Latest Updates
-
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್ -
ಅಕ್ಕಿ ಬೇಡ, ಉದ್ದಿನಬೇಳೆ ಬೇಡ.. 15 ನಿಮಿಷದ ಹೆಸರು ಬೇಳೆ-ತರಕಾರಿ ಇಡ್ಲಿ! ಉಳಿದ ಇಡ್ಲಿ ಫ್ರೆಶ್ ಆಗಿಡೋದು ಹೇಗೆ? -
ಗ್ಯಾಸ್ ಇಲ್ವಾ? ಚಿಂತೆ ಬೇಡ.. ಒಲೆ ಹಚ್ಚದೇ ಮಾಡುವ 5 ಆರೋಗ್ಯಕರ ಊಟಗಳಿವು! -
ಮಿಕ್ಸಿಯಲ್ಲೇ ಮಾಡಿ ಕಬ್ಬಿನ ಹಾಲು! ಕಬ್ಬು ಇಲ್ಲದೆಯೇ ಶುದ್ಧವಾದ ಹಾಲು ಮಾಡೋದು ಹೇಗೆ? ರಸ್ತೆ ಬದಿಗಿಂತ ರುಚಿ -
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ? -
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ
Horoscope Today 12 May 2023: ಶುಕ್ರವಾರ: ಈ ದಿನ 12 ರಾಶಿಗಳಿಗೆ ಹೇಗಿರಲಿದೆ?
ಶುಭೋದಯ..... ವೈದಿಕ ಶಾಸ್ತ್ರದ ಪ್ರಕಾರ ಮೇ 12ರ ರಾಶಿಫಲ ನೋಡೋಣ:
ಸಂವತ್ಸರ: ಶುಭಕೃತ್
ಆಯನ: ಉತ್ತರಾಯಣ
ಋತು: ವಸಂತ
ಮಾಸ: ಜ್ಯೇಷ್ಠ
ಪಕ್ಷ: ಕೃಷ್ಣಪಕ್ಷ
ತಿಥಿ: ಸಪ್ತಮಿ
ನಕ್ಷತ್ರ: ಶ್ರಾವಣ
ರಾಹುಕಾಲ: ಬೆಳಗ್ಗೆ 10:36ರಿಂದ ಮಧ್ಯಾಹ್ನ 12:18ರವರೆಗೆ
ಮೇಷ ರಾಶಿ
ಕೆಲಸದಲ್ಲಿ ಇಂದು ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು. ಒಂದು ಚಿಕ್ಕ ತಪ್ಪು ಕೂಡ ಆಗದಂತೆ ಎಚ್ಚರವಹಿಸಿ, ಕೆಲವೊಂದು ಘಟನೆಗಳು ನಿಮ್ಮ ಆತ್ಮವಿಶ್ವಾಸ ಕಡಿಮೆ ಮಾಡಬಹುದು. ಆದರೆ ನೀವು ನೀವು ಜಾಗ್ರತೆ ಹಾಗೂ ಬುದ್ಧಿವಂತಿಕೆಯಿಂದ ವರ್ತಿಸುವುದು ಒಳ್ಳೆಯದು. ವ್ಯಾಪಾರಸ್ಥರಿಗೆ ಈ ದಿನ ಸರಾಸರಿಯಾಗಲಿದೆ. ಹಣದ ಪರಿಸ್ಥಿತಿ ಚೆನ್ನಾಗಿರಲಿದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ಈ ದಿನ ಮಾನಸಿಕ ಒತ್ತಡ ಹೆಚ್ಚಿರಲಿದೆ.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 33
ಅದೃಷ್ಟದ ಸಮಯ: ಸಂಜೆ 4 ರಿಂದ ರಾತ್ರಿ 9:15 ರವರೆಗೆ

ವೃಷಭ ರಾಶಿ
ನೀವು ಉದ್ಯಮಿಯಾಗಿದ್ದು ನಿಮಗೆ ಇಂದು ದೊಡ್ಡ ಆರ್ಡರ್ ನೀಡಬೇಕಿದ್ದರೆ ಮೊದಲು ಅದರತ್ತ ಗಮನಹರಿಸಿ. ನಿಮ್ಮ ನಿರ್ಲಕ್ಷ್ಯ ಭವಿಷ್ಯದಲ್ಲಿ ನಷ್ಟ ಉಂಟು ಮಾಡಬಹುದು. ಉದ್ಯೋಗಸ್ಥರಿಗೆ ಇಂದು ಮಿಶ್ರಫಲ. ಈ ದಿನ ನೀವು ನಿಮ್ಮ ಕೆಲಸದತ್ತ ಸಂಪೂರ್ಣ ಗಮನ ಹರಿಸಬೇಕು. ಇದಲ್ಲದೆ, ನಿಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಲು ನೀವು ಪ್ರಯತ್ನಿಸಬೇಕು. ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ಚರ್ಮ ಸಂಬಂಧಿತ ಸಮಸ್ಯೆ ಇರಬಹುದು.
ಅದೃಷ್ಟದ ಬಣ್ಣ: ಕೆನೆ
ಅದೃಷ್ಟದ ಸಂಖ್ಯೆ: 26
ಅದೃಷ್ಟದ ಸಮಯ: ಬೆಳಿಗ್ಗೆ 7:20 ರಿಂದ 9:35 ರವರೆಗೆ
ಮಿಥುನ ರಾಶಿ
ಮನೆಯ ಜವಾಬ್ದಾರಿಗಳನ್ನು ನಿರ್ಲಕ್ಷಿಸಬೇಡಿ. ನಿರ್ಲಕ್ಷ್ಯದ ವರ್ತನೆ ಮನೆಯಲ್ಲಿ ಸಮಸ್ಯೆ ಉಂಟು ಮಾಡಬಹುದು. ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವೆ ಸಮತೋಲನವನ್ನು ಸಾಧಿಸಲು ಪ್ರಯತ್ನಿಸುವುದು ಒಳ್ಳೆಯದು. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ಹಣಕಾಸಿನ ಸಮಸ್ಯೆಗಳನ್ನು ತೊಡೆದುಹಾಕಲು, ನೀವು ಹೊಸ ಆದಾಯದ ಮೂಲವನ್ನು ಕಂಡುಹಿಡಿಯಬೇಕು. ವ್ಯಾಪಾರಸ್ಥರು ಇಂದು ನಿರೀಕ್ಷಿತ ಫಲಿತಾಂಶಗಳನ್ನು ಪಡೆಯಬಹುದು. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 28
ಅದೃಷ್ಟದ ಸಮಯ: ಬೆಳಿಗ್ಗೆ 4 ರಿಂದ ರಾತ್ರಿ 8 ರವರೆಗೆ
ಕರ್ಕ ರಾಶಿ
ವ್ಯಾಪಾರಿಗಳು ಇಂದು ಯಾವುದೇ ಪ್ರಮುಖ ನಿರ್ಧಾರವನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ಯಾರನ್ನೂ ಕುರುಡಾಗಿ ನಂಬಬೇಡಿ, ಇಲ್ಲದಿದ್ದರೆ ದೊಡ್ಡ ನಷ್ಟವಾಗಬಹುದು. ಉದ್ಯೋಗಿಗಳಿಗೆ ಈ ದಿನ ಉತ್ತಮವಾಗಿದೆ. ನಿಮ್ಮ ಉತ್ತಮ ಕಾರ್ಯಕ್ಷಮತೆಯ ಆಧಾರದ ಮೇಲೆ, ನೀವು ಉನ್ನತ ಅಧಿಕಾರಿಗಳ ವಿಶ್ವಾಸವನ್ನು ಗೆಲ್ಲಲು ಸಾಧ್ಯವಾಗುತ್ತದೆ. ಆರ್ಥಿಕಸ್ಥಿತಿ ಚೆನ್ನಾಗಿರಲಿದೆ. ನೀವು ಯಾವುದೇ ಹಳೆಯ ಸಾಲವನ್ನು ಸಹ ಮರುಪಾವತಿ ಮಾಡಬಹುದು. ಮನೆಯ ವಾತಾವರಣ ಚೆನ್ನಾಗಿರಲಿದೆ. ಆರೋಗ್ಯಕ್ಕಾಗಿ ಆಹಾರಕ್ರಮದ ಕಡೆಗೆ ಗಮನಹರಿಸಿ.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 10
ಅದೃಷ್ಟದ ಸಮಯ: ಮಧ್ಯಾಹ್ನ 2 ರಿಂದ ಸಂಜೆ 6 ರವರೆಗೆ
ಸಿಂಹ ರಾಶಿ
ವ್ಯಾಪಾರಸ್ಥರಿಗೆ ಈ ದಿನ ಚೆನ್ನಾಗಿದೆ. ನಿಮ್ಮ ಯಾವುದೇ ಕೆಲಸದಲ್ಲಿ ಸರ್ಕಾರದ ಅಡಚಣೆ ಇದ್ದರೆ, ಇಂದು ನಿಮ್ಮ ಸಮಸ್ಯೆಯನ್ನು ಪರಿಹರಿಸಬಹುದು. ಉದ್ಯೋಗಸ್ಥರು ತಮ್ಮ ಶ್ರಮಕ್ಕೆ ತಕ್ಕ ಫಲಿತಾಂಶವನ್ನು ಪಡೆಯುತ್ತೀರಿ. ಶೀಘ್ರದಲ್ಲೇ ನೀವು ಕೆಲಸಕ್ಕಾಗಿ ವಿದೇಶಕ್ಕೆ ಪ್ರಯಾಣಿಸುವ ಅವಕಾಶವನ್ನು ಪಡೆಯಬಹುದು. ಹಣದ ವಿಷಯದಲ್ಲಿ ಈ ದಿನ ದುಬಾರಿಯಾಗಲಿದೆ. ಆರೋಗ್ಯದ ದೃಷ್ಟಿಯಿಂದ ದಿನವು ಸರಾಸರಿಯಾಗಿರುತ್ತದೆ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 30
ಅದೃಷ್ಟದ ಸಮಯ: ಬೆಳಿಗ್ಗೆ 6:50 ರಿಂದ 10:10 ರವರೆಗೆ
ಕನ್ಯಾ ರಾಶಿ
ಕೆಲಸದ ಸ್ಥಳದಲ್ಲಿ ಈ ದಿನ ಜಾಗ್ರತೆವಹಿಸಿ, ಅನಾವಶ್ಯಕವಾಗಿ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಳ್ಳಬೇಡಿ. ವ್ಯಾಪಾರಸ್ಥರು ಹೂಡಿಕೆ ಮಾಡಲು ಅವಕಾಶವನ್ನು ಪಡೆಯಬಹುದು. ಭವಿಷ್ಯದಲ್ಲಿ ನೀವು ಸರಿಯಾದ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ. ಕೌಟುಂಬಿಕ ಜೀವನ ಚೆನ್ನಾಗಿರಲಿದೆ. ಇಂದು ಮಕ್ಕಳಿಂದ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಹಣಕ್ಕೆ ಸಂಬಂಧಿಸಿದ ಚಿಂತೆ ದೂರಾಗಲಿದೆ. ನಿಮಗೆ ಮಧುಮೇಹ ಸಮಸ್ಯೆ ಇದ್ದರೆ, ನಿಮ್ಮ ಆಹಾರಕ್ರಮದ ಬಗ್ಗೆ ವಿಶೇಷ ಕಾಳಜಿ ವಹಿಸಿ.
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ: 9
ಅದೃಷ್ಟದ ಸಮಯ: ಸಂಜೆ 5 ರಿಂದ ರಾತ್ರಿ 8:35 ರವರೆಗೆ
ತುಲಾ ರಾಶಿ
ಮನೆಯಲ್ಲಿ ಅವಿವಾಹಿತ ಸದಸ್ಯನಿದ್ದು ಅವರ ಮದುವೆಗೆ ಅಡಚಣೆಯಿದ್ದರೆ, ಈ ಸಮಸ್ಯೆಯನ್ನು ಇಂದು ಬಗೆಹರಿಸಬಹುದು. ಶೀಘ್ರದಲ್ಲೇ ನಿಮ್ಮ ಮನೆಯಲ್ಲಿ ಶುಭ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಚಿಂತೆ ದೂರವಾಗಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಆದರೆ ನೀವು ಉಳಿತಾಯದ ಬಗ್ಗೆ ಹೆಚ್ಚು ಗಮನ ಹರಿಸುತ್ತೀರಿ. ಇಂದು ಕೆಲಸದ ಹೊರೆ ಕಡಿಮೆಯಾಗಲಿದೆ. ಅದು ಉದ್ಯೋಗವಾಗಲಿ ಅಥವಾ ವ್ಯವಹಾರವಾಗಲಿ, ನಿಮ್ಮ ಎಲ್ಲಾ ಕೆಲಸಗಳು ಸಮಯಕ್ಕೆ ಪೂರ್ಣಗೊಳ್ಳಲಿದೆ. ಇದಲ್ಲದೆ, ನಿಮ್ಮ ಕಠಿಣ ಪರಿಶ್ರಮದ ಸರಿಯಾದ ಫಲಿತಾಂಶಗಳನ್ನು ಸಹ ನೀವು ಪಡೆಯುತ್ತೀರಿ. ಆರೋಗ್ಯದಲ್ಲಿ ಸುಧಾರಣೆಯಾಗುವ ಸಾಧ್ಯತೆ ಇದೆ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 18
ಅದೃಷ್ಟದ ಸಮಯ: ಮಧ್ಯಾಹ್ನ 1 ರಿಂದ ಸಂಜೆ 5 ರವರೆಗೆ
ವೃಶ್ಚಿಕ ರಾಶಿ
ಕಛೇರಿಯಲ್ಲಿ ಯಾವುದೇ ಕೆಲಸವನ್ನು ಮಾಡುವಾಗ ಯಾವುದೇ ರೀತಿಯ ಆತುರವನ್ನು ಮಾಡಬೇಡಿ, ಇಲ್ಲದಿದ್ದರೆ ತಪ್ಪುಗಳಾಗಿ ಸಮಸ್ಯೆಯಾಗಬಹುದು. ಉದ್ಯಮಿಗಳು ಕೆಲಸದ ನಿಮಿತ್ತ ಪ್ರಯಾಣಿಸಲಿದ್ದರೆ, ಕೆಲವು ಕಾರಣಗಳಿಂದ ನಿಮ್ಮ ಪ್ರಯಾಣವನ್ನು ಮುಂದೂಡಬಹುದು. ಹಣದ ವಿಷಯದಲ್ಲಿ ಜಾಗರೂಕರಾಗಿರಿ, ಇಲ್ಲದಿದ್ದರೆ ನೀವು ಮೋಸ ಹೋಗಬಹುದು. ಕುಟುಂಬ ಜೀವನದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಕೊಲೆಸ್ಟ್ರಾಲ್ ಸಮಸ್ಯೆಯಿದ್ದರೆ ಆಹಾರಕ್ರಮದ ಬಗ್ಗೆ ಜಾಗ್ರತೆವಹಿಸಿ.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 25
ಅದೃಷ್ಟದ ಸಮಯ: ಬೆಳಿಗ್ಗೆ 8:20 ರಿಂದ 9:55 ರವರೆಗೆ
ಧನು ರಾಶಿ
ಈ ದಿನ ಖುಷಿಯಿಂದ ಕಳೆಯುವಿರಿ. ಆಸ್ತಿಯನ್ನು ಮಾರಾಟ ಮಾಡಲು ನೀವು ಯೋಜಿಸುತ್ತಿದ್ದರೆ, ಇಂದು ನಿಮಗೆ ಉತ್ತಮ ಅವಕಾಶವಾಗಬಹುದು. ದುಡಿಯುವ ಜನರಿಗೆ ಇಂದು ಅತ್ಯಂತ ಮಂಗಳಕರ ದಿನವಾಗಲಿದೆ. ನಿಮ್ಮ ಕಠಿಣ ಪರಿಶ್ರಮವು ನಿಮಗೆ ಯಶಸ್ಸಿನ ಬಾಗಿಲು ತೆರೆಯುತ್ತದೆ. ಅದೇ ಸಮಯದಲ್ಲಿ, ಉದ್ಯಮಿಗಳು ದೊಡ್ಡ ಆರ್ಥಿಕ ಲಾಭವನ್ನು ಪಡೆಯುತ್ತಾರೆ. ನೀವು ಯಾವುದೇ ಹಳೆಯ ಸಾಲದಿಂದ ಮುಕ್ತರಾಗಬಹುದು. ಆರೋಗ್ಯದ ವಿಷಯದಲ್ಲಿ, ದಿನವು ಮಿಶ್ರಫಲ.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 15
ಅದೃಷ್ಟದ ಸಮಯ: ಮಧ್ಯಾಹ್ನ 1 ರಿಂದ ಸಂಜೆ 4 ರವರೆಗೆ
ಮಕರ ರಾಶಿ
ಮನೆಯ ವಾತಾವರಣವು ಖುಷಿಯಿಂದ ಕೂಡಿರುತ್ತದೆ. ದಾಂಪತ್ಯ ಜೀವನದಲ್ಲಿ ಖುಷಿ ಇರಲಿದೆ. ಪ್ರತಿಕೂಲ ಸಂದರ್ಭಗಳಲ್ಲಿ ನಿಮ್ಮ ಆತ್ಮೀಯರು ನಿಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಡೆಯುತ್ತಾರೆ. ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ನೀವು ಹೊಸ ಆದಾಯದ ಮೂಲವನ್ನು ಹುಡುಕುತ್ತಿದ್ದರೆ, ಇಂದು ನಿಮ್ಮ ಕಠಿಣ ಪರಿಶ್ರಮವು ಯಶಸ್ವಿಯಾಗಬಹುದು. ಇದು ಉದ್ಯೋಗ ಅಥವಾ ವ್ಯವಹಾರವಾಗಿರಲಿ, ಇಂದು ನಿಮಗೆ ಉತ್ತಮ ದಿನವಾಗಿರುತ್ತದೆ. ಇಂದು ನಿಮ್ಮ ಎಲ್ಲಾ ಕೆಲಸಗಳು ಯಾವುದೇ ಅಡೆತಡೆಗಳಿಲ್ಲದೆ ಪೂರ್ಣಗೊಳ್ಳುತ್ತವೆ. ಆರೋಗ್ಯದ ದೃಷ್ಟಿಯಿಂದ ಈ ದಿನ ಒಳ್ಳೆಯದಿದೆ.
ಅದೃಷ್ಟದ ಬಣ್ಣ: ಆಕಾಶ ನೀಲಿ
ಅದೃಷ್ಟದ ಸಂಖ್ಯೆ: 11
ಅದೃಷ್ಟದ ಸಮಯ: ಬೆಳಿಗ್ಗೆ 7:25 ರಿಂದ 10:15 ರವರೆಗೆ
ಕುಂಭ ರಾಶಿ
ಕಚೇರಿಯಲ್ಲಿ, ನಿಮ್ಮ ಕೆಲಸದ ಮೇಲೆ ಸಂಪೂರ್ಣವಾಗಿ ಗಮನಹರಿಸಲು ಸಲಹೆ ನೀಡಲಾಗಿದೆ. ವ್ಯವಹಾರಕ್ಕೆ ಸಂಬಂಧಿಸಿದ ಕಾನೂನು ವಿಷಯಗಳಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ಮಾಡಬೇಡಿ. ಯಾವುದೋ ಒಂದು ವಿಷಯವು ನಿಮ್ಮನ್ನು ಕಾಡುತ್ತಿದ್ದರೆ ಸಾಧ್ಯವಾದಷ್ಟು ಬೇಗ ಅದನ್ನು ಪರಿಹರಿಸಲು ಪ್ರಯತ್ನಿಸಿ. ಹಣದ ವಿಷಯದಲ್ಲಿ ದಿನವು ದುಬಾರಿಯಾಗಲಿದೆ. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳಿರಬಹುದು. ನಿಮ್ಮ ಪ್ರೀತಿಪಾತ್ರರ ಕಠೋರವಾದ ಮಾತುಗಳು ನಿಮಗೆ ದುಃಖವನ್ನುಂಟುಮಾಡಬಹುದು. ಆರೋಗ್ಯ ದುರ್ಬಲವಾಗಿರುತ್ತದೆ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 7
ಅದೃಷ್ಟದ ಸಮಯ: ಮಧ್ಯಾಹ್ನ 3 ರಿಂದ ಸಂಜೆ 7 ರವರೆಗೆ
ಮೀನ ರಾಶಿ
ಮನೆಯ ವಾತಾವರಣವು ಸ್ವಲ್ಪ ಸಮಯದಿಂದ ಸರಿಯಿಲ್ಲದಿದ್ದರೆ ಇಂದು ಮನೆಯ ವಾತಾವರಣವನ್ನು ಸುಧಾರಿಸಲು ನೀವು ನಿಮ್ಮ ಕೈಲಾದಷ್ಟು ಪ್ರಯತ್ನಿಸುತ್ತೀರಿ. ನೀವು ಉದ್ಯಮಿಗಳು ಯಾವುದೇ ನಿರ್ಧಾರವನ್ನು ತರಾತುರಿಯಲ್ಲಿ ತೆಗೆದುಕೊಳ್ಳಬಾರದು, ಇಲ್ಲದಿದ್ದರೆ ನಿಮ್ಮ ನಿರ್ಧಾರಕ್ಕೆ ನೀವು ವಿಷಾದಿಸಬೇಕಾಗಬಹುದು. ಉದ್ಯೋಗಿಗಳಿಗೆ ದಿನವು ಸಾಮಾನ್ಯವಾಗಿರುತ್ತದೆ. ಇಂದು ಹಣದ ಬಗ್ಗೆ ನಿಮ್ಮ ಕಾಳಜಿ ಸ್ವಲ್ಪ ಹೆಚ್ಚಾಗಬಹುದು. ಆರೋಗ್ಯದ ಕಡೆ ಗಮನಹರಿಸಿ.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 20
ಅದೃಷ್ಟದ ಸಮಯ: ಮಧ್ಯಾಹ್ನ 1 ರಿಂದ ಸಂಜೆ 5 ರವರೆಗೆ



Click it and Unblock the Notifications












