Horoscope Today 13 May 2023: ಶನಿವಾರ: ಈ ದಿನ ಯಾವ ರಾಶಿಯವರಿಗೆ ಅದೃಷ್ಟ?

ಶುಭೋದಯ..... ವೈದಿಕ ಶಾಸ್ತ್ರದ ಪ್ರಕಾರ ಮೇ‌ 13ರ ರಾಶಿಫಲ ನೋಡೋಣ:
ಸಂವತ್ಸರ: ಶುಭಕೃತ್
ಆಯನ: ಉತ್ತರಾಯಣ
ಋತು: ವಸಂತ
ಮಾಸ: ಜ್ಯೇಷ್ಠ
ಪಕ್ಷ: ಕೃಷ್ಣಪಕ್ಷ
ತಿಥಿ: ನವಮಿ
ನಕ್ಷತ್ರ: ಬೆಳಗ್ಗೆ 11:35ರವರೆಗೆ ಧನಿಷ್ಠಾ ಅಥವಾ ಶತಾಭಿಷ
ರಾಹುಕಾಲ: ಬೆಳಗ್ಗೆ 08:55ರಿಂದ 10:36ರವರೆಗೆ

ಮೇಷ ರಾಶಿ
ಕುಟುಂಬ ಜೀವನದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿರಲಿದೆ. ಮನೆಯಲ್ಲಿ ಸಮಸ್ಯೆ ಕಡಿಮೆಯಾಗಿ ಶಾಂತಿಯ ವಾತಾವರಣ ಇರಲಿದೆ. ಕುಟುಂಬ ಸದಸ್ಯರಲ್ಲಿ ಮತ್ತೊಮ್ಮೆ ಪ್ರೀತಿ ಮತ್ತು ಒಗ್ಗಟ್ಟು ಕಾಣಿಸಿಕೊಳ್ಳುವುದು. ಹಣದ ವಿಷಯದಲ್ಲಿ ಈ ದಿನವು ತುಂಬಾ ದುಬಾರಿಯಾಗಲಿದೆ. ಅನಗತ್ಯ ಖರ್ಚುಗಳು ಉಂಟಾಗಬಹುದು. ಆದರೆ ಬಜೆಟ್‌ ನಿಯಂತ್ರಣದಲ್ಲಿಟ್ಟು ಖರ್ಚು ಮಾಡಿದರೆ ಒಳ್ಳೆಯದು. ಆರೋಗ್ಯದ ಬಗ್ಗೆ ಹೇಳುವುದಾದರೆ ಈ ದಿನ ಏರಳಿತಗಳಿಂದ ಕೂಡಿರಲಿದೆ.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 14
ಅದೃಷ್ಟದ ಸಮಯ: ಮಧ್ಯಾಹ್ನ 12 ರಿಂದ ಮಧ್ಯಾಹ್ನ 3 ರವರೆಗೆ

 Dina Bhavishya -May 13 2023 Today Rashi Bhavishya, Daily Horoscope in Kannada

ವೃಷಭ ರಾಶಿ
ಏನಾದರೂ ಕಾನೂನು ಸಮಸ್ಯೆವಿದ್ದರೆ ಅದಕ್ಕೆ ಪರಿಣಿತರ ಸಲಹೆ ಪಡೆಯಿರಿ. ಈ ದಿನ ಸೋಮಾರಿತನಬಿಟ್ಟು ಕೆಲಸ ಕಡೆ ಸಂಪೂರ್ಣ ಗಮನಹರಿಸಿ. ವ್ಯಾಪಾರಸ್ಥರು ತಮ್ಮ ಕಠಿಣ ಪರಿಶ್ರಮಕ್ಕೆ ಸರಿಯಾದ ಫಲಿತಾಂಶವನ್ನು ಪಡೆಯಬಹುದು. ನೀವು ಲಾಭ ಗಳಿಸಲು ಉತ್ತಮ ಅವಕಾಶವನ್ನು ಪಡೆಯಬಹುದು. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರಲಿದೆ. ಈ ದಿನ ಆರೋಗ್ಯ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 16
ಅದೃಷ್ಟದ ಸಮಯ: ಸಂಜೆ 6 ರಿಂದ ರಾತ್ರಿ 8 ರವರೆಗೆ

ಮಿಥುನ ರಾಶಿ
ಈ ದಿನ ಮಾನಸಿಕವಾಗಿ ತುಂಬಾ ಉತ್ತಮವಾಗಿರಲಿದೆ. ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆ ಬಗೆಹರಿಯುವುದು. ಇಂದು ನೀವು ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಇಂದು ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ನೀವು ಹೊಸ ಆದಾಯದ ಮೂಲವನ್ನು ಹುಡುಕುತ್ತಿದ್ದರೆ, ಇಂದು ನೀವು ನಿಮ್ಮ ಪ್ರಯತ್ನಗಳಲ್ಲಿ ಯಶಸ್ಸನ್ನು ಪಡೆಯಬಹುದು. ಆರೋಗ್ಯ ಸಂಬಂಧಿ ಸಮಸ್ಯೆ ಎದುರಾಗಬಹುದು. ನೀವು ಸರಿಯಾದ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 23
ಅದೃಷ್ಟದ ಸಮಯ: ಬೆಳಗ್ಗೆ 6:50 ರಿಂದ 9:20 ರವರೆಗೆ

ಕರ್ಕ ರಾಶಿ
ಈ ದಿನ ಮಕ್ಕಳ ವಿಷಯದಲ್ಲಿ ಬೇಸರ ಉಂಟಾಗಬಹುದು, ಆದರೆ ನೀವು ತುಂಬಾ ಸಮತೋಲಿತವಾಗಿ ವರ್ತಿಸುವುದು ಉತ್ತಮ, ಕೋಪಗೊಳ್ಳುವುದರಿಂದ ಏನೂ ಪ್ರಯೋಜನವಿಲ್ಲ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಆದರೆ ನಿಮ್ಮ ಹವ್ಯಾಸಗಳಿಗೆ ಅತಿಯಾಗಿ ಹಣ ಖರ್ಚು ಮಾಡಿದರೆ ತೊಂದರೆ ಉಂಟಾಗುವುದು. ಕಚೇರಿಯ ವಾತಾವರಣ ಇಂದು ತುಂಬಾ ಧನಾತ್ಮಕವಾಗಿರುತ್ತದೆ. ನೀವು ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡಿದರೆ, ನೀವು ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 8
ಅದೃಷ್ಟದ ಸಮಯ: ಸಂಜೆ 4 ರಿಂದ ಸಂಜೆ 7 ರವರೆಗೆ

ಸಿಂಹ ರಾಶಿ
ನಿಮ್ಮ ಮಕ್ಕಳ ವೃತ್ತಿಗೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಆತುರಪಡಬೇಡಿ. ಎಚ್ಚರಿಕೆಯಿಂದ ಯೋಚಿಸಿದ ನಂತರವೇ ನಿಮ್ಮ ನಿರ್ಧಾರವನ್ನು ತೆಗೆದುಕೊಳ್ಳಿ, ಉದ್ಯೋಗಿಗಳಿಗೆ ಈ ದಿನ ತುಂಬಾನೇ ಶುಭವಾಗಿದೆ. ಈ ದಿನದ ನಿಮ್ಮ ಕೆಲಸ ಕಾರ್ಯಗಳಿಗೆ ಅದೃಷ್ಟದ ಬೆಂಬಲ ದೊರೆಯಲಿದೆ. ಉದ್ಯಮಿಗಳ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಈ ಹಿಂದೆ ಮಾಡಿದ ಹೂಡಿಕೆಯಿಂದ ದುಪ್ಪಟ್ಟು ಲಾಭ ಪಡೆಯಬಹುದು. ನಿಮಗೆ ಅಧಿಕ ರಕ್ತದೊತ್ತಡದ ಸಮಸ್ಯೆ ಇದ್ದರೆ ಕೋಪ ನಿಯಂತ್ರಿಸಿ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 11
ಅದೃಷ್ಟದ ಸಮಯ: ಮಧ್ಯಾಹ್ನ 1 ರಿಂದ ಸಂಜೆ 4 ರವರೆಗೆ

ಕನ್ಯಾ ರಾಶಿ
ಮನೆಯ ಯಾವುದೇ ಸದಸ್ಯರ ಆರೋಗ್ಯ ಸರಿಯಿಲ್ಲದಿದ್ದರೆ ಯಾವುದೇ ರೀತಿಯ ನಿರ್ಲಕ್ಷ್ಯ ಮಾಡಬೇಡಿ. ತಕ್ಷಣ ಉತ್ತಮ ವೈದ್ಯರನ್ನು ಸಂಪರ್ಕಿಸಿ. ಹಿಂದಿನದನ್ನು ಮರೆತು, ಈ ಸಮಯದಲ್ಲಿ ನೀವು ಹೊಸ ಪ್ರಾರಂಭವನ್ನು ಮಾಡಬೇಕಾಗಿದೆ. ನೀವು ಅನಗತ್ಯ ವಿಷಯಗಳ ಬಗ್ಗೆ ತಲೆಕೆಡಿಸಿಕೊಂಡು ಕೂತರೆ ಭವಿಷ್ಯದ ಮೇಲೆ ಭಾರಿ ಪರಿಣಾಮ ಬೀರುತ್ತದೆ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುತ್ತದೆ. ಇಂದು ಕೆಲಸಕ್ಕೆ ಸಂಬಂಧಿಸಿದ ಪ್ರಯಾಣದ ಸಾಧ್ಯತೆಗಳಿವೆ.
ಅದೃಷ್ಟದ ಬಣ್ಣ: ಆಕಾಶ ನೀಲಿ
ಅದೃಷ್ಟದ ಸಂಖ್ಯೆ: 7
ಅದೃಷ್ಟದ ಸಮಯ: ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ

ತುಲಾ ರಾಶಿ
ಬಹಳ ಸಮಯದ ನಂತರ ಇಂದು ನಿಮಗೆ ಸ್ವಲ್ಪ ಬಿಡುವು ಸಿಗಲಿದೆ. ನಿಮ್ಮ ಕುಟುಂಬದ ಸದಸ್ಯರೊಂದಿಗೆ ನೀವು ಯಾವುದೇ ಶುಭ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಕೆಲಸದ ದೃಷ್ಟಿಯಿಂದ ಈ ದಿನವು ಉತ್ತಮವಾಗಿದೆ. ಇಂದು ನೀವು ನಿಮ್ಮ ಶ್ರಮಕ್ಕೆ ತಕ್ಕಂತೆ ಫಲಿತಾಂಶಗಳನ್ನು ಪಡೆಯಬಹುದು. ಉದ್ಯೋಗಿಗಳಿಗೆ ಈ ದಿನ ಉತ್ತಮವಾಗಿದೆ. ಉದ್ಯಮಿಗಳು ಉತ್ತಮ ಆರ್ಥಿಕ ಲಾಭವನ್ನು ಪಡೆಯಬಹುದು. ನಿಮ್ಮ ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯಲು ಸಹ ನೀವು ನಿರ್ಧರಿಸಬಹುದು. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಆರೋಗ್ಯದ ಬಗ್ಗೆ ಹೇಳುವುದಾದರೆ, ನಿಮಗೆ ಗ್ಯಾಸ್, ಅಜೀರ್ಣ, ಅಸಿಡಿಟಿ ಮುಂತಾದ ಸಮಸ್ಯೆಗಳಿರಬಹುದು.
ಅದೃಷ್ಟದ ಬಣ್ಣ: ಮರೂನ್
ಅದೃಷ್ಟದ ಸಂಖ್ಯೆ: 20
ಅದೃಷ್ಟದ ಸಮಯ: ಸಂಜೆ7 ರಿಂದ ರಾತ್ರಿ 8:25ರವರೆಗೆ

ವೃಶ್ಚಿಕ ರಾಶಿ
ಹಣದ ವಿಷಯದಲ್ಲಿ ಈ ದಿನ ಉತ್ತಮ ಸೂಚನೆ ನೀಡುತ್ತಿಲ್ಲ, ಈ ದಿನ ನೀವು ಸಾಲ ಕೊಡುವುದು ಅಥವಾ ಪಡೆಯುವುದು ಮಾಡಬೇಡಿ. ಕಚೇರಿಯಲ್ಲಿನ ಕೆಲಸದ ಬಗ್ಗೆ ನಿರ್ಲಕ್ಷ್ಯ ತೋರಿದರೆ ಮೇಲಾಧಿಕಾರಿಗಳು ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ನಿಮಗೆ ನೀಡಿದ ಯಾವುದೇ ಜವಾಬ್ದಾರಿಯನ್ನು ನಿಮ್ಮಿಂದ ಹಿಂತೆಗೆದುಕೊಳ್ಳುವ ಸಾಧ್ಯತೆಯಿದೆ. ವ್ಯಾಪಾರಸ್ಥರು ಇಂದು ಲಾಭ ಗಳಿಸಲು ಕಷ್ಟಪಡಬೇಕಾಗುತ್ತದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಸಾಮಾನ್ಯವಾಗಿರುತ್ತದೆ. ಆರೋಗ್ಯ ಹದಗೆಡಬಹುದು.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 6
ಅದೃಷ್ಟದ ಸಮಯ: ಬೆಳಗ್ಗೆ 4:15 ರಿಂದ 8:00 ರವರೆಗೆ

ಧನು ರಾಶಿ
ನಿಮ್ಮ ಬಾಳ ಸಂಗಾತಿಯ ಭಾವನೆಗಳನ್ನು ಅರ್ಥ ಮಾಡಿಕೊಂಡು ಗೌರವಿಸಿ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯ ಬಲವಾದ ಸಾಧ್ಯತೆಯಿದೆ. ಈ ದಿನ ಆರ್ಥಿಕ ದೃಷ್ಟಿಯಿಂದ ತುಂಬಾ ಉತ್ತಮವಿದೆ, ಆದರೆ ನೀವು ಬಜೆಟ್‌ ಪ್ರಕಾರ ಹಣ ಖರ್ಚು ಮಾಡಿದರೆ ಒಳ್ಳೆಯದು. ಸರ್ಕಾರಿ ಕೆಲಸ ಮಾಡುವವರಿಗೆ ಇಂದು ಸವಾಲಿನ ದಿನವಾಗಿದೆ. ವ್ಯಾಪಾರಸ್ಥರು ಇಂದು ಯಾವುದೇ ದೊಡ್ಡ ರಿಸ್ಕ್‌ ತೆಗೆದುಕೊಳ್ಳಲು ಹೋಗಬೇಡಿ. ಆರೋಗ್ಯದ ವಿಷಯದಲ್ಲಿ ಈ ದಿನ ಮಿಶ್ರಫಲ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 14
ಅದೃಷ್ಟದ ಸಮಯ: ಸಂಜೆ 5 ರಿಂದ ರಾತ್ರಿ 8:35 ರವರೆಗೆ

ಮಕರ ರಾಶಿ
ಮಕರ ರಾಶಿಯವರು ಇಂದು ಬಹಳ ಜಾಗರೂಕರಾಗಿರಬೇಕು. ಶತ್ರುಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸಬಹುದು, ಇದರ ಹೊರತಾಗಿ ಅವರು ನಿಮ್ಮ ಪ್ರಮುಖ ಕೆಲಸಕ್ಕೆ ಅಡ್ಡಿಪಡಿಸಲು ಪ್ರಯತ್ನಿಸುತ್ತಾರೆ. ಈ ದಿನ ಯಾರಿಗೂ ತಮಾಷೆ ಮಾಡಲು ಹೋಗಬೇಡಿ, ತಮಾಷೆ ವಿಚಾರ ಸೀರಿಯಸ್‌ ಆಗಬಹುದು. ವ್ಯಾಪಾರಸ್ಥರಿಗೆ ಇಂದು ಅತ್ಯಂತ ಶುಭ ದಿನ. ಈ ದಿನ ನೀವು ಆರ್ಥಿಕ ಲಾಭ ಪಡೆಯಬಹುದು. ವೈವಾಹಿಕ ಜೀವನದಲ್ಲಿ ಖುಷಿ ಇರಲಿದೆ. ಆರೋಗ್ಯದ ವಿಷಯದಲ್ಲಿ ಈ ದಿನವು ಸರಾಸರಿಯಾಗಿರಲಿದೆ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 8
ಅದೃಷ್ಟದ ಸಮಯ: ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ

ಕುಂಭ ರಾಶಿ
ನೀವು ಯಾವುದೇ ಬೆಲೆಬಾಳುವ ವಸ್ತುವನ್ನು ಖರೀದಿಸಲು ಹೊರಟಿದ್ದರೆ ನಿಮ್ಮ ಬಜೆಟ್‌ಗೆ ತಕ್ಕಂತೆ ಖರೀದಿಸಿ, ಇಲ್ಲದಿದ್ದರೆ ಆರ್ಥಿಕ ತೊಂದರೆ ಎದುರಿಸಬೇಕಾಗುವುದು. ಬಾಸ್ ನಿಮಗೆ ಕಛೇರಿಯಲ್ಲಿ ಕೆಲವು ಕೆಲಸವನ್ನು ನಿಯೋಜಿಸಿದ್ದರೆ ಸಣ್ಣ ತಪ್ಪು ಕೂಡ ಆಗದಂತೆ ಜಾಗ್ರತೆವಹಿಸಿ. ಇಂದು ನೀವು ಕಠಿಣ ಪರಿಶ್ರಮವು ನಿಮಗೆ ಉತ್ತಮಫಲ ಸಿಗಲಿದೆ. ವ್ಯಾಪಾರಸ್ಥರಿಗೆ ಈ ದಿನ ಮಿಶ್ರಫಲ. ಆರೋಗ್ಯದ ಬಗ್ಗೆ ಹೇಳುವುದಾದರೆ ಸಂಧಿವಾತದ ಸಮಸ್ಯೆ ಇರಬಹುದು.
ಅದೃಷ್ಟದ ಬಣ್ಣ: ಕೆನೆ
ಅದೃಷ್ಟದ ಸಂಖ್ಯೆ: 26
ಅದೃಷ್ಟದ ಸಮಯ: ಸಂಜೆ 6 ರಿಂದ ರಾತ್ರಿ 9 ರವರೆಗೆ

ಮೀನ ರಾಶಿ
ವ್ಯಾಪಾರಸ್ಥರಿಗೆ ಈ ದಿನ ಅನುಕೂಲಕರವಾಗಿದೆ. ಇಂದು ನೀವು ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಉದ್ಯೋಗಿಗಳಿಗೆ ಈ ದಿನ ಕೆಲಸದ ಒತ್ತಡ ಅಧಿಕವಿರಲಿದೆ. ಇಂದು ನೀವು ಹಣಕ್ಕೆ ಸಂಬಂಧಿಸಿದ ಕೆಲವು ದೊಡ್ಡ ಕೆಲಸಗಳನ್ನು ಮಾಡಬಹುದು. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ವ್ಯಾಯಾಮ ಮಾಡುವುದು ಒಳ್ಳೆಯದು.
ಅದೃಷ್ಟದ ಬಣ್ಣ: ಪೀಚ್
ಅದೃಷ್ಟದ ಸಂಖ್ಯೆ: 10
ಅದೃಷ್ಟದ ಸಮಯ: ಬೆಳಸಗ್ಗೆ 4:30 ರಿಂದ 8:25 ರವರೆಗೆ

English summary

Dina Bhavishya -May 13 2023 Today Rashi Bhavishya, Daily Horoscope in Kannada

Dina Bhavishya- Get Today's Rashi Bhavishy 13 May 2023 In Kannada, Read daily horoscope prediction of aries, taurus, gemini, cancer, leo, virgo, libra, scorpio, Sagittarius, Capricorn, Aquarius, pisces in Kannada.
Story first published: Saturday, May 13, 2023, 4:00 [IST]
X
Desktop Bottom Promotion