Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
Horoscope Today 24 May 2023: ಬುಧವಾರ: ಈ ದಿನ 12 ರಾಶಿಗಳ ರಾಶಿಫಲ ಹೇಗಿದೆ?
ಶುಭೋದಯ..... ವೈದಿಕ ಶಾಸ್ತ್ರದ ಪ್ರಕಾರ ಮೇ24ರ ರಾಶಿಫಲ ನೋಡೋಣ:
ಸಂವತ್ಸರ: ಶುಭಕೃತ್
ಆಯನ: ಉತ್ತರಾಯಣ
ಋತು: ವಸಂತ
ಮಾಸ: ಜ್ಯೇಷ್ಠ
ಪಕ್ಷ: ಶುಕ್ಲಪಕ್ಷ
ತಿಥಿ: ಪಂಚಮಿ
ನಕ್ಷತ್ರ: ಮಧ್ಯಾಹ್ನ 0:36ವರೆಗೆ ಪುನರ್ವಸು, ನಂತರ ಪುಷ್ಯ
ರಾಹುಕಾಲ: ಮಧ್ಯಾಹ್ನ 12:18ರಿಂದ 02:01ರವರೆಗೆ
ಮೇಷ ರಾಶಿ
ವೈವಾಹಿಕ ಜೀವನದಲ್ಲಿ ಪರಿಸ್ಥಿತಿಗಳು ಚೆನ್ನಾಗಿರಲಿದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಆದರೆ ನಿಮ್ಮ ಖರ್ಚುಗಳನ್ನು ನೀವು ಸರಿಯಾಗಿ ಟ್ರ್ಯಾಕ್ ಮಾಡಬೇಕು. ಕೆಲಸದ ಬಗ್ಗೆ ಹೇಳುವುದಾದರೆ ಕೆಲಸದಲ್ಲಿ ನಿಮಗೆ ಗೌರವ ಸಿಗಲಿದೆ. ಇಂದು, ಮೇಲಧಿಕಾರಿಗಳ ಜೊತೆಗೆ, ಉನ್ನತ ಅಧಿಕಾರಿಗಳು ಸಹ ನಿಮ್ಮ ಕಾರ್ಯಕ್ಷಮತೆಯನ್ನು ಹೊಗಳುತ್ತಾರೆ. ಆರೋಗ್ಯ ಸುಧಾರಿಸಬಹುದು. ಆದರೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 38
ಅದೃಷ್ಟದ ಸಮಯ: ಬೆಳಗ್ಗೆ 10 ರಿಂದ ಸಂಜೆ 4ರವರೆಗೆ

ವೃಷಭ ರಾಶಿ
ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಇಂದು ನೀವು ಹಳೆಯ ಸಾಲವನ್ನು ಮರುಪಾವತಿಸಲು ಸಾಧ್ಯವಾಗುತ್ತದೆ. ಕೆಲಸದ ದೃಷ್ಟಿಯಿಂದ ದಿನವು ತುಂಬಾ ಕಾರ್ಯನಿರತವಾಗಿರುತ್ತದೆ. ಇಂದು ನೀವು ಕೆಲಸಕ್ಕೆ ಸಂಬಂಧಿಸಿದಂತೆ ದೀರ್ಘ ಪ್ರಯಾಣ ಕೂಡ ಮಾಡಬೇಕಾಗಬಹುದು.ಆದರೆ ಕೆಲಸವನ್ನು ಆತುರದಲ್ಲಿ ಮಾಡಿ ಮುಗಿಸಲು ಪ್ರಯತ್ನಿಸಬೇಡಿ. ನೀವು ಒಂದು ಸಣ್ಣ ತಪ್ಪು ಮಾಡಿದರೆ ಅದರಿಂದ ದೊಡ್ಡ ಸಮಸ್ಯೆಯಾಗಬಹುದು. ಜೀವನ ಸಂಗಾತಿಯ ಪ್ರೀತಿ ಮತ್ತು ಬೆಂಬಲ ಸಿಗಲಿದೆ. ಇಂದು ನೀವು ನಿಮ್ಮ ಮಗುವಿಗೆ ಸಂಬಂಧಿಸಿದ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳಬಹುದು. ಆರೋಗ್ಯದ ದೃಷ್ಟಿಯಿಂದ ದಿನವು ಅನುಕೂಲಕರವಾಗಿರುತ್ತದೆ.
ಅದೃಷ್ಟದ ಬಣ್ಣ: ಕೇಸರಿ
ಅದೃಷ್ಟದ ಸಂಖ್ಯೆ: 6
ಅದೃಷ್ಟದ ಸಮಯ: ಬೆಳಿಗ್ಗೆ 4 ರಿಂದ ಮಧ್ಯಾಹ್ನ 3 ರವರೆಗೆ
ಮಿಥುನ ರಾಶಿ
ಹಣಕಾಸಿನ ವಿಚಾರದಲ್ಲಿ ಈ ದಿನ ನಿರ್ಲಕ್ಷ್ಯ ಬೇಡ. ನೀವು ಇಂದು ಹಣಕ್ಕೆ ಸಂಬಂಧಿಸಿದ ಯಾವುದೇ ದೊಡ್ಡ ವ್ಯವಹಾರವನ್ನು ಮಾಡುವುದಾದರೆ ನೀವು ಹೆಚ್ಚು ಜಾಗರೂಕರಾಗಿರಬೇಕು. ಸಂಗಾತಿಯ ನಡವಳಿಕೆಯಲ್ಲಿ ಬದಲಾವಣೆ ಕಂಡು ಬರುವುದು ಆದರೆ ನೀವು ತುಂಬಾ ಸಮತೋಲಿತವಾಗಿ ವರ್ತಿಸಲು ಸಲಹೆ ನೀಡಲಾಗುವುದು. ಇಲ್ಲದಿದ್ದರೆ ಮನಸ್ಸಿನ ನೆಮ್ಮದಿ ಹಾಳಾಗಬಹುದು. ಹಣದ ಪರಿಸ್ಥಿತಿ ಉತ್ತಮವಾಗಿರುತ್ತದೆ. ನೀವು ಸಾಲ ತೆಗೆದುಕೊಳ್ಳಲು ಅಥವಾ ಎರವಲು ತೆಗೆದುಕೊಳ್ಳಲು ಯೋಜಿಸುತ್ತಿದ್ದರೆ, ಅಗತ್ಯಕ್ಕಿಂತ ಹೆಚ್ಚಿನ ಹಣವನ್ನು ತೆಗೆದುಕೊಳ್ಳಲು ಹೋಗಬೇಡಿ. ಕೆಲಸದ ವಿಷಯದಲ್ಲಿ ಈ ದಿನವು ಸಾಮಾನ್ಯವಾಗಿರುತ್ತದೆ. ಆರೋಗ್ಯ ಸಂಬಂಧಿ ಸಮಸ್ಯೆಗಳಿರಬಹುದು.
ಅದೃಷ್ಟದ ಬಣ್ಣ: ಆಕಾಶ ನೀಲಿ
ಅದೃಷ್ಟದ ಸಂಖ್ಯೆ: 27
ಅದೃಷ್ಟದ ಸಮಯ: ಮಧ್ಯಾಹ್ನ 3:30 ರಿಂದ ರಾತ್ರಿ 8 ರವರೆಗೆ
ಕರ್ಕ ರಾಶಿ
ನೀವು ನಿರುದ್ಯೋಗಿಗಳಾಗಿದ್ದರೆ ಮತ್ತು ಉದ್ಯೋಗವನ್ನು ಹುಡುಕುತ್ತಿದ್ದರೆ, ನಿಮ್ಮ ಯಾವುದೇ ಹಳೆಯ ಸಂಪರ್ಕಗಳಿಂದ ನೀವು ಪ್ರಯೋಜನ ಪಡೆಯಬಹುದು. ವ್ಯಾಪಾರಸ್ಥರಿಗೆಈ ದಿನ ಉತ್ತಮವಾಗಿದೆ. ನಿಮ್ಮ ಯಾವುದೇ ಭಾಕಿಯುಳಿದ ವ್ಯವಹಾರವು ಪೂರ್ಣಗೊಳ್ಳುತ್ತದೆ ಮತ್ತು ನೀವು ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರಲಿದೆ. ನಿಮ್ಮ ಆರೋಗ್ಯದ ಬಗ್ಗೆ ಹೇಳುವುದಾದರೆ ಜಂಕ್ ಫುಡ್ಸ್ ತಿನ್ನಬೇಡಿ.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 9
ಅದೃಷ್ಟದ ಸಮಯ: ಮಧ್ಯಾಹ್ನ 1 ರಿಂದ ಸಂಜೆ 5 ರವರೆಗೆ
ಸಿಂಹ ರಾಶಿ
ಕೆಲಸದ ವಿಷಯದಲ್ಲಿ ಇಂದು ಬಹಳ ಶುಭ ದಿನ. ಉದ್ಯೋಗಸ್ಥರಿಗೆ ಪ್ರಗತಿಗೆ ಅವಕಾಶ ದೊರೆಯಲಿದೆ. ನಿಮ್ಮ ಪ್ರಸ್ತುತ ಕೆಲಸದಿಂದ ನೀವು ತೃಪ್ತರಾಗದಿದ್ದರೆ ಮತ್ತು ಕೆಲಸವನ್ನು ಬದಲಾಯಿಸುವ ಆಲೋಚನೆಯಲ್ಲಿದ್ದರೆ, ನೀವು ದೊಡ್ಡ ಕಂಪನಿಯಿಂದ ಆಫರ್ ಪಡೆಯಬಹುದು. ನಿಮ್ಮ ಸಂಬಳ ಹೆಚ್ಚಾಗಲಿದೆ. ಉದ್ಯಮಿಗಳು ದೊಡ್ಡ ಆರ್ಥಿಕ ಲಾಭವನ್ನು ಪಡೆಯಬಹುದು. ನೀವು ಯಾವುದೇ ಹಳೆಯ ಸಾಲದಿಂದ ಮುಕ್ತರಾಗಬಹುದು. ಕೌಟುಂಬಿಕ ಜೀವನದಲ್ಲಿ ಖುಷಿ ಇರಲಿದೆ. ಆರೋಗ್ಯ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 12
ಅದೃಷ್ಟದ ಸಮಯ: ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 2:55 ರವರೆಗೆ
ಕನ್ಯಾ ರಾಶಿ
ನೀವು ಕಚೇರಿಯಲ್ಲಿ ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು, ಆದರೆ ನಿಮ್ಮ ಧೈರ್ಯ ಮತ್ತು ಆತ್ಮವಿಶ್ವಾಸದ ಬಲದಿಂದ ನೀವು ಈ ಸವಾಲನ್ನು ಜಯಿಸಲು ಸಾಧ್ಯವಾಗುತ್ತದೆ. ವ್ಯಾಪಾರಸ್ಥರ ಆರ್ಥಿಕ ಸಮಸ್ಯೆ ಬಗೆಹರಿಯಲಿದೆ. ಇದರಿಂದ ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳುತ್ತವೆ. ಸಂಗಾತಿ ಜೊತೆ ಭಿನ್ನಾಭಿಪ್ರಾಯ ಮೂಡಬಹುದು, ಆದರೆ ತಾಳ್ಮೆಯಿಂದ ವರ್ತಿಸಿ. ನಿಮ್ಮ ಆರೋಗ್ಯದ ಬಗ್ಗೆ ಹೇಳುವುದಾದರೆ ನಿಮಗೆ ಆಯಾಸ, ನಿದ್ರಾಹೀನತೆ ಮುಂತಾದ ಸಮಸ್ಯೆಗಳಿರಬಹುದು.
ಅದೃಷ್ಟದ ಬಣ್ಣ: ಮರೂನ್
ಅದೃಷ್ಟದ ಸಂಖ್ಯೆ: 19
ಅದೃಷ್ಟದ ಸಮಯ: ಬೆಳಿಗ್ಗೆ 4:20 ರಿಂದ 11 ರವರೆಗೆ
ತುಲಾ ರಾಶಿ
ನೀವು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಲು ಬಯಸಿದರೆ, ಇಂದು ನೀವು ಉತ್ತಮ ಅವಕಾಶವನ್ನು ಪಡೆಯಬಹುದು. ಇದಲ್ಲದೆ, ನೀವು ಇತ್ತೀಚೆಗೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ನೀಡಿದ್ದರೆ, ನಿಮ್ಮ ನಿರೀಕ್ಷೆಯಂತೆ ಫಲಿತಾಂಶವನ್ನು ಪಡೆಯುವ ಬಲವಾದ ಸಾಧ್ಯತೆಯಿದೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಮಕ್ಕಳೊಂದಿಗೆ ಉತ್ತಮ ಸಮಯವನ್ನು ಕಳೆಯಲು ಸಾಧ್ಯವಾಗುವುದು. ಕೆಲಸ ಅಂತ ಕೆಲಸಕ್ಕೇ ಒತ್ತು ನೀಡದೆ ಕುಟುಂಬದ ಕಡೆಗೂ ಗಮನ ಹರಿಸಿ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 7
ಅದೃಷ್ಟದ ಸಮಯ: ಸಂಜೆ 7 ರಿಂದ 9:25 ರವರೆಗೆ
ವೃಶ್ಚಿಕ ರಾಶಿ
ಆರ್ಥಿಕಸ್ಥಿತಿ ಚೆನ್ನಾಗಿರಲಿದೆ. ನಿಮ್ಮ ಆಪ್ತ ಸ್ನೇಹಿತರ ಸಹಾಯದಿಂದ, ಇಂದು ನಿಮ್ಮ ಕೆಲವು ದೊಡ್ಡ ಸಮಸ್ಯೆಗಳು ಸಹ ಪರಿಹರಿಸಲ್ಪಡುತ್ತವೆ. ಕಚೇರಿಯಲ್ಲಿ ಉನ್ನತ ಅಧಿಕಾರಿಗಳೊಂದಿಗೆ ನಿಮ್ಮ ಹೊಂದಾಣಿಕೆ ಉತ್ತಮವಾಗಿರುತ್ತದೆ. ಅವರು ನಿಮ್ಮ ಕೆಲಸದಲ್ಲಿ ಸಾಕಷ್ಟು ತೃಪ್ತರಾಗುತ್ತಾರೆ. ಉದ್ಯಮಿಗಳು ತಮ್ಮ ವ್ಯವಹಾರವನ್ನು ಮುಂದುವರಿಸಲು ಯೋಜಿಸುತ್ತಿದ್ದರೆ, ನೀವು ಯಶಸ್ಸನ್ನು ಪಡೆಯಬಹುದು. ಕೌಟುಂಬಿಕ ಜೀವನದಲ್ಲಿ ಭಿನ್ನಾಭಿಪ್ರಾಯ ಮೂಡದಂತೆ ಎಚ್ಚರವಹಿಸಿ. ಆರೋಗ್ಯದ ಕಡೆ ಗಮನಹರಿಸಿ.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 10
ಅದೃಷ್ಟದ ಸಮಯ: ಸಂಜೆ 4 ರಿಂದ ರಾತ್ರಿ 9:15 ರವರೆಗೆ
ಧನು ರಾಶಿ
ನೀವು ಆನ್‌ಲೈನ್‌ನಲ್ಲಿ ವ್ಯಾಪಾರ ಮಾಡುತ್ತಿದ್ದರೆ ಇಂದು ನಿಮಗೆ ತುಂಬಾ ಲಾಭದಾಯಕವಾಗಿರುತ್ತದೆ. ನೀವು ಒಳ್ಳೆಯ ಆರ್ಥಿಕ ಲಾಭವನ್ನು ಪಡೆಯುತ್ತೀರಿ, ಇದರಿಂದ ನಿಮ್ಮ ವ್ಯಾಪಾರವೂ ಬೆಳೆಯುತ್ತದೆ. ಉದ್ಯೋಗಸ್ಥರು ಬಯಸಿದ ಫಲಿತಾಂಶಗಳನ್ನು ಪಡೆಯಬಹುದು. ನೀವು ದೊಡ್ಡ ಪ್ರಗತಿಯನ್ನು ಸಾಧಿಸುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ನಿಮ್ಮ ಆದಾಯವೂ ಹೆಚ್ಚಾಗುತ್ತದೆ. . ಆರೋಗ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಭುಜ ನೋವಿನ ಸಮಸ್ಯೆವಿರಬಹುದು.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 35
ಅದೃಷ್ಟದ ಸಮಯ: ಬೆಳಿಗ್ಗೆ 9 ರಿಂದ ರಾತ್ರಿ 8:45 ರವರೆಗೆ
ಮಕರ ರಾಶಿ
ಉದ್ಯೋಗಸ್ಥರಿಗೆ ಇಂದು ಬಹಳ ಉತ್ತಮ ದಿನವಾಗಲಿದೆ. ಯಾವುದೇ ಕೆಲಸ-ಸಂಬಂಧಿತ ಸಮಸ್ಯೆಯು ಪರಿಹರಿಸಲ್ಪಡುತ್ತದೆ ಮತ್ತು ನಿಮ್ಮ ಕೆಲಸದ ಮೇಲೆ ನೀವು ಸರಿಯಾಗಿ ಗಮನ ಹರಿಸಲು ಸಾಧ್ಯವಾಗುತ್ತದೆ. ನೀವು ಉದ್ಯಮಿಯಾಗಿದ್ದರೆ ಮತ್ತು ಇತ್ತೀಚೆಗೆ ಪಾಲುದಾರಿಕೆಯಲ್ಲಿ ಹೊಸ ವ್ಯವಹಾರವನ್ನು ಪ್ರಾರಂಭಿಸಿದ್ದರೆ, ಇಂದು ನಿಮಗೆ ಬಹಳ ಮುಖ್ಯವಾಗಿರುತ್ತದೆ. ನೀವು ಉತ್ತಮ ಅವಕಾಶವನ್ನು ಪಡೆಯಬಹುದು. ಕುಟುಂಬ ಜೀವನದಲ್ಲಿ ಖುಷಿ, ನೆಮ್ಮದಿ ಇರಲಿದೆ. ಆರ್ಥಿಕ ಸ್ಥಿತಿ ಸಹಜವಾಗಿರಲಿದೆ. ಆರೋಗ್ಯ ಕ್ಷೀಣಿಸುವ ಸಾಧ್ಯತೆ ಇದೆ.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 21
ಅದೃಷ್ಟದ ಸಮಯ: ಸಂಜೆ 4:30 ರಿಂದ ರಾತ್ರಿ 8:45 ರವರೆಗೆ
ಕುಂಭ ರಾಶಿ
ಇಂದು ಕೆಲಸದ ವಿಷಯದಲ್ಲಿ ಓಡಾಡಿದರೂ ಪ್ರಯೋಜನ ಸಿಗಲ್ಲ, ಇದರಿಂದ ದಣಿವು ಹೆಚ್ಚಾಗುವುದು. ಪೂರ್ವಜರ ವ್ಯವಹಾರದೊಂದಿಗೆ ನೀವು ಸಂಬಂಧ ಹೊಂದಿದ್ದರೆ, ಆತುರದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದಂತೆ ನಿಮಗೆ ಸಲಹೆ ನೀಡಲಾಗಿದೆ. ನಿಮ್ಮ ತಂದೆಯೊಂದಿಗೆ ನೀವು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ಸರ್ಕಾರಿ ಕೆಲಸ ಮಾಡುವವರು ಕೆಲವು ದೊಡ್ಡ ಸವಾಲನ್ನು ಎದುರಿಸಬೇಕಾಗಬಹುದು. ನೀವು ಬಹಳ ಬುದ್ಧಿವಂತಿಕೆಯಿಂದ ಕೆಲಸ ಮಾಡಬೇಕು. ಹಣದ ವಿಷಯದಲ್ಲಿ ದಿನವು ದುಬಾರಿಯಾಗಲಿದೆ. ಸಂಗಾತಿಯ ಕೋಪದ ಸ್ವಭಾವವು ಇಂದು ನಿಮ್ಮ ನಡುವೆ ಮನಸ್ತಾಪ ಹೆಚ್ಚಿಸಬಹುದು. ಆರೋಗ್ಯದ ವಿಷಯದಲ್ಲಿ, ದಿನವು ಏರಿಳಿತಗಳಿಂದ ತುಂಬಿರುತ್ತದೆ.
ಅದೃಷ್ಟದ ಬಣ್ಣ: ಕೆನೆ
ಅದೃಷ್ಟದ ಸಂಖ್ಯೆ: 5
ಅದೃಷ್ಟದ ಸಮಯ: ಬೆಳಗ್ಗೆ 4:55 ರಿಂದ 9:30 ರವರೆಗೆ
ಮೀನ ರಾಶಿ
ಟೀಕೆಗಳಿಗೆ ಹೆದರುವ ಬದಲು ನಿಮ್ಮ ಗುರಿಯತ್ತ ಗಮನ ಹರಿಸಬೇಕು. ಈ ಸಮಯವು ನಿಮಗೆ ಬಹಳ ಅಮೂಲ್ಯವಾಗಿದೆ, ಆದ್ದರಿಂದ ಅದನ್ನು ಸದುಪಯೋಗಪಡಿಸಿಕೊಳ್ಳಲು ಪ್ರಯತ್ನಿಸಿ. ಕಚೇರಿಯಲ್ಲಿನ ಉನ್ನತ ಅಧಿಕಾರಿಗಳು ನಿಮಗೆ ಕೆಲವು ದೊಡ್ಡ ಜವಾಬ್ದಾರಿಗಳನ್ನು ವಹಿಸುತ್ತಾರೆ. ಆದ್ದರಿಂದ ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಪ್ರಯತ್ನಿಸಿ. ವ್ಯಾಪಾರಸ್ಥರಿಗೆ ಇಂದು ಉತ್ತಮ ದಿನವಾಗಿರುತ್ತದೆ. ನೀವು ದೊಡ್ಡ ಲಾಭವನ್ನು ನಿರೀಕ್ಷಿಸುತ್ತಿದ್ದರೆ, ನೀವು ನಿರಾಶೆ ಉಂಟಾಗಬಹುದು. ಹಣದ ಚಿಂತೆ ಹೆಚ್ಚಾಗಲಿದೆ. ಆರೋಗ್ಯ ಸರಿಯಿಲ್ಲದಿದ್ದರೆ ನಿರ್ಲಕ್ಷ್ಯ ಮಾಡಲೇಬೇಡಿ.
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ: 12
ಅದೃಷ್ಟದ ಸಮಯ: ಸಂಜೆ 6:20 ರಿಂದ ರಾತ್ರಿ 8:20 ರವರೆಗೆ



Click it and Unblock the Notifications












