Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
Horoscope Today 7 June 2023: ಬುಧವಾರ: ಈ ದಿನ ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
ಶುಭೋದಯ..... ವೈದಿಕ ಶಾಸ್ತ್ರದ ಪ್ರಕಾರ ಜೂನ್ 7ರ ರಾಶಿಫಲ ನೋಡೋಣ:
ಸಂವತ್ಸರ: ಶುಭಕೃತ್
ಆಯನ: ಉತ್ತರಾಯಣ
ಋತು: ವಸಂತ
ಮಾಸ: ಆಷಾಢ
ಪಕ್ಷ: ಕೃಷ್ಣಪಕ್ಷ
ತಿಥಿ: ಚತುರ್ದಶಿ
ನಕ್ಷತ್ರ: ಉತ್ತರ ಆಷಾಢ
ರಾಹುಕಾಲ: ಮಧ್ಯಾಹ್ನ 12:18ರಿಂದ 01:55ರವರೆಗೆ
ಮೇಷ ರಾಶಿ
ಈ ದಿನ ನಿಮ್ಮ ಮಾತುಗಳ ಕಡೆ ತುಂಬಾನೇ ಗಮನಹರಿಸಬೇಕು, ನಿಮ್ಮ ಮಾತುಗಳಿಂದ ಜಗಳ ಉಂಟಾಗಬಹುದು, ಆದ್ದರಿಂದ ಜಾಗ್ರತೆವಹಿಸಿ. ಇಂದು ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಉತ್ತಮ ಸಮಯವನ್ನು ಕಳೆಯಲು ಸಾಧ್ಯವಾಗುತ್ತದೆ. ಹಣದ ವಿಷಯದಲ್ಲಿ ದಿನವು ದುಬಾರಿಯಾಗಲಿದೆ. ಅಗತ್ಯ ವಸ್ತುಗಳಿಗೆ ಮಾತ್ರ ಖರ್ಚು ಮಾಡಿ. ಕೆಲಸದ ವಿಷಯದಲ್ಲಿ ಇಂದು ನಿಮಗೆ ಉತ್ತಮವಾಗಿದೆ. ಕೆಲಸದ ಹೊರೆ ಕಡಿಮೆ ಇರಲಿದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ನೀವು ಅಲರ್ಜಿ, ಸೋಂಕಿನ ಸಮಸ್ಯೆ ಹೊಂದಿರಬಹುದು.
ಅದೃಷ್ಟದ ಬಣ್ಣ: ಬೂದು
ಅದೃಷ್ಟದ ಸಂಖ್ಯೆ: 34
ಅದೃಷ್ಟದ ಸಮಯ: ಸಂಜೆ 4:30 ರಿಂದ ಸಂಜೆ 7 ರವರೆಗೆ

ವೃಷಭ ರಾಶಿ
ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದ ಯಾವುದೇ ವಿಷಯವು ನ್ಯಾಯಾಲಯದಲ್ಲಿ ನಡೆಯುತ್ತಿದ್ದರೆ, ವಕೀಲರಿಂದ ಕಾನೂನು ಸಲಹೆ ಪಡೆಯಲು ಇಂದು ಉತ್ತಮ ದಿನವಾಗಿದೆ. ಇದಲ್ಲದೆ, ನೀವು ನಿಮ್ಮ ಹಿರಿಯರ ಸಲಹೆಯನ್ನು ಸಹಪಡೆಯಬೇಕು. ಇಂದು ಕೆಲಸದಲ್ಲಿ ಬಿಡುವಿಲ್ಲದ ದಿನವಾಗಿರುತ್ತದೆ. ಇದ್ದಕ್ಕಿದ್ದಂತೆ ಕೆಲಸದ ಹೊರೆ ಹೆಚ್ಚಾಗಬಹುದು, ಆದರೆ ನಿಮ್ಮ ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಸಂಗಾತಿಯೊಂದಿಗೆ ಖುಷಿಯಾಗಿ ಇರುತ್ತೀರಿ. ಆರೋಗ್ಯದ ದೃಷ್ಟಿಯಿಂದ ದಿನವು ಅನುಕೂಲಕರವಾಗಿರುತ್ತದೆ.
ಅದೃಷ್ಟದ ಬಣ್ಣ: ಗಾಢ ಕೆಂಪು
ಅದೃಷ್ಟದ ಸಂಖ್ಯೆ: 9
ಅದೃಷ್ಟದ ಸಮಯ: ಬೆಳಿಗ್ಗೆ 6:55 ರಿಂದ 8 ರವರೆಗೆ
ಮಿಥುನ ರಾಶಿ
ಆಹಾರದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಮಾಡಬೇಡಿ. ಎಣ್ಣೆಯಲ್ಲಿ ಕರಿದ, ಅಧಿಕ ಮಸಾಲೆಯುಕ್ತ ಆಹಾರವನ್ನು ತಿನ್ನಬೇಡಿ. ಇಂದು ಕೆಲಸದಲ್ಲಿ ಅನುಕೂಲಕರವಾಗಿದೆ. ವ್ಯಾಪಾರಸ್ಥರು ಲಾಭ ಗಳಿಸುವ ಅವಕಾಶವನ್ನು ಪಡೆಯಬಹುದು. ಆತುರದಲ್ಲಿ ಯೋಚಿಸದೆ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಹಣದ ವಿಚಾರದಲ್ಲಿಈ ದಿನ ತುಂಬಾ ಚೆನ್ನಾಗಿರಲಿದೆ. ಇಂದು ಖರ್ಚು ಕಡಿಮೆ ಆಗಬಹುದು.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 12
ಅದೃಷ್ಟದ ಸಮಯ: ಮಧ್ಯಾಹ್ನ 1 ರಿಂದ ಮಧ್ಯಾಹ್ನ 3 ರವರೆಗೆ
ಕರ್ಕ ರಾಶಿ
ಪ್ರೇಮಿಗಳಿಗೆ ಈ ದಿನ ಅನುಕೂಲಕರವಲ್ಲ, ಸಂಗಾತಿಯೊಂದಿಗೆ ನೀವು ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ನಿಮ್ಮ ಕೋಪವನ್ನು ನಿಯಂತ್ರಿಸಿದರೆ ಸಮಸ್ಯೆ ಹೆಚ್ಚಾಗುವುದನ್ನು ತಡೆಗಟ್ಟಬಹುದು. ಹಣದ ವಿಷಯದಲ್ಲಿ, ದಿನವು ತುಂಬಾ ದುಬಾರಿಯಾಗಲಿದೆ. ಅನಗತ್ಯ ಖರ್ಚುಗಳು ಉಂಟಾಗಬಹುದು. ನಿಮ್ಮ ಹೆಚ್ಚುತ್ತಿರುವ ಖರ್ಚುಗಳಿಗೆ ನೀವು ಕಡಿವಾಣ ಹಾಕಬೇಕು, ಇಲ್ಲದಿದ್ದರೆ ಸಾಲದ ಹೊರೆ ನಿಮ್ಮ ಮೇಲೆ ಹೆಚ್ಚಾಗಬಹುದು. ಕಚೇರಿಯ ವಾತಾವರಣ ಉತ್ತಮವಾಗಿರಲಿದೆ. ಸಹೋದ್ಯೋಗಿಗಳನ್ನು ಅತಿಯಾಗಿ ನಂಬಬೇಡಿ, ಅವರು ನಿಮಗೆ ಮೋಸ ಮಾಡಬಹುದು. ಉದ್ಯಮಿಗಳು ಅಪಾಯಕಾರಿ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಬಹುದು. ಆರೋಗ್ಯದ ವಿಷಯದಲ್ಲಿ, ದಿನವು ಮಿಶ್ರಫಲ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 4
ಅದೃಷ್ಟದ ಸಮಯ: ಸಂಜೆ 4:15 ರಿಂದ 8:15 ರವರೆಗೆ
ಸಿಂಹ ರಾಶಿ
ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ನೀವು ಬಹಳ ಸಮಯದಿಂದ ಪ್ರಯತ್ನಿಸುತ್ತಿದ್ದರೆ, ಇಂದು ನೀವು ಒಳ್ಳೆಯ ಸುದ್ದಿ ಪಡೆಯಬಹುದು. ಹಣಕ್ಕೆ ಸಂಬಂಧಿಸಿದ ಸಮಸ್ಯೆ ಬಗೆಹರಿಯಲಿದೆ. ಕೌಟುಂಬಿಕ ಜೀವನದಲ್ಲಿ ಪರಿಸ್ಥಿತಿಗಳು ಏರಿಳಿತಗಳಿಂದ ಕೂಡಿರಲಿದೆ. ನಿಮ್ಮ ವೈಯಕ್ತಿಕ ವಿಷಯಗಳಲ್ಲಿ ಹೊರಗಿನವರು ಹಸ್ತಕ್ಷೇಪ ಮಾಡಲು ಬಿಡಬೇಡಿ. ಕೆಲಸದ ವಿಷಯದಲ್ಲಿ ಇಂದು ನಿಮಗೆ ಸಾಮಾನ್ಯವಾಗಿರಲಿದೆ. ಉದ್ಯೋಗ ಅಥವಾ ವ್ಯವಹಾರವಾಗಿರಲಿ, ನಿಮ್ಮ ಅತ್ಯುತ್ತಮವಾದದ್ದನ್ನು ನೀಡಲು ಪ್ರಯತ್ನಿಸಿ. ಆರೋಗ್ಯದ ದುರ್ಬಲವಾಗಿರುತ್ತದೆ.
ಅದೃಷ್ಟದ ಬಣ್ಣ: ಕಡು ಹಸಿರು
ಅದೃಷ್ಟದ ಸಂಖ್ಯೆ: 28
ಅದೃಷ್ಟದ ಸಮಯ: ಬೆಳಿಗ್ಗೆ 6:20 ರಿಂದ 8:45 ರವರೆಗೆ
ಕನ್ಯಾ ರಾಶಿ
ನೀವು ವಿದ್ಯಾರ್ಥಿಯಾಗಿದ್ದರೆ ನಿಮ್ಮ ಅಧ್ಯಯನದ ಮೇಲೆ ಸಂಪೂರ್ಣವಾಗಿ ಗಮನಹರಿಸಲು ಸಲಹೆ ನೀಡಲಾಗುವುದು. ಸ್ವಲ್ಪ ಅಜಾಗರೂಕತೆಯು ನಿಮ್ಮ ಸುಂದರ ಭವಿಷ್ಯದ ಕನಸನ್ನು ಹಾಳುಮಾಡುತ್ತದೆ. ಉದ್ಯೋಗಸ್ಥರಿಗೆ ಅನುಕೂಲಕರವಾದ ದಿನ. ಇಂದು ಬಾಸ್ ನಿಮಗೆ ಪ್ರಮುಖ ಯೋಜನೆಯಲ್ಲಿ ಕೆಲಸ ಮಾಡಲು ಅವಕಾಶವನ್ನು ನೀಡಬಹುದು. ನೀವು ಕಷ್ಟಪಟ್ಟು ಕೆಲಸ ಮಾಡುವುದು ಉತ್ತಮ. ವ್ಯಾಪಾರಸ್ಥರಿಗೆ ಆರ್ಥಿಕ ಲಾಭ ದೊರೆಯಲಿದೆ. ಆರೋಗ್ಯದಲ್ಲಿ ಸುಧಾರಣೆಯಾಗುವ ಸಾಧ್ಯತೆ ಇದೆ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 15
ಅದೃಷ್ಟದ ಸಮಯ: ಸಂಜೆ 6 ರಿಂದ 8:25 ರವರೆಗೆ
ತುಲಾ ರಾಶಿ
ವೃತ್ತಿಜೀವನದಲ್ಲಿ ಧನಾತ್ಮಕ ಬದಲಾವಣೆಗಳನ್ನು ಕಾಣಬಹುದು. ಇಂದು ನೀವು ಹೊಸ ಉದ್ಯೋಗಾವಕಾಶವನ್ನು ಪಡೆಯಬಹುದು. ಇದೆಲ್ಲವೂ ನಿಮ್ಮ ಶ್ರಮದ ಫಲ. ಉದ್ಯಮಿಗಳು ದೊಡ್ಡ ಆರ್ಥಿಕ ಲಾಭವನ್ನು ಪಡೆಯಬಹುದು. ಇಂದು ನೀವು ಯಾವುದೇ ಹಳೆಯ ಸಾಲವನ್ನು ತೀರಿಸಲು ಸಾಧ್ಯವಾಗುತ್ತದೆ. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಉತ್ತಮ ಹೊಂದಾಣಿಕೆ ಇರಲಿದೆ. ಹಣದ ವಿಷಯದಲ್ಲಿ ಇಂದು ನಿಮಗೆ ಮಿಶ್ರ ಫಲ. ನಿಮ್ಮ ಆದಾಯಕ್ಕೆ ಅನುಗುಣವಾಗಿ ಖರ್ಚು ಮಾಡಿ. ಆರೋಗ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಈ ದಿನ ಯಾವುದೇ ಸಮಸ್ಯೆ ಇರಲ್ಲ.
ಅದೃಷ್ಟದ ಬಣ್ಣ: ಆಕಾಶ
ಅದೃಷ್ಟದ ಸಂಖ್ಯೆ: 20
ಅದೃಷ್ಟದ ಸಮಯ: ಮಧ್ಯಾಹ್ನ 1:35 ರಿಂದ ಸಂಜೆ 4:35 ರವರೆಗೆ
ವೃಶ್ಚಿಕ ರಾಶಿ
ನಿಮ್ಮ ಮಗುವಿನ ಶಿಕ್ಷಣದ ಬಗ್ಗೆ ನಿಮ್ಮ ಕಾಳಜಿ ಹೆಚ್ಚಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಅವರ ಶಿಕ್ಷಕರ ಸಹಾಯವನ್ನು ತೆಗೆದುಕೊಳ್ಳಬೇಕು. ಕೆಲಸದಲ್ಲಿ ನಿರತರಾಗುವಿರಿ, ಇದರಿಂದ ನಿಮ್ಮ ಕುಟುಂಬಕ್ಕೆ ಸಮಯ ಕೊಡಲು ಸಾಧ್ಯವಾಗುವುದಿಲ್ಲ. ಕೆಲಸದ ಒತ್ತಡದಲ್ಲಿ ನಿಮ್ಮ ಆರೋಗ್ಯವನ್ನು ನಿರ್ಲಕ್ಷ್ಯ ಮಾಡಬೇಡಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಯಾವುದೇ ನಿರ್ಧಾರವನ್ನು ತರಾತುರಿಯಲ್ಲಿ ತೆಗೆದುಕೊಳ್ಳಬೇಡಿ.
ಅದೃಷ್ಟದ ಬಣ್ಣ: ಪೀಚ್
ಅದೃಷ್ಟದ ಸಂಖ್ಯೆ: 17
ಅದೃಷ್ಟದ ಸಮಯ: ಬೆಳಗ್ಗೆ 5 ರಿಂದ 8:20 ರವರೆಗೆ
ಧನು ರಾಶಿ
ಷೇರು ಮಾರುಕಟ್ಟೆಯಲ್ಲಿ ಕೆಲಸ ಮಾಡುವವರಿಗೆ ಇಂದು ಬಹಳ ಒಳ್ಳೆಯ ದಿನ. ನೀವು ನಿರೀಕ್ಷಿಸಿದಂತೆ ಫಲಿತಾಂಶವನ್ನು ಪಡೆಯಬಹುದು. ನೀವು ಒಂದು ಕೆಲಸ ಮಾಡಿದರೆ ಮತ್ತು ಕಠಿಣ ಪರಿಶ್ರಮದ ಹೊರತಾಗಿಯೂ ನೀವು ಬಯಸಿದ ಫಲ ಸಿಗದಿದ್ದರೆ ಸ್ವಲ್ಪ ತಾಳ್ಮೆಯಿಂದಿರಿ. ಸರಿಯಾದ ಸಮಯ ಬಂದಾಗ ನಿಮ್ಮ ಕಠಿಣ ಪರಿಶ್ರಮಕ್ಕೆ ನೀವು ಖಂಡಿತವಾಗಿಯೂ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ನಿಮ್ಮ ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಸಂಗಾತಿಯೊಂದಿಗೆ ಪರಸ್ಪರ ತಿಳುವಳಿಕೆ ಉತ್ತಮವಾಗಿರುತ್ತದೆ. ಆರೋಗ್ಯದ ವಿಷಯದಲ್ಲಿ, ದಿನವು ಉತ್ತಮವಾಗಿರುತ್ತದೆ.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 11
ಅದೃಷ್ಟದ ಸಮಯ: ಮಧ್ಯಾಹ್ನ 12:55 ರಿಂದ ಸಂಜೆ 6 ರವರೆಗೆ
ಮಕರ ರಾಶಿ
ಉದ್ಯೋಗಸ್ಥರು ಬದಲಾವಣೆಗೆ ಯೋಜಿಸುತ್ತಿದ್ದರೆ, ಇಂದು ನೀವು ಉತ್ತಮ ಅವಕಾಶವನ್ನು ಪಡೆಯಬಹುದು. ಸರ್ಕಾರಿ ಉದ್ಯೋಗಗಳಿಗಾಗಿ ಪ್ರಯತ್ನಿಸುತ್ತಿದ್ದರೆ ಒಳ್ಳೆಯ ಸುದ್ದಿಯನ್ನು ಪಡೆಯುವ ಸಾಧ್ಯತೆಯಿದೆ. ವ್ಯಾಪಾರಸ್ಥರು ಹೊಸ ವ್ಯವಹಾರವನ್ನು ಪ್ರಾರಂಭಿಸಲಿದ್ದರೆ, ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವುದು ನಿಮಗೆ ತುಂಬಾ ಪ್ರಯೋಜನಕಾರಿಯಾಗಿದೆ. ಹಣಕಾಸಿನ ಪರಿಸ್ಥಿತಿಯಲ್ಲಿ ದೊಡ್ಡ ಲಾಭ ಉಂಟಾಗಬಹುದು. ನೀವು ಹೊಸ ಆದಾಯದ ಮೂಲವನ್ನು ಪಡೆಯಬಹುದು. ವೈವಾಹಿಕ ಜೀವನದಲ್ಲಿ ಪರಿಸ್ಥಿತಿ ಅಷ್ಟು ಸರಿಯಿರಲ್ಲ, ಇಬ್ಬರ ನಡುವೆ ಮನಸ್ತಾಪ ಇರಬಹುದು. ನಿಮ್ಮ ಆರೋಗ್ಯ ದುರ್ಬಲವಾಗಿದ್ದರೆ ನಿರ್ಲಕ್ಷ್ಯ ಮಾಡಬೇಡಿ.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 14
ಅದೃಷ್ಟದ ಸಮಯ: ಸಂಜೆ 4:20 ರಿಂದ 7:20 ರವರೆಗೆ
ಕುಂಭ ರಾಶಿ
ಇಂದು ನೀವು ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಬಹುದು. ಈ ದಿನ ಖುಷಿಯಿಂದ ಕಳೆಯುವಿರಿ. ಉದ್ಯೋಗಸ್ಥರು ಉತ್ತಮ ಪ್ರಗತಿಯನ್ನು ಸಾಧಿಸಬಹುದು. ನೀವು ಉನ್ನತ ಸ್ಥಾನವನ್ನು ಪಡೆಯುವ ಸಾಧ್ಯತೆಯಿದೆ. ಉದ್ಯಮಿಗಳ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ನಿಮ್ಮ ಸಂಗಾತಿಯ ತಿಳುವಳಿಕೆಯೊಂದಿಗೆ, ಇಂದು ನಿಮ್ಮ ಯಾವುದೇ ದೊಡ್ಡ ಸಮಸ್ಯೆಗಳನ್ನು ಪರಿಹರಿಸಬಹುದು. ಆರೋಗ್ಯಕ್ಕೆ ಸಂಬಂಧಿಸಿದಂತೆ, ಇಂದು ಉತ್ತಮ ದಿನವಾಗಿರುತ್ತದೆ.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 4
ಅದೃಷ್ಟದ ಸಮಯ: ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ
ಮೀನ ರಾಶಿ
ಇಂದು ಉದ್ಯಮಿಗಳಿಗೆ ಬಹಳ ಮುಖ್ಯವಾದ ದಿನವಾಗಿದೆ. ನೀವು ಕೆಲವು ಹೊಸ ವ್ಯಾಪಾರ ಯೋಜನೆಗಳನ್ನು ಮಾಡಬಹುದು. ಇದಲ್ಲದೇ ಹಣಕ್ಕೆ ಸಂಬಂಧಿಸಿದ ಯಾವುದೇ ದೊಡ್ಡ ವಹಿವಾಟು ಮಾಡಬಹುದು. ಉದ್ಯೋಗಸ್ಥರು ಕಚೇರಿಯಲ್ಲಿ ತಮ್ಮ ಸ್ಥಾನವನ್ನು ಬಲಪಡಿಸಲು ಶ್ರಮಿಸಬೇಕು. ನೀವು ಚಿಕ್ಕ ಕೆಲಸವನ್ನು ಸಹ ನೀವು ಎಚ್ಚರಿಕೆಯಿಂದ ಮಾಡಬೇಕು. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಕೆಲಸದ ಜೊತೆಗೆ ನಿಮ್ಮ ಕೌಟುಂಬಿಕ ಜೀವನಕ್ಕೂ ಗಮನ ನೀಡಬೇಕು. ಆರೋಗ್ಯ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 6
ಅದೃಷ್ಟದ ಸಮಯ: ಸಂಜೆ 5 ರಿಂದ ರಾತ್ರಿ 9:05 ರವರೆಗೆ



Click it and Unblock the Notifications












