Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜುಲೈ 14ರ ರಾಶಿಫಲ: ಈ ದಿನ ಈ 9 ರಾಶಿಯವರು ಜಾಗ್ರತೆವಹಿಸಿ
ಶುಭೋದಯ... ಜುಲೈ 14ರ ರಾಶಿಫಲ ನೀಡಲಾಗಿದ್ದು ಈ ದಿನ ಮೇಷ, ಸಿಂಹ, ಮೀನ ರಾಶಿಯವರಿಗೆ ಶುಭವಾಗಿದ್ದು, ಉಳಿದ ರಾಶಿಯವರು ಜಾಗ್ರತೆವಹಿಸಬೇಕಾಗಿದೆ ನೋಡಿ:
ದಿನಾಂಕ: ಜುಲೈ 14
ತಿಥಿ: ದ್ವಾದಶಿ
ನಕ್ಷತ್ರ: ರೋಹಿಣಿ
ಪಕ್ಷ: ಕೃಷ್ಣಪಕ್ಷ
ರಾಹುಕಾಲ: ಬೆಳಗ್ಗೆ 10:49ರಿಂದ ಮಧ್ಯಾಹ್ನ 12:27ರವರೆಗೆ
ಮೇಷ ರಾಶಿ
ಈ ದಿನ ವಿದ್ಯಾರ್ಥಿಗಳಿಗೆ ತುಂಬಾ ಚೆನ್ನಾಗಿರಲಿದೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರಲಿದೆ. ಮನೆಯ ಹಿರಿಯರ ಮಾರ್ಗದರ್ಶನ ದೊರೆಯಲಿದೆ. ಪ್ರಣಯ ಜೀವನದ ಬಗ್ಗೆ ಹೇಳುವುದಾದರೆ ಸಂಗಾತಿಯೊಂದಿಗೆ ಖುಷಿಯಾಗಿರುತ್ತೀರಿ.
ಅದೃಷ್ಟದ ಬಣ್ಣ: ಕೆನೆ
ಅದೃಷ್ಟದ ಸಂಖ್ಯೆ: 26
ಅದೃಷ್ಟದ ಸಮಯ: ಬೆಳಗ್ಗೆ 3 ರಿಂದ ಸಂಜೆ 7ರವರೆಗೆ

ವೃಷಭ ರಾಶಿ
ಯಾವುದೇ ಆರೋಗ್ಯ ಸಂಬಂಧಿತ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಬೇಡಿ. ಕಚೇರಿಯಲ್ಲಿ ಮೇಲಾಧಿಕಾರಿಯೊಂದಿಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಳ್ಳಲು ಪ್ರಯತ್ನಿಸಬೇಕು. ಅನಗತ್ಯ ಅಹಂಕಾರ ಮತ್ತು ಘರ್ಷಣೆಯನ್ನು ತಪ್ಪಿಸಿ. ದೈನಂದಿನ ಕಾರ್ಯಗಳನ್ನು ಪೂರ್ಣಗೊಳಿಸಲು ಸಂಗಾತಿಯು ನಿಮಗೆ ಸಹಾಯ ಮಾಡಬಹುದು. ನಿಮ್ಮ ನಡುವಿನ ಸಮನ್ವಯವು ಉತ್ತಮವಾಗಿರುತ್ತದೆ.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 15
ಅದೃಷ್ಟದ ಸಮಯ: ಬೆಳಿಗ್ಗೆ 7:55 ರಿಂದ 9 ರವರೆಗೆ
ಮಿಥುನ ರಾಶಿ
ಇಂದು ಹಣದ ವಿಷಯದಲ್ಲಿ ತುಂಬಾ ದುಬಾರಿಯಾಗಲಿದೆ.ನಿಮ್ಮ ಕುಟುಂಬ ಜೀವನ ಚೆನ್ನಾಗಿರಲಿದೆ. ಅವಾಹಿತರಾಗಿದ್ದರೆ ನಿಮ್ಮ ಮದುವೆ ಬಗ್ಗೆ ಮಾತುಕತೆ ಮಾಡಬಹುದು, ಆರೋಗ್ಯ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 4
ಅದೃಷ್ಟದ ಸಮಯ: ಮಧ್ಯಾಹ್ನ 12:45 ರಿಂದ ಸಂಜೆ 4 ರವರೆಗೆ
ಕರ್ಕ ರಾಶಿ
ಈ ದಿನ ಆರೋಗ್ಯದ ಕಡೆಗೆ ಗಮನಹರಿಸಿ. ಮನೆಯ ಹಿರಿಯರೊಂದಿಗೆ ಸೌಜನ್ಯದಿಂದ ವರ್ತಿಸಿ. ನಿಮ್ಮ ತಪ್ಪು ನಡವಳಿಕೆಯು ಅವರ ಭಾವನೆಗಳನ್ನು ನೋಯಿಸಬಹುದು. ಈ ದಿನ ಹಣಕ್ಕೆ ಸಮಸ್ಯೆ ಉಂಟಾಗಬಹುದು, ಬರಬೇಕಾಗಿದ್ದ ಹಣ ಬಾರದ ಕಾರಣ ನಿಮ್ಮ ಕಷ್ಟಗಳು ಹೆಚ್ಚಾಗಬಹುದು.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 14
ಅದೃಷ್ಟದ ಸಮಯ: ಬೆಳಗ್ಗೆ 5:15 ರಿಂದ 10 ರವರೆಗೆ
ಸಿಂಹ ರಾಶಿ
ಮನೆಯ ವಾತಾವರಣ ಖುಷಿಯಾಗಿರಲಿದೆ. ಒಡಹುಟ್ಟಿದವರ ಜೊತೆ ಖುಷಿಯಾಗಿ ಸಮಯ ಕಳೆಯುತ್ತೀರಿ. ಹಣದ ವಿಷಯದಲ್ಲಿ ದಿನವು ಉತ್ತಮವಾಗಿರುತ್ತದೆ. ಆರೋಗ್ಯದಲ್ಲಿ ದೊಡ್ಡ ಸುಧಾರಣೆ ಕಂಡುಬರಲಿದೆ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 10
ಅದೃಷ್ಟದ ಸಮಯ: ಮಧ್ಯಾಹ್ನ 1 ರಿಂದ ಸಂಜೆ 6 ರವರೆಗೆ
ಕನ್ಯಾ ರಾಶಿ
ತಾಯಿ ಅಥವಾ ತಂದೆಯ ಆರೋಗ್ಯ ಕ್ಷೀಣಿಸಬಹುದು. ಅವರ ಚಿಕಿತ್ಸೆಗೆ ಹಣ ಹೊಂದಿಸಲು ಕಷ್ಟವಾಗಬಹುದು. ಹಣದ ಕೊರತೆಯಿಂದಾಗಿ, ನಿಮ್ಮ ಕೆಲವು ಕೆಲಸಗಳು ಮಧ್ಯದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಯಿದೆ. ಇಂದು ಯಾವುದೇ ಪ್ರಮುಖ ಕೆಲಸಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 32
ಅದೃಷ್ಟದ ಸಮಯ: ಸಂಜೆ 5:20 ರಿಂದ ರಾತ್ರಿ 8:20 ರವರೆಗೆ
ತುಲಾ ರಾಶಿ
ಕೆಲಸದ ಸ್ಥಳದಲ್ಲಿ ನೀವು ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು, ಆದರೆ ನಿಮ್ಮ ಧೈರ್ಯ ಮತ್ತು ತಿಳುವಳಿಕೆಯಿಂದ ನೀವು ಎಲ್ಲಾ ತೊಂದರೆಗಳನ್ನು ಸುಲಭವಾಗಿ ಜಯಿಸಲು ಸಾಧ್ಯವಾಗುತ್ತದೆ. ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿದೆ. ನಿಮ್ಮ ಆದಾಯ ಚೆನ್ನಾಗಿರುತ್ತದೆ, ಆರೋಗ್ಯ ಉತ್ತಮವಾಗಿರುತ್ತವೆ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 5
ಅದೃಷ್ಟದ ಸಮಯ: ಸಂಜೆ 4:30 ರಿಂದ 7:30 ರವರೆಗೆ
ವೃಶ್ಚಿಕ ರಾಶಿ
ನೀವು ಪಾಲುದಾರಿಕೆಯಲ್ಲಿ ಹೊಸ ಕೆಲಸವನ್ನು ಪ್ರಾರಂಭಿಸಲಿದ್ದರೆ, ನಿಮ್ಮ ದಾರಿಯಲ್ಲಿ ಅಡಚಣೆಯಿದ್ದರೆ ಈ ದಿನ ನಿಮ್ಮ ಸಮಸ್ಯೆ ಬಗೆಹರಿಯಲಿದೆ. ಉದ್ಯೋಗಸ್ಥರು ಶ್ರದ್ಧೆಯಿಂದ ಕೆಲಸ ಮಾಡಲು ಸೂಚಿಸಲಾಗಿದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.
ಅದೃಷ್ಟದ ಬಣ್ಣ: ಆಕಾಶ ನೀಲಿ
ಅದೃಷ್ಟದ ಸಂಖ್ಯೆ: 11
ಅದೃಷ್ಟದ ಸಮಯ: ಬೆಳಿಗ್ಗೆ 4:05 ರಿಂದ 8:55 ರವರೆಗೆ
ಧನು ರಾಶಿ
ಇಂದು ಮನೆಯ ಸದಸ್ಯರ ಜೊತೆಗೆ ಮನಸ್ತಾಪ ಉಂಟಾದರೆ ನಿಮ್ಮ ಕೋಪ ನಿಯಂತ್ರಿಸಿದರೆ ಒಳ್ಳೆಯದು. ಕಚೇರಿಯಲ್ಲಿ ನಿಮ್ಮ ಸಹೋದ್ಯೋಗಿಗಳಿಂದ ಹೆಚ್ಚು ನಿರೀಕ್ಷಿಸಬೇಡಿ, ಇಲ್ಲದಿದ್ದರೆ ನೀವು ನಿರಾಶೆ ಅನುಭವಿಸುವಿರಿ. ನಿಮ್ಮ ಪ್ರಮುಖ ಕಾರ್ಯಗಳನ್ನು ನೀವೇ ಪೂರ್ಣಗೊಳಿಸಲು ಪ್ರಯತ್ನಿಸಿ. ಪ್ರಣಯ ಜೀವನದಲ್ಲಿ ಏರುಪೇರಾಗಲಿದೆ. ನಿಮ್ಮ ಸಹಚರರು ನಿಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ನೀವು ಭಾವಿಸಬಹುದು.
ಅದೃಷ್ಟದ ಬಣ್ಣ: ಮರೂನ್
ಅದೃಷ್ಟದ ಸಂಖ್ಯೆ: 21
ಅದೃಷ್ಟದ ಸಮಯ: ಮಧ್ಯಾಹ್ನ 2 ರಿಂದ ಸಂಜೆ 5:30 ರವರೆಗೆ
ಮಕರ ರಾಶಿ
ಇಂದು ನಿಮ್ಮ ಕೆಲವು ರಹಸ್ಯಗಳು ಹೊರಬಂದು ಸಮಸ್ಯೆ ಉಂಟಾಗಬಹುದು, ಹಣದ ವಿಷಯದಲ್ಲಿ ಯಾವುದೇ ರೀತಿಯ ಆತುರ ಬೇಡ. ಇನ್ನು ಈ ದಿನ ಯಾರ ಬಳಿ ಸಾಲ ತೆಗೆದುಕೊಳ್ಳದಿದ್ದರೆ ಒಳ್ಳೆಯದು. ಚಿಕ್ಕ ವಿಷಯಗಳಿಗೆ ತುಂಬಾ ಕೋಪಗೊಳ್ಳಬೇಡಿ.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 7
ಅದೃಷ್ಟದ ಸಮಯ: ಸಂಜೆ 6 ರಿಂದ 9:05 ರವರೆಗೆ
ಕುಂಭ ರಾಶಿ
ನಿಮ್ಮ ಮಕ್ಕಳ ಬಗ್ಗೆ ನೀವು ಹೆಚ್ಚು ಗಮನ ಹರಿಸಬೇಕು. ಕೆಲಸದ ಸ್ಥಳದಲ್ಲಿ ನಿಮಗೆ ಯಾವುದೇ ಪ್ರಮುಖ ಜವಾಬ್ದಾರಿಯನ್ನು ನೀಡಿದ್ದರೆ, ನಿಮ್ಮ ಕೆಲಸದ ಮೇಲೆ ಸಂಪೂರ್ಣ ಗಮನಹರಿಸಿ. ವೈವಾಹಿಕ ಜೀವನದ ಸಮಸ್ಯೆಗಳು ಕೊನೆಗೊಳ್ಳುತ್ತವೆ. ನಿಮ್ಮ ಸಂಬಂಧದಲ್ಲಿ ಸುಧಾರಣೆ ಕಂಡು ಬರಲಿದೆ.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 20
ಅದೃಷ್ಟದ ಸಮಯ: ಬೆಳಿಗ್ಗೆ 6:15 ರಿಂದ 8:20 ರವರೆಗೆ
ಮೀನ ರಾಶಿ
ನೀವು ಅವಿವಾಹಿತರಾಗಿದ್ದರೆ ನಿಮಗೆ ಮದುವೆಯ ಪ್ರಸ್ತಾಪ ಬರಬಹುದು. ನಿಮ್ಮ ಅಪೇಕ್ಷಿತ ಜೀವನ ಸಂಗಾತಿಯನ್ನು ಪಡೆಯುವ ಬಲವಾದ ಸಾಧ್ಯತೆಯಿದೆ. ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಇಂದು ನೀವು ಹಣಕ್ಕೆ ಸಂಬಂಧಿಸಿದ ಕೆಲವು ದೊಡ್ಡ ಕೆಲಸಗಳನ್ನು ಮಾಡಬಹುದು. ಕೆಲಸದ ವಿಷಯದಲ್ಲಿ ಇಂದು ನಿಮಗೆ ಸರಾಸರಿ ದಿನವಾಗಲಿದೆ. ಆರೋಗ್ಯ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 8
ಅದೃಷ್ಟದ ಸಮಯ: ಮಧ್ಯಾಹ್ನ 2 ರಿಂದ ಸಂಜೆ 7:30 ರವರೆಗೆ



Click it and Unblock the Notifications
