಚ್ಚಾಗಬಹುದು.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 10
ಅದೃಷ್ಟದ ಸಮಯ: ಸಂಜೆ 4 ರಿಂದ ರಾತ್ರಿ 9:15 ರವರೆಗೆ
ಧನು ರಾಶಿ
ಮಾನಸಿಕವಾಗಿ ಈ ದಿನ ಅಷ್ಟು ಸರಿಯಿರಲ್ಲ, ನಿಮ್ಮ ಮನಸ್ಸು ಆತ್ಮೀಯರ ಜೊತೆ ತೆರೆದಿಡುವುದರಿಂದ ಭಾರ ಕಡಿಮೆಯಾಗುವುದು. ಹಣದ ವಿಷಯದಲ್ಲಿ ಈ ದಿನ ಮಿಶ್ರಫಲ. ಆದಾಯ ಮತ್ತು ವೆಚ್ಚಗಳ ನಡುವೆ ಸಮತೋಲನ ಸಾಧಿಸಿ. ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಮುಂದೆ ಸರಿಯಾಗಿ ವರ್ತಿಸುವಂತೆ ಸಲಹೆ ನೀಡಲಾಗಿದೆ. ನಿಮ್ಮ ಅತಿಯಾದ ಆತ್ಮವಿಶ್ವಾಸ ನಿಮ್ಮನ್ನು ಮುಜುಗರಕ್ಕೀಡುಮಾಡಬಹುದು, ಜಾಗ್ರತೆ. ವ್ಯಾಪಾರಸ್ಥರಿಗೆ ದಿನವು ಸರಾಸರಿಯಾಗಿರಲಿದೆ.
ಅದೃಷ್ಟದ ಬಣ್ಣ: ಗಾಢ ಕೆಂಪು
ಅದೃಷ್ಟದ ಸಂಖ್ಯೆ: 25
ಅದೃಷ್ಟದ ಸಮಯ: ಸಂಜೆ 6 ರಿಂದ ರಾತ್ರಿ 8 ರವರೆಗೆ
ಮಕರ ರಾಶಿ
ಕಚೇರಿಯಲ್ಲಿನ ಉನ್ನತ ಅಧಿಕಾರಿಗಳ ವರ್ತನೆ ನಿಮ್ಮ ಮನಸ್ಸಿಗೆ ನೋವುಂಟು ಮಾಡಬಹುದು. ಈ ದಿನ ನೀವು ಆರ್ಥಿಕ ಲಾಭ ಪಡೆಯಬಹುದು. ಸಂಗಾತಿಯೊಂದಿಗೆ ಖುಷಿಯಾಗಿರುತ್ತೀರಿ, ನಿಮ್ಮ ಪ್ರೀತಿಪಾತ್ರರಿಗೆ ನೆಚ್ಚಿನ ಉಡುಗೊರೆ ನೀಡಬಹುದು. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಆರೋಗ್ಯದ ವಿಷಯದಲ್ಲಿ ಇಂದು ನಿಮಗೆ ಉತ್ತಮವಾಗಿದೆ.
ಅದೃಷ್ಟದ ಬಣ್ಣ: ಕೆನೆ
ಅದೃಷ್ಟದ ಸಂಖ್ಯೆ: 30
ಅದೃಷ್ಟದ ಸಮಯ: ಬೆಳಗ್ಗೆ 5:45 ರಿಂದ ಮಧ್ಯಾಹ್ನ 12:35 ರವರೆಗೆ
ಕುಂಭ ರಾಶಿ
ನೀವು ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿದ್ದರೆ, ಇಂದು ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಮಾರುಕಟ್ಟೆಯಲ್ಲಿ ನಿಮ್ಮ ಸ್ಥಾನ ಬಲವಾಗುವುದು. ಹಣಕಾಸಿನ ಸ್ಥಿತಿ ಚೆನ್ನಾಗಿರುವುದರಿಂದ ಹಳೆಯ ಸಾಲ ತೀರಿಸಲು ಸಾಧ್ಯವಾಗುವುದು. ಆರೋಗ್ಯ ಉತ್ತಮವಾಗಿರಲಿದೆ. ಆರೋಗ್ಯಕ್ಕಾಗಿ ದಿನಚರಿಯಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳಿ.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 31
ಅದೃಷ್ಟದ ಸಮಯ: ಬೆಳಗ್ಗೆ 7:15 ರಿಂದ ಮಧ್ಯಾಹ್ನ 2:20 ರವರೆಗೆ
ಮೀನ ರಾಶಿ
ನೀವು ಕಚೇರಿಯಲ್ಲಿ ಯಾವುದೇ ತಪ್ಪು ಮಾಡದಂತೆ ಎಚ್ಚರವಹಿಸಿ, ತಪ್ಪಾದರೆ ಒಪ್ಪಿಕೊಳ್ಳಿ. ಅನಗತ್ಯ ಕೋಪ ಮತ್ತು ದುರಹಂಕಾರ ನಿಮಗೆ ಒಳ್ಳೆಯದಲ್ಲ. ವ್ಯಾಪಾರಸ್ಥರು ಆತುರದಿಂದ ನಿರ್ಧಾರ ತೆಗೆದುಕೊಂಡರೆ ನಷ್ಟವಾಗಬಹುದು. ಹಣದ ವಿಷಯದಲ್ಲಿ ಈ ದಿನವು ಏರಿಳಿತಗಳಿಂದ ತುಂಬಿರುತ್ತದೆ. ಹಣದ ಕೊರತೆಯಿಂದ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಪ್ರತಿಕೂಲ ಸಂದರ್ಭಗಳಲ್ಲಿ ಜೀವನ ಸಂಗಾತಿಗೆ ಸಂಪೂರ್ಣ ಬೆಂಬಲ ಸಿಗಲಿದೆ. ನಿಮ್ಮ ಪರಸ್ಪರ ತಿಳುವಳಿಕೆ ಉತ್ತಮವಾಗಿರಲುದೆ. ನಿಮ್ಮ ಆರೋಗ್ಯ ದುರ್ಬಲವಾಗಿರಲಿದೆ.
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ: 8
ಅದೃಷ್ಟದ ಸಮಯ: ಬೆಳಿಗ್ಗೆ 4:30 ರಿಂದ ಮಧ್ಯಾಹ್ನ 3:30 ರವರೆಗೆ



Click it and Unblock the Notifications
