Latest Updates
-
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್ -
ಅಕ್ಕಿ ಬೇಡ, ಉದ್ದಿನಬೇಳೆ ಬೇಡ.. 15 ನಿಮಿಷದ ಹೆಸರು ಬೇಳೆ-ತರಕಾರಿ ಇಡ್ಲಿ! ಉಳಿದ ಇಡ್ಲಿ ಫ್ರೆಶ್ ಆಗಿಡೋದು ಹೇಗೆ? -
ಗ್ಯಾಸ್ ಇಲ್ವಾ? ಚಿಂತೆ ಬೇಡ.. ಒಲೆ ಹಚ್ಚದೇ ಮಾಡುವ 5 ಆರೋಗ್ಯಕರ ಊಟಗಳಿವು! -
ಮಿಕ್ಸಿಯಲ್ಲೇ ಮಾಡಿ ಕಬ್ಬಿನ ಹಾಲು! ಕಬ್ಬು ಇಲ್ಲದೆಯೇ ಶುದ್ಧವಾದ ಹಾಲು ಮಾಡೋದು ಹೇಗೆ? ರಸ್ತೆ ಬದಿಗಿಂತ ರುಚಿ -
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ? -
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ
Horoscope Today 7 April 2023: ಶುಕ್ರವಾರ : ಮೇಷ ರಾಶಿಯವರಿಗೆ ಅದೃಷ್ಟದ ದಿನ, ಉಳಿದ ರಾಶಿಫಲ ಹೇಗಿದೆ?
ಶುಭೋದಯ..... ವೈದಿಕ ಶಾಸ್ತ್ರದ ಪ್ರಕಾರ ಏಪ್ರಿಲ್ 7ರ ರಾಶಿಫಲ ನೋಡೋಣ:
ಸಂವತ್ಸರ: ಶುಭಕೃತ್
ಆಯನ: ಉತ್ತರಾಯಣ
ಋತು: ವಸಂತ
ಮಾಸ: ವೈಶಾಖ
ಪಕ್ಷ: ಕೃಷ್ಣಪಕ್ಷ
ತಿಥಿ: ಪ್ರತಿಪಾದ
ನಕ್ಷತ್ರ: ಚೈತ್ರ 1:31ರವರೆಗೆ ನಂತರ ಸ್ವಾತಿ
ರಾಹುಕಾಲ: ಬೆಳಗ್ಗೆ 10:49ರಿಂದ ಮಧ್ಯಾಹ್ನ12:22ರವರೆಗೆ

ಮೇಷ ರಾಶಿ: ಈ ದಿನ ಸ್ನೇಹಿತರ ಜೊತೆ ಸಮಯ ಕಳೆಯಲು ಅವಕಾಶ ಸಿಗಲಿದೆ. ಉದ್ಯೋಗಿಗಳಿಗೆ ಈ ದಿನ ಅನುಕೂಲಕರ. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಇಂದು ಮನೆಯ ಸದಸ್ಯರಿಂದ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಹಣದ ವಿಷಯದಲ್ಲಿ ಇಂದು ನಿಮಗೆ ಉತ್ತಮವಾಗಿದೆ ಆರೋಗ್ಯದ ದೃಷ್ಟಿಯಿಂದ ದಿನವು ಅನುಕೂಲಕರವಾಗಿರುತ್ತದೆ. ಈ ದಿನ ಅದೃಷ್ಟದ ಬಣ್ಣ: ಕೆನೆ, ಅದೃಷ್ಟದ ಸಂಖ್ಯೆ: 9, ಅದೃಷ್ಟದ ಸಮಯ: ಸಂಜೆ 6 ರಿಂದ 8:14 ರವರೆಗೆ
ವೃಷಭ ರಾಶಿ: ನೀವು ಹೊಸ ಕೆಲಸವನ್ನು ಪ್ರಾರಂಭಿಸಲಿದ್ದರೆ ನಿಮ್ಮ ಪ್ರೀತಿಪಾತ್ರರರ ಬೆಂಬಲ ಸಿಗುವುದರಿಂದ ನಿಮ್ಮ ಆತ್ಮವಿಶ್ವಾಸವು ಹೆಚ್ಚಾಗುತ್ತದೆ. ಆರ್ಥಿಕ ಪರಿಸ್ಥಿತಿಯಲ್ಲಿ ಏರುಪೇರಾಗುವ ಲಕ್ಷಣಗಳಿವೆ.ಆರೋಗ್ಯದ ವಿಷಯದಲ್ಲಿ ಹೇಳುವುದಾದರೆ ಇಂದು ಮಿಶ್ರ ದಿನವಾಗಿರುತ್ತದೆ. ಈ ದಿನ ನಿಮಗೆ ಅದೃಷ್ಟದ ಬಣ್ಣ: ಕೆಂಪು, ಅದೃಷ್ಟದ ಸಂಖ್ಯೆ: 14, ಅದೃಷ್ಟದ ಸಮಯ: ಮಧ್ಯಾಹ್ನ 2:14 ರಿಂದ ರಾತ್ರಿ 8:10 ರವರೆಗೆ
ಮಿಥುನ ರಾಶಿ: ಪ್ರೇಮಿಗಳಿಗೆ ಈ ದಿನ ಒತ್ತಡದಿಂದ ಕೂಡಿರುತ್ತದೆ. ನಿಮ್ಮ ಭಾವನೆಗಳನ್ನು ನಿಯಂತ್ರಿಸಲು ನಿಮಗೆ ಸಲಹೆ ನೀಡಲಾಗುತ್ತದೆ. ಇಲ್ಲದಿದ್ದರೆ ನಿಮ್ಮ ಸಂಬಂಧದಲ್ಲಿ ಬಿರುಕು ಉಂಟಾಗಬಹುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಈ ದಿನ ಯಾವುದೇ ಹಣಕಾಸಿನವಹಿವಾಟು ಮಾಡಬೇಡಿ. ಉದ್ಯೋಗಸ್ಥರು ಕಚೇರಿಯಲ್ಲಿ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ದೈಹಿಕ ಆರೋಗ್ಯಕ್ಕಾಗಿ ಮಾನಸಿಕ ಆರೋಗ್ಯದ ಕಡೆ ಗಮನಹರಿಸಿ. ಅದೃಷ್ಟದ ಬಣ್ಣ: ಬಿಳಿ, ಅದೃಷ್ಟದ ಸಂಖ್ಯೆ: 31 ಅದೃಷ್ಟದ ಸಮಯ: ಮಧ್ಯಾಹ್ನ 1 ರಿಂದ ಮಧ್ಯಾಹ್ನ 3 ರವರೆಗೆ'
ಕರ್ಕ ರಾಶಿ: ಕರ್ಕ ರಾಶಿಯವರೇ ಈ ದಿನ ಪ್ರಮುಖ ಕಾರ್ಯಗಳನ್ನು ನೀವೇ ಪೂರ್ಣಗೊಳಿಸಲು ಪ್ರಯತ್ನಿಸಿ. ಹಣದ ವಿಷಯದಲ್ಲಿ ದಿನವು ದುಬಾರಿಯಾಗಲಿದೆ. ಮನೆಯ ಖರ್ಚು ಹೆಚ್ಚಾಗಬಹುದು. ಕುಟುಂಬ ಜೀವನದಲ್ಲಿ ಮಿಶ್ರಫಲ. ಆರೋಗ್ಯದ ಕಡೆ ಗಮನ ಕೊಡಿ. ಅದೃಷ್ಟದ ಬಣ್ಣ: ನೇರಳೆ, ಅದೃಷ್ಟದ ಸಂಖ್ಯೆ: 11, ಅದೃಷ್ಟದ ಸಮಯ: ಬೆಳಗ್ಗೆ 5:45 ರಿಂದ 10:25 ರವರೆಗೆ
ಸಿಂಹ ರಾಶಿ: ಇಂದು ನೀವು ಕೆಲಸದಲ್ಲಿ ತುಂಬಾ ಕಾರ್ಯನಿರತರಾಗಿರುತ್ತೀರಿ. ಇಂದು ನೀವು ದೀರ್ಘ ಪ್ರಯಾಣವನ್ನು ಸಹ ಮಾಡಬೇಕಾಗಬಹುದು. ಇಂದು ನಿಮ್ಮ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ನಿಮಗೆ ಅವಕಾಶ ಸಿಗದಿರಬಹುದು. ಸಂಗಾತಿಯೊಂದಿಗೆ ಪರಸ್ಪರ ಹೊಂದಾಣಿಕೆ ಉತ್ತಮವಾಗಿರುತ್ತದೆ. ಆರ್ಥಿಕ ಪರಿಸ್ಥಿತಿ ಹದಗೆಡುವ ಲಕ್ಷಣಗಳಿವೆ. ಆರೋಗ್ಯದ ಕಡೆ ಗಮನಹರಿಸಿ. ಅದೃಷ್ಟದ ಬಣ್ಣ: ಗಾಢ ಹಳದಿ, ಅದೃಷ್ಟದ ಸಂಖ್ಯೆ: 14, ಅದೃಷ್ಟದ ಸಮಯ: ಸಂಜೆ 4:05 ರಿಂದ ರಾತ್ರಿ 9 ರವರೆಗೆ
ಕನ್ಯಾ ರಾಶಿ: ವ್ಯಾಪಾರಸ್ಥರು ಕೆಲವು ಬದಲಾವಣೆ ಮಾಡಬೇಕು, ಇಲ್ಲದಿದ್ದರೆ ಭಾರೀ ನಷ್ಟವಾಗಬಹುದು. ನೀವು ಕೆಲಸ ಮಾಡುತ್ತಿದ್ದರೆ ಮತ್ತು ನಿಮ್ಮ ಪ್ರಸ್ತುತ ಕೆಲಸದಿಂದ ತೃಪ್ತರಾಗದಿದ್ದರೆ, ನೀವು ಹೊಸ ಉದ್ಯೋಗವನ್ನು ಹುಡುಕಲು ಪ್ರಾರಂಭಿಸಬೇಕು. ಹಣದ ವಿಷಯದಲ್ಲಿ ಇಂದು ನಿಮಗೆ ಉತ್ತಮವಾಗಿದೆ. ಮನೆಯ ವಾತಾವರಣ ಚೆನ್ನಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಇನ್ನಷ್ಟು ಬಲವಾಗಿರುತ್ತದೆ. ಆರೋಗ್ಯದ ದೃಷ್ಟಿಯಿಂದ ದಿನವು ಸರಾಸರಿಯಾಗಿರುತ್ತದೆ. ಅದೃಷ್ಟ ಬಣ್ಣ: ಹಳದಿ,ಅದೃಷ್ಟದ ಸಂಖ್ಯೆ: 29ಅದೃಷ್ಟದ ಸಮಯ: ಬೆಳಗ್ಗೆ 7 ರಿಂದ ಮಧ್ಯಾಹ್ನ 12:30 ರವರೆಗೆ
ತುಲಾ ರಾಶಿ: ನೀವು ಹಣದ ಬಗ್ಗೆ ಚಿಂತೆ ಮಾಡುತ್ತಿದ್ದರೆ, ಇಂದು ನಿಮ್ಮ ಸಮಸ್ಯೆ ಬಗೆಹರಿಯಲಿದೆ. ಉದ್ಯಮಿಗಳ ಎಲ್ಲಾ ಕೆಲಸಗಳು ಸುಗಮವಾಗಿ ಪೂರ್ಣಗೊಳ್ಳಲಿವೆ. ಇದಲ್ಲದೆ, ನೀವು ಕೆಲವು ಹೊಸ ಕೆಲಸವನ್ನು ಸಹ ಪಡೆಯಬಹುದು. ಉದ್ಯೋಗಿಗಳಿಗೆ ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಗಾಸಿಪ್ ಮಾಡದಂತೆ ಸಲಹೆ ನೀಡಲಾಗಿದೆ. ನೀವು ಮನೆಯ ಸದಸ್ಯರೊಂದಿಗೆ ವೈಮನಸ್ಸನ್ನು ಹೊಂದಿರಬಹುದು. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ, ಇಂದು ನೀವು ಆಯಾಸ, ನಿದ್ರಾಹೀನತೆ, ದೌರ್ಬಲ್ಯ ಮುಂತಾದ ಸಮಸ್ಯೆಗಳನ್ನು ಎದುರಿಸಬಹುದು. ಅದೃಷ್ಟದ ಬಣ್ಣ: ನೀಲಿ, ಅದೃಷ್ಟದ ಸಂಖ್ಯೆ: 10, ಅದೃಷ್ಟದ ಸಮಯ: ಬೆಳಗ್ಗೆ 10 ರಿಂದ ಮಧ್ಯಾಹ್ನ 1:20 ರವರೆಗೆ
ವೃಶ್ಚಿಕ ರಾಶಿ: ಕೆಲಸದ ವಿಷಯದಲ್ಲಿ ಇಂದು ಸಾಮಾನ್ಯವಾಗಿರುತ್ತದೆ. ನೀವು ವ್ಯಾಪಾರ ಮಾಡುತ್ತಿದ್ದರೆ, ದೊಡ್ಡ ಹೂಡಿಕೆಗಳನ್ನು ಮಾಡುವುದನ್ನು ತಪ್ಪಿಸಿ. ಉದ್ಯೋಗಸ್ಥರು ತಮ್ಮ ಕೆಲಸದ ಮೇಲೆ ಹೆಚ್ಚು ಗಮನ ಹರಿಸಬೇಕಾಗುತ್ತದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಶಾಂತ ಮನಸ್ಸಿನಿಂದ ಕೆಲಸ ಮಾಡಿ. ಕುಟುಂಬ ಜೀವನದಲ್ಲಿ ಪರಿಸ್ಥಿತಿ ಸರಿಯಿರಲ್ಲ. ಅದೃಷ್ಟದ ಬಣ್ಣ: ಕಂದು, ಅದೃಷ್ಟದ ಸಂಖ್ಯೆ: 19, ಅದೃಷ್ಟದ ಸಮಯ: ಮಧ್ಯಾಹ್ನ 1:30 ರಿಂದ ಸಂಜೆ 4 ರವರೆಗೆ
ಧನು ರಾಶಿ: ಇಂದು ನಿಮಗೆ ಬಹಳ ಮುಖ್ಯವಾಗಲಿದೆ. ಉದ್ಯೋಗಿಗಳು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ನೀವು ವಿದೇಶ ಪ್ರವಾಸದ ಕನಸು ಕಾಣುತ್ತಿದ್ದರೆ, ಶೀಘ್ರದಲ್ಲೇ ನಿಮ್ಮ ಆಸೆಯನ್ನು ಈಡೇರಿಸಬಹುದು. ಉದ್ಯಮಿಗಳು ಅಪಾರ ಆರ್ಥಿಕ ಲಾಭವನ್ನು ಪಡೆಯಬಹುದು. ವಿಶೇಷವಾಗಿ ನೀವು ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡಿದರೆ, ನಿಮ್ಮ ಕೆಲಸದಲ್ಲಿ ಹೆಚ್ಚಳ ಕಂಡುಬರುತ್ತದೆ. ಒಡಹುಟ್ಟಿದವರೊಂದಿಗೆ ಇಂದು ಉತ್ತಮ ದಿನವಾಗಿರುತ್ತದೆ. ಆರೋಗ್ಯವನ್ನು ನಿರ್ಲಕ್ಷಿಸಬೇಡಿ.
ಅದೃಷ್ಟದ ಬಣ್ಣ: ಆಕಾಶ ನೀಲಿ, ಅದೃಷ್ಟದ ಸಂಖ್ಯೆ: 38, ಅದೃಷ್ಟದ ಸಮಯ: ಬೆಳಗ್ಗೆ 7:55 ರಿಂದ 10:30 ರವರೆಗೆ
ಮಕರ ರಾಶಿ: ಮನೆಯ ಸದಸ್ಯರ ಆರೋಗ್ಯದಲ್ಲಿ ಹಠಾತ್ ಕ್ಷೀಣತೆ ಉಂಟಾಗಬಹುದು. ಇಂದು ನಿಮ್ಮ ಅನೇಕ ಕಾರ್ಯಗಳು ಇಂದು ಅಪೂರ್ಣವಾಗಿ ಉಳಿಯುವ ಸಾಧ್ಯತೆಯಿದೆ. ಸ್ನೇಹಿತರ ಬೆಂಬಲ ಸಿಗಲಿದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ, ಅತಿಯಾದ ಓಟದಿಂದಾಗಿ ನಿಮ್ಮ ಆರೋಗ್ಯವು ಕ್ಷೀಣಿಸಬಹುದು. ಅದೃಷ್ಟದ ಬಣ್ಣ: ಗಾಢ ಗುಲಾಬಿ, ಅದೃಷ್ಟದ ಸಂಖ್ಯೆ: 4, ಅದೃಷ್ಟದ ಸಮಯ: ಬೆಳಗ್ಗೆ 8 ರಿಂದ ಮಧ್ಯಾಹ್ನ 2:30 ರವರೆಗೆ
ಕುಂಭ ರಾಶಿ: ನೀವು ಹೊಸ ವಾಹನ, ಭೂಮಿ, ಮನೆ ಇತ್ಯಾದಿಗಳನ್ನು ಖರೀದಿಸಲು ಯೋಜಿಸುತ್ತಿದ್ದರೆ ಇಂದು ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಮನೆಯ ಹಿರಿಯರ ಆಶೀರ್ವಾದ ನಿಮಗೆ ಸಿಗಲಿದೆ. ಇಂದು ನೀವು ನಿಮ್ಮ ತಂದೆಯಿಂದ ನಿಮ್ಮ ನೆಚ್ಚಿನ ಉಡುಗೊರೆಯನ್ನು ಸಹ ಪಡೆಯಬಹುದು. ಉದ್ಯೋಗಸ್ಥರಿಗೆ ಕಚೇರಿಯಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಲು ಉತ್ತಮ ಅವಕಾಶ ದೊರೆಯಲಿದೆ. ನೀವು ಈ ಅವಕಾಶವನ್ನು ಬಳಸಿಕೊಳ್ಳುವುದು ಉತ್ತಮ. ವ್ಯಾಪಾರಸ್ಥರಿಗೆ ತಕ್ಕ ಲಾಭ ದೊರೆಯಲಿದೆ. ಹಣದ ವಿಚಾರದಲ್ಲಿ ಜಾಗರೂಕರಾಗಿರಬೇಕು. ಅದೃಷ್ಟದ ಬಣ್ಣ: ಕೆನೆ, ಅದೃಷ್ಟದ ಸಂಖ್ಯೆ: 5, ಅದೃಷ್ಟದ ಸಮಯ: ಮಧ್ಯಾಹ್ನ 1:30 ರಿಂದ ಸಂಜೆ 7 ರವರೆಗೆ
ಮೀನ ರಾಶಿ: ಉದ್ಯೋಗಸ್ಥರಿಗೆ ಇಂದು ಉತ್ತಮವಾಗಿರಲಿದೆ. ಕೆಲಸಕ್ಕೆ ಸಂಬಂಧಿಸಿದ ಯಾವುದೇ ದೊಡ್ಡ ಸಮಸ್ಯೆಯನ್ನು ಪರಿಹರಿಸಲಾಗುವುದು. ಉನ್ನತ ಅಧಿಕಾರಿಗಳ ಸಹಕಾರದಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ನೀವು ಸಣ್ಣ ಉದ್ಯಮಿಗಳಾಗಿದ್ದರೆ, ನೀವು ಸರ್ಕಾರದ ಯೋಜನೆಗಳಿಂದ ಉತ್ತಮ ಪ್ರಯೋಜನಗಳನ್ನು ಪಡೆಯಬಹುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಅದೃಷ್ಟದ ಬಣ್ಣ: ಕಿತ್ತಳೆ, ಅದೃಷ್ಟದ ಸಂಖ್ಯೆ: 20, ಅದೃಷ್ಟದ ಸಮಯ: ಬೆಳಗ್ಗೆ 8:40 ರಿಂದ ಮಧ್ಯಾಹ್ನ 12:30 ರವರೆಗೆ



Click it and Unblock the Notifications












