Latest Updates
-
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್ -
ಅಕ್ಕಿ ಬೇಡ, ಉದ್ದಿನಬೇಳೆ ಬೇಡ.. 15 ನಿಮಿಷದ ಹೆಸರು ಬೇಳೆ-ತರಕಾರಿ ಇಡ್ಲಿ! ಉಳಿದ ಇಡ್ಲಿ ಫ್ರೆಶ್ ಆಗಿಡೋದು ಹೇಗೆ? -
ಗ್ಯಾಸ್ ಇಲ್ವಾ? ಚಿಂತೆ ಬೇಡ.. ಒಲೆ ಹಚ್ಚದೇ ಮಾಡುವ 5 ಆರೋಗ್ಯಕರ ಊಟಗಳಿವು! -
ಮಿಕ್ಸಿಯಲ್ಲೇ ಮಾಡಿ ಕಬ್ಬಿನ ಹಾಲು! ಕಬ್ಬು ಇಲ್ಲದೆಯೇ ಶುದ್ಧವಾದ ಹಾಲು ಮಾಡೋದು ಹೇಗೆ? ರಸ್ತೆ ಬದಿಗಿಂತ ರುಚಿ -
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ? -
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ
Horoscope Today 3 April 2023:: ಸೋಮವಾರ: ಮೀನ ರಾಶಿಯವರಿಗೆ ಶುಭ ದಿನ ಉಳಿದ ರಾಶಿಗಳ ರಾಶಿಫಲ ಹೇಗಿದೆ?
ಶುಭೋದಯ..... ವೈದಿಕ ಶಾಸ್ತ್ರದ ಪ್ರಕಾರ ಏಪ್ರಿಲ್ 3ರ ರಾಶಿಫಲ ನೋಡೋಣ:
ಸಂವತ್ಸರ: ಶುಭಕೃತ್
ಆಯನ: ಉತ್ತರಾಯಣ
ಋತು: ವಸಂತ
ಮಾಸ: ಚೈತ್ರ
ಪಕ್ಷ: ಶುಕ್ಲ ಪಕ್ಷ
ತಿಥಿ: ಬೆಳಗ್ಗೆ 06:24ರವರೆಗೆ ದ್ವಾದಶಿ, ನಂತರ ತ್ರಯೋದಶಿ
ನಕ್ಷತ್ರ: ಬೆಳಗ್ಗೆ 07:24ರವರೆಗೆ ಮಘಾ ನಂತರ ಪೂರ್ವ ಫಲ್ಗುಣಿ
ರಾಹುಕಾಲ: ಬೆಳಗ್ಗೆ 07:47ರಿಂದ 09:19ರವರೆಗೆ

ಮೇಷ ರಾಶಿ
ಈ ದಿನ ಹಣಕಾಸಿನ ವಿಷಯಗಳಲ್ಲಿ, ನೀವು ನಿಮ್ಮ ಸ್ವಂತ ನಿರ್ಧಾರಗಳಲ್ಲಿ ಬೇರೆಯವರ ಮಾತು ಕೇಳುವ ಬದಲಿಗೆ ನಿಮ್ಮ ಸ್ವಂತ ನಿರ್ಧಾರ ತೆಗೆದುಕೊಳ್ಳಿ. ಉದ್ಯಮಿಗಳು ಇಂದು ಗೊಂದಲದ ಮನಸ್ಥಿತಿಯಲ್ಲಿರಬಹುದು. ಈ ಸಮಯದಲ್ಲಿ ಪರಿಣಿತರ ಸಲಹೆ ಪಡೆಯಿರಿ. ಉದ್ಯೋಗಿಗಳಿಗೆ ದಿನವು ಸಾಮಾನ್ಯವಾಗಿರುತ್ತದೆ. ಸಂಗಾತಿಯ ಆರೋಗ್ಯ ದುರ್ಬಲವಾಗಿರಬಹುದು.
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ: 12
ಅದೃಷ್ಟದ ಸಮಯ: ಸಂಜೆ 6:20 ರಿಂದ ರಾತ್ರಿ 8:20 ರವರೆಗೆ
ವೃಷಭ ರಾಶಿ
ಇಂದು ದಿನದ ಆರಂಭವು ತುಂಬಾ ಚೆನ್ನಾಗಿರಲಿದೆ. ನೀವು ತುಂಬಾ ಧನಾತ್ಮಕವಾಗಿರುತ್ತೀರಿ. ಉದ್ಯೋಗಿಗಳಿಗೆ ಬದಲಾವಣೆಯ ಸಮಯ ನಡೆಯುತ್ತಿದೆ. ನೀವು ಬಯಸಿದ ಹುದ್ದೆ ಸಿಗಬಹುದು. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ತುಂಬಾ ಹೊತ್ತು ಒಂದೇ ಕಡೆ ಕೈರಬೇಡಿ.
ಅದೃಷ್ಟದ ಬಣ್ಣ: ಕೆನೆ
ಅದೃಷ್ಟದ ಸಂಖ್ಯೆ: 5
ಅದೃಷ್ಟದ ಸಮಯ: ಬೆಳಿಗ್ಗೆ 4:55 ರಿಂದ 9:30 ರವರೆಗೆ
ಮಿಥುನ ರಾಶಿ
ಇಂದು ಸಂಗಾತಿಯ ಮನಸ್ಥಿತಿ ಸರಿಯಿರಲ್ಲ, ಈ ಸಮಯದಲ್ಲಿ ಚರ್ಚೆ ಮಾಡಲು ಹೋಗಬೇಡಿ. ನೀವು ವ್ಯಾಪಾರಸ್ಥರಾಗಿದ್ದರೆ ಇಂದು ನಿಮಗೆ ಲಾಭದ ದಿನವಾಗಿದೆ. ಉದ್ಯೋಗಸ್ಥರು ಕಚೇರಿಯಲ್ಲಿ ತಮ್ಮ ಸಣ್ಣ ಜವಾಬ್ದಾರಿಯನ್ನೂ ಉತ್ತಮವಾಗಿ ಪೂರೈಸಲು ಪ್ರಯತ್ನಿಸಬೇಕು. ಹಣದ ವಿಷಯದಲ್ಲಿ, ದಿನವು ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 21
ಅದೃಷ್ಟದ ಸಮಯ: ಸಂಜೆ 4:30 ರಿಂದ ರಾತ್ರಿ 8 ರವರೆಗೆ
ಕರ್ಕ ರಾಶಿ
ಮನೆಯ ವಾತಾವರಣವು ಚೆನ್ನಾಗಿರಲಿದೆ. ಹಣದ ಬಗ್ಗೆ ಹೇಳುವುದಾದರೆ ಇತರರನ್ನು ಮೆಚ್ಚಿಸಲು ಹೆಚ್ಚು ಅಧಿಕ ಖರ್ಚು ಮಾಡಬೇಡಿ. ನೀವು ವ್ಯಾಪಾರಸ್ಥರಾಗಿದ್ದರೆ ಕ್ರೆಡಿಟ್ ವಹಿವಾಟುಗಳನ್ನು ಅಥವಾ ಸಾಲದ ತಪ್ಪಿಸಲು ಸಲಹೆ ನೀಡಲಾಗಿದೆ. ಆರೋಗ್ಯ ದುರ್ಬಲವಾಗಿರುತ್ತದೆ. ನಿರ್ಲಕ್ಷ್ಯ ಮಾಡದೆ ವೈದ್ಯರಿಗೆ ತೋರಿಸಿ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 35
ಅದೃಷ್ಟದ ಸಮಯ: ಬೆಳಿಗ್ಗೆ 9 ರಿಂದ ರಾತ್ರಿ 8:45 ರವರೆಗೆ
ಸಿಂಹ ರಾಶಿ
ಕೆಲಸದ ದೃಷ್ಟಿಯಿಂದ ಇಂದು ನಿಮಗೆ ಶುಭವಾಗಿರಲಿದೆ. ಇಂದು ನೀವು ನಿಮ್ಮ ಕೆಲಸದ ಮೇಲೆ ಸರಿಯಾಗಿ ಗಮನ ಹರಿಸಲು ಸಾಧ್ಯವಾಗುತ್ತದೆ. ಕಾಸಿನ ವಿಷಯಗಳಲ್ಲಿ ಹೆಚ್ಚು ಜಾಗರೂಕರಾಗಿರಲು ನಿಮಗೆ ಸಲಹೆ ನೀಡಲಾಗಿದೆ. ಹಣ ನಷ್ಟವಾಗುವ ಲಕ್ಷಣಗಳಿವೆ. ಕೌಟುಂಬಿಕ ಜೀವನ ಚೆನ್ನಾಗಿರಲಿದೆ. ಉತ್ತಮ ಆರೋಗ್ಯಕ್ಕಾಗಿ ಉತ್ತಮ ಜೀವನಶೈಲಿ ರೂಪಿಸಿ.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 10
ಅದೃಷ್ಟದ ಸಮಯ: ಸಂಜೆ 4 ರಿಂದ ರಾತ್ರಿ 9:15 ರವರೆಗೆ
ಕನ್ಯಾ ರಾಶಿ
ದಾಂಪತ್ಯ ಜೀವನ ಚೆನ್ನಾಗಿರಲಿದೆ. ವೃತ್ತಿಗೆ ಸಂಬಂಧಿಸಿದ ಚಿಂತೆಗಳು ಕೊನೆಗೊಳ್ಳುತ್ತವೆ, ಇಂದು ನೀವು ಸಹ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುತ್ತೀರಿ. ಇಂದು ಕೆಲಸದ ಜಾಗದಲ್ಲಿ ಸಹೋದ್ಯೋಗಿಗಳೊಂದಿಗೆ ಬಹಳ ಸಮತೋಲಿತವಾಗಿ ವರ್ತಿಸಲು ಸಲಹೆ ನೀಡಲಾಗಿದೆ. ಉದ್ಯಮಿಗಳು ಕಾನೂನು ವಿಷಯಗಳಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಮಾಡಬಾರದು. ಆರೋಗ್ಯ ಚೆನ್ನಾಗಿರುತ್ತದೆ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 7
ಅದೃಷ್ಟದ ಸಮಯ: ಸಂಜೆ 7 ರಿಂದ 9:25 ರವರೆಗೆ
ತುಲಾ ರಾಶಿ
ಈ ದಿನ ನಿಮಗೆ ಚೆನ್ನಾಗಿರಲಿದೆ. ವೃತ್ತಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ, ಈ ಸಮಸ್ಯೆಯನ್ನು ಪರಿಹರಿಸಬಹುದು. ವಿದ್ಯಾರ್ಥಿಗಳು ತಮ್ಮ ಅಧ್ಯಯನದತ್ತ ಹೆಚ್ಚಿನ ಗಮನ ಹರಿಸಲು ಸಲಹೆ ನೀಡಲಾಗಿದೆ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುತ್ತದೆ. ಇಂದು ಆಯಾಸ ಅಧಿಕವಿರಬಹುದು, ವಿಶ್ರಾಂತಿ ಕಡೆ ಗಮನಹರಿಸಿ.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 13
ಅದೃಷ್ಟದ ಸಮಯ: ಮಧ್ಯಾಹ್ನ 1 ರಿಂದ ಸಂಜೆ 5 ರವರೆಗೆ
ವೃಶ್ಚಿಕ ರಾಶಿ
ಮನೆಯ ವಾತಾವರಣ ಸರಿ ಇರುವುದಿಲ್ಲ. ನನಿಮ್ಮ ಅಸಡ್ಡೆ ವರ್ತನೆ ನಿಮ್ಮ ಮನೆಯ ಹಿರಿಯರನ್ನು ಕೆರಳಿಸಬಹುದು. ಹಣಕಾಸಿನ ವಿಷಯಗಳಲ್ಲಿ ನೀವು ತುಂಬಾ ಜಾಗರೂಕರಾಗಿರಬೇಕು. ವಿಶೇಷವಾಗಿ ನೀವು ಇಂದು ಹಣಕ್ಕೆ ಸಂಬಂಧಿಸಿದ ಯಾವುದೇ ವ್ಯವಹಾರವನ್ನು ಮಾಡಲು ಹೋದರೆ, ಹೆಚ್ಚು ಜಾಗರೂಕರಾಗಿರಿ. ಆಸ್ತಿ ವಿಷಯದಲ್ಲಿ ತರಾತುರಿಯಲ್ಲಿ ಯಾವುದೇ ಒಪ್ಪಂದವನ್ನು ಮಾಡಲು ಹೋಗಬೇಡಿ. ಆರೋಗ್ಯ ಹದಗೆಡಬಹುದು.
ಅದೃಷ್ಟದ ಬಣ್ಣ: ಆಕಾಶ ನೀಲಿ
ಅದೃಷ್ಟದ ಸಂಖ್ಯೆ: 27
ಅದೃಷ್ಟದ ಸಮಯ: ಮಧ್ಯಾಹ್ನ 3:30 ರಿಂದ ರಾತ್ರಿ 8 ರವರೆಗೆ
ಧನು ರಾಶಿ
ನಿಮಗೆ ಮಧುಮೇಹ ಸಮಸ್ಯೆ ಇದ್ದರೆ ಇಂದು ಆಹಾರಕ್ರಮದ ಕಡೆಗೆ ತುಂಬಾ ಗಮನಹರಿಸಬೇಕು. ನಿಮ್ಮ ಅಜಾಗರೂಕತೆಯಿಂದ ಇಂದು ನಿಮ್ಮ ಆರೋಗ್ಯ ಹದಗೆಡಬಹುದು. ಹಣದ ವಿಷಯದಲ್ಲಿ ಈ ದಿನವು ಮಿಶ್ರವಾಗಿರುತ್ತದೆ. ನಿಮ್ಮ ಆದಾಯವು ಉತ್ತಮವಾಗಿರುತ್ತದೆ, ಆದರೆ ಖರ್ಚೂ ಇರಲಿದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಸಾಮಾನ್ಯವಾಗಿರುತ್ತದೆ.
ಅದೃಷ್ಟದ ಬಣ್ಣ: ಕೇಸರಿ
ಅದೃಷ್ಟದ ಸಂಖ್ಯೆ: 6
ಅದೃಷ್ಟದ ಸಮಯ: ಬೆಳಿಗ್ಗೆ 4 ರಿಂದ ಮಧ್ಯಾಹ್ನ 3 ರವರೆಗೆ
ಮಕರ ರಾಶಿ
ನೀವು ಪಾಲುದಾರಿಕೆಯಲ್ಲಿ ಯಾವುದೇ ಕೆಲಸವನ್ನು ಪ್ರಾರಂಭಿಸಲಿದ್ದರೆ, ನೀವು ಯಶಸ್ಸನ್ನು ಪಡೆಯಬಹುದು. ನಿಮ್ಮ ಹಣಕಾಸಿನ ಸಮಸ್ಯೆಯು ದೂರವಾಗುತ್ತದೆ. ಉದ್ಯೋಗಿಗಳಿಗೆ ಈ ದಿನ ಒಳ್ಳೆಯದಿರಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಆರೋಗ್ಯವನ್ನು ಸುಧಾರಿಸಲು, ನೀವು ಕೋಪ ಮತ್ತು ಒತ್ತಡವನ್ನು ತಪ್ಪಿಸಬೇಕು.
ಅದೃಷ್ಟದ ಬಣ್ಣ: ಗಾಢ ನೀಲಿ
ಅದೃಷ್ಟದ ಸಂಖ್ಯೆ: 38
ಅದೃಷ್ಟದ ಸಮಯ: ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ
ಕುಂಭ ರಾಶಿ
ಮನೆಯ ವಾತಾವರಣವು ಚೆನ್ನಾಗಿರಲಿದೆ. ಹಣದ ವಿಷಯದಲ್ಲಿ ದಿನವು ಉತ್ತಮವಾಗಿರುತ್ತದೆ. ನೀವು ಸಾಲವನ್ನು ತೆಗೆದುಕೊಳ್ಳುವ ಅಥವಾ ಎರವಲು ಪಡೆಯುವ ಬಗ್ಗೆ ಯೋಚಿಸುತ್ತಿದ್ದರೆ, ನೀವು ಅಗತ್ಯಕ್ಕಿಂತ ಹೆಚ್ಚಿನ ಹಣವನ್ನು ತೆಗೆದುಕೊಳ್ಳಬೇಡಿ. ಕೆಲಸದ ವಿಷಯದಲ್ಲಿ ಈ, ದಿನವು ಉತ್ತಮವಾಗಿರುತ್ತದೆ. ನಿಮ್ಮ ಎಲ್ಲಾ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತವೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಸಣ್ಣಪುಟ್ಟ ಸಮಸ್ಯೆಗಳಿರಬಹುದು.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 12
ಅದೃಷ್ಟದ ಸಮಯ: ಬೆಳಗ್ಗೆ 9:30 ರಿಂದ ಮಧ್ಯಾಹ್ನ 2:55 ರವರೆಗೆ
ಮೀನ ರಾಶಿ
ಇಂದು ಪ್ರೀತಿ ಜೀವನದಲ್ಲಿ ಮಾಧುರ್ಯ ಹೆಚ್ಚಾಗಲಿದೆ. ಇಂದು ನೀವು ಯಾವುದೇ ನಿರ್ಧಾರವನ್ನು ತೆಗೆದುಕೊಂಡರೂ, ನಿಮ್ಮ ಪ್ರೀತಿಪಾತ್ರರ ಸಂಪೂರ್ಣ ಬೆಂಬಲ ಪಡೆಯುತ್ತೀರಿ. ಇಂದು ನೀವು ಯಾವುದೇ ಕೆಲಸವನ್ನು ಆತುರದಿಂದ ಮಾಡದಂತೆ ಸೂಚಿಸಲಾಗಿದೆ. ಪ್ರಮುಖ ದಾಖಲೆಗಳನ್ನು ಮಾಡುವಾಗ ಹೆಚ್ಚು ಜಾಗರೂಕರಾಗಿರಲು ವ್ಯಾಪಾರಸ್ಥರಿಗೆ ಸಲಹೆ ನೀಡಲಾಗಿ. ಆರೋಗ್ಯದ ಬಗ್ಗೆ ಹೇಳುವುದಾದರೆ ಮೈ ಕೈ ನೋವು ಇರಬಹುದು.
ಅದೃಷ್ಟದ ಬಣ್ಣ: ಮರೂನ್
ಅದೃಷ್ಟದ ಸಂಖ್ಯೆ: 19
ಅದೃಷ್ಟದ ಸಮಯ: ಬೆಳಿಗ್ಗೆ 7:20 ರಿಂದ 11 ರವರೆಗೆ



Click it and Unblock the Notifications












