Latest Updates
-
ಮಿಕ್ಸಿಯಲ್ಲೇ ಮಾಡಿ ಕಬ್ಬಿನ ಹಾಲು! ಕಬ್ಬು ಇಲ್ಲದೆಯೇ ಶುದ್ಧವಾದ ಹಾಲು ಮಾಡೋದು ಹೇಗೆ? ರಸ್ತೆ ಬದಿಗಿಂತ ರುಚಿ -
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ? -
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ
ಜುಲೈ 18 ದಿನ ಭವಿಷ್ಯ: ಶ್ರಾವಣ ಮಾಸದ ಮೊದಲ ದಿನ 12 ರಾಶಿಗಳ ರಾಶಿಫಲ
ಶುಭೋದಯ... ವೈದಿಕ ಶಾಸ್ತ್ರದ ಪ್ರಕಾರ ಜುಲೈ 18 ದ್ವಾದಶ ರಾಶಿಗಳಿಗೆ ಹೇಗಿದೆ ಎಂದು ನೋಡೋಣ...
ಮೇಷ ರಾಶಿ
ಯಾವುದೇ ಕೌಟುಂಬಿಕ ಸಮಸ್ಯೆಯ ಬಗ್ಗೆ ನಿಮ್ಮ ಚಿಂತೆ ಹೆಚ್ಚಾಗಬಹುದು. ಇಂದು ನೀವು ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಹೋಗಬೇಡಿ. ನಿಮ್ಮ ಯಾವುದೇ ಕೆಲಸವು ತುಂಬಾ ಸಮಯದಿಂದ ಬಾಕಿಯುಳಿದಿದ್ದರೆ ನೀವುದನ್ನು ಪೂರ್ಣಗೊಳಿಸಲು ಪ್ರಯತ್ನಿಸಿ, ಇಲ್ಲದಿದ್ದರೆ ಬಾಸ್ ನಿಮ್ಮ ಮೇಲೆ ತುಂಬಾ ಕೋಪಗೊಳ್ಳಬಹುದು. ಹಣದ ವಿಷಯದಲ್ಲಿ ಈ ದಿನ ಮಿಶ್ರಫಲ.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 11
ಅದೃಷ್ಟದ ಸಮಯ: ಸಂಜೆ 6 ರಿಂದ 8:05 ರವರೆಗೆ

ವೃಷಭ ರಾಶಿ
ನೀವು ಅವಿವಾಹಿತರಾಗಿದ್ದರೆ ಮತ್ತು ಪ್ರೇಮ ವಿವಾಹವನ್ನು ಹೊಂದಲು ಬಯಸಿದರೆ ಶೀಘ್ರದಲ್ಲಿಯೇ ನಿಮ್ಮ ಆಸೆ ಈಡೇರಲಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ದೊಡ್ಡ ಸುಧಾರಣೆ ಕಂಡುಬರಲಿದೆ. ಈ ದಿನ ನಿಮಗೆ ಹಣ ಬರುವ ಸಾಧ್ಯತೆ ಇದೆ. ಕೆಲಸದ ವಿಷಯದಲ್ಲಿ ಇಂದು ನಿಮಗೆ ಮಿಶ್ರ ಫಲ.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 4
ಅದೃಷ್ಟದ ಸಮಯ: ಬೆಳಿಗ್ಗೆ 7:10 ರಿಂದ ಮಧ್ಯಾಹ್ನ 12 ರವರೆಗೆ
ಮಿಥುನ ರಾಶಿ
ಇಂದು ದಿನದ ಆರಂಭವು ತುಂಬಾ ಚೆನ್ನಾಗಿರಲಿದೆ. ನೀವು ಎಲ್ಲಾ ಚಿಂತೆಗಳನ್ನು ಮರೆತು ನಿಮ್ಮ ಕೆಲಸದ ಮೇಲೆ ಕೇಂದ್ರೀಕರಿಸುತ್ತೀರಿ. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುತ್ತೀರಿ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 29
ಅದೃಷ್ಟದ ಸಮಯ: ಮಧ್ಯಾಹ್ನ 12:20 ರಿಂದ ಮಧ್ಯಾಹ್ನ 3 ರವರೆಗೆ
ಕರ್ಕ ರಾಶಿ
ಸ್ನೇಹಿತರೊಂದಿಗೆ ಸಂವಹನ ನಡೆಸುವಾಗ ನಿಮ್ಮ ಪದಗಳನ್ನು ಬುದ್ಧಿವಂತಿಕೆಯಿಂದ ಬಳಸಿ. ತಮಾಷೆಯಾಗಿ ಹೇಳುವ ವಿಷಯವು ಬೇರೆಯವರ ಮನಸ್ಸಿಗೆ ನೋವಾಗಬಹುದು, ಆದ್ದರಿಂದ ಜಾಗ್ರತೆವಹಿಸಿ. ಹಣದ ಬಗ್ಗೆ ಹೇಳುವುದಾದರೆ ಈ ದಿನವು ದುಬಾರಿಯಾಗಲಿದೆ. ನಿಮ್ಮ ಬಜೆಟ್ ಅನ್ನು ಮೀರಿದಂತೆ ಜಾಗ್ರತೆವಹಿಸಿ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 6
ಅದೃಷ್ಟದ ಸಮಯ: ಸಂಜೆ 5:15 ರಿಂದ 8:15 ರವರೆಗೆ
ಸಿಂಹ ರಾಶಿ
ಇಂದು ನಿಮಗೆ ಮಿಶ್ರಫಲ. ನೀವು ಉದ್ಯಮಿಯಾಗಿದ್ದರೆ, ಇತರರ ಸಲಹೆಯ ಮೇರೆಗೆ ನಿಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೋಗಬೇಡಿ. ಉದ್ಯೋಗಿಗಳು ತಮ್ಮ ಕೆಲಸದ ಬಗ್ಗೆ ನಿರ್ಲಕ್ಷ್ಯ ತೋರಬಾರದು. ನಿಮ್ಮ ಸಂಗಾತಿಯೊಂದಿಗೆ ನೀವು ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ಮಾತನಾಡುವ ಮೂಲಕ ಸರಿಪಡಿಸಲು ಪ್ರಯತ್ನಿಸಿ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 15
ಅದೃಷ್ಟದ ಸಮಯ: ಬೆಳಿಗ್ಗೆ 5 ರಿಂದ 10 ರವರೆಗೆ
ಕನ್ಯಾ ರಾಶಿ
ಪ್ರೀತಿಯ ವಿಷಯದಲ್ಲಿ ಇಂದು ನಿಮಗೆ ತುಂಬಾ ರೋಮ್ಯಾಂಟಿಕ್ ಆಗಿಗಿರಲಿದೆ. ಹಣದ ವಿಷಯದಲ್ಲಿ ನೀವು ತುಂಬಾ ಅದೃಷ್ಟದ ದಿನವಾಗಲಿದೆ. ಕೆಲಸ-ಸಂಬಂಧಿತ ಪ್ರಯತ್ನಗಳಲ್ಲಿ ಯಶಸ್ಸು ಸಿಗಲಿದೆ.
ಅದೃಷ್ಟದ ಬಣ್ಣ: ಪೀಚ್
ಅದೃಷ್ಟದ ಸಂಖ್ಯೆ: 9
ಅದೃಷ್ಟದ ಸಮಯ: ಸಂಜೆ 6:30 ರಿಂದ 9:05 ರವರೆಗೆ
ತುಲಾ ರಾಶಿ
ಆರೋಗ್ಯ ಸಂಬಂಧಿ ಸಮಸ್ಯೆಗಳಿದ್ದರೆ ನಿರ್ಲಕ್ಷಿಸಬೇಡಿ. ತಕ್ಷಣ ಉತ್ತಮ ವೈದ್ಯರನ್ನು ಸಂಪರ್ಕಿಸಿ. ಕಚೇರಿಯಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ನಿಮ್ಮ ಕಠಿಣ ಪರಿಶ್ರಮದ ಬಲದಿಂದ, ನೀವು ಮೇಲಾಧಿಕಾರಿಗಳ ಮನಸ್ಸು ಗೆಲ್ಲಲು ಸಾಧ್ಯವಾಗುತ್ತದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಆದರೆ ಖರ್ಚಿನ ಕಡೆ ಗಮನವಿರಲಿ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 20
ಅದೃಷ್ಟದ ಸಮಯ: ಮಧ್ಯಾಹ್ನ 12 ರಿಂದ 3:20 ರವರೆಗೆ
ವೃಶ್ಚಿಕ ರಾಶಿ
ಈ ದಿನ ಸಂಗಾತಿಯ ಜೊತೆ ಸಂತೋಷದಿಂದ ಇರುತ್ತೀರಿ, ಅವರಿಂದ ನೀವು ಅಮೂಲ್ಯವಾದ ಉಡುಗೊರೆಯನ್ನು ಸಹ ಪಡೆಯಬಹುದು. ಕೆಲಸದ ದೃಷ್ಟಿಯಿಂದ ಇಂದು ನಿಮಗೆ ಒಳ್ಳೆಯ ದಿನವಾಗಿರುತ್ತದೆ. ನೀವು ಹೀಗೆ ಕಷ್ಟಪಟ್ಟು ಕೆಲಸ ಮಾಡುತ್ತಿರಿ. ಶೀಘ್ರದಲ್ಲೇ ನೀವು ದೊಡ್ಡ ಪ್ರಗತಿಯನ್ನು ಸಾಧಿಸುವಿರಿ. ಹಣದ ವಿಷಯದಲ್ಲಿ ದಿನವು ಸರಾಸರಿಯಾಗಲಿದೆ.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 4
ಅದೃಷ್ಟದ ಸಮಯ: ಸಂಜೆ 5:05 ರಿಂದ 9:15 ರವರೆಗೆ
ಧನು ರಾಶಿ
ಇಂದು ನಿಮಗೆ ತುಂಬಾ ಬಿಡುವಿಲ್ಲದ ದಿನವಾಗಿರುತ್ತದೆ.ವೈಯಕ್ತಿಕ ಜೀವನದಲ್ಲೂ ಕೆಲ ಒತ್ತಡಗಳು ಇರಲಿದೆ. ಆರೋಗ್ಯ ಸಂಬಂಧಿ ಸಮಸ್ಯೆ ಎದುರಾಗಬಹುದು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 35
ಅದೃಷ್ಟದ ಸಮಯ: ಬೆಳಿಗ್ಗೆ 7:30 ರಿಂದ 11:20 ರವರೆಗೆ
ಮಕರ ರಾಶಿ
ನ್ಯಾಯಾಲಯಕ್ಕೆ ಸಂಬಂಧಿಸಿದ ಯಾವುದೇ ವಿಷಯವು ನಿಮ್ಮನ್ನು ಕಾಡಬಹುದು. ಈ ವಿಷಯವನ್ನು ಆದಷ್ಟು ಬೇಗ ಇತ್ಯರ್ಥಪಡಿಸಲು ಪ್ರಯತ್ನಿಸುವುದು ಉತ್ತಮ. ನೀವು ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡಿದರೆ ವ್ಯವಹಾರದ ಕಡೆ ಗಮನ ನೀಡಿ, ಇಲ್ಲದಿದ್ದರೆ ವ್ಯವಹಾರದಲ್ಲಿ ನಷ್ಟವಾಗಬಹುದು. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 12
ಅದೃಷ್ಟದ ಸಮಯ: ಮಧ್ಯಾಹ್ನ 1 ರಿಂದ ಮಧ್ಯಾಹ್ನ 3 ರವರೆಗೆ
ಕುಂಭ ರಾಶಿ
ನ್ಯಾಯಾಲಯಕ್ಕೆ ಸಂಬಂಧಿಸಿದ ಯಾವುದೇ ವಿಷಯವು ನಿಮ್ಮನ್ನು ಕಾಡಬಹುದು. ಈ ವಿಷಯವನ್ನು ಆದಷ್ಟು ಬೇಗ ಇತ್ಯರ್ಥಪಡಿಸಲು ಪ್ರಯತ್ನಿಸುವುದು ಉತ್ತಮ. ನೀವು ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡಿದರೆ, ಪಾಲುದಾರರಲ್ಲಿ ನಿಮ್ಮ ನಂಬಿಕೆಯನ್ನು ಹೆಚ್ಚಿಸುವ ಅವಶ್ಯಕತೆಯಿದೆ, ಇಲ್ಲದಿದ್ದರೆ ವ್ಯವಹಾರದಲ್ಲಿ ನಷ್ಟವಾಗಬಹುದು. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 12
ಅದೃಷ್ಟದ ಸಮಯ: ಮಧ್ಯಾಹ್ನ 1 ರಿಂದ ಮಧ್ಯಾಹ್ನ 3 ರವರೆಗೆ
ಮೀನ ರಾಶಿ
ನಿಮಗೆ ಬಹಳ ಸಮಯದ ನಂತರ ಈ ದಿನ ಸ್ವಲ್ಪ ಬಿಡುವಿನ ಸಮಯ ಸಿಗಲಿದೆ. ಹಣದ ಬಗ್ಗೆ ಹೆಚ್ಚು ಚಿಂತೆ ಮಾಡಬೇಡಿ. ಸರಿಯಾದ ಸಮಯ ಬಂದಾಗ ನಿಮ್ಮ ಸಮಸ್ಯೆ ಖಂಡಿತಾ ಪರಿಹಾರವಾಗುತ್ತದೆ. ಜೀವನ ಸಂಗಾತಿಯ ಪ್ರೀತಿ ಮತ್ತು ಬೆಂಬಲ ಸಿಗಲಿದೆ.
ಅದೃಷ್ಟದ ಬಣ್ಣ: ಮರೂನ್
ಅದೃಷ್ಟದ ಸಂಖ್ಯೆ: 21
ಅದೃಷ್ಟದ ಸಮಯ: ಮಧ್ಯಾಹ್ನ 12 ರಿಂದ 2:45



Click it and Unblock the Notifications











