Horoscope Today 28 April 2023: ಶುಕ್ರವಾರ: ದ್ವಾದಶ ರಾಶಿಗಳ ಈ ದಿನದ ರಾಶಿಫಲ ಹೇಗಿದೆ

ಶುಭೋದಯ..... ವೈದಿಕ ಶಾಸ್ತ್ರದ ಪ್ರಕಾರ ಏಪ್ರಿಲ್‌ 27ರ ರಾಶಿಫಲ ನೋಡೋಣ:
ಸಂವತ್ಸರ: ಶುಭಕೃತ್
ಆಯನ: ಉತ್ತರಾಯಣ
ಋತು: ವಸಂತ
ಮಾಸ: ವೈಶಾಖ
ಪಕ್ಷ: ಶುಕ್ಲಪಕ್ಷ
ತಿಥಿ: ಅಷ್ಟಮಿ
ನಕ್ಷತ್ರ: ಪುಷ್ಯಾ
ರಾಹುಕಾಲ: ಬೆಳಗ್ಗೆ 10:40ರಿಂದ ಮಧ್ಯಾಹ್ನ 12:19ರವರೆಗೆ

ಮೇಷ ರಾಶಿ
ಮಗುವಿಗೆ ಸಂಬಂಧಿಸಿದ ಯಾವುದೇ ಚಿಂತೆ ಕಾಡುತ್ತಿದ್ದರೆ ಇಂದು ಆ ಚಿಂತೆ ದೂರಾಗಲಿದೆ. ಮಕ್ಕಳು ಶಿಕ್ಷಣ ಕ್ಷೇತ್ರದಲ್ಲಿ ಮಾಡುವ ಸಾಧನೆ ನಿಮಗೆ ಖುಷಿ ತರಲಿದೆ. ಅವರು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಲು ಬಯಸಿದರೆ ಉತ್ತಮ ಅವಕಾಶಗಳನ್ನು ಪಡೆಯಬಹುದು. ವೃತ್ತಿಜೀವನದಲ್ಲಿ ಪ್ರಗತಿಯ ಬಲವಾದ ಸಾಧ್ಯತೆಯಿದೆ. ನಿಮ್ಮ ಶ್ರಮಕ್ಕೆ ಇಂದು ಫಲ ಸಿಗಲಿದೆ. ಹಣದ ವಿಷಯದಲ್ಲಿಈ ದಿನ ಚೆನ್ನಾಗಿರಲಿದೆ. ಈ ದಿನ ಖರ್ಚು ಕಡಿಮೆ ಇರಲಿದೆ. ಆರೋಗ್ಯದ ದೃಷ್ಟಿಯಿಂದಲೂ ಈ ದಿನ ಉತ್ತಮವಾಗಿದೆ.
ಅದೃಷ್ಟ ಬಣ್ಣ: ಹಸಿರು
ಅದೃಷ್ಟ ಸಂಖ್ಯೆ: 9
ಅದೃಷ್ಟ ಸಮಯ: ಬೆಳಿಗ್ಗೆ 7 ರಿಂದ 9:45 ರವರೆಗೆ

Dina Bhavishya -April 28 2023 Today Rashi Bhavishya, Daily Horoscope in Kannada

ವೃಷಭ ರಾಶಿ
ಸ್ನೇಹಿತರ ಸಹಾಯದಿಂದ ಇಂದು ನಿಮ್ಮ ದೊಡ್ಡ ಸಮಸ್ಯೆ ಬಗೆಹರಿಯಲಿದೆ. ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣುವಿರಿ. ನೀವು ಹೊಸ ಆದಾಯದ ಮೂಲವನ್ನು ಪಡೆಯಬಹುದು. ಕಛೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡುವಾಗ ಜಾಗ್ರತೆವಹಿಸಿ, ನಿಮ್ಮ ಮಾತುಗಳಿಂದ ಸಮಸ್ಯೆ ಹೆಚ್ಚಾಗಬಾರದು. ವ್ಯಾಪಾರಸ್ಥರಿಗೆ ಇಂದು ಮಿಶ್ರ ದಿನವಾಗಲಿದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ.
ಶುಭ ಬಣ್ಣ :ಕ್ರೀಮ್
ಅದೃಷ್ಟದ ಸಂಖ್ಯೆ: 20
ಅದೃಷ್ಟದ ಸಮಯ: ಸಂಜೆ 5:35 ರಿಂದ ರಾತ್ರಿ 8:05 ರವರೆಗೆ

ಮಿಥುನ ರಾಶಿ
ನೀವು ಯಾವುದೇ ಆನ್‌ಲೈನ್ ಕೆಲಸವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದರೆ, ಇಂದು ನಿಮ್ಮ ಯೋಜನೆಯು ಮುಂದುವರಿಯಬಹುದು. ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ವೈವಾಹಿಕ ಜೀವನ ಚೆನ್ನಾಗಿರಲಿದೆ. ನಿಮ್ಮ ಕೆಲಸ ಕಾರ್ಯಗಳಿವೆ ಅವರ ಬೆಂಬಲ ಸಿಗಲಿದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಚಿಕ್ಕ ಆರೋಗ್ಯ ಸಮಸ್ಯೆಯಾದರೂ ನಿರ್ಲಕ್ಷ್ಯ ಮಾಡಬೇಡಿ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 12
ಅದೃಷ್ಟದ ಸಮಯ: ಸಂಜೆ 5:20 ರಿಂದ 7:20 ರವರೆಗೆ

ಕರ್ಕ ರಾಶಿ
ಇಂದು ಮನೆಯ ವಾತಾವರಣ ಚೆನ್ನಾಗಿರಲಿದೆ. ನೀವು ಬಹಳ ಸಮಯದಿಂದ ನಿಮ್ಮ ಆದಾಯವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದರೆ, ಇಂದು ನೀವು ಯಶಸ್ಸನ್ನು ಪಡೆಯಬಹುದು. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರು ಹಣಕಾಸಿನ ಲಾಭ ಪಡೆಯುತ್ತೀರಿ. ನಿಮ್ಮ ವ್ಯಾಪಾರದಲ್ಲಿ ಬೆಳವಣಿಗೆ ಸಾಧ್ಯ. ಉದ್ಯೋಗಿಗಳ ಮೇಲೆ ಇದ್ದಕ್ಕಿದ್ದಂತೆ ಕೆಲಸದ ಹೊರೆ ಹೆಚ್ಚಾಗಬಹುದು. ನೀವು ನಿಮ್ಮ ಪ್ಲ್ಯಾನ್‌ನಂತೆ ಕೆಲಸವನ್ನು ಮುಗಿಸಲು ಪ್ರಯತ್ನಿಸುವುದು ಒಳ್ಳೆಯದು. ಆರೋಗ್ಯದ ಬಗ್ಗೆ ಹೇಳುವುದಾದರೆ ಆಯಾಸ ಹೆಚ್ಚಿರಲಿದೆ.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 29
ಅದೃಷ್ಟದ ಸಮಯ: ಬೆಳಿಗ್ಗೆ 8:30 ರಿಂದ 10 ರವರೆಗೆ

ಸಿಂಹ ರಾಶಿ
ನೀವು ಉದ್ಯಮಿಯಾಗಿದ್ದರೆ ಈ ದಿನ ನಿಮಗೆ ಉತ್ತಮವಾಗಿದೆ. ಉದ್ಯೋಗಸ್ಥರು ಬಹಳ ಸಮಯದಿಂದ ಉತ್ತಮ ಅವಕಾಶವನ್ನು ಹುಡುಕುತ್ತಿದ್ದರೆ ಇಂದು ಒಳ್ಳೆಯ ಆಫರ್ ಬರಬಹುದು. ಇದಲ್ಲದೇ ಸಂಗಾತಿಯ ನಡವಳಿಕೆಯಲ್ಲೂ ಧನಾತ್ಮಕ ಬದಲಾವಣೆಗಳನ್ನು ಕಾಣಬಹುದು. ನಿಮ್ಮ ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರಲಿದೆ. ಹೃದಯದ ಸಮಸ್ಯೆಯಿದ್ದರೆ ಜಾಗ್ರತೆವಹಿಸಿ.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 6
ಅದೃಷ್ಟದ ಸಮಯ: ಸಂಜೆ 6 ರಿಂದ 8:25 ರವರೆಗೆ

ಕನ್ಯಾ ರಾಶಿ
ಹಣದ ವಿಷಯದಲ್ಲಿ ಇಂದು ನಿಮಗೆ ಉತ್ತಮವಾಗಿದೆ , ನೀವು ಯಾರಿಗಾದರೂ ಸಾಲ ನೀಡಿದ್ದರೆ ಇಂದು ಮರಳಿ ಪಡೆಯಬಹುದು. ಭವಿಷ್ಯದಲ್ಲಿ, ಯಾವುದೇ ಹಣಕಾಸಿನ ವ್ಯವಹಾರವನ್ನು ತರಾತುರಿಯಲ್ಲಿ ಮಾಡಬೇಡಿ. ನೀವು ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಬೆಂಬಲವನ್ನು ಪಡೆಯುತ್ತೀರಿ. ಇದರಿಂದ ನೀವು ನಿಮ್ಮ ಕಷ್ಟಕರವಾದ ಕಾರ್ಯಗಳನ್ನು ಸುಲಭವಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಉದ್ಯಮಿಗಳು ಮಿಶ್ರ ಫಲಿತಾಂಶಗಳನ್ನು ಪಡೆಯಬಹುದು.ಇಂದು ಕುಟುಂಬದ ಜೊತೆ ಸಮಯ ಕಳೆಯಲು ಪ್ರಯತ್ನಿಸುತ್ತೀರಿ.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 14
ಅದೃಷ್ಟದ ಸಮಯ: ಸಂಜೆ 5 ರಿಂದ ರಾತ್ರಿ 8:25 ರವರೆಗೆ

ತುಲಾ ರಾಶಿ
ಕೆಲವು ಕಾರಣಗಳಿಗಾಗಿ, ನೀವು ನಿಮ್ಮ ಮನೆಯಿಂದ ದೂರವಿದ್ದರೆ ಇಂದು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೀರಿ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ನೀವು ಶೀಘ್ರದಲ್ಲೇ ಸಾಲವನ್ನು ತೊಡೆದುಹಾಕಲು ಬಯಸಿದರೆ, ನೀವು ಉಳಿತಾಯದ ಬಗ್ಗೆ ಹೆಚ್ಚು ಗಮನ ಹರಿಸಲು ಪ್ರಯತ್ನಿಸುವುದು ಒಳ್ಳೆಯದು. ಕಚೇರಿ ಕೆಲಸದಲ್ಲಿ ನಿರ್ಲಕ್ಷ್ಯ ಮಾಡಿದರೆ ಸಮಸ್ಯೆ ಹೆಚ್ಚಾಗಬಹುದು, ಜಾಗ್ರತೆ. ವ್ಯಾಪಾರಸ್ಥರು ಕಾನೂನು ವಿಷಯಗಳಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ಮಾಡಬಾರದು. ಆರೋಗ್ಯ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 2
ಅದೃಷ್ಟದ ಸಮಯ: ಮಧ್ಯಾಹ್ನ 3 ರಿಂದ ರಾತ್ರಿ 8 ರವರೆಗೆ

ವೃಶ್ಚಿಕ ರಾಶಿ
ಉದ್ಯೋಗಿಗಳಿಗೆ ಈ ದಿನ ಅನುಕೂಲಕರವಾಗಿದೆ. ಉದ್ಯಮಿಗಳು ಯಾವುದೇ ದೊಡ್ಡ ಹಣಕಾಸಿನ ವಹಿವಾಟು ಮಾಡಲು ಹೊರಟಿದ್ದರೆ ಇಂದು ಕೆಲ ಅಡೆತಡೆಗಳು ಎದುರಾಗಬಹುದು. ನಿಮ್ಮ ಈ ಸಮಸ್ಯೆ ತಾತ್ಕಾಲಿಕವಾದರೂ ಶೀಘ್ರದಲ್ಲೇ ನಿಮ್ಮ ಸಮಸ್ಯೆ ಬಗೆಹರಿಯಲಿದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿ ಅಷ್ಟು ಸರಿಯಿರಲ್ಲ, ಮನೆಯ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಬರಬಹುದು. ಅಂತಹ ಪರಿಸ್ಥಿತಿಯಲ್ಲಿ, ಸಮತೋಲಿತ ರೀತಿಯಲ್ಲಿ ವರ್ತಿಸಲು ಸಲಹೆ ನೀಡಲಾಗಿದೆ. ಈ ದಿನ ಅತ್ಯಧಿಕ ಮಾನಸಿಕ ಒತ್ತಡವಿರಲಿದೆ.
ಅದೃಷ್ಟದ ಬಣ್ಣ: ಮರೂನ್
ಅದೃಷ್ಟದ ಸಂಖ್ಯೆ:1
ಅದೃಷ್ಟದ ಸಮಯ: ಬೆಳಿಗ್ಗೆ 5:15 ರಿಂದ 11:25 ರವರೆಗೆ

ಧನು ರಾಶಿ
ಈ ದಿನ ತುಂಬಾ ಖುಷಿಯಾಗಿ ಇರಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ. ನಿಮ್ಮ ಆದಾಯದಲ್ಲಿ ಪ್ರಗತಿಯಾಗುವ ಸಾಧ್ಯತೆಯಿದೆ. ಕೆಲಸದ ಬಗ್ಗೆ ಯಾವುದೇ ರೀತಿಯ ನಿರ್ಲಕ್ಷ್ಯ ಮಾಡದಿದ್ದರೆ ಒಳ್ಳೆಯದು. ನಿಮ್ಮ ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಪ್ರಯತ್ನಿಸಿ. ಯಾವುದೇ ದೊಡ್ಡ ಆದೇಶದ ಜವಾಬ್ದಾರಿ ತೆಗೆದುಕೊಳ್ಳುವ ಮೊದಲು ಉದ್ಯಮಿಗಳು ಹಳೆಯ ಕಾರ್ಯಗಳನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಲು ಪ್ರಯತ್ನಿಸಬೇಕು. ಆರೋಗ್ಯದ ದೃಷ್ಟಿಯಿಂದ ದಿನವು ಸರಾಸರಿಯಾಗಿರುತ್ತದೆ.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 7
ಅದೃಷ್ಟದ ಸಮಯ: ಸಂಜೆ 5 ರಿಂದ ರಾತ್ರಿ 8:20 ರವರೆಗೆ

ಮಕರ ರಾಶಿ
ಹಣಕಾಸಿನ ಸ್ಥಿತಿಯು ತೃಪ್ತಿಕರವಾಗಿರಲಿದೆ. ಇಂದು ನೀವು ವೆಚ್ಚಗಳ ಪಟ್ಟಿಯಲ್ಲಿ ಕೆಲವು ಕಡಿತಗಳನ್ನು ಮಾಡಬಹುದು. ಉದ್ಯೋಗಿಗಳಿಗೆ, ವ್ಯಾಪಾರಿಗಳಿಗೆ ಇಂದು ತುಂಬಾ ಸವಾಲಿನ ದಿನವಾಗಿರುತ್ತದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿಯು ಆಹ್ಲಾದಕರವಾಗಿರುತ್ತದೆ. ಕುಟುಂಬ ಜೀವನದಲ್ಲಿ ಎಲ್ಲವೂ ನಿಮ್ಮ ಪರವಾಗಿ ಇರುತ್ತದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಹಳೆಯ ಆರೋಗ್ಯ ಸಮಸ್ಯೆ ಮರುಕಳಿಸಬಹುದು, ಆರೋಗ್ಯದಲ್ಲಿ ನಿರ್ಲಕ್ಷ್ಯ ಮಾಡಬೇಡಿ.
ಅದೃಷ್ಟದ ಬಣ್ಣ: ಗಾಢ ಕೆಂಪು
ಅದೃಷ್ಟದ ಸಂಖ್ಯೆ: 24
ಅದೃಷ್ಟದ ಸಮಯ: ಮಧ್ಯಾಹ್ನ 12:45 ರಿಂದ ಮಧ್ಯಾಹ್ನ 3 ರವರೆಗೆ

ಕುಂಭ ರಾಶಿ
ಅನಾವಶ್ಯಕ ಚಿಂತೆಗಳಿಂದ ದೂರುವುದು ಒಳ್ಳೆಯದು. ಕಳೆದು ಹೋದ ವಿಷಯಗಳ ಕಡೆ ಗಮನ ನೀಡದೆ ಆಗಬೇಕಾಗಿರುವ ಕೆಲಸದ ಕಡೆ ಗಮನ ನೀಡುವುದು ಒಳ್ಳೆಯದು. ವ್ಯಾಪಾರಸ್ಥರು ಹಣದ ವಿಚಾರದಲ್ಲಿ ಜಾಗ್ರತೆ ವಹಿಸಬೇಕು. ಇಂದು ತರಾತುರಿಯಲ್ಲಿ ಹಣಕ್ಕೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡಬೇಡಿ. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಹೊಂದಾಣಿಕೆ ಇರಲಿದೆ, ಅನಾರೋಗ್ಯ ಕಾಡುವುದು.
ಅದೃಷ್ಟದ ಬಣ್ಣ: ಆಕಾಶ ನೀಲಿ
ಅದೃಷ್ಟದ ಸಂಖ್ಯೆ: 2
ಅದೃಷ್ಟದ ಸಮಯ: ಬೆಳಿಗ್ಗೆ 7 ರಿಂದ 9:20 ರವರೆಗೆ

ಮೀನ ರಾಶಿ
ಈ ದಿನ ನಿಮಗೆ ಅನುಕೂಲಕರವಾಗಿದೆ. ಕಚೇರಿ ಕೆಲಸಗಳಲ್ಲಿ ತುಂಬಾ ಉತ್ಸಾಹ ತೋರುತ್ತೀರಿ. ಉದ್ಯಮಿಗಳು ಬಯಸಿದ ಲಾಭವನ್ನು ಪಡೆಯಬಹುದು. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಸಾಮಾನ್ಯವಾಗಿರಲಿದೆ. ಮನೆಯ ವಾತಾವರಣದಲ್ಲಿ ದೊಡ್ಡ ಸುಧಾರಣೆಯನ್ನು ಕಾಣಬಹುದು. ಹಣದ ವಿಷಯದಲ್ಲಿ ಇಂದು ನಿಮಗೆ ಸರಾಸರಿ ದಿನವಾಗಿರಲಿದೆ. ಆರೋಗ್ಯ ಕೂಡ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 30
ಅದೃಷ್ಟದ ಸಮಯ: ಮಧ್ಯಾಹ್ನ 2 ರಿಂದ ಸಂಜೆ 4 ರವರೆಗೆ

English summary

Dina Bhavishya -April 28 2023 Today Rashi Bhavishya, Daily Horoscope in Kannada

Dina Bhavishya- Get Today's Rashi Bhavishy 27 April 2023 In Kannada, Read daily horoscope prediction of aries, taurus, gemini, cancer, leo, virgo, libra, scorpio, Sagittarius, Capricorn, Aquarius, pisces in Kannada.
Story first published: Friday, April 28, 2023, 4:00 [IST]
X
Desktop Bottom Promotion