Horoscope Today 8 April 2023: ಶನಿವಾರ : ಈ ದಿನ 12 ರಾಶಿಗಳ ರಾಶಿಫಲ ಹೇಗಿದೆ?

ಶುಭೋದಯ..... ವೈದಿಕ ಶಾಸ್ತ್ರದ ಪ್ರಕಾರ ಏಪ್ರಿಲ್‌ 8ರ ರಾಶಿಫಲ ನೋಡೋಣ:
ಸಂವತ್ಸರ: ಶುಭಕೃತ್
ಆಯನ: ಉತ್ತರಾಯಣ
ಋತು: ವಸಂತ
ಮಾಸ: ವೈಶಾಖ
ಪಕ್ಷ: ಕೃಷ್ಣಪಕ್ಷ
ತಿಥಿ: ಬೆಳಗ್ಗೆ 10:10ರವರೆಗೆ ದ್ವಿತೀಯಾ ನಂತರ ತೃತೀಯಾ
ನಕ್ಷತ್ರ: ಮಧ್ಯಾಹ್ನ01:59 ರವರೆಗೆ ಸ್ವಾತಿ ನಂತರ ವೈಶಾಖ
ರಾಹುಕಾಲ: ಬೆಳಗ್ಗೆ 0:17ರಿಂದ 10:49ರವರೆಗೆ

Dina Bhavishya -April 8 2023 Today Rashi Bhavishya, Daily Horoscope in Kannada

ಮೇಷ ರಾಶಿ
ಈ ದಿನ ಕುಟುಂಬ ಜೀವನದಲ್ಲಿ ಸ್ವಲ್ಪ ಒತ್ತಡ ಇರಲಿದೆ. ತಾಳ್ಮೆಯಿಂದ ನಿಭಾಯಿಸಿ ಇಲ್ಲದಿದ್ದರೆ ಸಂಬಂಧದಲ್ಲಿ ಬಿರುಕು ಉಂಟಾಗಬಹುದು. ಹಣದ ವಿಷಯದಲ್ಲಿ ಈ ದಿನ ನಿಮಗೆ ಉತ್ತಮವಾಗಿದೆ. ಈ ದಿನ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಇಂದು ನೀವು ಅಪೂರ್ಣ ಕಾರ್ಯಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತೀರಿ. ಇಂದು ನೀವು ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಆರೋಗ್ಯ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಮರೂನ್
ಅದೃಷ್ಟ ಸಂಖ್ಯೆ: 31
ಅದೃಷ್ಟದ ಸಮಯ: ಬೆಳಗ್ಗೆ 10:30 ರಿಂದ ಸಂಜೆ 4:50 ರವರೆಗೆ

ವೃಷಭ ರಾಶಿ
ಈ ದಿನ ವಿಶ್ರಾಂತಿ ಕಡೆಗೆ ಕುಟುಂಬದವರ ಜೊತೆ ಸಮಯ ಕಳೆಯುವುದರ ಕಡೆಗೆ ಹೆಚ್ಚಿನ ಗಮನ ಕೊಡುತ್ತೀರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ನೀವು ಇಂದು ಯಾವುದೇ ಬೆಲೆಬಾಳುವ ಐಷಾರಾಮಿ ವಸ್ತುಗಳನ್ನು ಖರೀದಿಸಬಹುದು. ಕೆಲಸದ ಸ್ಥಳದಲ್ಲಿ ಉನ್ನತ ಅಧಿಕಾರಿಗಳ ಬೆಂಬಲ ಸಿಗಲಿದೆ. ವ್ಯಾಪಾರಸ್ಥರು ಉತ್ತಮ ಆರ್ಥಿಕ ಲಾಭವನ್ನು ಪಡೆಯಬಹುದು. ಹೊಸ ವ್ಯವಹಾರದ ಬಗ್ಗೆ ಚಿಂತೆ ಮಾಡುವುದಕ್ಕೆ ಸಮಯ ಯೋಗ್ಯವಾಗಿದೆ.
ಅದೃಷ್ಟದ ಬಣ್ಣ: ಗಾಢ ನೀಲಿ
ಅದೃಷ್ಟದ ಸಂಖ್ಯೆ: 10
ಅದೃಷ್ಟದ ಸಮಯ: ಸಂಜೆ 4:30 ರಿಂದ ರಾತ್ರಿ 9:05 ರವರೆಗೆ

ಮಿಥುನ ರಾಶಿ
ಸರ್ಕಾರಿ ಉದ್ಯೋಗಿಗಳಿಗೆ ಈ ದಿನ ಚೆನ್ನಾಗಿರುಲಿದೆ. ನಿಮ್ಮ ಕೆಲಸಗಳು ಅಡೆತಡೆಯಿಲ್ಲದೆ ಪೂರ್ಣಗೊಳ್ಳಲಿದೆ. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಉತ್ತಮ ಹೊಂದಾಣಿಕೆ ಇರಲಿದೆ. ನಿಮ್ಮ ಆತ್ಮೀಯರಿಗೆ ನೀವು ವಿಶೇಷ ಉಡುಗೊರೆಯನ್ನು ಸಹ ಖರೀದಿಸಬಹುದು. ಆರೋಗ್ಯ ಸುಧಾರಿಸಲಿದೆ. ಒಟ್ಟಿನಲ್ಲಿ ಈ ದಿನ ಮಿಥುನ ರಾಶಿಯವರಿಗೆ ತುಂಬಾನೇ ಒಳ್ಳೆಯದಿದೆ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 21
ಅದೃಷ್ಟದ ಸಮಯ: ಬೆಳಗ್ಗೆ 8:30 ರಿಂದ ಮಧ್ಯಾಹ್ನ 3 ರವರೆಗೆ

ಕರ್ಕ ರಾಶಿ
ಈ ದಿನ ನೀವು ತುಂಬಾ ಜಾಗರೂಕರಾಗಿರಲು ಸಲಹೆ ನೀಡಲಾಗಿದೆ. ನಿಮ್ಮ ಕೆಲವು ರಹಸ್ಯಗಳನ್ನು ಬೇರೆಯವರ ಜೊತೆ ಹಂಚಿಕೊಳ್ಳಲು ಹೋಗಬೇಡಿ. ಹಣಕಾಸಿನ ಸ್ಥಿತಿ ಹದಗೆಡುವ ಸಾಧ್ಯತೆ ಇದೆ. ಇಂದು ಹಣದ ನಷ್ಟ ಉಂಟಾಗಬಹುದು. ಹಣಕ್ಕೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡಲು ಈ ದಿನವು ಸೂಕ್ತವಲ್ಲ. ಇಂದು ಕಚೇರಿಯಲ್ಲಿ ಕೆಲಸದ ಒತ್ತಡ ಹೆಚ್ಚಾಗಿರುತ್ತದೆ, ಆದರೆ ತುಂಬಾ ಒತ್ತಡ ತೆಗೆದುಕೊಳ್ಳುವ ಬದಲಿಗೆ ಸಮಧಾನದಿಂದ ಪರಿಸ್ಥಿತಿ ನಿಭಾಯಿಸಿ. ವ್ಯಾಪಾರಸ್ಥರಿಗೆ ದಿನವು ಸರಾಸರಿಯಾಗಲಿದೆ. ನಿಮ್ಮ ಆರೋಗ್ಯ ದುರ್ಬಲವಾಗಿರುತ್ತದೆ.
ಅದೃಷ್ಟ ಬಣ್ಣ: ನೇರಳೆ
ಅದೃಷ್ಟ ಸಂಖ್ಯೆ: 2
ಅದೃಷ್ಟದ ಸಮಯ: ಬೆಳಗ್ಗೆ 10 ರಿಂದ ಮಧ್ಯಾಹ್ನ 1:30 ರವರೆಗೆ

ಸಿಂಹ ರಾಶಿ
ಮಕ್ಕಳ ಕಡೆಯಿಂದ ಖುಷಿ ಹೆಚ್ಚಲಿದೆ. ಹಣದ ವಿಷಯದಲ್ಲಿ, ಯಾವುದೇ ರೀತಿಯ ಆತುರದಿಂದ ದೂರವಿರಲು ನಿಮಗೆ ಸಲಹೆ ನೀಡಲಾಗಿದೆ. ನಿಮ್ಮ ಆದಾಯ ಮತ್ತು ಖರ್ಚಿನ ನಡುವೆ ಸಮತೋಲನವನ್ನು ಮಾಕ್ಕೆ ಸಂಬಂಧಿಸಿದ ಪ್ರಮುಖ ಸಲಹೆ ನೀಡಬಹುದು. ವ್ಯಾಪಾರಸ್ಥರು ಇಂದು ಲಾಭ ಗಳಿಸಲು ಕಷ್ಟಪಡಬೇಕಾಗಬಹುದು.ಆರೋಗ್ಯದ ದೃಷ್ಟಿಯಿಂದ ದಿನವು ಉತ್ತಮವಾಗಿರುತ್ತದೆ.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 12
ಅದೃಷ್ಟದ ಸಮಯ: ಬೆಳಗ್ಗೆ 8 ರಿಂದ ಮಧ್ಯಾಹ್ನ 12:55 ರವರೆಗೆ

ಕನ್ಯಾ ರಾಶಿ
ಉದ್ಯೋಗಸ್ಥರಿಗೆ ಈ ದಿನ ಅನುಕೂಲಕರವಾಗಿರಲಿದೆ. ನೀವು ಉದ್ಯಮಿಯಾಗಿದ್ದರೆ ಮತ್ತು ಇತ್ತೀಚೆಗೆ ಕೆಲವು ಹೊಸ ಕೆಲಸವನ್ನು ಪ್ರಾರಂಭಿಸಿದ್ದರೆ, ಇಂದು ನಿಮಗೆ ಲಾಭದಾಯಕವಾಗಿರುತ್ತದೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಇರಲಿದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ,ಆದರೆ ನೋಡಿಕೊಂಡು ಖರ್ಚು ಮಾಡಿ ಇಲ್ಲದಿದ್ದರೆ ಹಣದ ತೊಂದರೆ ಉಂಟಾಗಬಹುದು. ನಿಮಗೆ ಸರ್ವಿಕಲ್ ಸ್ಪಾಂಡಿಲೈಟಿಸ್ ಸಮಸ್ಯೆ ಇದ್ದರೆ ಜಾಗರೂಕರಾಗಿರಿ.
ಅದೃಷ್ಟದ ಬಣ್ಣ: ಕೇಸರಿ
ಅದೃಷ್ಟದ ಸಂಖ್ಯೆ: 20
ಅದೃಷ್ಟದ ಸಮಯ: ಬೆಳಗ್ಗೆ 9:20 ರಿಂದ ಮಧ್ಯಾಹ್ನ 3 ರವರೆಗೆ

ತುಲಾ ರಾಶಿ
ಈ ದಿನ ನೀವು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಲೇಬೇಡಿ. ಕೆಲಸದಿಂದಾಗಿ ಮಾನಸಿಕ ಒತ್ತಡ ಹೆಚ್ಚಾಗಿದ್ದರೆ ಮಾನಸಿಕ ಒತ್ತಡ ಕಡಿಮೆ ಮಾಡಲು ಪ್ರಯತ್ನಿಸಿ. ದೊಡ್ಡ ಲಾಭ ಸಿಗುತ್ತೆ ಅಂತ ಸಣ್ಣ ಲಾಭಗಳನ್ನು ನಿರ್ಲಕ್ಷ್ಯ ಮಾಡದಂತೆ ಉದ್ಯಮಿಗಳಿಗೆ ಸಲಹೆ ನೀಡಲಾಗಿದೆ. ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಕುಟುಂಬದಲ್ಲಿ ಪರಿಸ್ಥಿತಿ ಅಷ್ಟು ಸರಿಯಿರಲ್ಲ ತಾಳ್ಮೆಯಿಂದ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿ.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 22
ಅದೃಷ್ಟದ ಸಮಯ: ಬೆಳಗ್ಗೆ 7 ರಿಂದ ಮಧ್ಯಾಹ್ನ 1:30 ರವರೆಗೆ

ವೃಶ್ಚಿಕ ರಾಶಿ
ವ್ಯಾಪಾರಸ್ಥರಿಗೆ ಇಂದು ಅತ್ಯಂತ ಶುಭ ದಿನ. ನೀವು ಈ ಹಿಂದೆ ಮಾಡಿದ ಹೂಡಿಕೆಯ ದುಪ್ಪಟ್ಟು ಲಾಭವನ್ನು ಪಡೆಯಬಹುದು. ಆದರೆ ಹಣದ ವಿಷಯದಲ್ಲಿ ಈ ದಿನ ಮಿಶ್ರಫಲ, ಆದಾಯ ಬರಲಿದೆ, ಖರ್ಚೂ ಇರಲಿದೆ. ವೈವಾಹಿಕ ಜೀವನದಲ್ಲಿ ಖುಷಿ ಇರಲಿದೆ. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ: 12
ಅದೃಷ್ಟ ದಸಮಯ: ಬೆಳಗ್ಗೆ 9:55 ರಿಂದ ಮಧ್ಯಾಹ್ನ 2:45 ರವರೆಗೆ

ಧನು ರಾಶಿ
ಇಂದು ನೀವು ಕುಟುಂಬದ ಜೊತೆಗೆ ಖುಷಿಯಿಂದ ಸಮಯ ಕಳೆಯುತ್ತೀರಿ. ದಿನದ ಎರಡನೇ ಭಾಗದಲ್ಲಿ, ನೀವು ಕೆಲವು ಶುಭ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಕಚೇರಿಯಲ್ಲಿ ಗಾಸಿಪ್‌ ಮಾಡಲು ಹೋಗಬೇಡಿ. ವ್ಯಾಪಾರಸ್ಥರು ಇಂದು ಯಾವುದೇ ದಾಖಲೆಗಳನ್ನು ಮಾಡುವಾಗ ಆತುರದಿಂದ ದೂರವಿರಬೇಕು. ನಿಮ್ಮ ಆರೋಗ್ಯದ ಬಗ್ಗೆ ಹೇಳುವುದಾದರೆ ಆಯಾಸ ಹೆಚ್ಚಿರಲಿದೆ.
ಅದೃಷ್ಟದ ಬಣ್ಣ: ಗಾಢ ಹಸಿರು
ಅದೃಷ್ಟದ ಸಂಖ್ಯೆ: 3
ಅದೃಷ್ಟದ ಸಮಯ: ಮಧ್ಯಾಹ್ನ 2 ರಿಂದ 4:30 ರವರೆಗೆ

ಮಕರ ರಾಶಿ
ನೀವು ಕುಟುಂಬದ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದು ಒಳ್ಳೆಯದು, ಇಲ್ಲದಿದ್ದರೆ ಮನೆಯ ನೆಮ್ಮದಿ ಹಾಳಾಗುವುದು. ಇಂದು ನೀವು ಕಚೇರಿಯಲ್ಲಿ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು. ಇಂದು ನೀವು ಕೆಲಸದಲ್ಲಿ ಹೊರತು ಪಡಿಸಿ ಇತರ ವಿಚಾರಗಳ ಕಡೆ ಗಮನ ನೀಡದಿರುವುದು ಒಳ್ಳೆಯದು.ಇಂದು ವ್ಯಾಪಾರಸ್ಥರಿಗೆ ಉತ್ತಮ ದಿನ. ಸ್ಥಗಿತಗೊಂಡ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಅನಗ್ಯತ ವಿಷಯಗಳ ಕಡೆಗೆ ಚಿಂತೆ ಬಿಡಿ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 24
ಅದೃಷ್ಟದ ಸಮಯ: ಸಂಜೆ 4 ರಿಂದ 6:20 ರವರೆಗೆ

ಕುಂಭ ರಾಶಿ
ಉದ್ಯೋಗಕ್ಕಾಗಿ ಅಲ್ಲಿ ಇಲ್ಲಿ ಅಲೆದಾಡುತ್ತಿದ್ದರೆ ಇಂದು ನಿಮಗೆ ಒಳ್ಳೆಯ ಅವಕಾಶ ಸಿಗಬಹುದು. ಉದ್ಯಮಿಗಳ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ನೀವು ದೊಡ್ಡ ಆರ್ಥಿಕ ಲಾಭವನ್ನು ಗಳಿಸುವ ಸಾಧ್ಯತೆಯಿದೆ. ಸಂಗಾತಿಯ ಭಾವನೆಗಳನ್ನು ನಿಯಂತ್ರಿಸಲು ಪ್ರಯತ್ನಿಸಿ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 12
ಅದೃಷ್ಟದ ಸಮಯ: ಮಧ್ಯಾಹ್ನ 1:30 ರಿಂದ ಸಂಜೆ 6 ರವರೆಗೆ

ಮೀನ ರಾಶಿ
ನಿಮ್ಮ ಆರೋಗ್ಯವು ಕೆಲವು ದಿನಗಳವರೆಗೆ ಉತ್ತಮವಾಗಿಲ್ಲದಿದ್ದರೆ, ಇಂದು ಸುಧಾರಣೆ ಕಂಡು ಬರುವುದು.ಈ ದಿನ ಕುಟುಂಬದ ಜೀವನ ಚೆನ್ನಾಗಿರಲಿದೆ. ಕೆಲಸಕ್ಕೆ ಸಂಬಂಧಿಸಿದ ಪ್ರಯತ್ನಗಳು ಯಶಸ್ವಿಯಾಗಬಹುದು. ನಿಮ್ಮ ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸದ ಬಲದಿಂದ ನೀವು ಉತ್ತಮ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ. ಇಂದು ಹಣದ ವಿಷಯದಲ್ಲಿ ಸ್ವಲ್ಪ ದುಬಾರಿಯಾಗಲಿದೆ. ಇದ್ದಕ್ಕಿದ್ದಂತೆ ದೊಡ್ಡ ಖರ್ಚು ಬರಬಹುದು.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 9
ಅದೃಷ್ಟದ ಸಮಯ: ಬೆಳಗ್ಗೆ 8 ರಿಂದ ಮಧ್ಯಾಹ್ನ 1 ರವರೆಗೆ

English summary

Dina Bhavishya -April 8 2023 Today Rashi Bhavishya, Daily Horoscope in Kannada

Dina Bhavishya- Get Today's Rashi Bhavishy 8 April 2023 In Kannada, Read daily horoscope prediction of aries, taurus, gemini, cancer, leo, virgo, libra, scorpio, Sagittarius, Capricorn, Aquarius, pisces in Kannada.
X
Desktop Bottom Promotion