Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
Horoscope Today 26 June: ಜೂನ್ 26 ಈ ದಿನ ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
ಶುಭೋದಯ..... ವೈದಿಕ ಶಾಸ್ತ್ರದ ಪ್ರಕಾರ ಜೂನ್ 26ರ ರಾಶಿಫಲ ನೋಡೋಣ:
ಸಂವತ್ಸರ: ಶುಭಕೃತ್
ಆಯನ: ಉತ್ತರಾಯಣ
ಋತು: ವಸಂತ
ಮಾಸ: ಆಷಾಢ
ಪಕ್ಷ: ಶುಕ್ಲಪಕ್ಷ
ತಿಥಿ: ಷಷ್ಠಿ
ನಕ್ಷತ್ರ: ಮಧ್ಯಾಹ್ನ 12:44ರವರೆಗೆ ಉತ್ತರ ಫಲ್ಗುಣಿ ನಂತರ ಹಸ್ತಾ
ರಾಹುಕಾಲ: ಬೆಳಗ್ಗೆ 07:32ರಿಂದ 09:09ರವರೆಗೆ
ಮೇಷ ರಾಶಿ
ಕೆಲಸದ ದೃಷ್ಟಿಯಿಂದ ಈ ದಿನ ನಿಮಗೆ ತುಂಬಾ ಮುಖ್ಯವಾಗಿರಲಿದೆ. ಈ ದಿನ ನಿಮಗೆ ಹೊಸ ಅವಕಾಶಗಳು ದೊರೆಯಲಿದೆ. ನಿಮ್ಮ ಸಂಗಾತಿಯೊಂದಿಗಿನ ಸಂಬಂಧದಲ್ಲಿ ಉತ್ತಮ ಸಮನ್ವಯವನ್ನು ಇರಿಸಿಕೊಳ್ಳಲು ಪ್ರಯತ್ನಿಸಿ. ಸಣ್ಣ ವಿಷಯಗಳಿಗೆ ಜಗಳ ಮಾಡಲು ಹೋಗಬೇಡಿ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ.
ಅದೃಷ್ಟದ ಬಣ್ಣ: ಪೀಚ್
ಅದೃಷ್ಟದ ಸಂಖ್ಯೆ: 17
ಅದೃಷ್ಟದ ಸಮಯ: ಬೆಳಗ್ಗೆ10 ರಿಂದ ಮಧ್ಯಾಹ್ನ 12 ರವರೆಗೆ

ವೃಷಭ ರಾಶಿ
ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರಿಗೆ ಈ ದಿನ ಉತ್ತಮವಾಗಿರಲಿದೆ. ಈ ದಿನ ನೀವು ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು. ಉದ್ಯೋಗಸ್ಥರು ಇಂದು ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು, ಆದ್ದರಿಂದ ಜಾಗರೂಕರಾಗಿರಿ, ಆರ್ಥಿಕ ಪರಿಸ್ಥಿತಿಯಲ್ಲಿ ಕುಸಿತದ ಸಾಧ್ಯತೆ ಇದೆ.
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ: 8
ಅದೃಷ್ಟದ ಸಮಯ: ಸಂಜೆ 5 ರಿಂದ ರಾತ್ರಿ 9 ರವರೆಗೆ
ಮಿಥುನ ರಾಶಿ
ಉದ್ಯಮಿಗಳು ಈ ದಿನ ದೂರ ಪ್ರಯಾಣ ಮಾಡಬೇಡಿ. ನಿಮ್ಮ ಈ ಪ್ರಯಾಣವು ನಿಮ್ಮ ಸಮಯ ಮತ್ತು ಹಣವನ್ನು ಮಾತ್ರ ವ್ಯರ್ಥ ಮಾಡುತ್ತದೆ. ಸಂಗಾತಿಯ ನಡವಳಿಕೆಯಲ್ಲಿ ಸ್ವಲ್ಪ ಬದಲಾವಣೆ ಕಂಡು ಬರಬಹುದು. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ.
ಅದೃಷ್ಟದ ಬಣ್ಣ: ಬೂದು
ಅದೃಷ್ಟದ ಸಂಖ್ಯೆ: 35
ಅದೃಷ್ಟದ ಸಮಯ: ಮಧ್ಯಾಹ್ನ 12:20 ರಿಂದ ಮಧ್ಯಾಹ್ನ 3 ರವರೆಗೆ
ಕರ್ಕ ರಾಶಿ
ಉದ್ಯೋಗಿಗಳು ಅತ್ಯಂತ ಶುಭ ದಿನವಾಗಿರಲಿದೆ. ವಿದೇಶಿ ಕಂಪನಿಗಳಿಗೆ ಸಂಬಂಧಿಸಿದ ವ್ಯಾಪಾರ ಮಾಡುವವರು ನಿರೀಕ್ಷೆಯಂತೆ ಫಲಿತಾಂಶ ಪಡೆಯಬಹುದು. ಸಂಗಾತಿಯೊಂದಿಗೆ ಭಾವನಾತ್ಮಕ ಬಾಂಧವ್ಯ ಹೆಚ್ಚಾಗುವುದು, ನೀವಿಬ್ಬರು ಖುಷಿಯಾಗಿರುತ್ತೀರಿ.
ಅದೃಷ್ಟದ ಬಣ್ಣ: ಮರೂನ್
ಅದೃಷ್ಟದ ಸಂಖ್ಯೆ: 11
ಅದೃಷ್ಟದ ಸಮಯ: ಸಂಜೆ 6 ರಿಂದ 8:25 ರವರೆಗೆ
ಸಿಂಹ ರಾಶಿ
ಹಣದ ವಿಷಯದಲ್ಲಿ ಈ ದಿನವು ದುಬಾರಿಯಾಗಬಹುದು. ಅನಗತ್ಯ ಖರ್ಚುಗಳು ಉಂಟಾಗಬಹುದು. ಕಚೇರಿಯಲ್ಲಿ ನಿಮ್ಮ ಚಿಕ್ಕ ಕೆಲಸವನ್ನೂ ಸಂಪೂರ್ಣ ಜವಾಬ್ದಾರಿಯಿಂದ ಮಾಡುವಂತೆ ಸಲಹೆ ನೀಡಲಾಗಿದೆ. ಈ ದಿನ ನಿರ್ಲಕ್ಷ್ಯವು ದುಬಾರಿಯಾಗಲಿದೆ. ಉದ್ಯಮಿಗಳು ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗಬಹುದು. ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ಈ ದಿನ ದುರ್ಬಲವಾಗಿರಲಿದೆ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 2
ಅದೃಷ್ಟದ ಸಮಯ: 9:50 ರಿಂದ 11:50 ರವರೆಗೆ
ಕನ್ಯಾ ರಾಶಿ
ನೀವು ಅವಿವಾಹಿತರಾಗಿದ್ದರೆ ನಿಮಗೆ ಮದುವೆಯ ಪ್ರಸ್ತಾಪ ಬರಬಹುದು. ಆದರೆ ಅಂತಹ ಸಂದರ್ಭಗಳಲ್ಲಿ ನೀವು ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ.. ಉದ್ಯೋಗಸ್ಥರ ಆದಾಯದಲ್ಲಿ ಹೆಚ್ಚಳವಾಗಲಿದೆ. ಅದೇ ಉದ್ಯಮಿಗಳು ಲಾಭ ಗಳಿಸಲು ಉತ್ತಮ ಅವಕಾಶವನ್ನು ಪಡೆಯುಬಹುದು.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 9
ಅದೃಷ್ಟದ ಸಮಯ: ಸಂಜೆ 4 ರಿಂದ 7:30 ರವರೆಗೆ
ತುಲಾ ರಾಶಿ
ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ಹಣದ ವಿಚಾರದಲ್ಲಿ ಈ ದಿನ ಚೆನ್ನಾಗಿರಲಿದೆ. ಅದು ಉದ್ಯೋಗ ಅಥವಾ ವ್ಯವಹಾರವಾಗಿರಲಿ, ಇಂದು ನಿಮಗೆ ತುಂಬಾ ಕಾರ್ಯನಿರತವಾಗಿರಲಿದೆ. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ನೀವು ವಿಶ್ರಾಂತಿಯ ಕಡೆಗೂ ಗಮನಹರಿಸುವುದು ಒಳ್ಳೆಯದು.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 26
ಅದೃಷ್ಟದ ಸಮಯ: ಮಧ್ಯಾಹ್ನ 2:00 ರಿಂದ ಸಂಜೆ 5:00 ರವರೆಗೆ
ವೃಶ್ಚಿಕ ರಾಶಿ
ಕಚೇರಿಯಲ್ಲಿ ನಿಮ್ಮ ಸ್ಥಾನವು ಬಲವಾಗಿರುತ್ತದೆ. ಉದ್ಯಮಿಗಳಿಗೆ ಹೂಡಿಕೆ ಮಾಡಲು ಉತ್ತಮ ಅವಕಾಶ ಸಿಗಲಿದೆ. ನಿಮ್ಮ ಸಂಗಾತಿಯೊಂದಿಗೆ ಸ್ವಲ್ಪ ದೂರ ಪ್ರಯಾಣಿಸುವ ಅವಕಾಶವನ್ನು ಪಡೆಯುತ್ತೀರಿ.
ಅದೃಷ್ಟದ ಬಣ್ಣ: ಆಕಾಶ ನೀಲಿ
ಅದೃಷ್ಟದ ಸಂಖ್ಯೆ: 12
ಅದೃಷ್ಟದ ಸಮಯ: ಮಧ್ಯಾಹ್ನ 1:20 ರಿಂದ ಸಂಜೆ 4 ರವರೆಗೆ
ಧನು ರಾಶಿ
ಇಂದು ಮಕ್ಕಳೊಂದಿಗೆ ಉತ್ತಮ ಸಮಯ ಕಳೆಯುತ್ತೀರಿ. ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ನಿಮ್ಮ ಮೂಲ ಸೌಕರ್ಯಗಳಲ್ಲಿ ಹೆಚ್ಚಳವಾಗಲಿದೆ. ದಿನದ ಎರಡನೇ ಭಾಗದಲ್ಲಿ ಅಕಸ್ಮಾತ್ ಒಂದಿಷ್ಟು ಒಳ್ಳೆಯ ಸುದ್ದಿ ಸಿಗಬಹುದು.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 8
ಅದೃಷ್ಟದ ಸಮಯ: ಬೆಳಿಗ್ಗೆ 4:30 ರಿಂದ 6:50 ರವರೆಗೆ
ಮಕರ ರಾಶಿ
ಇಂದು ನಿಮ್ಮ ನಿರ್ಧಾರ ನಿಮಗೆ ಉತ್ತಮ ಫಲವನ್ನು ನೀಡಲಿದೆ. ಇಂದು ನೀವು ನಿಮ್ಮ ಎಲ್ಲಾ ಜವಾಬ್ದಾರಿಗಳನ್ನು ಉತ್ತಮವಾಗಿ ನಿರ್ವಹಿಸಲು ಸಾಧ್ಯವಾಗುವುದು. ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಕೆನೆ
ಅದೃಷ್ಟದ ಸಂಖ್ಯೆ: 14
ಅದೃಷ್ಟದ ಸಮಯ: ಸಂಜೆ 5:15 ರಿಂದ 8:15 ರವರೆಗೆ
ಕುಂಭ ರಾಶಿ
ವ್ಯಾಪಾರಸ್ಥರು ತಮ್ಮ ವಿರೋಧಿಗಳೊಂದಿಗೆ ಜಾಗರೂಕರಾಗಿರಲು ಸಲಹೆ ನೀಡಲಾಗಿದೆ. ದುಡಿಯುವವರು ಯಾವುದೇ ಕೆಲಸವನ್ನು ಅಪೂರ್ಣವಾಗಿ ಬಿಡಲು ಹೋಗಬೇಡಿ. ಹಣಕ್ಕೆ ಸಂಬಂಧಿಸಿದ ಚಿಂತೆ ಹೆಚ್ಚಾಗಬಹುದು. ಈ ದಿನ ನೀವು ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗುತ್ತದೆ. ಆರೋಗ್ಯದ ವಿಷಯದಲ್ಲಿಈ ದಿನ ಮಿಶ್ರಫಲ.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 9
ಅದೃಷ್ಟದ ಸಮಯ: ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 2:30 ರವರೆಗೆ
ಮೀನ ರಾಶಿ
ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ಈ ದಿನ ನಿಮಗೆ ಒಳ್ಳೆಯದಲ್ಲ. ಆರೋಗ್ಯದಲ್ಲಿ ಹಠಾತ್ ಕ್ಷೀಣತೆ ಉಂಟಾಗಬಹುದು. ನಿಮ್ಮ ಕೆಲಸದ ಮೇಲೆ ಗಮನ ಕೇಂದ್ರೀಕರಿಸುವಲ್ಲಿ ನೀವು ಅನೇಕ ತೊಂದರೆಗಳನ್ನು ಎದುರಿಸಬಹುದು. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಈ ದಿನ ಬುದ್ಧಿವಂತಿಕೆಯಿಂದ ಖರ್ಚು ಮಾಡಲು ಸಲಹೆ ನೀಡಲಾಗುವುದು.
ಅದೃಷ್ಟದ ಬಣ್ಣ: ಪೀಚ್
ಅದೃಷ್ಟದ ಸಂಖ್ಯೆ: 18
ಅದೃಷ್ಟದ ಸಮಯ: ಮಧ್ಯಾಹ್ನ 12:50 ರಿಂದ ಸಂಜೆ 5 ರವರೆಗೆ



Click it and Unblock the Notifications
