Horoscope Today 31 May 2023: ಬುಧವಾರ: ಏಕಾದಶಿ ದಿನ ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?

ಶುಭೋದಯ..... ವೈದಿಕ ಶಾಸ್ತ್ರದ ಪ್ರಕಾರ ಮೇ‌ 31ರ ರಾಶಿಫಲ ನೋಡೋಣ:
ಸಂವತ್ಸರ: ಶುಭಕೃತ್
ಆಯನ: ಉತ್ತರಾಯಣ
ಋತು: ವಸಂತ
ಮಾಸ: ಜ್ಯೇಷ್ಠ
ಪಕ್ಷ: ಶುಕ್ಲಪಕ್ಷ
ತಿಥಿ: ಏಕಾದಶಿ
ನಕ್ಷತ್ರ: ಬೆಳಗ್ಗೆ 6 ಗಂಟೆಯಿಂದ ಚಿತ್ರ
ರಾಹುಕಾಲ: ಮಧ್ಯಾಹ್ನ 12:19ರಿಂದ 02:03ರವರೆಗೆ

Dina Bhavishya

ಮೇಷ ರಾಶಿ
ಈ ದಿನ ನಿಮಗೆ ತುಂಬಾ ವಿಶೇಷವಾಗಿರಲಿದೆ. ಪ್ರೇಮಿಗಳಿಗೆ ಅನುಕೂಲಕರವಾಗಿದೆ. ಅದು ಉದ್ಯೋಗವಾಗಲಿ ಅಥವಾ ವ್ಯವಹಾರವಾಗಲಿ, ನಿಮ್ಮ ಕಠಿಣ ಪರಿಶ್ರಮಕ್ಕೆ ಸರಿಯಾದ ಫಲಿತಾಂಶ ಪಡೆಯುತ್ತೀರಿ. ಉದ್ಯೋಗಸ್ಥರಿಗೆ ಈ ದಿನ ಅನುಕೂಲಕರವಾಗಿದೆ. ಇಂದು ನೀವು ತುಂಬಾ ಧನಾತ್ಮಕವಾಗಿರುತ್ತೀರಿ. ಉದ್ಯಮಿಗಳ ಆರ್ಥಿಕ ಪರಿಸ್ಥಿತಿಯಲ್ಲಿ ಉತ್ಕರ್ಷದ ಲಕ್ಷಣಗಳು ಕಂಡುಬರಲಿದೆ. ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿರಲಿದೆ.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 20
ಅದೃಷ್ಟದ ಸಮಯ: ಬೆಳಿಗ್ಗೆ 8:40 ರಿಂದ ಮಧ್ಯಾಹ್ನ 12:30 ರವರೆಗೆ

ವೃಷಭ ರಾಶಿ
ನೀವು ಇತ್ತೀಚೆಗೆ ನಿಮ್ಮ ದಿನಚರಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದರೆ ಈ ದಿನ ಉತ್ತಮ ಫಲಿತಾಂಶ ಪಡೆಯಬಹುದು. ಈ ದಿನ ತಾಜಾತನದಿಂದ ಕೂಡಿರುತ್ತೀರಿ. ಇಂದು ನೀವು ಕೆಲಸದಲ್ಲಿ ತುಂಬಾ ಕಾರ್ಯನಿರತರಾಗಿರುತ್ತೀರಿ. ಜವಾಬ್ದಾರಿಗಳ ಹೊರೆ ಹೆಚ್ಚಾಗಬಹುದು, ಆದರೆ ನಿಮ್ಮ ಎಲ್ಲಾ ಕೆಲಸಗಳು ಯಾವುದೇ ಅಡೆತಡೆಗಳಿಲ್ಲದೆ, ಸಮಯಕ್ಕೆ ಸರಿಯಾಗಿ ಪೂರ್ನಗೊಳ್ಳಲಿದೆ. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಉತ್ತಮ ಹೊಂದಾಣಿಕೆ ಇರಲಿದೆ. ಹಣದ ವಿಷಯದಲ್ಲಿ ಈ ದಿನವು ಸರಾಸರಿಯಾಗಲಿದೆ.
ಅದೃಷ್ಟದ ಬಣ್ಣ: ಕೆನೆ
ಅದೃಷ್ಟದ ಸಂಖ್ಯೆ: 5
ಅದೃಷ್ಟದ ಸಮಯ: ಮಧ್ಯಾಹ್ನ 1:30 ರಿಂದ ಸಂಜೆ 7 ರವರೆಗೆ

ಮಿಥುನ ರಾಶಿ
ಇಂದು ವ್ಯಾಪಾರಸ್ಥರಿಗೆ ತುಂಬಾ ಲಾಭದಾಯಕವಾಗಿರಲಿದೆ. ಈ ದಿನ ಆರ್ಥಿಕ ಲಾಭವನ್ನು ಗಳಿಸುವ ಸಾಧ್ಯತೆಯಿದೆ. ಈ ದಿನ ಎಲೆಕ್ಟ್ರಾನಿಕ್ಸ್ ವ್ಯವಹಾರ ಮಾಡುವುದಾದ ಒಳ್ಳೆಯ ಲಾಭ ದೊರೆಯಲಿದೆ. ಇಂದು ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು. ಅದೇ ತಪ್ಪನ್ನು ಮತ್ತೆ ಮತ್ತೆ ಮಾಡುವುದನ್ನು ತಪ್ಪಿಸಿ. ಹಣದ ಪರಿಸ್ಥಿತಿ ಚೆನ್ನಾಗಿರಲಿದೆ. ನಿಮ್ಮ ಖರ್ಚುಗಳನ್ನು ನಿಯಂತ್ರಿಸಿದರೆ ಒಳ್ಳೆಯದು, ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಆರೋಗ್ಯದ ಬಗ್ಗೆ ನೋಡುವುದಾದರೆ ಸಣ್ಣ ಪುಟ್ಟ ಸಮಸ್ಯೆಗಳಿರಬಹುದು.
ಅದೃಷ್ಟದ ಬಣ್ಣ: ಗಾಢ ಗುಲಾಬಿ
ಅದೃಷ್ಟದ ಸಂಖ್ಯೆ: 4
ಅದೃಷ್ಟದ ಸಮಯ: ಬೆಳಿಗ್ಗೆ 8 ರಿಂದ ಮಧ್ಯಾಹ್ನ 2:30 ರವರೆಗೆ

ಕರ್ಕ ರಾಶಿ
ಬಹಳ ಸಮಯದ ನಂತರ ಇಂದು ನೀವು ನಿಮಗಾಗಿ ಸಾಕಷ್ಟು ಸಮಯವನ್ನು ಪಡೆಯುತ್ತೀರಿ. ನೀವು ಕುಟುಂಬದ ಜೊತೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗುವುದು. ನಿಮ್ಮ ಯಾವುದೇ ಕೆಲಸವು ದೀರ್ಘಕಾಲದಿಂದ ಅಪೂರ್ಣವಾಗಿದ್ದರೆ ಇಂದು ಪೂರ್ಣಗೊಳ್ಳುವ ಬಲವಾದ ಸಾಧ್ಯತೆಯಿದೆ. ನೀವು ಉನ್ನತ ಅಧಿಕಾರಿಗಳ ಬೆಂಬಲವನ್ನು ಸಹ ಪಡೆಯುತ್ತೀರಿ. ವ್ಯಾಪಾರಸ್ಥರು ಇಂದು ದೊಡ್ಡ ಗ್ರಾಹಕರೊಂದಿಗೆ ವ್ಯವಹರಿಸಲು ಅವಕಾಶವನ್ನು ಪಡೆಯಬಹುದು. ನಿಮ್ಮ ಮಾತಿನ ಬಗ್ಗೆ ಸಂಪೂರ್ಣ ಕಾಳಜಿ ವಹಿಸಬೇಕು, ಇಲ್ಲದಿದ್ದರೆ ಕೈಯಲ್ಲಿದ್ದ ಅವಕಾಶವು ಕೈ ತಪ್ಪಬಹುದು. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಆಕಾಶ ನೀಲಿ
ಅದೃಷ್ಟದ ಸಂಖ್ಯೆ: 38
ಅದೃಷ್ಟದ ಸಮಯ: ಬೆಳಿಗ್ಗೆ 7:55 ರಿಂದ 10:30 ರವರೆಗೆ

ಸಿಂಹ ರಾಶಿ
ಈ ದಿನ ನಿಮಗೆ ಏರಳಿತಗಳಿಂದ ಕೂಡಿರಲಿದೆ. ಹಣಕಾಸಿನ ಸಮಸ್ಯೆಯಿಂದ ತೊಂದರೆ ಉಂಟಾಗಬಹುದು. ಇದೆಲ್ಲವೂ ನಿಮ್ಮ ನಿರ್ಲಕ್ಷ್ಯದ ಫಲ. ಕಛೇರಿಯಲ್ಲಿ ಅತ್ಯಂತ ಸಮತೋಲಿತವಾಗಿ ವರ್ತಿಸಲು ಸಲಹೆ ನೀಡಲಾಗಿದೆ. ಅನಗತ್ಯ ಕೋಪ ಮತ್ತು ಅಹಂಕಾರದಿಂದ ಹೊರಬನ್ನಿ. ವ್ಯಾಪಾರಸ್ಥರಿಗೆ ಅನುಕೂಲವಾಗಿದೆ, ಆದರೆ ಅವಸರದಿಂದ ಯಾವುದೇ ಹೂಡಿಕೆ ಮಾಡಲು ಹೋಗಬೇಡಿ. ನಿಮ್ಮ ಸಂಗಾತಿಯ ಆರೋಗ್ಯದಲ್ಲಿ ಹಠಾತ್ ಕುಸಿತವು ನಿಮ್ಮ ಆತಂಕವನ್ನು ಹೆಚ್ಚಿಸಬಹುದು.
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ: 19
ಅದೃಷ್ಟದ ಸಮಯ: ಮಧ್ಯಾಹ್ನ 1:30 ರಿಂದ ಸಂಜೆ 4 ರವರೆಗೆ

ಕನ್ಯಾ ರಾಶಿ
ಇಂದು ನೀವು ದೀರ್ಘ ಪ್ರಯಾಣವನ್ನು ಮಾಡುವುದಾದರೆ ಸಾಧ್ಯವಾದರೆ ಪ್ರಯಾಣ ಮುಂದೂಡಿ. ಇಲ್ಲದಿದ್ದರೆ ಈ ಪ್ರಯಾಣವು ನಿಮ್ಮ ಆಯಾಸವನ್ನು ಹೆಚ್ಚಿಸುವುದರ ಜೊತೆಗೆ ನಿಮ್ಮ ಹಣ ಮತ್ತು ಸಮಯವನ್ನು ವ್ಯರ್ಥ ಮಾಡುತ್ತದೆ. ಕೌಟುಂಬಿಕ ಜೀವನದಲ್ಲಿ ಪರಿಸ್ಥಿತಿ ಚೆನ್ನಾಗಿರಲಿದೆ. ನಿಮ್ಮ ಕೆಲಸದ ಬಗ್ಗೆ ನಿರ್ಲಕ್ಷ್ಯ ಬೇಡ. ವಿಶೇಷವಾಗಿ ಬಾಸ್ ನಿಮಗೆ ಕೆಲವು ಜವಾಬ್ದಾರಿಯನ್ನು ನೀಡಿದ್ದರೆ, ಅದನ್ನು ಯಾವುದೇ ತಪ್ಪಿಲ್ಲದೆ ಪೂರೈಸಲು ಪ್ರಯತ್ನಿಸಿ. ವ್ಯಾಪಾರಸ್ಥರು ಲಾಭ ಗಳಿಸಬಹುದು. ಆರೋಗ್ಯ ಸಂಬಂಧಿ ಸಮಸ್ಯೆ ಎದುರಾಗಬಹುದು.
ಅದೃಷ್ಟದ ಬಣ್ಣ: ಕೆನೆ
ಅದೃಷ್ಟದ ಸಂಖ್ಯೆ: 9
ಅದೃಷ್ಟದ ಸಮಯ: ಸಂಜೆ 6 ರಿಂದ 8:15 ರವರೆಗೆ

ತುಲಾ ರಾಶಿ
ಮನೆಯ ವಾತಾವರಣವು ಧನಾತ್ಮಕವಾಗಿರುತ್ತದೆ. ನಿಮ್ಮ ಕೆಲಸ, ನಿರ್ಧಾರಗಳಿಗೆ ಪ್ರೀತಿ ಪಾತ್ರರ ಬೆಂಬಲ ಸಿಗುವುದು. ಹಣದ ವಿಷಯದಲ್ಲಿ ಈ ದಿನ ತುಂಬಾ ಚೆನ್ನಾಗಿದೆ. ಕಚೇರಿಯಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಳ್ಳಲು ಪ್ರಯತ್ನಿಸಿ. ವ್ಯಾಪಾರಸ್ಥರಿಗೆ ಈ ದಿನ ಮಿಶ್ರ ಲಾಭ ದೊರೆಯಲಿದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ತುಂಬಾ ಸಮಯ ಖಾಲಿ ಹೊಟ್ಟೆಯಿಂದ ಇರಬೇಡಿ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 15
ಅದೃಷ್ಟದ ಸಮಯ: ಮಧ್ಯಾಹ್ನ 2:15 ರಿಂದ ರಾತ್ರಿ 8:10 ರವರೆಗೆ

ವೃಶ್ಚಿಕ ರಾಶಿ
ಆರೋಗ್ಯದ ದೃಷ್ಟಿಯಿಂದ ಈ ದಿನ ನಿಮಗೆ ತುಂಬಾ ಚೆನ್ನಾಗಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಮಾನಸಿಕವಾಗಿ ಈ ದಿನ ಖುಷಿಯಾಗಿರುತ್ತೀರಿ. ಇಂದು ಉದ್ಯಮಿಗಳಿಗೆ ಬಹಳ ಮುಖ್ಯವಾದ ದಿನವಾಗಿದೆ. ನೀವು ಕೆಲವು ಹೊಸ ವ್ಯಾಪಾರ ಯೋಜನೆಗಳನ್ನು ಮಾಡಬಹುದು. ಉದ್ಯೋಗಿಗಳು ಈ ದಿನ ತಮ್ಮ ಶ್ರಮಕ್ಕೆ ತಕ್ಕ ಫಲ ಪಡೆಯಬಹುದು. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯವಾಗಿರಲಿದೆ. ನೀವು ಯಾವುದೇ ಬೆಲೆಬಾಳುವ ವಸ್ತುವನ್ನು ಖರೀದಿಸಲು ಯೋಜಿಸುತ್ತಿದ್ದರೆ, ಆತುರಪಡಬೇಡಿ.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 31
ಅದೃಷ್ಟದ ಸಮಯ: ಮಧ್ಯಾಹ್ನ 1 ರಿಂದ ಮಧ್ಯಾಹ್ನ 3 ರವರೆಗೆ

ಧನು ರಾಶಿ
ಈ ದಿನ ಕೆಲಸದ ಸ್ಥಳದಲ್ಲಿ ನೀವು ತುಂಬಾ ಜಾಗರೂಕರಾಗಿರಬೇಕು. ವಿರೋಧಿಗಳು ನಿಮ್ಮ ಪ್ರಮುಖ ಕೆಲಸಕ್ಕೆ ಅಡ್ಡಿ ಮಾಡಬಹುದು. ಯಾರನ್ನೂ ಕುರುಡಾಗಿ ನಂಬುವುದನ್ನು ತಪ್ಪಿಸಲು ವ್ಯಾಪಾರಸ್ಥರಿಗೆ ಸಲಹೆ ನೀಡಲಾಗಿದೆ. ನೀವು ಇತ್ತೀಚೆಗೆ ಹೊಸ ವ್ಯವಹಾರವನ್ನು ಪ್ರಾರಂಭಿಸಿದ್ದರೆ, ನಿಮ್ಮ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಹಣದ ವಿಷಯದಲ್ಲಿ ದಿನವು ದುಬಾರಿಯಾಗಲಿದೆ. ಅತಿಯಾಗಿ ಖರ್ಚು ಮಾಡಬೇಡಿ. ಮನೆಯ ವಾತಾವರಣ ಚೆನ್ನಾಗಿರಲಿದೆ. ಮನೆಯ ಕಿರಿಯ ಸದಸ್ಯರೊಂದಿಗೆ ನಿಮ್ಮ ಸಂಬಂಧವು ಇನ್ನೂ ಉತ್ತಮವಾಗಿರುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ, ನೀವು ಹೊಟ್ಟೆಗೆ ಸಮಸ್ಯೆಗಳನ್ನು ಹೊಂದಿರಬಹುದು.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 11
ಅದೃಷ್ಟದ ಸಮಯ: ಬೆಳಿಗ್ಗೆ 5:45 ರಿಂದ 10:25 ರವರೆಗೆ

ಮಕರ ರಾಶಿ
ವೈವಾಹಿಕ ಜೀವನದಲ್ಲಿ ಕೆಲ ಭಿನ್ನಾಭಿಪ್ರಾಯ ಮೂಡಬಹುದು. ನೀವಾಡುವ ಮಾತಿನ ಕಡೆಗೆ ಎಚ್ಚರಿಕೆ ವಹಿಸಿದರೆ ಪರಿಸ್ಥಿತಿ ಹಾಳಾಗುವುದು ತಡೆಯಬಹುದು. ಕಚೇರಿಯಲ್ಲಿ, ನಿಮ್ಮ ಕೆಲಸವನ್ನು ಪೂರ್ಣ ಶಕ್ತಿ ಮತ್ತು ಉತ್ಸಾಹದಿಂದ ಮಾಡಲು ಸಲಹೆ ನೀಡಲಾಗಿದೆ. ನೀವು ಕಷ್ಟಪಟ್ಟು ಕೆಲಸ ಮಾಡಿದರೆ, ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಉದ್ಯಮಿಗಳು ಇಂದು ದೊಡ್ಡ ಸವಾಲನ್ನು ಎದುರಿಸಬೇಕಾಗಬಹುದು. ನೀವು ಕೆಲವು ಕಾನೂನು ವ್ಯವಹಾರದಲ್ಲಿ ಸಿಕ್ಕಿಹಾಕಿಕೊಳ್ಳದಂತೆ ಎಚ್ಚರವಹಿಸಿ. ಹಣದ ಸ್ಥಿತಿ ಸಾಮಾನ್ಯವಾಗಿರುತ್ತದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ, ನೀವು ತುಂಬಾ ಆಯಾಸವನ್ನು ಅನುಭವಿಸಬಹುದು.
ಅದೃಷ್ಟದ ಬಣ್ಣ: ಗಾಢ ಹಳದಿ
ಅದೃಷ್ಟದ ಸಂಖ್ಯೆ: 14
ಅದೃಷ್ಟದ ಸಮಯ: ಸಂಜೆ 4:05 ರಿಂದ ರಾತ್ರಿ 9 ರವರೆಗೆ

ಕುಂಭ ರಾಶಿ
ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಸಾಮಾನ್ಯವಾಗಿರಲಿದೆ. ನಿಮ್ಮ ಮನೆಯ ಸದಸ್ಯರೊಂದಿಗೆ ನೀವು ಭಿನ್ನಾಭಿಪ್ರಾಯ ಹೊಂದಿದ್ದರೆ, ಎಲ್ಲಾ ಅಸಮಾಧಾನಗಳನ್ನು ಮರೆತು ನಿಮ್ಮ ಸಂಬಂಧವನ್ನು ಸುಧಾರಿಸಲು ಪ್ರಯತ್ನಿಸಿ. ಹಣದ ವಿಷಯದಲ್ಲಿ ಇಂದು ನಿಮಗೆ ಒಳ್ಳೆಯ ದಿನವಾಗಲಿದೆ. ತುಂಬಾ ಆಡಂಬರ ಬೇಡ, ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ನೀವು ತೊಂದರೆಗೆ ಸಿಲುಕಬಹುದು. ಕೆಲಸ ಅಥವಾ ವ್ಯವಹಾರದ ಬಗ್ಗೆ ಹೇಳುವುದಾದರೆ ಇಂದು ಕೆಲಸದ ಹೊರೆ ನಿಮ್ಮ ಮೇಲೆ ಹೆಚ್ಚು ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಮುಂಚಿತವಾಗಿ ನಿಮ್ಮ ದಿನದ ಯೋಜನೆಗಳನ್ನು ಮಾಡಿದರೆ ಅದು ಉತ್ತಮವಾಗಿರುತ್ತದೆ. ನಿಮ್ಮ ಆರೋಗ್ಯ ದುರ್ಬಲವಾಗಿರುತ್ತದೆ.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 29
ಅದೃಷ್ಟದ ಸಮಯ: ಬೆಳಿಗ್ಗೆ 7 ರಿಂದ ಮಧ್ಯಾಹ್ನ 12:30 ರವರೆಗೆ

ಮೀನ ರಾಶಿ
ವಿದ್ಯಾರ್ಥಿಗಳಿಗೆ ಈ ಸಮಯ ಬಹಳ ಮುಖ್ಯ. ನಿಮ್ಮ ಅಧ್ಯಯನದ ಮೇಲೆ ಸಂಪೂರ್ಣವಾಗಿ ಕೇಂದ್ರೀಕರಿಸಲು ನಿಮಗೆ ಸಲಹೆ ನೀಡಲಾಗಿದೆ. ನೀವು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಯತ್ನವನ್ನು ಮಾಡುತ್ತಿದ್ದರೆ, ನೀವು ಶೀಘ್ರದಲ್ಲೇ ಒಳ್ಳೆಯ ಸುದ್ದಿ ಪಡೆಯಬಹುದು. ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಈ ದಿನ ಹಣ ಸಿಗಲಿದೆ. ಉದ್ಯೋಗಸ್ಥರಿಗೆ ಈ ದಿನ ಅನುಕೂಲಕರವಾಗಿದೆ.ನೀವು ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ ಇಂದು ನೀವು ಅಪಾಯಕಾರಿ ನಿರ್ಧಾರವನ್ನು ತೆಗೆದುಕೊಳ್ಳದಂತೆ ಎಚ್ಚರವಹಿಸಿ. ಆರೋಗ್ಯದ ವಿಷಯದಲ್ಲಿ ದಿನವು ಮಿಶ್ರವಾಗಿರುತ್ತದೆ.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 10
ಅದೃಷ್ಟದ ಸಮಯ: ಬೆಳಿಗ್ಗೆ 10 ರಿಂದ ಮಧ್ಯಾಹ್ನ 1:20 ರವರೆಗೆ

English summary

Dina Bhavishya -May 31 2023 Today Rashi Bhavishya, Daily Horoscope in Kannada

Dina Bhavishya- Get Today's Rashi Bhavishy 31 May 2023 In Kannada, Read daily horoscope prediction of aries, taurus, gemini, cancer, leo, virgo, libra, scorpio, Sagittarius, Capricorn, Aquarius, pisces in Kannada
Story first published: Wednesday, May 31, 2023, 4:37 [IST]
X
Desktop Bottom Promotion