Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
Horoscope Today 14 May 2023: ಭಾನುವಾರ: ಈ ದಿನ ಯಾವ ರಾಶಿಯವರಿಗೆ ಅದೃಷ್ಟ?
ಶುಭೋದಯ..... ವೈದಿಕ ಶಾಸ್ತ್ರದ ಪ್ರಕಾರ ಮೇ 14ರ ರಾಶಿಫಲ ನೋಡೋಣ:
ಸಂವತ್ಸರ: ಶುಭಕೃತ್
ಆಯನ: ಉತ್ತರಾಯಣ
ಋತು: ವಸಂತ
ಮಾಸ: ಜ್ಯೇಷ್ಠ
ಪಕ್ಷ: ಕೃಷ್ಣಪಕ್ಷ
ತಿಥಿ: ದಶಮಿ
ನಕ್ಷತ್ರ: 10:16ರವರೆಗೆ ಶತಾಭಿಷ ನಂತರ ಪೂರ್ವ ಭಾದ್ರಪದ
ರಾಹುಕಾಲ: ಸಂಜೆ 05:22ರಿಂದ 07:04ರವರೆಗೆ
ಮೇಷ ರಾಶಿ
ನಿಮಗೆ ಕೆಲಸದ ಒತ್ತಡವಿರಲಿದೆ. ನೀವು ನಿಮ್ಮ ಕೆಲಸವನ್ನು ಪೂರ್ಣಗೊಳಿಸಲು ನೀವು ತುಂಬಾ ಶ್ರಮಿಸಬೇಕಾಗಬಹುದು. ಉದ್ಯಮಿಗಳು ದೊಡ್ಡ ಲಾಭವನ್ನು ನಿರೀಕ್ಷಿಸುತ್ತಿದ್ದರೆ, ಇಂದು ನೀವು ನಿರಾಶೆ ಅನುಭವಿಸಬಹುದು, ಆದರೆ ಸದ್ಯದಲ್ಲಿಯೇ ಒಳ್ಳೆಯ ಲಾಭಗಳಿಸುವಿರಿ. ನೀವು ಸಾಲವನ್ನು ತೆಗೆದುಕೊಂಡಿದ್ದರೆ, ಸಾಧ್ಯವಾದಷ್ಟು ಬೇಗ ಅದನ್ನು ಮರುಪಾವತಿಸಲು ಪ್ರಯತ್ನಿಸಿ. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಉತ್ತಮ ಹೊಂದಾಣಿಕೆ ಇರಲಿದೆ. ಆರೋಗ್ಯದ ದೃಷ್ಟಿಯಿಂದ ದಿನವು ಉತ್ತಮವಾಗಿರುತ್ತದೆ.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟ ಸಂಖ್ಯೆ: 19
ಅದೃಷ್ಟದ ಸಮಯ: ಬೆಳಗ್ಗೆ 7 ರಿಂದ 11 ರವರೆಗೆ

ವೃಷಭ ರಾಶಿ
ಸ್ವಲ್ಪ ಸಮಯದಿಂದ ಕೆಲಸದ ಕಡೆಗೆ ಗಮನ ಕೊಡಲು ಸಾಧ್ಯವಾಗದಿದ್ದರೆ ನೀವು ಸಮಸ್ಯೆ ಬಗೆಹರಿಯಲಿದೆ, ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುವುದು. ವ್ಯಾಪಾರಸ್ಥರಿಗೆ ಈ ದಿನ ತುಂಬಾನೇ ಮುಖ್ಯವಾಗಿದೆ. ಅದರಲ್ಲೂ ವಿದೇಶಿ ಕಂಪನಿಗಳಿಗೆ ಸಂಬಂಧಿಸಿದ ವ್ಯವಹಾರ ನಡೆಸಿದರೆ ಉತ್ತಮ ಲಾಭಪಡೆಯಬಹುದು. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಆರೋಗ್ಯದ ವಿಷಯದಲ್ಲೂ ಚಿಂತಿಸಬೇಕಾಗಿಲ್ಲ.
ಅದೃಷ್ಟದ ಬಣ್ಣ: ಆಕಾಶ ನೀಲಿ
ಅದೃಷ್ಟದ ಸಂಖ್ಯೆ: 27
ಅದೃಷ್ಟದ ಸಮಯ: ಮಧ್ಯಾಹ್ನ 2 ರಿಂದ ಸಂಜೆ 4 ರವರೆಗೆ
ಮಿಥುನ ರಾಶಿ
ವ್ಯಾಪಾರಸ್ಥರಿಗೆ ಈ ದಿನ ಲಾಭದಾಯಕವಾಗಿದೆ. ಇತರರಿಗೆಹಣಕ್ಕೆ ಸಂಬಂಧಿಸಿದ ಚಿಂತೆಗಳು ನಿಮ್ಮನ್ನು ಕಾಡಬಹುದು. ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿರಲಿದೆ, ನಿಮ್ಮಿಬ್ಬರ ನಡುವೆ ಮನಸ್ತಾಪ ಬರಬಹುದು, ಆದರೆ ಕೋಪಗೊಳ್ಳುವ ಬದಲಿಗೆ ಮಾತುಕತೆಯ ಮೂಲಕ ಬಗೆಹರಿಸಲು ಪ್ರಯತ್ನಿಸಿ. ಆರೋಗ್ಯವಾಗಿರಲು ನಕಾರಾತ್ಮಕ ಆಲೋಚನೆಗಳಿಂದ ಹೊರಬನ್ನಿ.
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ: 4
ಅದೃಷ್ಟದ ಸಮಯ: ಬೆಳಿಗ್ಗೆ 8:10 ರಿಂದ ಮಧ್ಯಾಹ್ನ 1 ರವರೆಗೆ
ಕರ್ಕ ರಾಶಿ
ಈ ದಿನ ಶುಭವಾಗಿದೆ, ನೀವು ದಾನ ಮಾಡಬಹುದು, ವ್ಯಾಪಾರಸ್ಥರು ಕಡಿಮೆ ಶ್ರಮದಿಂದ ಉತ್ತಮ ಹಣವನ್ನು ಪಡೆಯಬಹುದು. ಕಚೇರಿಯಲ್ಲಿ ಬಾಸ್‌ನ ಕಟ್ಟುನಿಟ್ಟಿನ ವರ್ತನೆ ಇಂದು ಸಮಸ್ಯೆ ಹೆಚ್ಚಿಸಬಹುದು. ತರಾತುರಿಯಲ್ಲಿ ಯಾವುದೇ ತಪ್ಪು ನಿರ್ಧಾರ ತೆಗೆದುಕೊಳ್ಳದಂತೆ ಉದ್ಯಮಿಗಳಿಗೆ ಸೂಚಿಸಲಾಗಿದೆ. ನಿಮ್ಮ ಮನೆಯ ಕಿರಿಯ ಸದಸ್ಯರೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ಆರೋಗ್ಯದ ಚಿಂತೆ ಕಾಡಬಹುದು.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 25
ಅದೃಷ್ಟದ ಸಮಯ: ಬೆಳಿಗ್ಗೆ 4 ರಿಂದ ರಾತ್ರಿ 10 ರವರೆಗೆ
ಸಿಂಹ ರಾಶಿ
ನೀವು ಹೊಸ ಮನೆ, ಜಮೀನು ಇತ್ಯಾದಿಗಳನ್ನು ಖರೀದಿಸಲು ಯೋಜಿಸುತ್ತಿದ್ದರೆ, ಸಂಪೂರ್ಣ ತನಿಖೆ ಮಾಡಿದ ಬಳಿಕವಷ್ಟೇ ಖರೀದಿಸಿ, ಇಲ್ಲದಿದ್ದರೆ ನೀವು ಮೋಸ ಹೋಗಬಹುದು. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಹಣದ ಕೊರತೆಯಿಂದ ನಿಮ್ಮ ಯಾವುದೇ ಕೆಲಸವು ಸ್ಥಗಿತಗೊಂಡಿದ್ದರೆ ಈ ಅವಧಿಯಲ್ಲಿ ನೀವು ಆ ಕೆಲಸವನ್ನು ಪೂರ್ಣಗೊಳಿಸಬಹುದು. ಕೋಪವನ್ನು ನಿಯಂತ್ರಿಸಿ, ಇಲ್ಲದಿದ್ದರೆ ವೈವಾಹಿಕ ಜೀವನದಲ್ಲಿ ಸಮಸ್ಯೆ ಉಂಟಾಗಬಹುದು. ಕೆಲಸದ ದೃಷ್ಟಿಯಿಂದ ದಿನವು ಕಾರ್ಯನಿರತವಾಗಿರುತ್ತದೆ. ಆರೋಗ್ಯದ ಕಡೆ ಗಮನಹರಿಸಿ.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 10
ಅದೃಷ್ಟದ ಸಮಯ: ಮಧ್ಯಾಹ್ನ 12 ರಿಂದ ಸಂಜೆ 4 ರವರೆಗೆ
ಕನ್ಯಾ ರಾಶಿ
ಕೆಲಸದ ವಿಷಯದಲ್ಲಿ ಈ ದಿನ ಶುಭವಾಗಿದೆ. ನಿಮ್ಮ ಮೇಲೆ ಜವಾಬ್ದಾರಿಗಳ ಹೊರೆ ಹೆಚ್ಚಾಗಬಹುದು. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಆಹ್ಲಾದಕರವಾಗಿರುತ್ತದೆ. ಹಣಕಾಸಿನ ವಿಷಯಕ್ಕೆ ಜಗಳ ಉಂಟಾಗದಂತೆ ಎಚ್ಚರವಹಿಸಿ. ಆರೋಗ್ಯದ ಬಗ್ಗೆ ಹೇಳುವುದಾದರೆ ಎಣ್ಣೆಯಲ್ಲಿ ಕರಿದ ಹಾಗೂ ಅಧಿಕ ಮಸಾಲೆಯ ಆಹಾರಗಳಿಂದ ದೂರವಿರಿ.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 5
ಅದೃಷ್ಟದ ಸಮಯ: 10:45 ರಿಂದ 12:20 ರವರೆಗೆ
ತುಲಾ ರಾಶಿ
ಅಪರಿಚಿತರ ಜೊತೆಗೆ ನಿಮ್ಮ ಬಗ್ಗೆ ಏನೂ ಹೇಳಬೇಡಿ, ಇಲ್ಲದಿದ್ದರೆ ಅವರು ಅದರ ಲಾಭವನ್ನು ಪಡೆಯಬಹುದು. ಹಣಕ್ಕೆ ಸಂಬಂಧಿಸಿದ ಚಿಂತೆಯಿಂದ ನೀವು ಪರಿಹಾರವನ್ನು ಪಡೆಯುತ್ತೀರಿ. ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ವ್ಯಾಪಾರ ಮಾಡುವವರು ಆರ್ಥಿಕ ಲಾಭವನ್ನು ಪಡೆಯಬಹುದು. ವ್ಯಾಪಾರದಲ್ಲಿಯೂ ಬೆಳವಣಿಗೆ ಕಂಡುಬರಲಿದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ಕೆಟ್ಟ ಚಟಗಳಿಂದ ದೂರವಿರಿ.
ಅದೃಷ್ಟದ ಬಣ್ಣ: ಪೀಚ್
ಅದೃಷ್ಟದ ಸಂಖ್ಯೆ: 19
ಅದೃಷ್ಟದ ಸಮಯ: ಸಂಜೆ 5:18 ರಿಂದ 7:25 ರವರೆಗೆ
ವೃಶ್ಚಿಕ ರಾಶಿ
ಮನೆಯ ವಾತಾವರಣ ಖುಷಿಯಾಗಿರಲಿದೆ. ಬಾಸ್ ನಿಮಗೆ ಕಚೇರಿಯಲ್ಲಿ ಕೆಲವು ಪ್ರಮುಖ ಕೆಲಸವನ್ನು ನಿಯೋಜಿಸಿದ್ದರೆ, ಇಂದು ನೀವು ಅದನ್ನು ಸರಿಯಾದ ಸಮಯದಲ್ಲಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ವ್ಯಾಪಾರಸ್ಥರು ಸಾಲದ ವಹಿವಾಟುಗಳನ್ನು ಮಾಡದಂತೆ ಸಲಹೆ ನೀಡಲಾಗಿದೆ, ಇಲ್ಲದಿದ್ದರೆ ನಷ್ಟ ಸಂಭವಿಸಬಹುದು. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಈ ದಿನ ಉತ್ತಮವಾಗಿದೆ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 11
ಅದೃಷ್ಟದ ಸಮಯ: ಮಧ್ಯಾಹ್ನ 1:30ರಿಂದ ಸಂಜೆ 04:05ರವರೆಗೆ
ಧನು ರಾಶಿ
ನೀವು ವ್ಯಾಪಾರಸ್ಥರಾಗಿದ್ದರೆ ಮತ್ತು ನಿಮ್ಮ ಯಾವುದೇ ಕೆಲಸದಲ್ಲಿ ಅಡಚಣೆಯಿದ್ದರೆ, ಇಂದು ನಿಮ್ಮ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು. ತಾಳ್ಮೆಯಿಂದಿರಿ, ಶೀಘ್ರದಲ್ಲೇ ವಿಷಯಗಳು ನಿಮ್ಮ ಪರವಾಗಿ ತಿರುಗುತ್ತವೆ. ಉದ್ಯೋಗಿಗಳೇ ಅಜಾಗರೂಕತೆಯು ಇಂದು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಹಣದ ವಿಷಯದಲ್ಲಿಈ ದಿನ ಮಿಶ್ರಫಲ. ಜೀವನ ಸಂಗಾತಿಯೊಂದಿಗೆ ಪರಸ್ಪರ ಸಂಬಂಧವು ಉತ್ತಮವಾಗಿರುತ್ತದೆ. ದೈನಂದಿನ ಕಾರ್ಯಗಳನ್ನು ಪೂರ್ಣಗೊಳಿಸುವಲ್ಲಿ ನೀವು ಅವರ ಬೆಂಬಲವನ್ನು ಪಡೆಯುತ್ತೀರಿ. ಆರೋಗ್ಯ ಹದಗೆಡಬಹುದು ಜಾಗ್ರತೆವಹಿಸಿ.
ಅದೃಷ್ಟದ ಬಣ್ಣ: ಮರೂನ್
ಅದೃಷ್ಟದ ಸಂಖ್ಯೆ: 6
ಅದೃಷ್ಟದ ಸಮಯ: ಬೆಳಗ್ಗೆ 5 ರಿಂದ 9:20 ರವರೆಗೆ
ಮಕರ ರಾಶಿ
ಹಣಕಾಸಿನ ಸ್ಥಿತಿಯು ಸುಧಾರಿಸುತ್ತದೆ ಮತ್ತು ಇಂದು ನೀವು ಯಾವುದೇ ಹಳೆಯ ಸಾಲ ಅಥವಾ ಸಾಲವನ್ನು ಮರುಪಾವತಿ ಮಾಡುವಲ್ಲಿ ಯಶಸ್ವಿಯಾಗುತ್ತೀರಿ. ಯಾವುದೇ ಚಿಕ್ಕ ಕೆಲಸವನ್ನೂ ಯಾವುದೇ ತಪ್ಪಿಲ್ಲದೆ ಪೂರ್ಣಗೊಳಿಸಲು ಪ್ರಯತ್ನಿಸುತ್ತೀರಿ. ವರ್ತಕರಿಗೆ ಲಾಭದ ದಿನವಾಗಿದೆ. ನೀವು ದೊಡ್ಡ ಆರ್ಥಿಕ ಲಾಭವನ್ನು ಪಡೆಯಬಹುದು. ಮಗುವಿಗೆ ಸಂಬಂಧಿಸಿದ ಚಿಂತೆ ದೂರಾಗಲಿದೆ. ಆರೋಗ್ಯದ ಬಗ್ಗೆ ಹೇಳುವದಾದೆಎ ನಿಮಗೆ ಕೈ ಅಥವಾ ಕಾಲುಗಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇರಬಹುದು.
ಅದೃಷ್ಟದ ಬಣ್ಣ: ಬೂದು
ಅದೃಷ್ಟದ ಸಂಖ್ಯೆ: 42
ಅದೃಷ್ಟದ ಸಮಯ: ಸಂಜೆ 7 ರಿಂದ 9:15 ರವರೆಗೆ
ಕುಂಭ ರಾಶಿ
ಬಹಳ ಸಮಯದ ನಂತರ ನಿಮಗಾಗಿ ಬಿಡುವು ಸುಗಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ ನೀವು ವಿದ್ಯಾರ್ಥಿಯಾಗಿದ್ದರೆ ಮತ್ತು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ ಮತ್ತಷ್ಟು ಶ್ರಮಪಟ್ಟು ಓದಿ, ಯಶಸ್ಸು ಸಿಗುತ್ತದೆ. ಆರೋಗ್ಯದ ದೃಷ್ಟಿಯಿಂದ ಇಂದು ಉತ್ತಮ ದಿನವಾಗಿರುತ್ತದೆ.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 39
ಅದೃಷ್ಟದ ಸಮಯ: ಬೆಳಿಗ್ಗೆ 7 ರಿಂದ 11 ರವರೆಗೆ
ಮೀನ ರಾಶಿ
ಪ್ರೀತಿಯ ಜೀವನದಲ್ಲಿ ಮೂರನೇಯವರ ಹಸ್ತಕ್ಷೇಪದಿಂದಾಗಿ ನಂಬಿಕೆಯಲ್ಲಿ ಕೊರತೆ ಉಂಟಾಗುವುದು. ಹಣದ ವಿಷಯದಲ್ಲಿ, ದಿನವು ಏರಿಳಿತಗಳಿಂದ ತುಂಬಿರುತ್ತದೆ. ವೆಚ್ಚದಲ್ಲಿ ಹೆಚ್ಚಳ ಸಾಧ್ಯ. ವ್ಯಾಪಾರಸ್ಥರು ಕಡಿಮೆ ದೂರ ಪ್ರಯಾಣ ಮಾಡಬೇಕಾಗಬಹುದು. ಇದರ ಹೊರತಾಗಿ, ನೀವು ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡಿದರೆ, ನೀವು ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ಯಾವುದೇ ಕೆಲಸವನ್ನು ಆತುರದಿಂದ ಮಾಡಬೇಡಿ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 20
ಅದೃಷ್ಟದ ಸಮಯ: ಸಂಜೆ 5:50 ರಿಂದ 7:25 ರವರೆಗೆ



Click it and Unblock the Notifications












