Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Horoscope Today 30 April 2023: ಭಾನುವಾರ: ಈ ದಿನ 12 ರಾಶಿಗಳ ರಾಶಿಫಲ ಹೇಗಿದೆ?
ಶುಭೋದಯ..... ವೈದಿಕ ಶಾಸ್ತ್ರದ ಪ್ರಕಾರ ಏಪ್ರಿಲ್ 30ರ ರಾಶಿಫಲ ನೋಡೋಣ:
ಸಂವತ್ಸರ: ಶುಭಕೃತ್
ಆಯನ: ಉತ್ತರಾಯಣ
ಋತು: ವಸಂತ
ಮಾಸ: ವೈಶಾಖ
ಪಕ್ಷ: ಶುಕ್ಲಪಕ್ಷ
ತಿಥಿ: ದಶಮಿ
ನಕ್ಷತ್ರ: ಮಧ್ಯಾಹ್ನ 03:30ರವರೆಗೆ ಮಘಾ ನಂತರ ಪೂರ್ವ ಫಲ್ಗುಣಿ
ರಾಹುಕಾಲ: ಸಂಜೆ 05:16ರಿಂದ 06:55ರವರೆಗೆ
ಮೇಷ ರಾಶಿ
ಈ ದಿನ ನಿಮಗೆ ತುಂಬಾನೇ ಮುಖ್ಯವಾಗಿದೆ, ಈ ದಿನ ಹೂಡಿಕೆ ಮಾಡಿದರೆ, ಅದರಿಂದ ನೀವು ಸರಿಯಾದ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಉದ್ಯೋಗಿಗಳು ತಮ್ಮ ಕೆಲಸದಿಂದ ಗಮನ ಸೆಳೆಯುತ್ತೀರಿ. ತಂದೆಗೆ ಆರೋಗ್ಯ ಸಮಸ್ಯೆಯಿದ್ದರೆ ಸುಧಾರಣೆ ಕಂಡು ಬರಲಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ಕುಸಿತದ ಸಾಧ್ಯತೆ ಇದೆ. ಇಂದು ಹಣದ ನಷ್ಟ ಉಂಟಾಗಬಹುದು, ಜಾಗ್ರತೆವಹಿಸಿ. ಆರೋಗ್ಯದ ದೃಷ್ಟಿಯಿಂದ ದಿನವು ಉತ್ತಮವಾಗಿರಲಿದೆ.
ಅದೃಷ್ಟದ ಬಣ್ಣ: ಮರೂನ್
ಅದೃಷ್ಟದ ಸಂಖ್ಯೆ: 7
ಅದೃಷ್ಟದ ಸಮಯ: ಮಧ್ಯಾಹ್ನ 1 ರಿಂದ ಮಧ್ಯಾಹ್ನ 3 ರವರೆಗೆ

ವೃಷಭ ರಾಶಿ
ಈ ದಿನ ನಿಮಗೆ ಅನುಕೂಲಕರವಾಗಿದೆ. ಕುಟುಂಬ ಜೀವನದಲ್ಲಿ ಸಂತೋಷ ಇರಲಿದೆ. ನೀವು ನಿಮ್ಮ ಅಧ್ಯಯನವನ್ನು ಪೂರ್ಣಗೊಳಿಸಿ ಉತ್ತಮ ಉದ್ಯೋಗವನ್ನು ಹುಡುಕುತ್ತಿದ್ದರೆ, ನಿಮ್ಮ ಹಳೆಯ ಸಂಪರ್ಕದ ಮೂಲಕ ಕೆಲಸ ಸಿಗುವ ಸಾಧ್ಯತೆ ಇದೆ. ಉದ್ಯಮಿಗಳು ಕೆಲವು ಪ್ರಮುಖ ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರಲಿದೆ. ಆರೋಗ್ಯ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ: 9
ಅದೃಷ್ಟದ ಸಮಯ: ಬೆಳಿಗ್ಗೆ 5 ರಿಂದ 10 ರವರೆಗೆ
ಮಿಥುನ ರಾಶಿ
ಮಕ್ಕಳ ಕಡೆಯಿಂದ ಸಂತೋಷ ಸಿಗಲಿದೆ. ಅವರು ನಿಮ್ಮನ್ನು ಸಂಪೂರ್ಣವಾಗಿ ಗೌರವಿಸುತ್ತಾರೆ ಅಲ್ಲದೆ ತಮ್ಮ ಜವಾಬ್ದಾರಿಗಳನ್ನು ಚೆನ್ನಾಗಿ ನಿರ್ವಹಿಸುತ್ತಾರೆ. ವ್ಯಾಪಾರಸ್ಥರಿಗೆ ಈ ದಿನ ತುಂಬಾ ಉತ್ತಮವಾಗಿರಲಿದೆ. ನಿಮ್ಮ ಯಾವುದೇ ನಿರ್ಧಾರದಿಂದ ನೀವು ಉತ್ತಮ ಫಲಿತಾಂಶವನ್ನು ಪಡೆಯಬಹುದು. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ಬಿಡುವಿಲ್ಲದ ಕೆಲಸದಿಂದ ಆಯಾಸ ಹೆಚ್ಚಾಗುವುದು.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 14
ಅದೃಷ್ಟದ ಸಮಯ: ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ
ಕರ್ಕ ರಾಶಿ
ಹಣದ ವಿಷಯದಲ್ಲಿ ಇಂದು ನಿಮಗೆ ತುಂಬಾ ಶುಭ ದಿನ. ಹಣದ ಸ್ಥಿತಿ ಚೆನ್ನಾಗಿರಲಿದೆ. ಇಂದು ನೀವು ಹಳೆಯ ಸಾಲವನ್ನು ಮರುಪಾವತಿ ಮಾಡುವಲ್ಲಿ ಯಶಸ್ವಿಯಾಗುತ್ತೀರಿ. ಒಂದು ಸಣ್ಣ ತಪ್ಪು ಇಂದು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಉದ್ಯಮಿಗಳು ಇದ್ದಕ್ಕಿದ್ದಂತೆ ಕೆಲಸದ ಕಾರಣಕ್ಕೆ ದೀರ್ಘ ಪ್ರಯಾಣ ಮಾಡಬೇಕಾಗುವುದು. ನೀವು ಸಂಗಾತಿಗೆ ಹೆಚ್ಚಿನ ಸಮಯ ನೀಡಲು ಪ್ರಯತ್ನಿಸುವುದರಿಂದ ನಿಮ್ಮಿಬ್ಬರ ನಡುವೆ ಸಮನ್ವಯ ಹೆಚ್ಚಾಗುವುದು. ಆರೋಗ್ಯದ ವಿಷಯದಲ್ಲಿ ಈ ದಿನ ಮಿಶ್ರ ಫಲ.
ಅದೃಷ್ಟದ ಬಣ್ಣ: ಕೆನೆ
ಅದೃಷ್ಟದ ಸಂಖ್ಯೆ: 4
ಅದೃಷ್ಟದ ಸಮಯ: ಸಂಜೆ 6:45 ರಿಂದ ರಾತ್ರಿ 8:40 ರವರೆಗೆ
ಸಿಂಹ ರಾಶಿ
ದುಡಿಯುವ ಜನರಿಗೆ ಇಂದು ಶುಭ ದಿನ. ಈ ದಿನ ಶ್ರಮಕ್ಕೆ ತಕ್ಕ ಫಲಿತಾಂಶ ಸಿಗುತ್ತದೆ. ಉದ್ಯಮಿಗಲು ಸವಾಲುಗಳು ಎದುರಾಗಬಹುದು. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಉದ್ವಿಗ್ನವಾಗಿರುತ್ತವೆ. ಹಣದ ವಿಷಯದಲ್ಲಿ ಇಂದು ನಿಮಗೆ ಒಳ್ಳೆಯ ದಿನವಾಗಿರುತ್ತದೆ. ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಆರೋಗ್ಯದ ಕಡೆ ಗಮನಹರಿಸಿ.
ಅದೃಷ್ಟದ ಬಣ್ಣ: ಆಕಾಶ ನೀಲಿ
ಅದೃಷ್ಟದ ಸಂಖ್ಯೆ: 22
ಅದೃಷ್ಟದ ಸಮಯ: 9:45 ರಿಂದ 12:20 ರವರೆಗೆ
ಕನ್ಯಾ ರಾಶಿ
ಮನೆಯ ಯಾವುದೇ ಸದಸ್ಯರ ಮದುವೆಯ ಮಾತುಗಳು ನಡೆಯುತ್ತಿದ್ದರೆ ಮದುವೆ ಸದ್ಯದಲ್ಲಿಯೇ ನೆರವೇರಲಿದೆ. ಕೆಲಸದ ವಿಷಯದಲ್ಲಿ ಬಿಡುವಿಲ್ಲದ ದಿನವಾಗಿರುತ್ತದೆ. ಕೆಲಸದ ನಿಮಿತ್ತ ಮನೆಯಿಂದ ದೂರ ಹೋಗಬೇಕಾಗಬಹುದು. ಹಣದ ವಿಷಯದಲ್ಲಿ ದಿನವು ದುಬಾರಿಯಾಗಲಿದೆ. ಹಣವನ್ನು ಖರ್ಚು ಮಾಡುವಾಗ, ನಿಮ್ಮ ಬಜೆಟ್‌ಗೆ ತಕ್ಕಂತೆ ಕೆಲಸ ಮಾಡುವುದು ಒಳ್ಳೆಯದು, ಆರೋಗ್ಯ ಅಷ್ಟು ಚೆನ್ನಾಗಿರಲ್ಲ.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 15
ಅದೃಷ್ಟದ ಸಮಯ: ಸಂಜೆ 7 ರಿಂದ 9:05 ರವರೆಗೆ
ತುಲಾ ರಾಶಿ
ವ್ಯಾಪಾರಸ್ಥರಿಗೆ ಇಂದು ಶುಭದಿನ. ಉದ್ಯೋಗಸ್ಥರಿಗೆ ಉತ್ತಮ ಅವಕಾಶ ಸಿಗಲಿದೆ. ನೀವು ಈ ಅವಕಾಶವನ್ನು ಬಳಸಿದರೆ, ಶೀಘ್ರದಲ್ಲೇ ನೀವು ದೊಡ್ಡ ಪ್ರಗತಿಯನ್ನು ಸಾಧಿಸಬಹುದು. ಹಣದ ವಿಷಯದಲ್ಲಿ, ದಿನವು ಉತ್ತಮವಾಗಿರುತ್ತದೆ. ಖರ್ಚುವೆಚ್ಚಗಳ ಪಟ್ಟಿ ಹೆಚ್ಚುತ್ತಿರುವಂತೆ ಕಾಣುವುದು. ಕುಟುಂಬ ಜೀವನದಲ್ಲಿ ಖುಷಿ ಇರಲಿದೆ. ಆರೋಗ್ಯವನ್ನು ನಿರ್ಲಕ್ಷಿಸಬೇಡಿ.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 26
ಅದೃಷ್ಟದ ಸಮಯ: ಬೆಳಿಗ್ಗೆ 7 ರಿಂದ 10:10 ರವರೆಗೆ
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಹಣದ ವಿಷಯದಲ್ಲಿ ದಿನವು ಉತ್ತಮವಾಗಿದೆ. ಆದರೆ ಹಣಕ್ಕೆ ಸಂಬಂಧಿಸಿದಂತೆ ನೀವು ಆತುರದಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳದಿದ್ದರೆ ಅದು ಉತ್ತಮವಾಗಿರುತ್ತದೆ. ನೀವು ಉದ್ಯೋಗವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ, ಬುದ್ಧಿವಂತಿಕೆಯಿಂದ ವರ್ತಿಸಲು ನಿಮಗೆ ಸಲಹೆ ನೀಡಲಾಗುತ್ತದೆ. ವ್ಯಾಪಾರಸ್ಥರಿಗೆ ಮಿಶ್ರ ಲಾಭ ದೊರೆಯಲಿದೆ. ಆರೋಗ್ಯದ ದೃಷ್ಟಿಯಿಂದ ದಿನವು ಉತ್ತಮವಾಗಿರಲಿದೆ.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 10
ಅದೃಷ್ಟದ ಸಮಯ: ಬೆಳಗ್ಗೆ 4:05 ರಿಂದ ಮಧ್ಯಾಹ್ನ 12
ಧನು ರಾಶಿ
ನೀವು ಉದ್ಯಮಿಯಾಗಿದ್ದರೆ ಮತ್ತು ಸ್ಥಗಿತಗೊಂಡಿರುವ ಯೋಜನೆಯಲ್ಲಿ ಕೆಲಸವನ್ನು ಪುನರಾರಂಭಿಸಲು ಬಯಸಿದರೆ, ಇಂದು ಕೆಲವು ಅಡೆತಡೆಗಳು ಉಂಟಾಗಬಹುದು. ಇದಲ್ಲದೆ, ಹಣದ ನಷ್ಟವೂ ಸಂಭವಿಸಬಹುದು. ಉದ್ಯೋಗಿಗಳಿಗೆ ತಮ್ಮ ಕೆಲಸ ಕಾರ್ಯಗಳಲ್ಲಿ ಮೇಲಾಧಿಕಾರಿಗಳ ಬೆಂಬಲ ದೊರೆಯಲಿದೆ. ನಿಮ್ಮ ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಮನೆಯ ವಾತಾವರಣ ತುಂಬಾ ಚೆನ್ನಾಗಿರಲಿದೆ. ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಆರೋಗ್ಯಕರ ದಿನಚರಿ ಪಾಲಿಸಿ.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 12
ಅದೃಷ್ಟದ ಸಮಯ: ಬೆಳಿಗ್ಗೆ 8 ರಿಂದ 11 ರವರೆಗೆ
ಮಕರ ರಾಶಿ
ಇಂದು ನೀವು ನಿಮ್ಮ ಕೈಯಲ್ಲಾದ ಸಹಾಯ ಮಾಡಿ. ಉದ್ಯೋಗಸ್ಥರಿಗೆ ಇಂದು ಮೇಲಧಿಕಾರಿಯ ಮಾರ್ಗದರ್ಶನ ದೊರೆಯಲಿದೆ. ಈ ದಿನ ಉದ್ಯಮಿಗಳು ನಿರೀಕ್ಷಿತ ಫಲಿತಾಂಶಗಳನ್ನು ಪಡೆಯುವ ಬಲವಾದ ಸಾಧ್ಯತೆಯಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ. ನೀವು ಹೊಸ ವಾಹನ ಇತ್ಯಾದಿಗಳನ್ನು ಖರೀದಿಸಲು ಯೋಜಿಸುತ್ತಿದ್ದರೆ ನಿಮ್ಮ ಆಸೆ ಈಡೇರಬಹುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಆರೋಗ್ಯದ ಚಿಂತೆ ಕಾಡಲಿದೆ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 21
ಅದೃಷ್ಟದ ಸಮಯ: ಸಂಜೆ 6:35 ರಿಂದ ರಾತ್ರಿ 8 ರವರೆಗೆ
ಕುಂಭ ರಾಶಿ
ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರು ಉತ್ತಮ ಪ್ರಯೋಜನಗಳನ್ನು ಪಡೆಯಬಹುದು. ನೀವು ಆನ್‌ಲೈನ್‌ನಲ್ಲಿ ವ್ಯಾಪಾರ ಮಾಡುತ್ತಿದ್ದರೆ ಇಂದು ನಿಮಗೆ ಲಾಭದಾಯಕವಾಗಿರಲಿದೆ. ಉದ್ಯೋಗಸ್ಥರಿಗೆ ಇಂದು ಅತ್ಯಂತ ಮಹತ್ವದ ದಿನವಾಗಲಿದೆ. ನೀವು ಇತ್ತೀಚೆಗೆ ದೊಡ್ಡ ಯೋಜನೆಯನ್ನು ಪೂರ್ಣಗೊಳಿಸಿದ್ದರೆ, ಇಂದು ನೀವು ಅದರಿಂದ ಉತ್ತಮ ಲಾಭ ಪಡೆಯಬಹುದು. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 32
ಅದೃಷ್ಟದ ಸಮಯ: ಮಧ್ಯಾಹ್ನ 2 ರಿಂದ ಸಂಜೆ 4 ರವರೆಗೆ
ಮೀನ ರಾಶಿ
ಇಂದು ನೀವು ನಿಮ್ಮ ಕುಟುಂಬ ಸದಸ್ಯರೊಂದಿಗೆ ಸಾಕಷ್ಟು ಸಮಯವನ್ನು ಕಳೆಯುವ ಅವಕಾಶವನ್ನು ಪಡೆಯುತ್ತೀರಿ. ನಿಮಗೆ ಸಂಬಂಧಿಸಿದ ಯಾವುದೇ ಪ್ರಮುಖ ನಿರ್ಧಾರವನ್ನು ಹಿರಿಯರು ಸಹ ತೆಗೆದುಕೊಳ್ಳಬಹುದು. ವ್ಯಾಪಾರಸ್ಥರಿಗೆ ದಿನವು ಸರಾಸರಿಯಾಗಿರುತ್ತದೆ. ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು, ನಿಮ್ಮ ಖರ್ಚುಗಳನ್ನು ನಿಯಂತ್ರಿಸಿದರೆ ಒಳ್ಳೆಯದು. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 29
ಅದೃಷ್ಟದ ಸಮಯ: ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ರವರೆಗೆ



Click it and Unblock the Notifications
