Horoscope Today 28 May 2023: ಭಾನುವಾರ: ಜ್ಯೇಷ್ಠ ನವಮಿ, ಈ ದಿನ 12 ರಾಶಿಗಳ ರಾಶಿಫಲ ಹೇಗಿದೆ?

ಶುಭೋದಯ..... ವೈದಿಕ ಶಾಸ್ತ್ರದ ಪ್ರಕಾರ ಮೇ‌28ರ ರಾಶಿಫಲ ನೋಡೋಣ:
ಸಂವತ್ಸರ: ಶುಭಕೃತ್
ಆಯನ: ಉತ್ತರಾಯಣ
ಋತು: ವಸಂತ
ಮಾಸ: ಜ್ಯೇಷ್ಠ
ಪಕ್ಷ: ಶುಕ್ಲಪಕ್ಷ
ತಿಥಿ:ಬೆಳಗ್ಗೆ 09:56ರವರೆಗೆ ನಂತರ ನವಮಿ
ನಕ್ಷತ್ರ: ಪೂರ್ವಫಲ್ಗುಣಿ
ರಾಹುಕಾಲ: ಸಂಜೆ 05:24ರಿಂದ 07:12ರವರೆಗೆ

ಮೇಷ ರಾಶಿ
ನಿಮ್ಮ ಕೆಲಸವು ತಾತ್ಕಾಲಿಕವಾಗಿದ್ದರೆ ಈ ದಿನ ಖುಷಿಯ ಸುದ್ದಿ ಸಿಗಲಿದೆ. ನಿಮ್ಮ ಕೆಲಸವು ಶಾಶ್ವತವಾಗುವ ಲಕ್ಷಣವಾಗಿದೆ. ವ್ಯಾಪಾರಸ್ಥರಿಗೆ ಈ ದಿನ ಚೆನ್ನಾಗಿದೆ. ಇಂದು ನಿಮಗೆ ಒಳ್ಳೆಯ ಅವಕಾಶ ಸಿಗಬಹುದು. ಕೌಟುಂಬಿಕ ಜೀವನ ಚೆನ್ನಾಗಿರಲಿದೆ. ನಿಮ್ಮ ಪ್ರೀತಿಪಾತ್ರರ ಸಂಪೂರ್ಣ ಬೆಂಬಲ ಪಡೆಯುತ್ತೀರಿ. ಹಣದ ವಿಷಯದಲ್ಲಿ ದಿನವು ಉತ್ತಮವಾಗಿದೆ. ನಿಮ್ಮ ವೆಚ್ಚಗಳು ಕಡಿಮೆಯಾಗುತ್ತವೆ, ಇದರಿಂದ ಉಳಿತಾಯ ಮಾಡಲು ಸಾಧ್ಯವಾಗುವುದು. ಆರೋಗ್ಯದ ದೃಷ್ಟಿಯಿಂದ ದಿನವು ಉತ್ತಮವಾಗಿರುತ್ತದೆ.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 11
ಅದೃಷ್ಟದ ಸಮಯ: ಬೆಳಿಗ್ಗೆ 6 ರಿಂದ ಮಧ್ಯಾಹ್ನ 12:45 ರವರೆಗೆ

Dina Bhavishya -May 28 2023 Today Rashi Bhavishya, Daily Horoscope in Kannada

ವೃಷಭ ರಾಶಿ
ನಿಮ್ಮ ಮಕ್ಕಳ ಶಿಕ್ಷಣದ ಬಗ್ಗೆ ನೀವು ತುಂಬಾ ಚಿಂತಿತರಾಗುವಿರಿ. ಇಂದು ನೀವು ಅವರ ಶಿಕ್ಷಣಕ್ಕಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗಬಹುದು. ಕೆಲಸದ ಹೇಳುವುದಾದರೆ ಉದ್ಯೋಗಿಗಳು ಉತ್ತಮ ಕಾರ್ಯಕ್ಷಮತೆಯ ಆಧಾರದ ಮೇಲೆ ತಮ್ಮ ಸ್ಥಾನವನ್ನು ಬಲಪಡಿಸಲು ಸಾಧ್ಯವಾಗುತ್ತದೆ. ಉದ್ಯಮಿಗಳು ಉತ್ತಮ ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಆದರೆ, ನೀವು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಲು ಆತುರಪಡಬೇಡಿ ಎಂದು ಸಲಹೆ ನೀಡಲಾಗಿದೆ. ಆರೋಗ್ಯದ ವಿಷಯದಲ್ಲಿ ಈ ದಿನ ಮಿಶ್ರಫಲ.
ಅದೃಷ್ಟದ ಬಣ್ಣ: ಕಡು ಹಸಿರು
ಅದೃಷ್ಟದ ಸಂಖ್ಯೆ: 3
ಅದೃಷ್ಟದ ಸಮಯ: ಮಧ್ಯಾಹ್ನ 2 ರಿಂದ 4:30 ರವರೆಗೆ

ಮಿಥುನ ರಾಶಿ
ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರಿಗೆ ಈ ದಿನ ತುಂಬಾ ಲಾಭದಾಯಕವಾಗುದೆ. ಈ ದಿನ ನೀವು ಬಯಸಿದಂತೆ ಲಾಭವನ್ನು ಪಡೆಯಬಹುದು. ನಿಮ್ಮ ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯಲು ನೀವು ಉತ್ತಮ ಅವಕಾಶವನ್ನು ಸಹ ಪಡೆಯಬಹುದು. ಉದ್ಯೋಗಿಗಳಿಗೆ ಕಚೇರಿಯಲ್ಲಿ ತುಂಬಾ ಸಕ್ರಿಯವಾಗಿರಲು ಸಲಹೆ ನೀಡಲಾಗಿದೆ. ಇಂದು ಕೆಲಸದ ಹೊರೆ ಸ್ವಲ್ಪ ಹೆಚ್ಚಿರಬಹುದು. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಇಂದು ಕುಟುಂಬ ಸದಸ್ಯರೊಂದಿಗೆ ಮನೆಯಲ್ಲಿ ಖುಷಿಯಿಂದ ಕಳೆಯುವಿರಿ. ಹಣದ ವಿಷಯದಲ್ಲಿ ದಿನವು ಸಾಮಾನ್ಯವಾಗಿರುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ, ನೀವು ಅಲರ್ಜಿ ಅಥವಾ ಸೋಂಕನ್ನು ಹೊಂದಿರಬಹುದು.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 22
ಅದೃಷ್ಟದ ಸಮಯ: ಬೆಳಿಗ್ಗೆ 7 ರಿಂದ ಮಧ್ಯಾಹ್ನ 1:30 ರವರೆಗೆ

ಕರ್ಕ ರಾಶಿ
ಈ ದಿನ ಹಣವನ್ನು ನೋಡಿಕೊಂಡು ಖರ್ಚು ಮಾಡಲು ಸಲಹೆ ನೀಡಲಾಗಿದೆ. ವೆಚ್ಚಗಳ ಹೆಚ್ಚಳದಿಂದ ನೀವು ಆರ್ಥಿಕ ಮುಗ್ಗಟ್ಟು ಎದುರಿಸಬಹುದು. ಕಚೇರಿಯಲ್ಲಿ ಬಾಸ್ ಇಂದು ತುಂಬಾ ಕೆಟ್ಟ ಮನಸ್ಥಿತಿಯಲ್ಲಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಸಣ್ಣ ತಪ್ಪನ್ನು ಸಹ ಮಾಡದಂತೆ ಎಚ್ಚರವಹಿಸಿ. ನೀವು ನಿರುದ್ಯೋಗಿಗಳಾಗಿದ್ದರೆ ಮತ್ತು ಉದ್ಯೋಗವನ್ನು ಹುಡುಕುತ್ತಿದ್ದರೆ, ಇಂದು ನಿಮಗೆ ಬಹಳ ಮುಖ್ಯವಾಗಿರುತ್ತದೆ. ವ್ಯಾಪಾರಸ್ಥರು ಹಣದ ವಿಷಯದಲ್ಲಿ ಜಾಗರೂಕರಾಗಿರಲು ಸಲಹೆ ನೀಡಲಾಗಿದೆ. ಇಲ್ಲದಿದ್ದರೆ ನೀವು ಮೋಸದ ಹಣಕಾಸಿನ ಯೋಜನೆಯಲ್ಲಿ ಸಿಕ್ಕಿಬೀಳಬಹುದು. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಉತ್ತಮ ಹೊಂದಾಣಿಕೆ ಇರಲಿದೆ. ಇಂದು ಆರೋಗ್ಯದ ಬಗ್ಗೆ ಹೇಳುವುದಾದರೆ ಏರಳಿತಗಳಿರಬಹುದು.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 24
ಅದೃಷ್ಟದ ಸಮಯ: ಸಂಜೆ 4 ರಿಂದ ಸಂಜೆ 6 ರವರೆಗೆ

ಸಿಂಹ ರಾಶಿ
ಸಿಂಹ ರಾಶಿಯ ವಿದ್ಯಾರ್ಥಿಗಳಿಗೆ ಸ್ವಲ್ಪ ಸವಾಲಿನ ದಿನ, ಮನಸ್ಸು ಅಧ್ಯಯನದಲ್ಲಿ ಕಡಿಮೆ ಇರುತ್ತದೆ. ಇದಲ್ಲದೆ, ಶಿಕ್ಷಣಕ್ಕೆ ಸಂಬಂಧಿಸಿದ ಯಾವುದೇ ಪ್ರಯತ್ನದಲ್ಲಿ ವಿಫಲವಾದ ಕಾರಣ, ನಿಮ್ಮ ಆತ್ಮವಿಶ್ವಾಸ ಕುಸಿಯಬಹುದು. ಉದ್ಯಮಿಗಳು ಇದ್ದಕ್ಕಿದ್ದಂತೆ ದೊಡ್ಡ ಲಾಭವನ್ನು ಪಡೆಯಬಹುದು. ಉದ್ಯೋಗಿಗಳಿಗೆ ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಉತ್ತಮ ನಡವಳಿಕೆ ಇರಿಸಿಕೊಳ್ಳಲು ಸಲಹೆ ನೀಡಲಾಗಿದೆ. ಅನಗತ್ಯ ಕೋಪ ಮತ್ತು ಅಹಂಕಾರವನ್ನು ತಪ್ಪಿಸಿ. ಹಣದ ಪರಿಸ್ಥಿತಿ ಉತ್ತಮವಾಗಿರುತ್ತದೆ. ಆದರೆ, ನೀವು ಹಣದ ವಿಷಯದಲ್ಲಿ ನಿಮ್ಮ ಸಂಗಾತಿಯೊಂದಿಗೆ ಕೆಲವು ವಾದಗಳನ್ನು ಹೊಂದಿರಬಹುದು. ಆರೋಗ್ಯವಾಗಿರಲು, ಪ್ರತಿದಿನ ವ್ಯಾಯಾಮದ ಕಡೆ ಗಮನಹರಿಸಿ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 24
ಅದೃಷ್ಟದ ಸಮಯ: ಸಂಜೆ 4 ರಿಂದ ಸಂಜೆ 6 ರವರೆಗೆ

ಕನ್ಯಾ ರಾಶಿ
ಕಚೇರಿಯ ವಾತಾವರಣ ತುಂಬಾ ಚೆನ್ನಾಗಿರಲಿದೆ. ಇಂದು ಬಾಸ್ ಉತ್ತಮ ಮನಸ್ಥಿತಿಯಲ್ಲಿರುತ್ತಾರೆ. ನೀವು ಅವರ ಕಂಪನಿಯನ್ನು ಪಡೆಯುತ್ತೀರಿ. ನೀವು ಇಂದು ಪ್ರಯಾಣ ಮಾಡುವುದಾದರೆ ಕೆಲವು ಕಾರಣಗಳಿಂದಾಗಿ ನಿಮ್ಮ ಪ್ರಯಾಣವನ್ನು ಮುಂದೂಡಬಹುದು. ಹಣಕಾಸಿನ ವಿಷಯಗಳಲ್ಲಿ ಯಾವುದೇ ರೀತಿಯ ಆತುರವನ್ನು ಮಾಡಬೇಡಿ, ಇಲ್ಲದಿದ್ದರೆ ನಷ್ಟವಾಗಬಹುದು. ಸಂಗಾತಿ ಹಾಗೂ ನಿಮ್ಮ ನಡುವೆ ಮನಸ್ತಾಪ ಉಂಟಾಗಬಹುದು, ದೊಡ್ಡ ಜಗಳವಾಗದಂತೆ ಎಚ್ಚರವಹಿಸಿ. ಆರೋಗ್ಯದ ಬಗ್ಗೆ ಹೇಳುವುದಾದರೆ ನೀವು ದಿನದಲ್ಲಿ 8 ಗಂಟೆ ನಿದ್ದೆ ಮಾಡುವುದು ಒಳ್ಳೆಯದು.
ಅದೃಷ್ಟದ ಬಣ್ಣ: ಗಾಢ ಹಳದಿ
ಅದೃಷ್ಟದ ಸಂಖ್ಯೆ: 8
ಅದೃಷ್ಟದ ಸಮಯ: ಸಂಜೆ 5:15 ರಿಂದ 7:20 ರವರೆಗೆ

ತುಲಾ ರಾಶಿ
ನಿಮಗೆ ಅದೃಷ್ಟದ ಬಲವಿರುವುದರಿಂದ ಕಷ್ಟಕರವಾದ ಕಾರ್ಯಗಳನ್ನು ಸಹ ಸುಲಭವಾಗಿ ಪೂರ್ಣಗೊಳಿಸಬಹುದು. ಕಚೇರಿಯಲ್ಲಿ ನಿಮ್ಮ ಕಾರ್ಯಕ್ಷಮತೆಯನ್ನು ಪ್ರಶಂಸಿಸಲಾಗುತ್ತದೆ. ಇಂದು ಬಾಸ್ ನಿಮ್ಮನ್ನು ತುಂಬಾ ಹೊಗಳುತ್ತಾರೆ. ಉದ್ಯಮಿಗಳು ಯಾವುದೇ ಹಳೆಯ ಕಾನೂನು ವಿಷಯದಿಂದ ಮುಕ್ತರಾಗಬಹುದು. ಇಂದು ನೀವು ದೊಡ್ಡ ಹಣಕಾಸಿನ ವಹಿವಾಟು ಮಾಡುವ ಅವಕಾಶವನ್ನು ಪಡೆಯುತ್ತೀರಿ. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ನಿಮ್ಮ ಕುಟುಂಬ ಸದಸ್ಯರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲು ನಿಮಗೆ ಸಾಧ್ಯವಾಗುತ್ತದೆ. ಮನೆಯಲ್ಲಿ ಪ್ರಮುಖ ವಿಷಯದ ಬಗ್ಗೆ ಚರ್ಚೆಯಾಗಬಹುದು . ಹಣಕ್ಕೆ ಸಂಬಂಧಿಸಿದ ಚಿಂತೆ ದೂರವಾಗಲಿದೆ. ನೀವು ಹೊಸ ಆದಾಯದ ಮೂಲವನ್ನು ಪಡೆಯಬಹುದು. ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 6
ಅದೃಷ್ಟದ ಸಮಯ: ಸಂಜೆ 5 ರಿಂದ ರಾತ್ರಿ 8:15 ರವರೆಗೆ

ವೃಶ್ಚಿಕ ರಾಶಿ
ಇಂದು ನೀವು ಅನಗತ್ಯ ಚಿಂತೆಗಳಿಂದ , ನಕಾರಾತ್ಮಕ ಆಲೋಚನೆಗಳಿಂದ ದೂರವಿದ್ದರೆ ಮಾತ್ರ ನಿಮ್ಮ ಪ್ರಮುಖ ಕಾರ್ಯಗಳತ್ತ ಗಮನ ಹರಿಸಲು ಸಾಧ್ಯವಾಗುವುದು. ಹಣದ ವಿಷಯದಲ್ಲಿ, ದಿನವು ತುಂಬಾ ದುಬಾರಿಯಾಗಲಿದೆ. ನೀವು ಹಳೆಯ ಬಿಲ್ ಪಾವತಿಸಬೇಕಾಗಬಹುದು. ಉದ್ಯೋಗಿಗಳಿಗೆ ಕಚೇರಿಯಲ್ಲಿ ಸಂಪೂರ್ಣ ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ ಕೆಲಸ ಮಾಡಲು ಸಲಹೆ ನೀಡಲಾಗಿದೆ. ನಿಮ್ಮ ಚಿಕ್ಕ ಕೆಲಸವನ್ನೂ ಎಚ್ಚರಿಕೆಯಿಂದ ಮಾಡಲು ಪ್ರಯತ್ನಿಸಿ. ವ್ಯಾಪಾರಸ್ಥರು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು ಇಂದು ಮನೆಯ ಸದಸ್ಯರ ಆರೋಗ್ಯದಲ್ಲಿ ಹಠಾತ್ ಕ್ಷೀಣತೆ ಉಂಟಾಗಬಹುದು.
ಅದೃಷ್ಟದ ಬಣ್ಣ: ಮರೂನ್
ಅದೃಷ್ಟದ ಸಂಖ್ಯೆ: 31
ಅದೃಷ್ಟದ ಸಮಯ: ಬೆಳಿಗ್ಗೆ 10:30 ರಿಂದ ಸಂಜೆ 4:50 ರವರೆಗೆ

ಧನು ರಾಶಿ
ಹಣದ ವಿಷಯದಲ್ಲಿ ಯಾವುದೇ ರೀತಿಯ ಆತುರ ಬೇಡ, ವಿಶೇಷವಾಗಿ ಸಾಲದ ವ್ಯವಹಾರ ಮಾಡುವ ಮುನ್ನ ಎಚ್ಚರಿಕೆಯಿಂದ ಯೋಚಿಸಿ. ನೀವು ಈಗಾಗಲೇ ಯಾರಿಗಾದರೂ ಸಾಲ ನೀಡಿದ್ದರೆ, ಹಣಕ್ಕಾಗಿ ಒಮ್ಮೆ ಅವರಿಗೆ ನೆನಪಿಸಿ. ಕೆಲಸದ ಬಗ್ಗೆ ಹೇಳುವುದಾದರೆ, ಕೆಲಸ ಮಾಡುವವರು ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಅಸಮಾಧಾನವನ್ನು ಎದುರಿಸಬೇಕಾಗಬಹುದು. ನಿಮ್ಮ ನಿಧಾನಗತಿಯ ಕಾರಣದಿಂದಾಗಿ, ನಿಮ್ಮ ಕೆಲವು ಪ್ರಮುಖ ಕೆಲಸಗಳು ಇಂದು ಅಪೂರ್ಣವಾಗಿರುತ್ತವೆ. ದೊಡ್ಡ ಹೂಡಿಕೆ ಮಾಡುವುದನ್ನು ತಪ್ಪಿಸಲು ವ್ಯಾಪಾರಸ್ಥರಿಗೆ ಸಲಹೆ ನೀಡಲಾಗಿದೆ. ಸಂಗಾತಿಯ ಕೋಪದ ಸ್ವಭಾವವು ಇಂದು ನಿಮ್ಮ ಮನೆಯ ಶಾಂತಿಯನ್ನು ಕದಡಬಹುದು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮನ್ನು ನಿಯಂತ್ರಿಸಿ. ಆರೋಗ್ಯದ ವಿಷಯದಲ್ಲಿ ನೋಡುವುದಾದರೆ ಈ ದಿನ ಮಿಶ್ರಫಲ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 21
ಅದೃಷ್ಟದ ಸಮಯ: ಬೆಳಿಗ್ಗೆ 8:30 ರಿಂದ ಮಧ್ಯಾಹ್ನ 3 ರವರೆಗೆ

ಮಕರ ರಾಶಿ
ನೀವು ದೀರ್ಘಕಾಲದವರೆಗೆ ಧಾರ್ಮಿಕ ಪ್ರಯಾಣ ಮಾಡಲು ಯೋಜಿಸುತ್ತಿದ್ದರೆ, ಇಂದು ನಿಮ್ಮ ಯೋಜನೆಯಂತೆ ಮುಂದುವರಿಯಬಹುದು. ಶೀಘ್ರದಲ್ಲೇ ನಿಮಗೆ ಉತ್ತಮ ಅವಕಾಶ ಸಿಗಲಿದೆ. ಕೆಲಸದ ಮುಂಭಾಗದಲ್ಲಿ ಈ ದಿನವು ಕಾರ್ಯನಿರತವಾಗಿರಲಿದೆ. ನಿಮ್ಮ ದಿನದ ಯೋಜನೆಗಳನ್ನು ನೀವು ಮುಂಚಿತವಾಗಿ ಮಾಡಿದರೆ ಅದು ಉತ್ತಮವಾಗಿರುತ್ತದೆ, ಇಲ್ಲದಿದ್ದರೆ ನಿಮ್ಮ ಕೆಲವು ಪ್ರಮುಖ ಕಾರ್ಯಗಳು ಇಂದು ಅಪೂರ್ಣವಾಗಿರುತ್ತವೆ. ಹಣಕಾಸಿನ ಸ್ಥಿತಿ ಹದಗೆಡುವ ಲಕ್ಷಣಗಳಿವೆ. ಇಂದು ಹಣದ ನಷ್ಟ ಉಂಟಾಗಬಹುದು, ಜಾಗ್ರತೆವಹಿಸಿ. ಹಣಕ್ಕೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡದಂತೆ ಸಲಹೆ ನೀಡಲಾಗಿದೆ. ಆರೋಗ್ಯ ಸುಧಾರಿಸಬಹುದು.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 2
ಅದೃಷ್ಟದ ಸಮಯ: ಬೆಳಿಗ್ಗೆ 10 ರಿಂದ ಮಧ್ಯಾಹ್ನ 1:30 ರವರೆಗೆ

ಕುಂಭ ರಾಶಿ
ಕಛೇರಿಯಲ್ಲಿ ಸ್ಪರ್ಧೆ ಅಧಿಕವಿರುವುದರಿಂದ ಅದರ ಒತ್ತಡ ನಿಮ್ಮ ಮೇಲಿರಲಿದೆ. ಆದರೆ ತುಂಬಾ ಕೆಲಸದ ಒತ್ತಡ ತೆಗೆದುಕೊಳ್ಳುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ನಿಮ್ಮ ಆರೋಗ್ಯದ ಬಗ್ಗೆ ಸಂಪೂರ್ಣ ಕಾಳಜಿ ವಹಿಸಬೇಕು. ವ್ಯಾಪಾರಸ್ಥರು ಇಂದು ಲಾಭ ಗಳಿಸಲು ಕಷ್ಟಪಡಬೇಕಾಗಬಹುದು. ಆದರೆ, ನಿಮ್ಮ ಶ್ರಮವು ವ್ಯರ್ಥವಾಗುವುದಿಲ್ಲ ಮತ್ತು ನೀವು ನಿರೀಕ್ಷಿಸಿದಂತೆ ಫಲಿತಾಂಶಗಳನ್ನು ಪಡೆಯುತ್ತೀರಿ. ತಂದೆಯೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರಬಹುದು. ಕೋಪ ಮತ್ತು ಆತುರವನ್ನು ತಪ್ಪಿಸಲು ನಿಮಗೆ ಸಲಹೆ ನೀಡಲಾಗಿದೆ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಆರೋಗ್ಯ ಸ್ವಲ್ಪ ದುರ್ಬಲವಾಗಿರಬಹುದು.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 12
ಅದೃಷ್ಟದ ಸಮಯ: ಬೆಳಿಗ್ಗೆ 8 ರಿಂದ ಮಧ್ಯಾಹ್ನ 12:55 ರವರೆಗೆ

ಮೀನ ರಾಶಿ
ಕೆಲಸದಲ್ಲಿ ಪ್ರಗತಿಯ ಲಕ್ಷಣಗಳಿವೆ. ನಿಮ್ಮ ಆದಾಯವೂ ಹೆಚ್ಚಾಗುತ್ತದೆ. ಮತ್ತೊಂದೆಡೆ, ಉದ್ಯಮಿಗಳು ಮಿಶ್ರ ಲಾಭವನ್ನು ಪಡೆಯಬಹುದು. ಆದರೆ, ದೊಡ್ಡ ಲಾಭವನ್ನು ಗಳಿಸಲು, ನೀವು ತಪ್ಪು ಮಾರ್ಗಅನುಸರಿಸಲು ಹೋಗಬೇಡಿ. ಹಣದ ವಿಷಯದಲ್ಲಿ ದಿನವು ತುಂಬಾ ದುಬಾರಿಯಾಗಲಿದೆ, ಆದರೆ ಯಾವುದೇ ದೊಡ್ಡ ಸಮಸ್ಯೆ ಇರುವುದಿಲ್ಲ. ಇಂದು ನೀವು ನಿಮ್ಮ ಸಂಗಾತಿಯೊಂದಿಗೆ ತಿರುಗಾಡಲು ಹೋಗಬಹುದು. ಬಹಳ ಸಮಯದ ನಂತರ ನೀವು ಪರಸ್ಪರ ಸಾಕಷ್ಟು ಸಮಯವನ್ನು ನೀಡಲು ಸಾಧ್ಯವಾಗುವುದು. ಆರೋಗ್ಯಕ್ಕೆ ಸಂಬಂಧಿಸಿದಂತೆ, ಸಿಹಿತಿಂಡಿಗಳ ಅತಿಯಾದ ಸೇವನೆಯನ್ನು ತಪ್ಪಿಸಲು ನಿಮಗೆ ಸಲಹೆ ನೀಡಲಾಗಿದೆ.
ಅದೃಷ್ಟದ ಬಣ್ಣ: ಕೇಸರಿ
ಅದೃಷ್ಟದ ಸಂಖ್ಯೆ: 20
ಅದೃಷ್ಟದ ಸಮಯ: ಬೆಳಿಗ್ಗೆ 9:20 ರಿಂದ ಮಧ್ಯಾಹ್ನ 3 ರವರೆಗೆ

English summary

Dina Bhavishya -May 28 2023 Today Rashi Bhavishya, Daily Horoscope in Kannada

Dina Bhavishya- Get Today's Rashi Bhavishy 28 May 2023 In Kannada, Read daily horoscope prediction of aries, taurus, gemini, cancer, leo, virgo, libra, scorpio, Sagittarius, Capricorn, Aquarius, pisces in Kannada.
Story first published: Sunday, May 28, 2023, 4:00 [IST]
X
Desktop Bottom Promotion