Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Horoscope Today 21 March 2023: ಮಂಗಳವಾರ: ಈ ದಿನ ಯಾವ ರಾಶಿಗಳಿಗೆ ಶುಭ, ಯಾರಿಗಲ್ಲ
ಶುಭೋದಯ..... ವೈದಿಕ ಶಾಸ್ತ್ರದ ಪ್ರಕಾರ ಮಾರ್ಚ್ 21ರ ರಾಶಿಫಲ ನೋಡೋಣ:
ಸಂವತ್ಸರ: ಶುಭಕೃತ್
ಆಯನ: ಉತ್ತರಾಯಣ
ಋತು: ವಸಂತ
ಮಾಸ: ಚೈತ್ರ
ಪಕ್ಷ: ಕೃಷ್ಣಪಕ್ಷ
ತಿಥಿ: ಅಮವಾಸ್ಯೆ
ನಕ್ಷತ್ರ: ಪೂರ್ವಭಾದ್ರಪದ
ರಾಹುಕಾಲ: ಸಂಜೆ03:29ರಿಂದ 5ಗಂಟೆಯವರೆಗೆ

ಮೇಷ ರಾಶಿ
ಮನೆಯ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡು ಬರುವುದು. ಕೆಲಸದ ಜಾಗದಲ್ಲಿ ಕೆಲಸದ ಒತ್ತಡ ಅಧಿಕವಿರಲಿದೆ. ಬಾಕಿ ಇರುವ ಕೆಲಸ ಪೂರ್ಣಗೊಳಿಸಲು ಒತ್ತಡ ಹೆಚ್ಚಾಗಬಹುದುಇದಲ್ಲದೆ, ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುತ್ತದೆ. ಈ ದಿನ ಅಧಿಕ ಕೆಲಸದಿಂದಾಗ ಆಯಾಸ ಉಂಟಾಗುವುದು.
ಅದೃಷ್ಟದ ಬಣ್ಣ: ಕೆನೆ
ಅದೃಷ್ಟದ ಸಂಖ್ಯೆ: 9
ಅದೃಷ್ಟದ ಸಮಯ: ಸಂಜೆ 6 ರಿಂದ 8:15 ರವರೆಗೆ

ವೃಷಭ ರಾಶಿ
ಉದ್ಯೋಗಸ್ಥರಿಗೆ ಇಂದು ಸಾಮಾನ್ಯ ದಿನಕ್ಕಿಂತ ಉತ್ತಮವಾಗಿರಲಿದೆ. ಕೆಲಸದಲ್ಲಿ ಈ ದಿನ ತುಂಬಾ ಅನುಕೂಲಕರವಾಗಿದೆ. ವ್ಯಾಪಾರಸ್ಥರು ಒಳ್ಳೆಯ ಲಾಭ ಪಡೆಯುವಿರಿ. ನೀವು ಬೇರೆಯವರ ವಿಷಯದಲ್ಲಿ ಹಸ್ತಕ್ಷೇಪ ಮಾಡಬೇಡಿ. ಹಣದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ, ಇಲ್ಲವಾದಲ್ಲಿ ಅಪಾರ ನಷ್ಟವಾಗಬಹುದು. ಆರೋಗ್ಯದ ಬಗ್ಗೆ ಹೇಳುವುದಾದರೆ ಈ ದಿನ ಮಿಶ್ರಫಲ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 15
ಅದೃಷ್ಟದ ಸಮಯ: ಮಧ್ಯಾಹ್ನ 2:15 ರಿಂದ 7:10 ರವರೆಗೆ

ಮಿಥುನ ರಾಶಿ
ಈ ದಿನ ಕೆಲಸದ ಬಗ್ಗೆ ನೋಡುವುದಾದರೆ ಸ್ವಲ್ಪ ಆರಾಮವಾಗಿರುವಿರಿ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಇಂದು ಪ್ರೇಮಿಗಳಿಗೆ ಹಾಗೂ ವಿವಾಹಿತರಿಗೆ ರೊಮ್ಯಾಂಟಿಕ್ ದಿನವಾಗಿರಲಿದೆ. ಆರೋಗ್ಯದ ದೃಷ್ಟಿಯಿಂದ ದಿನವು ಅನುಕೂಲಕರವಾಗಿರುತ್ತದೆ.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 31
ಅದೃಷ್ಟದ ಸಮಯ: ಮಧ್ಯಾಹ್ನ 1 ರಿಂದ ಮಧ್ಯಾಹ್ನ 3 ರವರೆಗೆ

ಕರ್ಕ ರಾಶಿ
ಕೆಲಸ ಅಥವಾ ವೈಯಕ್ತಿಕ ವಿಷಯದಲ್ಲಿ ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಹೋಗಬೇಡಿ. ನಿಮ್ಮ ಉತ್ತಮ ಕಾರ್ಯ ಮೇಲಾಧಿಕಾರಿಗಳ ಗಮನ ಸೆಳೆಯುತ್ತದೆ. ಷೇರು ಮಾರುಕಟ್ಟೆಯಲ್ಲಿ ತೊಡಗಿಸಿಕೊಂಡವರಿಗೆ ಇಂದು ಸವಾಲಿನ ದಿನ. ನಿರೀಕ್ಷಿತ ಫಲಿತಾಂಶಗಳನ್ನು ಪಡೆಯದ ಕಾರಣ ನೀವು ತುಂಬಾ ನಿರಾಶೆಗೊಳ್ಳಬಹುದು. ಹಣದ ಪರಿಸ್ಥಿತಿ ಉತ್ತಮವಾಗಿರುತ್ತದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ಸಣ್ಣಪಟ್ಟ ಸಮಸ್ಯೆಗಳಿವೆ.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 11
ಅದೃಷ್ಟದ ಸಮಯ: ಬೆಳಿಗ್ಗೆ 6:45 ರಿಂದ 10:25 ರವರೆಗೆ

ಸಿಂಹ ರಾಶಿ
ನಿಮಗೆ ಈ ದಿನ ಹಣದ ವಿಷಯದಲ್ಲಿ ದಿನ ದುಬಾರಿಯಾಗಲಿದೆ. ಅನಗತ್ಯ ಖರ್ಚುಗಳು ಉಂಟಾಗಬಹುದು. ನಿಮ್ಮ ಖರ್ಚುಗಳನ್ನು ನೀವು ಸಮಯಕ್ಕೆ ನಿಯಂತ್ರಿಸದಿದ್ದರೆ, ಭವಿಷ್ಯದಲ್ಲಿ ನೀವು ದೊಡ್ಡ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಈ ದಿನ ಕಚೇರಿಯಲ್ಲಿ ಏನಾದರೂ ವಿಷಯಕ್ಕೆ ಮಾತನಾಡುವಾಗ ನಿಮ್ಮ ಮಾತುಗಳ ಕಡೆ ಗಮನವಿರಲಿ. ವ್ಯಾಪಾರಸ್ಥರಿಗೆ ಮಿಶ್ರ ಲಾಭ ದೊರೆಯಲಿದೆ. ಆರೋಗ್ಯ ಸ್ವಲ್ಪ ದುರ್ಬಲವಾಗಲಿದೆ.
ಅದೃಷ್ಟದ ಬಣ್ಣ: ಗಾಢ ಹಳದಿ
ಅದೃಷ್ಟದ ಸಂಖ್ಯೆ: 14
ಅದೃಷ್ಟದ ಸಮಯ: ಸಂಜೆ 4:05 ರಿಂದ ರಾತ್ರಿ 9 ರವರೆಗೆ

ಕನ್ಯಾ ರಾಶಿ
ಈ ದಿನ ಸಂತೋಷದಿಂದ ಕೂಡಿರಲಿದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಇಂದು ನೀವು ಹೆಚ್ಚು ಉಳಿಸಲು ಸಾಧ್ಯವಾಗುತ್ತದೆ. ಈ ದಿನ ಕೆಲಸದ ಜಾಗದಲ್ಲಿ ಅನಗತ್ಯ ಚರ್ಚೆ ಅಥವಾ ಘರ್ಷಣೆಯನ್ನು ತಪ್ಪಿಸಿ. ವ್ಯಾಪಾರಸ್ಥರಿಗೆ ಇಂದು ಲಾಭದಾಯಕವಾಗಲಿದೆ. ನಿಮ್ಮ ವ್ಯಾಪಾಯ ಯೋಜನೆಯಲ್ಲಿ ಬದಲಾವಣೆ ಮಾಡಿದ್ದರೆ ಒಳ್ಳೆಯ ಫಲ ಪಡೆಯುವಿರಿ. ಆರೋಗ್ಯದ ದೃಷ್ಟಿಯಿಂದ ದಿನವು ಸರಾಸರಿಯಾಗಿರುತ್ತದೆ.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 29
ಅದೃಷ್ಟದ ಸಮಯ: ಬೆಳಿಗ್ಗೆ 7 ರಿಂದ ಮಧ್ಯಾಹ್ನ 12:30 ರವರೆಗೆ

ತುಲಾ ರಾಶಿ
ಇಂದು ಖುಷಿಯ ಸುದ್ದಿ ಸಿಗಲಿದೆ, ಇದರಿಂದ ನಿಮ್ಮ ಮನಸ್ಸು ತುಂಬಾ ಸಂತೋಷವಾಗುತ್ತದೆ. ನಿಮ್ಮ ಯೋಜನೆಯ ಪ್ರಕಾರ ನಿಮ್ಮ ಎಲ್ಲಾ ಕೆಲಸಗಳು ಇಂದು ಪೂರ್ಣಗೊಳ್ಳುತ್ತವೆ. ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಬೆಂಬಲ ಸಿಗಲಿದೆ. ನಿಮ್ಮ ಯಾವುದೇ ಸ್ಥಗಿತಗೊಂಡ ಕೆಲಸವನ್ನು ಸಹ ಪೂರ್ಣಗೊಳಿಸಬಹುದು. ಉದ್ಯಮಿಗಳ ಪರಿಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ನಿಮ್ಮ ಕೆಲಸದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಆರೋಗ್ಯ ವಿಷಯದಲ್ಲಿ ನಿರ್ಲಕ್ಷ್ಯ ಒಳ್ಳೆಯದಲ್ಲ.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 10
ಅದೃಷ್ಟದ ಸಮಯ: ಬೆಳಿಗ್ಗೆ 10 ರಿಂದ ಮಧ್ಯಾಹ್ನ 1:20 ರವರೆಗೆ

ವೃಶ್ಚಿಕ ರಾಶಿ
ಉದ್ಯೋಗಸ್ಥರಿಗೆ ಇಂದು ತುಂಬಾ ಬಿಡುವಿಲ್ಲದ ದಿನವಾಗಿರುತ್ತದೆ. ಅನೇಕ ಕಾರ್ಯಗಳನ್ನು ಒಂದೇ ಸಮಯದಲ್ಲಿ ಮಾಡಲು ಹೋಗಬೇಡಿ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರು ಇಂದು ಬಹಳ ಜಾಗರೂಕರಾಗಿರಬೇಕು. ಕುರುಡಾಗಿ ಯಾರನ್ನೂ ನಂಬಬೇಡಿ. ಹಣದ ವಿಷಯದಲ್ಲಿ, ದಿನವು ಮಿಶ್ರವಾಗಿರುತ್ತದೆ. ನಿಮ್ಮ ಆದಾಯವು ಉತ್ತಮವಾಗಿರುತ್ತದೆ, ಆದರೆ ಹೆಚ್ಚುತ್ತಿರುವ ಖರ್ಚುಗಳು ನಿಮ್ಮ ಕಷ್ಟಗಳನ್ನು ಹೆಚ್ಚಿಸಬಹುದು. ಸಂಗಾತಿಯ ಆರೋಗ್ಯ ಇಂದು ಸ್ವಲ್ಪ ದುರ್ಬಲವಾಗಿರಬಹುದು, ಅವರ ಆರೈಕೆಯತ್ತ ಗಮನ ನೀಡಿ.
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ: 19
ಅದೃಷ್ಟದ ಸಮಯ: ಮಧ್ಯಾಹ್ನ 1:30 ರಿಂದ ಸಂಜೆ 4 ರವರೆಗೆ

ಧನು ರಾಶಿ
ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಇಂದು ಅದೃಷ್ಟದ ದಿನ. ನೀವು ಅಪಾರ ಆರ್ಥಿಕ ಲಾಭವನ್ನು ಪಡೆಯುತ್ತೀರಿ. ನೀವು ನಿಮ್ಮ ಕೆಲಸವನ್ನು ತೊರೆದು ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಬಯಸುವುದಾದರೆ ಆತುರದ ನಿರ್ಧಾರ ಬೇಡ. ನಿಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ನೀವು ಅಸ್ತಮಾದ ಸಮಸ್ಯೆ ಹೊಂದಿದ್ದರೆ ತುಂಬಾ ದೂಳು, ಹೊಗೆ ಇರುವ ಕಡೆ ಓಡಾಡುವಾಗ ಸೂಕ್ತ ಮುನ್ನೆಚ್ಚರಿಕೆವಹಿಸಿ.
ಅದೃಷ್ಟದ ಬಣ್ಣ: ಆಕಾಶ ನೀಲಿ
ಅದೃಷ್ಟದ ಸಂಖ್ಯೆ: 38
ಅದೃಷ್ಟದ ಸಮಯ: ಬೆಳಿಗ್ಗೆ 7:55 ರಿಂದ 10:30 ರವರೆಗೆ

ಮಕರ ರಾಶಿ
ನಿಮ್ಮ ಹಠದ ಸ್ವಭಾವ ಪ್ರೀತಿ ಪಾತ್ರರರ ಮನಸ್ಸು ನೋಯಿಸಬಹುದು. ಕೆಲಸದ ಒತ್ತಡ ಹೆಚ್ಚಾಗಬಹುದು, ಅಂತಹ ಪರಿಸ್ಥಿತಿಯಲ್ಲಿ ಇಂದು ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನ್ಯಾಯಾಲಯದ ವಿಚಾರದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಮಾಡದಂತೆ ಉದ್ಯಮಿಗಳಿಗೆ ಸೂಚಿಸಲಾಗಿದೆ. ಒಂದು ಸಣ್ಣ ತಪ್ಪು ದೊಡ್ಡ ನಷ್ಟಕ್ಕೆ ಕಾರಣವಾಗಬಹುದು. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಅತಿಯಾದ ಕೋಪ ಹಾಗೂ ಮಾನಸಿಕ ಒತ್ತಡ ಎರಡೂ ಒಳ್ಳೆಯದಲ್ಲ.
ಅದೃಷ್ಟದ ಬಣ್ಣ: ಗಾಢ ಗುಲಾಬಿ
ಅದೃಷ್ಟದ ಸಂಖ್ಯೆ: 4
ಅದೃಷ್ಟದ ಸಮಯ: ಬೆಳಿಗ್ಗೆ 8 ರಿಂದ ಮಧ್ಯಾಹ್ನ 2:30 ರವರೆಗೆ

ಕುಂಭ ರಾಶಿ
ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ಇರಲಿದೆ. ನೀವು ವಿದ್ಯಾರ್ಥಿಯಾಗಿದ್ದರೆ ಮತ್ತು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಲು ಬಯಸಿದರೆ, ಇಂದು ನೀವು ಒಳ್ಳೆಯ ಸುದ್ದಿ ಪಡೆಯಬಹುದು. ಹಣದ ವಿಷಯದಲ್ಲಿ ದಿನವು ದುಬಾರಿಯಾಗಲಿದೆ. ಆದರೆ ತುಂಬಾ ಖರ್ಚು ಮಾಡಲು ಹೋಗಬೇಡಿ. ಕೆಲಸದಲ್ಲಿ ಇಂದು ಸವಾಲುಗಳು ಇರಲಿದೆ. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ.
ಅದೃಷ್ಟದ ಬಣ್ಣ: ಕೆನೆ
ಅದೃಷ್ಟದ ಸಂಖ್ಯೆ: 5
ಅದೃಷ್ಟದ ಸಮಯ: ಮಧ್ಯಾಹ್ನ 1:30 ರಿಂದ ಸಂಜೆ 7 ರವರೆಗೆ

ಮೀನ ರಾಶಿ
ನೀವು ಕಚೇರಿಯಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರೆ, ನಿಮ್ಮ ನಡವಳಿಕೆಯನ್ನು ಸರಿಯಾಗಿ ಇಟ್ಟುಕೊಳ್ಳಲು ಸಲಹೆ ನೀಡಲಾಗಿದೆ. ಅನಗ್ಯತ ಕೋಪ ಬಿಡಿ. ವ್ಯಾಪಾರಸ್ಥರು ಇಂದು ಆರ್ಥಿಕ ಲಾಭವನ್ನು ಪಡೆಯಬಹುದು. ಕುಟುಂಬ ಜೀವನದಲ್ಲಿ ಖುಷಿ ಇರಲಿದೆ. ಆರೋಗ್ಯ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 20
ಅದೃಷ್ಟದ ಸಮಯ: ಬೆಳಿಗ್ಗೆ 8:40 ರಿಂದ ಮಧ್ಯಾಹ್ನ 12:30 ರವರೆಗೆ



Click it and Unblock the Notifications