Horoscope Today 23 May 2023: ಮಂಗಳವಾರ: ಈ ದಿನ 12 ರಾಶಿಗಳ ರಾಶಿಫಲ ಹೇಗಿದೆ?

ಶುಭೋದಯ..... ವೈದಿಕ ಶಾಸ್ತ್ರದ ಪ್ರಕಾರ ಮೇ‌23ರ ರಾಶಿಫಲ ನೋಡೋಣ:
ಸಂವತ್ಸರ: ಶುಭಕೃತ್
ಆಯನ: ಉತ್ತರಾಯಣ
ಋತು: ವಸಂತ
ಮಾಸ: ಜ್ಯೇಷ್ಠ
ಪಕ್ಷ: ಶುಕ್ಲಪಕ್ಷ
ತಿಥಿ: ಚತುರ್ದಶಿ
ನಕ್ಷತ್ರ: ಮಧ್ಯಾಹ್ನ12:39ರವರೆಗೆ ಆರ್ದ್ರಾ ನಂತರ ಪುನರ್ವಸು
ರಾಹುಕಾಲ: ಮಧ್ಯಾಹ್ನ 03:44ರಿಂದ 05:27ರವರೆಗೆ

ಮೇಷ ರಾಶಿ
ಈ ದಿನ ಕೆಲಸದ ವಿಷಯದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಮಾಡಬೇಡಿ. ನಿಮ್ಮ ಎಲ್ಲಾ ಕಾರ್ಯಗಳನ್ನು ಸಮಯಕ್ಕೆ ಸರಿಯಾದ ಸಮಯಕ್ಕೆ ಪೂರ್ಣಗೊಳಿಸಲು ಪ್ರಯತ್ನಿಸಿ. ಇಲ್ಲದಿದ್ದರೆ ಬಾಸ್‌ ನಿಮ್ಮ ಮೇಲೆ ಕೋಪಗೊಳ್ಳುತ್ತಾರೆ. ವ್ಯಾಪಾರಸ್ಥರಿಗೆ ಅನುಕೂಲಕರವಾಗಿದೆ. ನಿಮ್ಮ ವ್ಯವಹಾರದಲ್ಲಿ ಧನಾತ್ಮಕ ಬದಲಾವಣೆಗಳನ್ನು ನೀವು ಕಾಣಬಹುದು. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರಲಿದೆ. ಪೋಷಕರ ಪ್ರೀತಿ ಮತ್ತು ಬೆಂಬಲ ಕೂಡ ಸಿಗಲಿದೆ. ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆ ಇದ್ದರೆ ನಿರ್ಲಕ್ಷ್ಯ ಮಾಡಬೇಡಿ.
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ: 30
ಅದೃಷ್ಟದ ಸಮಯ: ಮಧ್ಯಾಹ್ನ 1 ರಿಂದ ಸಂಜೆ 7 ರವರೆಗೆ

Dina Bhavishya -May 23 2023 Today Rashi Bhavishya, Daily Horoscope in Kannada

ವೃಷಭ ರಾಶಿ
ಇಂದು ದುಡಿಯುವ ಜನರಿಗೆ ದೊಡ್ಡ ಬದಲಾವಣೆ ಉಂಟಾಗಲಿದೆ. ವ್ಯಾಪಾರಸ್ಥರು ರಿಸ್ಕ್‌ನ ಹಣ ವ್ಯವಹಾರ ಮಾಡದಂತೆ ಸಲಹೆ ನೀಡಲಾಗಿದೆ. ಇತರರ ಸಲಹೆ ಮೇರೆಗೆ ನಿಮ್ಮ ವ್ಯವಹಾರ ನಿರ್ಧಾರ ತೆಗೆದುಕೊಳ್ಳಲು ಹೋಗಬೇಡಿ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಸಾಲಗಳನ್ನು ತೀರಿಸಲು ನೀವು ಉಳಿತಾಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಉತ್ತಮ ಹೊಂದಾಣಿಕೆ ಇರಲಿದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ದೀರ್ಘಕಾಲದ ಸಮಸ್ಯೆ ನಿಮಗೆ ತೊಂದರೆ ಉಂಟು ಮಾಡಬಹುದು
ಅದೃಷ್ಟದ ಬಣ್ಣ: ಕೆನೆ
ಅದೃಷ್ಟದ ಸಂಖ್ಯೆ: 35
ಅದೃಷ್ಟದ ಸಮಯ: ಬೆಳಿಗ್ಗೆ 7:15 ರಿಂದ ಮಧ್ಯಾಹ್ನ 2 ರವರೆಗೆ

ಮಿಥುನ ರಾಶಿ
ಈ ದಿನ ಮಾನಸಿಕವಾಗಿ ಅಷ್ಟು ಒಳ್ಳೆಯದಲ್ಲ, ತಲೆಯಲ್ಲಿ ಬೇಡ ಆಲೋಚನೆಗಳು ಓಡುತ್ತಿರುತ್ತದೆ, ಯಾವುದೇ ಚಿಂತೆ ನಿಮ್ಮ ಮನಸ್ಸನ್ನು ತುಂಬಾ ಕಾಡುತ್ತಿರುತ್ತದೆ. ನಿಮ್ಮ ಆಲೋಚನೆಗಳನ್ನು ನಿಮ್ಮ ತಂದೆಯೊಂದಿಗೆ ಹಂಚಿಕೊಳ್ಳಲು ನಿಮಗೆ ಅವಕಾಶ ಸಿಗಲಿದೆ. ಕೆಲಸದ ವಿಷಯದಲ್ಲಿ ಈ ದಿನ ಸಾಮಾನ್ಯವಾಗಿರಲಿದೆ. ಇಂದು ಹಣದ ವಿಷಯದಲ್ಲಿ ಯಾರೊಂದಿಗಾದರೂ ವಿವಾದ ಉಂಟಾಗಬಹುದು. ಆದಷ್ಟು ನಿಮ್ಮ ಕೋಪವನ್ನು ನಿಯಂತ್ರಿಸುವುದು ಒಳ್ಳೆಯದು, ಇಲ್ಲದಿದ್ದರೆ ಕಾನೂನಿನ ಸಮಸ್ಯೆಗೆ ಸಿಲುಕಿಕೊಳ್ಳಬಹುದು. ಆರೋಗ್ಯದ ದೃಷ್ಟಿಯಿಂದ ಈ ದಿನ ಮಿಶ್ರಫಲ.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 5
ಅದೃಷ್ಟದ ಸಮಯ: ಸಂಜೆ 6:45 ರಿಂದ ರಾತ್ರಿ 8 ರವರೆಗೆ

ಕರ್ಕ ರಾಶಿ
ಮನೆಯ ವಾತಾವರಣ ತುಂಬಾ ಚೆನ್ನಾಗಿರುತ್ತದೆ. ನಿಮ್ಮ ಜವಾಬ್ದಾರಿ ಹೆಚ್ಚಾಗಲಿದೆ, ಆದರೆ ನಿಮ್ಮ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸಲು ಸಾಧ್ಯವಾಗುವುದು. ಕಚೇರಿಯಲ್ಲಿ ಏಕಕಾಲಕ್ಕೆ ಹಲವಾರು ಕೆಲಸ ಮಾಡಲು ಹೋಗಬೇಡಿ, ಇದರಿಂದ ತಪ್ಪುಗಳಾಗಬಹುದು. ಅಲ್ಲದೆ ಅತಿಯಾಗಿ ಕೆಲಸದ ಒತ್ತಡ ಕೂಡ ತೆಗೆದುಕೊಳ್ಳಬೇಡಿ. ಉದ್ಯಮಿಗಳು ನೀವು ಬಯಸಿದ ಲಾಭವನ್ನು ಪಡೆಯಬಹುದು.ಹಣದ ಪರಿಸ್ಥಿತಿ ಉತ್ತಮವಾಗಿರುತ್ತದೆ. ಆರೋಗ್ಯ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 16
ಅದೃಷ್ಟದ ಸಮಯ: ಬೆಳಿಗ್ಗೆ 8 ರಿಂದ ಸಂಜೆ 7 ರವರೆಗೆ

ಸಿಂಹ ರಾಶಿ
ನೀವಿಡುವ ಬೇಡಿಯಿಂದಾಗಿ ಸಂಗಾತಿ ಹಾಗೂ ನಿಮ್ಮ ನಡುವೆ ಮನಸ್ತಾಪ ಬರಬಹುದು. ಕಚೇರಿಯಲ್ಲಿ ನೀವು ಸಹೋದ್ಯೋಗಿಗಳ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಲು ಪ್ರಯತ್ನಿಸಿ. ಯಾವುದೇ ಹಣಕಾಸಿನ ವಹಿವಾಟು ಮಾಡುವಾಗ ವ್ಯಾಪಾರಸ್ಥರು ಹೆಚ್ಚು ಜಾಗರೂಕರಾಗಿರಲು ಸಲಹೆ ನೀಡಲಾಗಿದೆ. ಅನಗತ್ಯ ಅಹಂಕಾರ ಮಾಡಬೇಡಿ. ಹಣದ ವಿಷಯದಲ್ಲಿಈ ದಿನ ಒಳ್ಳೆಯದಲ್ಲ. ಸಾಲ ತೆಗೆದುಕೊಳ್ಳಬಹುದು. ಆರೋಗ್ಯ ಕ್ಷೀಣಿಸುವ ಸಾಧ್ಯತೆ ಇದೆ.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 24
ಅದೃಷ್ಟದ ಸಮಯ: ಬೆಳಿಗ್ಗೆ 4:20 ರಿಂದ ಮಧ್ಯಾಹ್ನ 3 ರವರೆಗೆ

ಕನ್ಯಾ ರಾಶಿ
ರಾಜಕೀಯಕ್ಕೆ ಸಂಬಂಧಿಸಿದವರಿಗೆ ಇಂದು ಅತ್ಯಂತ ಒಳ್ಳೆಯ ದಿನವಾಗಿದೆ. ನೀವು ಕೆಲವು ದೊಡ್ಡ ಯಶಸ್ಸನ್ನು ಪಡೆಯಬಹುದು ಮತ್ತು ನಿಮ್ಮ ಸ್ಥಾನವು ಬಲವಾಗಿರಲಿದೆ. ಇಂದು ಅಧಿಕ ಕೆಲಸ ಇರಲಿದೆ, ಬಾಕಿ ಉಳಿದಿರುವ ಕಾರ್ಯಗಳನ್ನು ಪೂರ್ಣಗೊಳಿಸಲು ನೀವು ಶ್ರಮಿಸುತ್ತೀರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಕುಟುಂಬದ ಜೊತೆ ಖುಷಿಯಿಂದ ಸಮಯ ಕಳೆಯಬಹುದು. ಆರೋಗ್ಯದ ದೃಷ್ಟಿಯಿಂದ ದಿನವು ಸಾಮಾನ್ಯವಾಗಿರಲಿದೆ.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದಸ ಸಂಖ್ಯೆ: 9
ಅದೃಷ್ಟದ ಸಮಯ: ಮಧ್ಯಾಹ್ನ 2 ರಿಂದ ರಾತ್ರಿ 8 ರವರೆಗೆ

ತುಲಾ ರಾಶಿ
ನೆಗೆಟಿವ್‌ ಚಿಂತನೆಯ ವ್ಯಕ್ತಿಗಳಿಂದ ಅಂತರ ಕಾಯ್ದುಕೊಳ್ಳಿ. ಅವರ ನಕಾರಾತ್ಮಕತೆಯು ನಿಮ್ಮ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಧನಾತ್ಮಕವಾಗಿ ಯೋಚಿಸಿ ಮತ್ತು ಧನಾತ್ಮಕವಾಗಿರಲು ಪ್ರಯತ್ನಿಸಿ. ಇಂದು ನೀವು ಕಚೇರಿಯಲ್ಲಿ ನಿಮಗೆ ಕೆಲವು ಕಷ್ಟಕರವಾದ ಕೆಲಸವನ್ನು ನಿಯೋಜಿಸಬಹುದು. ಆದರೆ, ನೀವು ಚಿಂತಿಸಬೇಕಾಗಿಲ್ಲ ಏಕೆಂದರೆ ನೀವು ಉನ್ನತ ಅಧಿಕಾರಿಗಳ ಸಂಪೂರ್ಣ ಸಹಕಾರವನ್ನು ಪಡೆಯುತ್ತೀರಿ. ಇಂದು ವ್ಯಾಪಾರಸ್ಥರಿಗೆ ತುಂಬಾ ದುಬಾರಿಯಾಗಲಿದೆ. ಹಣದ ವಿಚಾರದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಮಾಡಬೇಡಿ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 20
ಅದೃಷ್ಟದ ಸಮಯ: ಬೆಳಿಗ್ಗೆ 10:50 ರಿಂದ ಸಂಜೆ 4:20 ರವರೆಗೆ

ವೃಶ್ಚಿಕ ರಾಶಿ
ಮನೆಯ ವಾತಾವರಣ ಚೆನ್ನಾಗಿರಲಿದೆ. ಉದ್ಯಮಿಗಳು ಹೂಡಿಕೆ ಮಾಡಲು ಅವಕಾಶವನ್ನು ಪಡೆಯಬಹುದು. ಶೀಘ್ರದಲ್ಲೇ ನೀವು ಅದರ ಸರಿಯಾದ ಫಲಿತಾಂಶವನ್ನು ಪಡೆಯುವ ಸಾಧ್ಯತೆಯಿದೆ. ಉದ್ಯೋಗಸ್ಥರು ಕಚೇರಿಯಲ್ಲಿ ಕೆಲವು ಉತ್ತಮ ಗೌರವವನ್ನು ಪಡೆಯಬಹುದು. ಇಂದು ನಿಮ್ಮ ಉತ್ತಮ ಪ್ರದರ್ಶನದ ಬಲದಿಂದ ನೀವು ಎಲ್ಲರ ಹೃದಯವನ್ನು ಗೆಲ್ಲಲು ಸಾಧ್ಯವಾಗುತ್ತದೆ. ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಗಳಿರಬಹುದು.
ಅದೃಷ್ಟದ ಬಣ್ಣ: ಗಾಢ ಹಳದಿ
ಅದೃಷ್ಟದ ಸಂಖ್ಯೆ: 18
ಅದೃಷ್ಟದ ಸಮಯ: ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ

ಧನು ರಾಶಿ
ಹವಾಮಾನ ಬದಲಾವಣೆಯಿಂದ ಆರೋಗ್ಯ ದಿಢೀರ್ ಕ್ಷೀಣಿಸುವ ಸಾಧ್ಯತೆ ಇದೆ. ಇದರಿಂದಾಗಿ ನಿಮ್ಮ ದಿನನಿತ್ಯದ ಯೋಜನೆಗಳು ಸಹ ಅಡ್ಡಿಯಾಗಬಹುದು. ನೀವು ಸ್ವಲ್ಪ ಸಮಯದಿಂದ ಕೆಲಸದ ಬಗ್ಗೆ ಚಿಂತೆ ಮಾಡುತ್ತಿದ್ದರೆ, ಇಂದು ನಿಮ್ಮ ಸಮಸ್ಯೆಯನ್ನು ಪರಿಹರಿಸಬಹುದು. ನೀವು ಮತ್ತೊಮ್ಮೆ ಪೂರ್ಣ ಶಕ್ತಿ ಮತ್ತು ಉತ್ಸಾಹದಿಂದ ಕೆಲಸಕ್ಕೆ ಹಿಂತಿರುಗಬಹುದು. ಹಣದ ಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ಬಜೆಟ್‌ಗೆ ಅನುಗುಣವಾಗಿ ಖರ್ಚು ಮಾಡಿ.
ಅದೃಷ್ಟದ ಬಣ್ಣ: ಆಕಾಶ ನೀಲಿ
ಅದೃಷ್ಟದ ಸಂಖ್ಯೆ: 44
ಅದೃಷ್ಟದ ಸಮಯ: ಸಂಜೆ 6 ರಿಂದ ರಾತ್ರಿ 9 ರವರೆಗೆ

ಮಕರ ರಾಶಿ
ಕೆಲಸದ ಸ್ಥಳದಲ್ಲಿ ಅತ್ಯಂತ ಸಮತೋಲಿತವಾಗಿ ವರ್ತಿಸಲು ನಿಮಗೆ ಸಲಹೆ ನೀಡಲಾಗಿದೆ. ಉನ್ನತ ಅಧಿಕಾರಿಗಳ ಯಾವುದೇ ನಿರ್ಧಾರವನ್ನು ನೀವು ಒಪ್ಪದಿದ್ದರೆ, ನೀವು ಶಾಂತವಾಗಿ ಮತ್ತು ಬುದ್ಧಿವಂತಿಕೆಯಿಂದ ನಿಮ್ಮ ಅಭಿಪ್ರಾಯ ತಿಳಿಸಬೇಕು. ವ್ಯಾಪಾರಸ್ಥರು ಇಂದು ದೊಡ್ಡ ಗ್ರಾಹಕರೊಂದಿಗೆ ವ್ಯವಹರಿಸಲು ಅವಕಾಶವನ್ನು ಪಡೆಯಬಹುದು. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯ ಸಾಧ್ಯತೆ ಇದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಆರೋಗ್ಯದ ದೃಷ್ಟಿಯಿಂದ ಇಂದು ನಿಮಗೆ ಒಳ್ಳೆಯ ದಿನವಾಗಲಿದೆ.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 36
ಅದೃಷ್ಟದ ಸಮಯ: ಸಂಜೆ 4 ರಿಂದ ರಾತ್ರಿ 8 ರವರೆಗೆ

ಕುಂಭ ರಾಶಿ
ನೀವು ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದರೆ, ನೀವು ಕೆಲವು ಗಂಭೀರವಾದ ಆಂತರಿಕ ಸಮಸ್ಯೆಗಳ ಬಗ್ಗೆ ಯೋಚಿಸಬೇಕು, ಇಲ್ಲದಿದ್ದರೆ ಸಂಬಂಧದಲ್ಲಿನ ಅಂತರವು ಹೆಚ್ಚಾಗಬಹುದು. ಮಗುವಿನ ಕಡೆಯಿಂದ ಸಂತೋಷ ಇರಲಿದೆ. ಹಣದ ವಿಷಯದಲ್ಲಿ ದಿನವು ದುಬಾರಿಯಾಗಲಿದೆ. ಅತಿಯಾಗಿ ಖರ್ಚು ಮಾಡುವುದನ್ನು ತಪ್ಪಿಸಿ. ಕಚೇರಿಯಲ್ಲಿ ಸ್ಪರ್ಧೆ ಹೆಚ್ಚಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಚಿಕ್ಕ ಕೆಲಸವನ್ನು ಎಚ್ಚರಿಕೆಯಿಂದ ಮಾಡಲು ಪ್ರಯತ್ನಿಸಿ. ಉದ್ಯಮಿಗಳು ಉತ್ತಮ ಆರ್ಥಿಕ ಲಾಭವನ್ನು ಗಳಿಸುವ ಸಾಧ್ಯತೆಯಿದೆ. ಉತ್ತಮ ಆರೋಗ್ಯಕ್ಕಾಗಿ, ಅನಗತ್ಯ ಚಿಂತೆಗಳಿಂದ ದೂರವಿರಿ.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 16
ಅದೃಷ್ಟದ ಸಮಯ: ಬೆಳಿಗ್ಗೆ 4:25 ರಿಂದ ಮಧ್ಯಾಹ್ನ 2 ರವರೆಗೆ

ಮೀನ ರಾಶಿ
ನೀವು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಲಿದ್ದರೆ, ಖಂಡಿತವಾಗಿಯೂ ನಿಮ್ಮ ಮನೆಯ ಹಿರಿಯರ ಆಶೀರ್ವಾದವನ್ನು ತೆಗೆದುಕೊಳ್ಳಿ. ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ. ಹಣದ ವಿಷಯದಲ್ಲಿ ದಿನವು ಉತ್ತಮವಾಗಿರಲಿದೆ. ಕಚೇರಿಯಲ್ಲಿ ಅನುಕೂಲಕರ ವಾತಾವರಣ ಇರಲಿದೆ. ವ್ಯಾಪಾರಸ್ಥರು ಇಂದು ತರಾತುರಿಯಲ್ಲಿ ಯಾವುದೇ ಒಪ್ಪಂದವನ್ನು ಮಾಡಲು ಹೋಗಬಾರದು, ಇಲ್ಲದಿದ್ದರೆ ನಷ್ಟವಾಗಬಹುದು. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ನೀವು ಉತ್ತಮ ವೈದ್ಯರನ್ನು ಸಂಪರ್ಕಿಸಬೇಕು.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 14
ಅದೃಷ್ಟದ ಸಮಯ: ಸಂಜೆ 5 ರಿಂದ ರಾತ್ರಿ 9 ರವರೆಗೆ

English summary

Dina Bhavishya -May 23 2023 Today Rashi Bhavishya, Daily Horoscope in Kannada

Dina Bhavishya- Get Today's Rashi Bhavishy 23 May 2023 In Kannada, Read daily horoscope prediction of aries, taurus, gemini, cancer, leo, virgo, libra, scorpio, Sagittarius, Capricorn, Aquarius, pisces in Kannada.
Story first published: Tuesday, May 23, 2023, 4:00 [IST]
X
Desktop Bottom Promotion