Horoscope Today 3 June 2023: ಶನಿವಾರ : ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?

ಶುಭೋದಯ..... ವೈದಿಕ ಶಾಸ್ತ್ರದ ಪ್ರಕಾರ ಜೂನ್‌ 3ರ ರಾಶಿಫಲ ನೋಡೋಣ:
ಸಂವತ್ಸರ: ಶುಭಕೃತ್
ಆಯನ: ಉತ್ತರಾಯಣ
ಋತು: ವಸಂತ
ಮಾಸ: ಜ್ಯೇಷ್ಠ
ಪಕ್ಷ: ಶುಕ್ಲಪಕ್ಷ
ತಿಥಿ: ಚತುರ್ದಶಿ
ನಕ್ಷತ್ರ: ಬೆಳಗ್ಗೆ 06:16ರವರೆಗೆ ವೈಶಾಖ ನಂತರ ಅನುರಾಧ
ರಾಹುಕಾಲ: ಬೆಳಗ್ಗೆ 08:51ರಿಂದ 10:35ರವರೆಗೆ

ಮೇಷ ರಾಶಿ

ಇಂದು ನಿಮಗೆ ಅನುಕೂಲಕರವಾಗಿದೆ. ಹಣದ ವಿಷಯದಲ್ಲಿ ಇಂದು ನಿಮಗೆ ತುಂಬಾ ಅದೃಷ್ಟದ ದಿನವಾಗಲಿದೆ. ಕಡಿಮೆ ಶ್ರಮದಿಂದ ಉತ್ತಮ ಹಣ ಪಡೆಯಬಹುದು. ಕೆಲಸದ ವಿಷಯದಲ್ಲಿ ಈ ದಿನ ಮಿಶ್ರಫಲ. ಇಂದು ಕೆಲಸದ ಹೊರೆ ಸ್ವಲ್ಪ ಹೆಚ್ಚಾಗಲಿದೆ. ಇದರಿಂದ ಸಾಕಷ್ಟು ಒತ್ತಡವನ್ನು ಅನುಭವಿಸಬಹುದು. ನಿಮ್ಮ ಕೆಲಸ ಕಾರ್ಯಗಳನ್ನು ತಾಳ್ಮೆಯಿಂದ ಪೂರ್ಣಗೊಳಿಸಲು ಸಲಹೆ ನೀಡಲಾಗುತ್ತದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ನಿಮ್ಮ ದೈನಂದಿನ ದಿನಚರಿಯಲ್ಲಿ ಯೋಗ ಮತ್ತು ಧ್ಯಾನವನ್ನು ಸೇರಿಸಲು ನಿಮಗೆ ಸಲಹೆ ನೀಡಲಾಗಿದೆ.
ಅದೃಷ್ಟದ ಬಣ್ಣ: ಕೆನೆ
ಅದೃಷ್ಟದ ಸಂಖ್ಯೆ: 12
ಅದೃಷ್ಟದ ಸಮಯ: ಬೆಳಿಗ್ಗೆ 5:25 ರಿಂದ 8:45 ರವರೆಗೆ

Dina Bhavishya -June 3 2023 Today Rashi Bhavishya, Daily Horoscope in Kannada

ವೃಷಭ ರಾಶಿ

ಷೇರು ಮಾರುಕಟ್ಟೆಯಲ್ಲಿ ಕೆಲಸ ಮಾಡುವವರಿಗೆ ಇಂದು ಬಹಳ ಲಾಭದಾಯಕ ದಿನವಾಗಿದೆ. ನೀವು ನಿರೀಕ್ಷಿಸಿದಂತೆ ಫಲಿತಾಂಶವನ್ನು ಪಡೆಯಬಹುದು. ಉದ್ಯೋಗಸ್ಥರಿಗೆ ಇಂದು ಕಷ್ಟದ ದಿನವಾಗಲಿದೆ. ಕಠಿಣ ಪರಿಶ್ರಮದ ಹೊರತಾಗಿಯೂ ನೀವು ಬಯಸಿದ ಪ್ರಗತಿ ಹೊಂದುತ್ತಿಲ್ಲ, ನೀವು ಬದಲಾವಣೆಯ ಬಗ್ಗೆ ಯೋಚಿಸುತ್ತಿದ್ದರೆ, ಇದು ಸರಿಯಾದ ಸಮಯ. ಆದರೆ, ಸರಿಯಾದ ದಿಕ್ಕಿನಲ್ಲಿ ಪ್ರಯತ್ನಗಳನ್ನು ಮಾಡಲು ನಿಮಗೆ ಸಲಹೆ ನೀಡಲಾಗಿದೆ. ಹಣದ ಸ್ಥಿತಿ ಉತ್ತಮವಾಗಿರುತ್ತದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ. ಇಂದು ನೀವು ಒಡಹುಟ್ಟಿದವರ ಜೊತೆ ಉತ್ತಮ ಸಮಯವನ್ನು ಕಳೆಯಲು ಸಾಧ್ಯವಾಗುತ್ತದೆ. ಆರೋಗ್ಯದ ವಿಷಯದಲ್ಲಿ ದಿನವು ಮಿಶ್ರಫಲ.
ಅದೃಷ್ಟದ ಬಣ್ಣ: ಆಕಾಶ ನೀಲಿ
ಅದೃಷ್ಟದ ಸಂಖ್ಯೆ: 4
ಅದೃಷ್ಟದ ಸಮಯ: ಸಂಜೆ 4 ರಿಂದ ರಾತ್ರಿ 8:35 ರವರೆಗೆ

ಮಿಥುನ ರಾಶಿ

ಹಣದ ವಿಚಾರದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಮಾಡಬೇಡಿ. ವಿಶೇಷವಾಗಿ ಕ್ರೆಡಿಟ್ ವಹಿವಾಟುಗಳನ್ನು ಅಥವಾ ಸಾಲದ ವ್ಯವಹಾರ ಮಾಡದಿರಲು ಸಲಹೆ ನೀಡಲಾಗಿದೆ. ಕೆಲಸದ ವಿಷಯದಲ್ಲಿ ಇಂದು ನಿಮಗೆ ಉತ್ತಮವಾದ ಸೂಚನೆಯಿದೆ. ನೀವು ಈಗ ಉದ್ಯಮಿಯಾಗಿದ್ದರೆ, ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಉತ್ಕರ್ಷದ ಲಕ್ಷಣಗಳು ಕಂಡುಬರಲಿವೆ. ಉದ್ಯೋಗಸ್ಥರು ಕೆಲಸಕ್ಕೆ ಸಂಬಂಧಿಸಿದಂತೆ ಸಣ್ಣ ಪ್ರಯಾಣವನ್ನು ಮಾಡಬೇಕಾಗಬಹುದು. ನಿಮ್ಮ ಈ ಪ್ರಯಾಣವು ನಿಮಗೆ ಲಾಭ ತರಲಿದೆ. ಸಂಗಾತಿಯ ನಡವಳಿಕೆ ನಿಮ್ಮ ಭಾವನೆಗಳನ್ನು ನೋಯಿಸಬಹುದು. ಆರೋಗ್ಯದ ವಿಷಯದಲ್ಲಿ, ದಿನವು ಸರಾಸರಿಯಾಗಲಿದೆ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 6
ಅದೃಷ್ಟದ ಸಮಯ: ಮಧ್ಯಾಹ್ನ 2:50 ರಿಂದ ಸಂಜೆ 6 ರವರೆಗೆ

ಕರ್ಕ ರಾಶಿ

ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡಬೇಡಿ. ಕೂಡಲೇ ವೈದ್ಯರನ್ನು ಸಂಪರ್ಕಿಸಿ. ನಿಮ್ಮ ಆಹಾರಕ್ರಮದಲ್ಲಿ ಬದಲಾವಣೆ ಮಾಡಿ, ಅತ್ಯಧಿಕ ಮಾನಸಿಕ ಮಾನಸಿಕ ಒತ್ತಡ ಇರಲಿದೆ. ಈ ರಾಶಿಯ ವಿದ್ಯಾರ್ಥಿಗಳಿಗೆ ಈ ಸಮಯವು ಬಹಳ ಮುಖ್ಯವಾಗಿದೆ. ನೀವು ಹೆಚ್ಚು ಕಷ್ಟಪಟ್ಟು ಕೆಲಸ ಮಾಡಿದರೆ, ನೀವು ಉತ್ತಮ ಫಲಿತಾಂಶವನ್ನು ಪಡೆಯಬಹುದು. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯ ಲಕ್ಷಣಗಳಿವೆ. ಇಂದು ನಿಮಗಾಗಿ ಹಣವನ್ನು ಪಡೆಯುವ ಸಾಧ್ಯತೆಯಿದೆ, ನಿಮ್ಮ ಕುಟುಂಬ ಸದಸ್ಯರೊಂದಿಗೆ ಉತ್ತಮ ಸಂಬಂಧವನ್ನು ಇರಿಸಿಕೊಳ್ಳಲು ಪ್ರಯತ್ನಿಸಿ. ಕೋಪ ಮತ್ತು ದುರಹಂಕಾರದಿಂದ ವರ್ತಿಸಬೇಡಿ.
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ: 9
ಅದೃಷ್ಟದ ಸಮಯ: ಬೆಳಿಗ್ಗೆ 4:05 ರಿಂದ 8:55 ರವರೆಗೆ

ಸಿಂಹ ರಾಶಿ

ಬಾಸ್ ನಿಮಗೆ ಕಚೇರಿಯಲ್ಲಿ ಕೆಲವು ಪ್ರಮುಖ ಕೆಲಸವನ್ನು ನಿಯೋಜಿಸಿದ್ದರೆ, ಅದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಇತರರ ಜೊತೆ ಹಂಚಿಕೊಳ್ಳಬೇಡಿ. ವ್ಯಾಪಾರಸ್ಥರು ಇಂದು ಹೊಸ ಕೆಲಸವನ್ನು ಪ್ರಾರಂಭಿಸಲಿದ್ದರೆ, ವಿರೋಧಿಗಳಿಂದ ನಿಮ್ಮ ಕೆಲಸಕ್ಕೆ ಅಡೆತಡೆ ಉಂಟಾಗಬಹುದು. ಹಣದ ವಿಷಯದಲ್ಲಿ ದಿನವು ದುಬಾರಿಯಾಗಲಿದೆ. ಖರ್ಚುವೆಚ್ಚಗಳ ಪಟ್ಟಿ ಹೆಚ್ಚಾಗುವುದು. ನಿಮ್ಮ ಆರೋಗ್ಯದ ಬಗ್ಗೆ ಹೇಳುವುದಾದರೆ ಈ ದಿನ ಮಾನಸಿಕವಾಗಿ ತುಂಬಾ ದುರ್ಬಲವಾಗಿರುತ್ತೀರಿ.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 5
ಅದೃಷ್ಟದ ಸಮಯ: ಮಧ್ಯಾಹ್ನ 2:30 ರಿಂದ 4:30 ರವರೆಗೆ

ಕನ್ಯಾ ರಾಶಿ

ನೀವು ವಿದ್ಯಾರ್ಥಿಯಾಗಿದ್ದರೆ ಮತ್ತು ನಿಮ್ಮ ವಿದ್ಯಾಭ್ಯಾಸದಲ್ಲಿ ಯಾವುದೇ ಅಡೆತಡೆಗಳು ಕಂಡುಬಂದರೆ, ನೀವು ನಿಮ್ಮ ಹಿರಿಯರ ಮತ್ತು ಶಿಕ್ಷಕರ ಸಹಾಯವನ್ನು ತೆಗೆದುಕೊಳ್ಳಬೇಕು. ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ. ಸೌಕರ್ಯಗಳಲ್ಲಿ ಹೆಚ್ಚಳವಾಗಬಹುದು. ಸರ್ಕಾರಿ ಕೆಲಸ ಮಾಡುವವರು ಇಂದು ಬಹಳ ಜಾಗರೂಕರಾಗಿರಬೇಕು. ನಿಮ್ಮ ಸಣ್ಣ ನಿರ್ಲಕ್ಷ್ಯವು ದೊಡ್ಡ ನಷ್ಟವನ್ನು ಉಂಟುಮಾಡಬಹುದು. ವ್ಯಾಪಾರಸ್ಥರಿಗೆ ಇಂದು ಸರಾಸರಿ ದಿನವಾಗಲಿದೆ. ನಾವು ಆರೋಗ್ಯದ ಬಗ್ಗೆ ಹೇಳುವುದಾದರೆ ಸಾಕಷ್ಟು ನೀರು ಕುಡಿಯಿರಿ.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 11
ಅದೃಷ್ಟದ ಸಮಯ: ಮಧ್ಯಾಹ್ನ 1 ರಿಂದ ಸಂಜೆ 5 ರವರೆಗೆ

ತುಲಾ ರಾಶಿ

ಈ ದಿನ ನಿಮ್ಮ ಕೋಪವನ್ನು ನಿಯಂತ್ರಿಸಲು ಸಲಹೆ ನೀಡಲಾಗಿದೆ. ಹಣದ ವಿಷಯದಲ್ಲಿ ದಿನವು ಉತ್ತಮವಾಗಿರುತ್ತದೆ. ಹಣಕಾಸಿನ ಸ್ಥಿತಿ ಚೆನ್ನಾಗಿರಲಿದೆ. ಇಂದು ನೀವು ಹಣಕ್ಕೆ ಸಂಬಂಧಿಸಿದ ಯಾವುದೇ ವ್ಯವಹಾರವನ್ನು ಸಹ ಮಾಡಬಹುದು. ಉದ್ಯೋಗ ಅಥವಾ ವ್ಯವಹಾರವಾಗಿರಲಿ, ಇಂದು ನೀವು ಬಹಳ ಬುದ್ಧಿವಂತಿಕೆಯಿಂದ ಕೆಲಸ ಮಾಡಲು ಸಲಹೆ ನೀಡಲಾಗಿದೆ. ನೀವು ಕಚೇರಿಯಲ್ಲಿ ಕೆಲವು ಕಷ್ಟಕರವಾದ ಕೆಲಸವನ್ನು ನಿಯೋಜಿಸಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ನೀವು ಉನ್ನತ ಅಧಿಕಾರಿಗಳ ಸಂಪೂರ್ಣ ಸಹಕಾರವನ್ನು ಪಡೆಯುತ್ತೀರಿ. ವ್ಯಾಪಾರಸ್ಥರು ಯಾವುದೇ ಹೊಸ ವ್ಯವಹಾರ ಪ್ರಸ್ತಾಪವನ್ನು ತರಾತುರಿಯಲ್ಲಿ ಸ್ವೀಕರಿಸಲು ಹೋಗಬೇಡಿ. ಆರೋಗ್ಯ ಸಮಸ್ಯೆಯಿದ್ದರೆ ನ ನಿರ್ಲಕ್ಷ್ಯ ಮಾಡಬೇಡಿ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 8
ಅದೃಷ್ಟದ ಸಮಯ: ಬೆಳಿಗ್ಗೆ 7:55 ರಿಂದ 9:50 ರವರೆಗೆ

ವೃಶ್ಚಿಕ ರಾಶಿ

ನೀವು ಹೊಸ ಕೆಲಸವನ್ನು ಪ್ರಾರಂಭಿಸಲು ಬಯಸಿದರೆ ಈ ದಿನ ಉತ್ತಮವಾಗಿದೆ. ನಿಮ್ಮ ಪ್ರೀತಿಪಾತ್ರರ ಸಂಪೂರ್ಣ ಬೆಂಬಲವನ್ನು ಸಹ ಕೂಡ ಪಡೆಯುತ್ತೀರಿ. ಇಂದು ಉದ್ಯೋಗಸ್ಥರಿಗೆ ಹೆಚ್ಚಿನ ಸಮಾಧಾನ ಸಿಗಲಿದೆ. ನಿಮ್ಮ ಸಂಬಳಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇದ್ದರೆ, ಇಂದು ನಿಮ್ಮ ಸಮಸ್ಯೆ ಕೊನೆಗೊಳ್ಳಬಹುದು. ದೈನಂದಿನ ಕಾರ್ಯಗಳನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಪ್ರೀತಿಪಾತ್ರರ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಆದರೆ ದೊಡ್ಡ ಖರ್ಚು ಮಾಡುವುದನ್ನು ತಪ್ಪಿಸಿ. ನಿಮಗೆ ಮೈಗ್ರೇನ್ ಸಮಸ್ಯೆ ಇದ್ದರೆ ಇಂದು ನಿಮ್ಮ ಸಮಸ್ಯೆ ಹೆಚ್ಚಾಗಬಹುದು.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 14
ಅದೃಷ್ಟದ ಸಮಯ: ಸಂಜೆ 4:45 ರಿಂದ ರಾತ್ರಿ 9:05 ರವರೆಗೆ

ಧನು ರಾಶಿ

ಮನೆಯ ವಾತಾವರಣ ಸುಧಾರಣೆ ಕಂಡು ಬರಲಿದೆ. ಮನೆಯಲ್ಲಿ ಕೆಲವು ಸಮಯದಿಂದ ಚಿಕ್ಕ ಪುಟ್ಟ ಸಮಸ್ಯೆಗಳಿದ್ದರೆ ಇಂದು ಎಲ್ಲವೂ ಶಾಂತವಾಗಿರಬಹುದು. ನಿಮ್ಮ ಮಾತು ಮತ್ತು ನಡವಳಿಕೆಯ ಬಗ್ಗೆಯೂ ಕಾಳಜಿ ವಹಿಸುವುದು ಉತ್ತಮ. ನಿಮ್ಮ ಆದಾಯವನ್ನು ಹೆಚ್ಚಿಸಲು ನೀವು ಪ್ರಯತ್ನಿಸುತ್ತಿದ್ದರೆ ಇಂದು ನೀವು ಯಶಸ್ಸನ್ನು ಪಡೆಯಬಹುದು. ಶೀಘ್ರದಲ್ಲೇ ನಿಮ್ಮ ಹಣಕಾಸಿನ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಕಚೇರಿಯಲ್ಲಿ ಅತಿಯಾಗಿ ನಗುವುದು, ತಮಾಷೆ ಮಾಡುವುದು ಅಥವಾ ಗಾಸಿಪ್ ಮಾಡುವುದನ್ನು ತಪ್ಪಿಸಿ. ವ್ಯಾಪಾರಸ್ಥರು ಉತ್ತಮ ಲಾಭ ಪಡೆಯಬಹುದು. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಮರೂನ್
ಅದೃಷ್ಟದ ಸಂಖ್ಯೆ: 4
ಅದೃಷ್ಟದ ಸಮಯ: ಸಂಜೆ 5 ರಿಂದ ರಾತ್ರಿ 8 ರವರೆಗೆ

ಮಕರ ರಾಶಿ

ಕೆಲಸದ ದೃಷ್ಟಿಯಿಂದ ಈ ದಿನ ನಿಮಗೆ ಏರಿಳಿತಗಳಿಂದ ಕೂಡಿರಲಿದೆ. ಕಚೇರಿಯಲ್ಲಿ ಯಾವುದೇ ಕೆಲಸವನ್ನು ಮಾಡುವಾಗ ಆತುರಪಡಬೇಡಿ, ಇಲ್ಲದಿದ್ದರೆ ನಿಮ್ಮಿಂದ ದೊಡ್ಡ ತಪ್ಪು ಮಾಡಬಹುದು. ಉದ್ಯಮಿಗಳು ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗಬಹುದು. ಹಣದ ಕೊರತೆಯಿಂದಾಗಿ ನಿಮ್ಮ ಕೆಲವು ಕೆಲಸಗಳು ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಸಂಗಾತಿಯೊಂದಿಗೆ ವೈಮನಸ್ಸು ಉಂಟಾಗಬಹುದು. ನೀವು ಪರಸ್ಪರ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೀರಿ. ಆರೋಗ್ಯದ ಕ್ಷೀಣತೆಯಿಂದಾಗಿ, ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 10
ಅದೃಷ್ಟದ ಸಮಯ: ಬೆಳಿಗ್ಗೆ 6 ರಿಂದ 9 ರವರೆಗೆ

ಕುಂಭ ರಾಶಿ

ಉದ್ಯಮಿಗಳು ತಮ್ಮ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ಇಂದು ಯಾವುದೇ ಅಪಾಯಕಾರಿ ಕೆಲಸ ಮಾಡಲು ಹೋಗಬೇಡಿ. ಉದ್ಯೋಗಸ್ಥರಿಗೆ ಇಂದು ಕಛೇರಿಯಲ್ಲಿ ಹೊಸದನ್ನು ಕಲಿಯುವ ಅವಕಾಶ ದೊರೆಯುತ್ತದೆ. ನೀವು ಇತ್ತೀಚೆಗೆ ಹೊಸ ಕೆಲಸಕ್ಕೆ ಸೇರಿದ್ದರೆ ಈ ದಿನ ನಿಮಗೆ ಬಹಳ ಮುಖ್ಯವಾಗಿರುತ್ತದೆ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ತಾಯಿಯ ಕಡೆಯಿಂದ ಲಾಭ ಸಾಧ್ಯ. ನೀವು ಅವಿವಾಹಿತರಾಗಿದ್ದರೆ, ಇಂದು ನಿಮ್ಮ ಮದುವೆ ಬಗ್ಗೆ ಚರ್ಚಿಸಬಹುದು. ಆರೋಗ್ಯದ ದೃಷ್ಟಿಯಿಂದ ದಿನವು ಅನುಕೂಲಕರವಾಗಿರುತ್ತದೆ.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 24
ಅದೃಷ್ಟದ ಸಮಯ: ಮಧ್ಯಾಹ್ನ 3:45 ರಿಂದ ಸಂಜೆ 7 ರವರೆಗೆ

ಮೀನ ರಾಶಿ

ಇಂದು ಇದ್ದಕ್ಕಿದ್ದಂತೆ ಕೆಲವು ಶುಭ ಮಾಹಿತಿಗಳು ಸಿಗಬಹುದು. ಮನೆಯ ವಾತಾವರಣ ತುಂಬಾ ಚೆನ್ನಾಗಿರಲಿದೆ. ನಿಮ್ಮ ಪ್ರೀತಿಪಾತ್ರರ ಜೊತೆ ನೀವು ಬಹಳಷ್ಟು ಮೋಜು ಮಸ್ತಿಯಿಂದ ಕಳೆಯಲು ಸಾಧ್ಯವಾಗುವುದು. ವ್ಯಾಪಾರಸ್ಥರಿಗೆ ಇಂದು ಲಾಭದಾಯಕವಾಗಿರಲಿದೆ. ನಿಮ್ಮ ಯಾವುದೇ ಸ್ಥಗಿತಗೊಂಡ ಯೋಜನೆಯು ಮುಂದುವರಿಯಬಹುದು. ಈ ದಿನ ಆರ್ಥಿಕ ಲಾಭದ ಸಾಧ್ಯತೆ ಉದೆ. ಉದ್ಯೋಗಿಗಳಿಗೆ ಈ ದಿನವು ಸಾಮಾನ್ಯವಾಗಿರಲಿದೆ. ಇಂದು ನೀವು ನಿಮ್ಮ ಸಂಗಾತಿಯಿಂದ ಅಮೂಲ್ಯವಾದ ಉಡುಗೊರೆಯನ್ನು ಪಡೆಯಬಹುದು. ನಿಮ್ಮ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ, ಇಂದು ನೀವು ತುಂಬಾ ಫಿಟ್ ಆಗಿರುತ್ತೀರಿ.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 16
ಅದೃಷ್ಟದ ಸಮಯ: ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ

English summary

Dina Bhavishya -June 3 2023 Today Rashi Bhavishya, Daily Horoscope in Kannada

Dina Bhavishya- Get Today's Rashi Bhavishy 3 June 2023 In Kannada, Read daily horoscope prediction of aries, taurus, gemini, cancer, leo, virgo, libra, scorpio, Sagittarius, Capricorn, Aquarius, pisces in Kannada.
X
Desktop Bottom Promotion