Horoscope Today 19 June: ಜೂನ್ 19 ಈ ದಿನ ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?

ಶುಭೋದಯ..... ವೈದಿಕ ಶಾಸ್ತ್ರದ ಪ್ರಕಾರ ಜೂನ್ 19ರ ರಾಶಿಫಲ ನೋಡೋಣ:
ಸಂವತ್ಸರ: ಶುಭಕೃತ್
ಆಯನ: ಉತ್ತರಾಯಣ
ಋತು: ವಸಂತ
ಮಾಸ: ಆಷಾಢ
ಪಕ್ಷ: ಶುಕ್ಲ ಪಕ್ಷ
ತಿಥಿ: ಪ್ರತಿಪಾದ ಬೆಳಗ್ಗೆ 11:25 ರವರೆಗೆ
ದ್ವಿತೀಯ ಬೆಳಗ್ಗೆ 11:25ರ ನಂತರ
ನಕ್ಷತ್ರ: ಆರ್ದ್ರಾ ನಕ್ಷತ್ರ ರಾತ್ರಿ 8:11 ರವರೆಗೆ
ಪುನರ್ವಸು ನಕ್ಷತ್ರ ರಾತ್ರಿ 8:11ರ ನಂತರ
ರಾಹುಕಾಲ: ಬೆಳಗ್ಗೆ 7:31 ರಿಂದ ಮಾರನೇ ದಿನ ಬೆಳಗ್ಗೆ 9:08 ರವರೆಗೆ

ಮೇಷ ರಾಶಿ

ಈ ದಿನ ಗಾಬರಿಯಿಂದ ಯಾವುದೇ ಕೆಲಸವನ್ನು ಮಾಡಬೇಡಿ. ಇದರಿಂದ ನೀವು ತೊಂದರೆಗೆ ಒಳಗಾಗುವ ಸಾಧ್ಯತೆಯಿದೆ. ಕಚೇರಿಯಲ್ಲಿ ಹಠಾತ್ ಕೆಲಸದ ಹೊರೆ ಹೆಚ್ಚಾಗಬಹುದು. ಹಣದ ವಿಷಯದಲ್ಲಿ ಈ ದಿನವು ಉತ್ತಮವಾಗಿರುತ್ತದೆ. ಆರೋಗ್ಯ ಸಂಬಂಧಿ ಸಮಸ್ಯೆ ಎದುರಾಗಬಹುದು. ಈ ದಿನ ತುಂಬಾ ದಣಿಯುತ್ತೀರಿ. ಮತ್ತು ದೌರ್ಬಲ್ಯ ಅನುಭವಿಸುತ್ತೀರಿ.
ಅದೃಷ್ಟ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 27
ಅದೃಷ್ಟದ ಸಮಯ: ಬೆಳಿಗ್ಗೆ 9:50 ರಿಂದ ಮಧ್ಯಾಹ್ನ 12

Dina Bhavishya June 19th 2023: Daily Horoscope Today in Kannada

ವೃಷಭ ರಾಶಿ

ಈ ದಿನ ನಿಮ್ಮ ದಾಂಪತ್ಯ ಜೀವನದಲ್ಲಿ ಪ್ರೀತಿ ಮತ್ತು ಉತ್ಸಾಹ ತುಂಬಿರುತ್ತದೆ. ನಿಮ್ಮ ಜೀವನ ಸಂಗಾತಿಯ ಸಂಪೂರ್ಣ ಪ್ರೀತಿ ಮತ್ತು ಬೆಂಬಲವನ್ನು ನೀವು ಪಡೆಯುತ್ತೀರಿ. ಕೆಲಸದ ಸ್ಥಳದಲ್ಲಿ ಎಲ್ಲವೂ ಒಳ್ಳೆಯದಾಗಲಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಸರಿಯಾದ ಫಲಿತಾಂಶವನ್ನು ಪಡೆಯಬಹುದು. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 25
ಅದೃಷ್ಟದ ಸಮಯ: ಸಂಜೆ 6 ರಿಂದ 8:25 ರವರೆಗೆ

ಮಿಥುನ ರಾಶಿ

ಷೇರು ಮಾರುಕಟ್ಟೆಯಲ್ಲಿ ಕೆಲಸ ಮಾಡುವವರಿಗೆ ಈ ದಿನ ಫಲಪ್ರದವಾಗಿರಲಿದೆ. ನಿಮ್ಮ ಆತ್ಮೀಯರು ನಿಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ನಿಮಗೆ ಭಾಸವಾಗುತ್ತದೆ. ನೀವು ಪಾದಗಳಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಯಿದೆ.
ಅದೃಷ್ಟದ ಬಣ್ಣ: ಗಾಢ ಕೆಂಪು
ಅದೃಷ್ಟದ ಸಂಖ್ಯೆ: 5
ಅದೃಷ್ಟದ ಸಮಯ: ಬೆಳಗ್ಗೆ 11:20 ರಿಂದ ಮಧ್ಯಾಹ್ನ 3 ರವರೆಗೆ

ಕರ್ಕಾಟಕ ರಾಶಿ

ಯಾವುದೇ ದೊಡ್ಡ ಹೂಡಿಕೆ ಮಾಡುವ ಮೊದಲು ವ್ಯಾಪಾರಸ್ಥರು ಎಚ್ಚರಿಕೆಯಿಂದ ಯೋಚಿಸಬೇಕು. ಉದ್ಯೋಗಸ್ಥರು ಇಂದು ಕಚೇರಿಯಲ್ಲಿ ಜಾಗರೂಕರಾಗಿರಲು ಸೂಚಿಸಲಾಗಿದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿಯು ಆಹ್ಲಾದಕರವಾಗಿರುತ್ತದೆ. ಹಿರಿಯರೊಂದಿಗಿನ ನಿಮ್ಮ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟ ಸಂಖ್ಯೆ: 19
ಅದೃಷ್ಟದ ಸಮಯ: ಸಂಜೆ 4 ರಿಂದ ರಾತ್ರಿ 8:30 ರವರೆಗೆ

ಸಿಂಹ ರಾಶಿ

ಪ್ರೀತಿಯ ವಿಷಯದಲ್ಲಿ ಈ ದಿನವು ವಿವಾದಾತ್ಮಕವಾಗಿರುತ್ತದೆ. ಮೂರನೆಯವರ ಹಸ್ತಕ್ಷೇಪದಿಂದಾಗಿ ನಿಮ್ಮ ಸಂಗಾತಿಯಿಂದ ದೂರಾಗುವ ಪ್ರಸಂಗ ಎದುರಾಗಬಹುದು. ಕೆಲಸ-ಸಂಬಂಧಿತ ಪ್ರಯತ್ನಗಳಲ್ಲಿ ಯಶಸ್ಸಿನ ಕೊರತೆಯಿಂದಾಗಿ ಇಂದು ನೀವು ತುಂಬಾ ನಿರಾಶೆಗೊಳ್ಳಬಹುದು. ಆದಷ್ಟು ತಾಳ್ಮೆಯಿಂದ ಇದ್ದರೆ ನಿಮಗೆ ಒಳ್ಳೆಯದು.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 37
ಅದೃಷ್ಟದ ಸಮಯ: ಮಧ್ಯಾಹ್ನ 2:05 ರಿಂದ ಸಂಜೆ 5:05 ರವರೆಗೆ

ಕನ್ಯಾರಾಶಿ

ಮನೆಯಲ್ಲಿ ವಯಸ್ಸಾದವರು ಇದ್ದರೆ ಅವರ ಆರೋಗ್ಯದ ಬಗ್ಗೆ ಸಂಪೂರ್ಣ ಕಾಳಜಿ ವಹಿಸಿ. ನೀವು ನಿಮ್ಮ ಬಗ್ಗೆಯೂ ಗಮನ ಹರಿಸಬೇಕು. ಹೆಚ್ಚು ಕೆಲಸದ ಒತ್ತಡವನ್ನು ತೆಗೆದುಕೊಳ್ಳಬೇಡಿ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಇವತ್ತು ದೊಡ್ಡ ಖರ್ಚು ಮಾಡೋದಕ್ಕೆ ಹೋಗಬೇಡಿ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 2
ಅದೃಷ್ಟದ ಸಮಯ: ಬೆಳಿಗ್ಗೆ 10:50 ರಿಂದ ಮಧ್ಯಾಹ್ನ 1 ರವರೆಗೆ

ತುಲಾ ರಾಶಿ

ತುಲಾ ರಾಶಿಯವರಿಗೆ ಇಂದು ಶುಭ ದಿನ. ನಿಮ್ಮ ಪ್ರಮುಖ ಚಿಂತೆಯೊಂದು ದೂರವಾಗುತ್ತದೆ. ನಿಮ್ಮ ಮನಸ್ಥಿತಿ ಉತ್ತಮವಾಗುತ್ತದೆ. ಈ ದಿನ ವ್ಯಾಪಾರಿಗಳಿಗೆ ಲಾಭವಾಗಲಿದೆ. ದುಡಿಯುವವರ ಸ್ಥಾನ ಬಲ ಆಗುತ್ತದೆ. ಆರೋಗ್ಯದ ದೃಷ್ಟಿಯಿಂದ ಈ ದಿನ ಉತ್ತಮವಾಗಿರುತ್ತದೆ.
ಅದೃಷ್ಟದ ಬಣ್ಣ: ತಿಳಿ ಗುಲಾಬಿ
ಅದೃಷ್ಟದ ಸಂಖ್ಯೆ: 10
ಅದೃಷ್ಟದ ಸಮಯ: ಸಂಜೆ 6 ರಿಂದ 9:15 ರವರೆಗೆ

ವೃಶ್ಚಿಕ ರಾಶಿ

ಈ ದಿನ ನಿಮ್ಮ ಹಳೆಯ ಸ್ನೇಹಿತರ ಆಕಸ್ಮಿಕ ಭೇಟಿಯಾಗಬಹುದು. ನೀವು ಪರಸ್ಪರ ಉತ್ತಮ ಸಮಯವನ್ನು ಕಳೆಯುತ್ತೀರಿ. ಕಚೇರಿಯ ಸಂಪೂರ್ಣ ಜವಾಬ್ದಾರಿ ನಿಮ್ಮ ಮೇಲೆ ಬರಬಹುದು. ಹಣದ ವಿಷಯದಲ್ಲಿ ಈ ದಿನವು ಮಿಶ್ರವಾಗಿರುತ್ತದೆ.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 23
ಅದೃಷ್ಟದ ಸಮಯ: ಮಧ್ಯಾಹ್ನ 2 ರಿಂದ ಸಂಜೆ 6 ರವರೆಗೆ

ಧನು ರಾಶಿ

ನೀವು ಈ ದಿನ ದೀರ್ಘ ಪ್ರಯಾಣವನ್ನು ಮಾಡುತ್ತೀರಿ. ನಿಮ್ಮ ಈ ಭೇಟಿ ಬಹಳ ವಿಶೇಷವಾಗಿರುತ್ತದೆ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯ ಲಕ್ಷಣಗಳಿವೆ. ಆಸ್ತಿಗೆ ಸಂಬಂಧಿಸಿದ ಯಾವುದೇ ವಿಷಯವು ನ್ಯಾಯಾಲಯದಲ್ಲಿ ನಡೆಯುತ್ತಿದ್ದರೆ ನಿರ್ಧಾರವು ನಿಮ್ಮ ಪರವಾಗಿ ಬರುವ ಸಾಧ್ಯತೆಯಿದೆ.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 10
ಅದೃಷ್ಟದ ಸಮಯ: ಸಂಜೆ 5 ರಿಂದ ರಾತ್ರಿ 8:35 ರವರೆಗೆ

ಮಕರ ರಾಶಿ

ಈ ದಿನ ನಿಮಗೆ ಸವಾಲಿನ ದಿನವಾಗಿರುತ್ತದೆ. ವ್ಯಾಪಾರಕ್ಕೆ ಸಂಬಂಧಿಸಿದ ನೀವು ನಿಮ್ಮ ವಿರೋಧಿಗಳೊಂದಿಗೆ ಜಾಗರೂಕರಾಗಿರಬೇಕು. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುತ್ತದೆ. ಆರೋಗ್ಯ ಹದಗೆಡುವ ಸಾಧ್ಯತೆಗಳಿದೆ. ಹೀಗಾಗಿ ಯಾವುದಕ್ಕೂ ನಿಮ್ಮ ಹುಷಾರಲ್ಲಿ ನೀವಿರಿ
ಅದೃಷ್ಟದ ಬಣ್ಣ: ಆಕಾಶ ನೀಲಿ
ಅದೃಷ್ಟದ ಸಂಖ್ಯೆ: 8
ಅದೃಷ್ಟದ ಸಮಯ: ಬೆಳಗ್ಗೆ 9:20 ರಿಂದ ಬೆಳಗ್ಗೆ 11 ರವರೆಗೆ

ಕುಂಭ ರಾಶಿ

ಮಕ್ಕಳಿಂದಾಗಿ ಈ ದಿನ ನೀವು ಸಂತೋಷ ಪಡುತ್ತೀರಿ. ಅವರು ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯಬಹುದು. ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯಲು ಉದ್ಯಮಿಗಳು ಬ್ಯಾಂಕ್‌ನಿಂದ ಸಾಲವನ್ನು ತೆಗೆದುಕೊಳ್ಳಲು ಯೋಜಿಸುತ್ತಿದ್ದರೆ ಇದು ಉತ್ತಮ ಸಮಯ. ನಿಮ್ಮ ಆರೋಗ್ಯ ಉತ್ತಮವಾಗಿರುತ್ತವೆ.
ಅದೃಷ್ಟದ ಬಣ್ಣ: ಕೆನೆ(ಕ್ರೀಮ್ ಕಲರ್)
ಅದೃಷ್ಟದ ಸಂಖ್ಯೆ: 37
ಅದೃಷ್ಟದ ಸಮಯ: ಮಧ್ಯಾಹ್ನ 12 ರಿಂದ ಸಂಜೆ 5 ರವರೆಗೆ

ಮೀನ ರಾಶಿ

ಕೆಲಸದ ವಿಚಾರದಲ್ಲಿ ಈ ದಿನವು ಉತ್ತಮವಾಗಿರುತ್ತದೆ. ಉದ್ಯೋಗಸ್ಥರು ಉನ್ನತ ಸ್ಥಾನವನ್ನು ಪಡೆಯಬಹುದು. ವ್ಯಾಪಾರಸ್ಥರು ತಮ್ಮ ವ್ಯವಹಾರವನ್ನು ಮುಂದುವರಿಸಲು ಅವಕಾಶವನ್ನು ಪಡೆಯುತ್ತಾರೆ. ಹಣಕಾಸಿನ ಸ್ಥಿತಿಯು ಬಲವಾಗಿ ಉಳಿಯುತ್ತದೆ. ಪೂಜೆ ಪುನಸ್ಕಾರ, ಹವನ ಇತ್ಯಾದಿಗಳನ್ನು ಮನೆಯಲ್ಲಿ ಆಯೋಜಿಸಬಹುದು.
ಅದೃಷ್ಟದ ಬಣ್ಣ: ಬೂದು
ಅದೃಷ್ಟದ ಸಂಖ್ಯೆ: 12
ಅದೃಷ್ಟದ ಸಮಯ: ಸಂಜೆ 4:30 ರಿಂದ ಸಂಜೆ 7 ರವರೆಗೆ

English summary

Dina Bhavishya June 19th 2023: Daily Horoscope Today in Kannada

Dina Bhavishya- Get Today's Rashi Bhavishy 19 June 2023 In Kannada, Read daily horoscope prediction of aries, taurus, gemini, cancer, leo, virgo, libra, scorpio, Sagittarius, Capricorn, Aquarius, pisces in Kannada.
Story first published: Monday, June 19, 2023, 4:00 [IST]
X
Desktop Bottom Promotion