Latest Updates
-
ಎಷ್ಟೇ ಹಠಮಾರಿ ಕಲೆಗಳಿದ್ದರೂ ಚಿಟಿಕೆಯಲ್ಲಿ ಮಾಯ! ಇಲ್ಲಿದೆ ಹಣ ಉಳಿಸುವ ಸಿಂಪಲ್ ಉಪಾಯ -
ಊಟ, ಮುದ್ದೆ ಸವಿಯೋಕೆ ಈ ರೀತಿ ಮಟನ್ ಸಾಂಬಾರ್ ಮಾಡಿ! -
10 ನಿಮಿಷದ ಸ್ನ್ಯಾಕ್ಸ್ ರೆಸಿಪಿ.. 1 ಕಪ್ ರವೆ, 1 ಬಾಳೆಹಣ್ಣು ಇದ್ದರೆ ಸಾಕು! 2 ದಿನ ಇಟ್ಟು ತಿನ್ನಬಹುದು -
ಈ 4 ಬಗೆಯ ಜನರಿಗೆ ಎಂದಿಗೂ ಸಹಾಯ ಮಾಡಬೇಡಿ! ನಿಮ್ಮ ಒಳ್ಳೆಯತನವೇ ಮುಳುವಾಗುತ್ತೆ -
ನಿಶಕ್ತಿ, ಬಲಹೀನತೆ ಇದ್ರೆ ವಾರದಲ್ಲಿ ಈ 2 ಮುದ್ದೆ ತಿನ್ನಿ ಸಾಕು -
ಹೆಸರುಬೇಳೆ ಬಳಸಿ ಪಕೋಡ ಮಾಡಿ ಸವಿಯಿರಿ! ಇಲ್ಲಿವೆ ಶೆಫ್ ಸ್ಟೈಲ್ನ ಈ 2 ಸಿಂಪಲ್ ವಿಧಾನಗಳು -
ಮೀನ ರಾಶಿಯಲ್ಲಿ ಶುಕ್ರ-ಚಂದ್ರನ ಸಮ್ಮಿಲನ; ಅಪರೂಪದ ಕಲಾತ್ಮಕ ಯೋಗ ಸೃಷ್ಟಿ! -
ಬೇಕರಿ ರುಚಿಯ ಆಪಲ್ ಕೇಕ್ ಥಟ್ ಅಂತ ಮನೆಯಲ್ಲಿ ಮಾಡಿ! ಇಲ್ಲಿದೆ ಸುಲಭದ ವಿಧಾನ -
Holi 2026: ಹೋಳಿಯಂದು ನಿಮ್ಮ ರಾಶಿಗೆ ಪ್ರಕಾರ ಈ ಉಪಾಯ ಮಾಡಿ! ಸಕಲ ಸಮಸ್ಯೆ- ಸಂಕಷ್ಟಗಳಿಂದ ಮುಕ್ತಿ ಸಿಗುತ್ತೆ -
ಈ ಟ್ರಿಕ್ ಬಳಸಿ ಮಾಡಿ ಗರಿಗರಿ ಆಲೂ ಚಿಪ್ಸ್! ಬಿಳಿಯಾಗಿ ಬರಲು.. ವರ್ಷವಿಡೀ ಕೆಡದಂತೆ ಇಡೋದು ಹೇಗೆ?
ಸೆಪ್ಟೆಂಬರ್ 15 ದಿನ ಭವಿಷ್ಯ: ಮೇಷ ರಾಶಿಯವರಿಗೆ ಶುಭ, ಉಳಿದ ರಾಶಿಗಳ ರಾಶಿಫಲ ಹೇಗಿದೆ?
ವೈದಿಕ ಶಾಸ್ತ್ರದ ಪ್ರಕಾರ ಸೆಪ್ಟೆಂಬರ್ 15ರ ರಾಶಿಫಲ ನೀಡಿದ್ದು ಈ ದಿನ 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ದಿನಾಂಕ:ಸೆಪ್ಟೆಂಬರ್ 15
ತಿಥಿ: ಅಮವಾಸ್ಯೆ
ನಕ್ಷತ್ರ: ಉತ್ತರ ಫಲ್ಗುಣಿ
ಪಕ್ಷ: ಕೃಷ್ಣಪಕ್ಷ
ರಾಹುಕಾಲ: ಬೆಳಗ್ಗೆ 10:45ರಿಂದ 12:16ರವರೆಗೆ

ಮೇಷ ರಾಶಿ
ನಿಮ್ಮ ಪೂರ್ವಜರ ವ್ಯವಹಾರದೊಂದಿಗೆ ನೀವು ಸಂಬಂಧ ಹೊಂದಿದ್ದರೆ, ಇಂದು ನೀವು ಕುಟುಂಬದ ಅನುಭವಿ ಸದಸ್ಯರಿಂದ ಕೆಲವು ಪ್ರಮುಖ ಸಲಹೆಗಳನ್ನು ಪಡೆಯಬಹುದು. ಭವಿಷ್ಯದಲ್ಲಿ ಇದು ನಿಮಗೆ ತುಂಬಾ ಪ್ರಯೋಜನಕ್ಕೆ ಬರಲಿದೆ. ವಿದೇಶಕ್ಕೆ ಹೋಗಿ ಉದ್ಯೋಗ ಪಡೆಯುವ ಕನಸು ಕಾಣುತ್ತಿರುವವರಿಗೆ ಈ ದಿನ ಒಳ್ಳೆಯ ಸುದ್ದಿ ಸಿಗಲಿದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಸಾಮರಸ್ಯ ಇರಲಿದೆ.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 6
ಅದೃಷ್ಟದ ಮುಹೂರ್ತ: ಮಧ್ಯಾಹ್ನ 12:30 ರಿಂದ 3 ರವರೆಗೆ
ವೃಷಭ ರಾಶಿ
ಇಂದು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿರಬಹುದು. ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವಿಸಿ. ಇಂದು ನೀವು ಆತ್ಮವಿಶ್ವಾಸದ ಕೊರತೆಯನ್ನು ಕಾಣಬಹುದು. ಈ ದಿನ ಪ್ರಮುಖ ನಿರ್ಧಾರ ತೆಗೆದುಕೋಲ್ಳಲು ಕಷ್ಟವಾಗುವುದು, ಹಣಕಾಸಿನ ವಿಷಯದಲ್ಲಿ ಮಿಶ್ರಫಲ. ವೈವಾಹಿಕ ಜೀವನ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 18
ಅದೃಷ್ಟದ ಸಮಯ: ಸಂಜೆ 5:15 ರಿಂದ 8:15 ರವರೆಗೆ
ಮಿಥುನ ರಾಶಿ
ನಿಮ್ಮ ಮನಸ್ಸು ಯಾವುದೋ ಒಂದು ವಿಷಯದ ಬಗ್ಗೆ ಚಿಂತಿಸುತ್ತಿದ್ದರೆ ಇಂದು ನಿಮಗೆ ಅನಾನುಕೂಲವಾಗುತ್ತದೆ. ಬಡತನದಲ್ಲಿರುವ ಯಾರೊಂದಿಗಾದರೂ ನಿಮ್ಮ ಭಾವನೆಗಳನ್ನು ಹಂಚಿಕೊಂಡರೆ ಉತ್ತಮ. ಕುಟುಂಬ ಜೀವನದಲ್ಲಿ ಶಾಂತಿ, ಸಂತೋಷ ಸಿಗಲಿದೆ. ಆರ್ಥಿಕ ದೃಷ್ಟಿಯಿಂದ ಈ ದಿನ ಉತ್ತಮವಾಗಿದೆ.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 21
ಅದೃಷ್ಟದ ಸಮಯ: ಬೆಳಿಗ್ಗೆ 6:20 ರಿಂದ 8:50 ರವರೆಗೆ
ಕರ್ಕ ರಾಶಿ
ಇಂದು ನೀವು ಕೆಲಸದಲ್ಲಿ ಹೊಸ ಅವಕಾಶಗಳನ್ನು ಪಡೆಯುತ್ತೀರಿ. ನಿಮ್ಮ ಕಠಿಣ ಪರಿಶ್ರಮ ಯಶಸ್ವಿಯಾಗುತ್ತದೆ. ನೀವು ಉದ್ಯಮಿಯಾಗಿದ್ದರೆ ಈ ದಿನ ವಿಶೇಷವಾಗಿರಲಿದೆ. ಪ್ರಣಯ ಜೀವನದಲ್ಲಿ ಹೊಸ ತಿರುವು ಬರಬಹುದು. ನೀವು ಮದುವೆಯಾಗಲು ಬಯಸಿದರೆ ನಿಮ್ಮ ಕುಟುಂಬದ ಒಪ್ಪಿಗೆಯನ್ನು ನೀವು ಪಡೆಯಬಹುದು. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುತ್ತದೆ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 4
ಅದೃಷ್ಟದ ಸಮಯ: ಮಧ್ಯಾಹ್ನ 2 ರಿಂದ ಸಂಜೆ 4 ರವರೆಗೆ
ಸಿಂಹ ರಾಶಿ
ಕೆಲಸದಲ್ಲಿ ಏರಳಿತಗಳು ಇರಲಿದೆ.. ಯಾವುದೇ ಪ್ರಯತ್ನಗಳ ಹೊರತಾಗಿಯೂ ನೀವು ಯಶಸ್ವಿಯಾಗದಿದ್ದರೆ, ನೀವು ತಾಳ್ಮೆಯಿಂದಿರಬೇಕು. ಹಣದ ವಿಷಯದಲ್ಲಿ ಇಂದು ನಿಮಗೆ ದುಬಾರಿ ದಿನವಾಗಿರುತ್ತದೆ. ಮನೆಯ ಖರ್ಚು ಹೆಚ್ಚಾಗಬಹುದು. ಮನೆಯ ವಾತಾವರಣ ಅಷ್ಟು ಚೆನ್ನಾಗಿರಲ್ಲ.
ಅದೃಷ್ಟದ ಬಣ್ಣ: ಕೆನೆ
ಅದೃಷ್ಟದ ಸಂಖ್ಯೆ: 19
ಅದೃಷ್ಟ ಸಮಯ: ಸಂಜೆ 6:30 ರಿಂದ 8:30 ರವರೆಗೆ
ಕನ್ಯಾ ರಾಶಿ
ಉದ್ಯೋಗಿಗಳಿಗೆ ಈ ದಿನ ಶುಭವಾಗಿದೆ, ಈ ದಿನ ನಿಮ್ಮ ಆದಾಯ ಹೆಚ್ಚಾಗಬಹುದು. ನೀವು ಚಿಲ್ಲರೆ ವ್ಯಾಪಾರಿಯಾಗಿದ್ದರೆ ಇಂದು ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ಕುಟುಂಬದ ಜೊತೆ ಖುಷಿಯಿಂದ ಕಳೆಯುತ್ತೀರಿ. ಈ ದಿನ ನಿಮಗೆ ಉಡುಗೊರೆ ಕೂಡ ಸಿಗಬಹುದು.
ಅದೃಷ್ಟದ ಬಣ್ಣ: ಆಕಾಶ ನೀಲಿ
ಅದೃಷ್ಟದ ಸಂಖ್ಯೆ: 24
ಅದೃಷ್ಟದ ಸಮಯ: ಬೆಳಗ್ಗೆ 5 ರಿಂದ 9 ರವರೆಗೆ
ತುಲಾ ರಾಶಿ
ಇಲ್ಲದ್ದರ ಬಗ್ಗೆ ಚಿಂತಿಸುವ ಬದಲು ನಿಮ್ಮ ಕಾರ್ಯಗಳತ್ತ ಗಮನ ನೀಡಿ. ನೀವು ಧನಾತ್ಮಕವಾಗಿರುತ್ತೀರಿ, ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು, ನಿಮ್ಮ ಖರ್ಚುಗಳನ್ನು ಕಡಿತಗೊಳಿಸಬೇಕಾಗುತ್ತದೆ. ಪ್ರೀತಿಯ ವಿಷಯಗಳಲ್ಲಿ ದಿನವು ವಿಶೇಷವಾಗಿರುತ್ತದೆ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 6
ಅದೃಷ್ಟದ ಸಮಯ: ಮಧ್ಯಾಹ್ನ 2 ರಿಂದ ಸಂಜೆ 5:30 ರವರೆಗೆ
ವೃಶ್ಚಿಕ ರಾಶಿ
ವೈವಾಹಿಕ ಜೀವನಕ್ಕೆ ಹೆಚ್ಚಿನ ಗಮನ ನೀಡುವ ಅಗತ್ಯವಿದೆ. ಹಣದ ವಿಷಯದಲ್ಲಿ ಇಂದು ಒಳ್ಳೆಯ ದಿನವಲ್ಲ. ಆರ್ಥಿಕ ನಷ್ಟ ಉಂಟಾಗಬಹುದು ಆದ್ದರಿಂದ ಜಾಗ್ರತೆ. ಕಛೇರಿಯಲ್ಲಿ ನಿಮ್ಮ ಎಲ್ಲಾ ಕೆಲಸಗಳು ಸಮಯಕ್ಕೆ ಪೂರ್ಣಗೊಳ್ಳುತ್ತವೆ. ಹವಾಮಾನ ಬದಲಾವಣೆಯಿಂದ ಇಂದು ಆರೋಗ್ಯ ಸ್ವಲ್ಪ ದುರ್ಬಲವಾಗಿರುತ್ತದೆ.
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ: 10
ಅದೃಷ್ಟದ ಸಮಯ: ಬೆಳಿಗ್ಗೆ 7:30 ರಿಂದ 10 ರವರೆಗೆ
ಧನು ರಾಶಿ
ಪ್ರೇಮಿಗಳ ನಡುವೆ ಭಿನ್ನಾಭಿಪ್ರಾಯವಿರಬಹುದು. ಹಣಕಾಸಿನ ದೃಷ್ಟಿಯಿಂದ ಇಂದು ನಿಮಗೆ ಸರಾಸರಿ ದಿನವಾಗಲಿದೆ. ಕಚೇರಿಯಲ್ಲಿ ನಿಮ್ಮ ಸಹೋದ್ಯೋಗಿಗಳನ್ನು ಟೀಕಿಸುವುದನ್ನು ಅಥವಾ ಅವರ ಕೆಲಸದಲ್ಲಿ ತಪ್ಪುಗಳನ್ನು ಕಂಡುಹಿಡಿಯುವುದನ್ನು ಮಾಡಲು ಹೋಗಬೇಡಿ, ಇಲ್ಲದಿದ್ದರೆ ನಿಮ್ಮ ಈ ಅಭ್ಯಾಸವು ಇಂದು ನಿಮಗೆ ದುಬಾರಿಯಾಗಬಹುದು.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 8
ಅದೃಷ್ಟದ ಸಮಯ: ಸಂಜೆ 6 ರಿಂದ ರಾತ್ರಿ 9 ರವರೆಗೆ
ಮಕರ ರಾಶಿ
ನಿಮ್ಮ ಪ್ರಮುಖ ನಿರ್ಧಾರಗಳಲ್ಲಿ ನಿಮ್ಮ ಸಂಗಾತಿಯ ಅಭಿಪ್ರಾಯವನ್ನು ತೆಗೆದುಕೊಳ್ಳಿ. ಕಚೇರಿಯಲ್ಲಿ ತುಂಬಾ ಜಾಗ್ರತೆಯಿಂದ ಕೆಲಸ ಮಾಡಿ. ಇಂದು ಕಚೇರಿಯಲ್ಲಿ ನಿಮ್ಮ ಸಣ್ಣ ತಪ್ಪು ನಿಮ್ಮ ಉನ್ನತ ಅಧಿಕಾರಿಗಳ ಮನಸ್ಥಿತಿಯನ್ನು ಹಾಳು ಮಾಡುತ್ತದೆ. ಇದರಿಂದ ನಿಮಗೆ ನೀಡಿದ ಕೆಲವು ಜವಾಬ್ದಾರಿಗಳನ್ನು ನಿಮ್ಮಿಂದ ಹಿಂತೆಗೆದುಕೊಳ್ಳುವ ಸಾಧ್ಯತೆಯಿದೆ. ಹಣದ ವಿಷಯದಲ್ಲಿ ಇಂದು ನಿಮಗೆ ಒಳ್ಳೆಯ ದಿನವಾಗಿರುತ್ತದೆ.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟ ಸಂಖ್ಯೆ: 25
ಅದೃಷ್ಟದ ಸಮಯ: ಮಧ್ಯಾಹ್ನ 3:30 ರಿಂದ ಸಂಜೆ 7 ರವರೆಗೆ
ಕುಂಭ ರಾಶಿ
ಮಕ್ಕಳ ಕಡೆಯಿಂದ ಸಂತಸ ಸಿಗಲಿದೆ, ಅವರ ಸಾಧನೆ ಕಂಡು ಹೆಮ್ಮೆ ಪಡುತ್ತೀರ.ಕಚೇರಿಯ ವಾತಾವರಣವು ಸಕಾರಾತ್ಮಕವಾಗಿರುತ್ತದೆ. ನಿಮ್ಮ ಕೆಲಸವನ್ನು ನೀವು ಪೂರ್ಣ ಉತ್ಸಾಹದಿಂದ ಮಾಡಿ. ವ್ಯಾಪಾರದಲ್ಲಿ ತೊಡಗಿರುವವರು ಜನರು ಇಂದು ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಿ. ನಿಮ್ಮ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 14
ಅದೃಷ್ಟದ ಸಮಯ: ಬೆಳಗ್ಗೆ 6:05 ರಿಂದ 9:20 ರವರೆಗೆ
ಮೀನ ರಾಶಿ
ನಿಮ್ಮ ಸಂಗಾತಿಯೊಂದಿಗೆ ಮನಸ್ತಾಪವಿದ್ದರೆ, ಇಂದು ನಿಮ್ಮ ನಡುವೆ ಎಲ್ಲವೂ ಸಾಮಾನ್ಯವಾಗಬಹುದು. ಹಣಕಾಸಿನ ವಿಷಯಗಳಲ್ಲಿ ಯಾವುದೇ ರೀತಿಯಲ್ಲಿ ಆತುರಪಡಬೇಡಿ, ಇಲ್ಲದಿದ್ದರೆ ನೀವು ಇಂದು ದೊಡ್ಡ ನಷ್ಟವನ್ನು ಅನುಭವಿಸಬಹುದು. ನೀವು ಕಚೇರಿಯಲ್ಲಿ ಅತಿಯಾದ ಆತ್ಮವಿಶ್ವಾಸವನ್ನು ತಪ್ಪಿಸಬೇಕಾಗುತ್ತದೆ. ನೀವು ತಪ್ಪು ಮಾಡಿದರೆ, ನಿಮ್ಮ ತಪ್ಪನ್ನು ಒಪ್ಪಿ ತಿದ್ದಿಕೊಳ್ಳಿ.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 12
ಅದೃಷ್ಟದ ಸಮಯ: ಸಂಜೆ 4 ರಿಂದ ರಾತ್ರಿ 8 ರವರೆಗೆ



Click it and Unblock the Notifications











