Horoscope Today 24 April 2023: ಸೋಮವಾರ: ಈ ದಿನ 12 ರಾಶಿಗಳ ರಾಶಿಫಲ ಹೇಗಿದೆ?

ಶುಭೋದಯ..... ವೈದಿಕ ಶಾಸ್ತ್ರದ ಪ್ರಕಾರ ಏಪ್ರಿಲ್‌ 24ರ ರಾಶಿಫಲ ನೋಡೋಣ:
ಸಂವತ್ಸರ: ಶುಭಕೃತ್
ಆಯನ: ಉತ್ತರಾಯಣ
ಋತು: ವಸಂತ
ಮಾಸ: ವೈಶಾಖ
ಪಕ್ಷ: ಶುಕ್ಲಪಕ್ಷ
ತಿಥಿ: ಪಂಚಮಿ
ನಕ್ಷತ್ರ: ಮೃಗಶೀರ್ಷ
ರಾಹುಕಾಲ: ಬೆಳಗ್ಗೆ 07:25ರಿಂದ 09:03ರವರೆಗೆ

ಮೇಷ ರಾಶಿ
ಇಂದು ನೀವು ಕೆಲಸದಲ್ಲಿ ತುಂಬಾ ಕಾರ್ಯನಿರತರಾಗಿರುತ್ತೀರಿ. ಅಂತಹ ಪರಿಸ್ಥಿತಿಯಲ್ಲಿ, ಕುಟುಂಬದೊಂದಿಗೆ ಸಮಯ ಕಳೆಯಲು ನಿಮಗೆ ಹೆಚ್ಚಿನ ಅವಕಾಶ ಸಿಗುವುದಿಲ್ಲ. ಇಂದು ನೀವು ಹಣದ ವಿಷಯದಲ್ಲಿ ಬಹಳ ಜಾಗರೂಕರಾಗಿರಲು ಸಲಹೆ ನೀಡಲಾಗಿದೆ, ಇಲ್ಲದಿದ್ದರೆ ನೀವು ಮೋಸ ಹೋಗಬಹುದು. ದಿನದ ಎರಡನೇ ಭಾಗದಲ್ಲಿ ಇದ್ದಕ್ಕಿದ್ದಂತೆ ನೀವು ಕೆಲಸಕ್ಕಾಗಿ ಪ್ರಯಾಣಿಸಬೇಕಾಗುತ್ತದೆ. ಈ ಪಯಣ ಬಹುಮುಖ್ಯವಾಗಲಿದೆ. ಕೆಲಸದ ಜೊತೆಗೆ ನಿಮ್ಮ ಆರೋಗ್ಯದ ಕಡೆಯೂ ಗಮನಹರಿಸಿ.
ಅದೃಷ್ಟದ ಬಣ್ಣ: ಗಾಢ ನೀಲಿ
ಅದೃಷ್ಟದ ಸಂಖ್ಯೆ: 8
ಅದೃಷ್ಟದ ಸಮಯ: ಸಂಜೆ 5 ರಿಂದ ರಾತ್ರಿ 8 ರವರೆಗೆ

Dina Bhavishya -April 24 2023 Today Rashi Bhavishya, Daily Horoscope in Kannada

ವೃಷಭ ರಾಶಿ
ಹಣದ ಸಮಸ್ಯೆಯಿಂದಾಗಿ ನೀವು ಇಂದು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಮೇಲಾಧಿಕಾರಿಗಳ ಜೊತೆ ಅಭಿಪ್ರಾಯ ವ್ಯತ್ಯಾಸ ಬರಬಹುದು, ನಿಮ್ಮ ಅಭಿಪ್ರಾಯವನ್ನು ತಾಳ್ಮೆಯಿಂದ ವಿವರಿಸಿ. ವ್ಯಾಪಾರಸ್ಥರು ಇಂದು ಉತ್ತಮವಾಗಿದೆ. ವೈವಾಹಿಕ ಜೀವನದಲ್ಲಿ ಖುಷಿ ಇರಲಿದೆ. ಆರೋಗ್ಯದ ದೃಷ್ಟಿಯಿಂದ ದಿನವು ಉತ್ತಮವಾಗಿರುತ್ತದೆ.
ಅದೃಷ್ಟದ ಬಣ್ಣ: ಮರೂನ್
ಅದೃಷ್ಟದ ಸಂಖ್ಯೆ: 11
ಅದೃಷ್ಟದ ಸಮಯ: ಬೆಳಿಗ್ಗೆ 4:20 ರಿಂದ ಮಧ್ಯಾಹ್ನ 12 ರವರೆಗೆ

ಮಿಥುನ ರಾಶಿ
ಇಂದು ನೀವು ಮಾಡುವ ಪ್ರಯಾಣವು ಪ್ರಯೋಜನಕಾರಿಯಾಗಿದೆ. ನೀವು ಕೆಲಸದ ವಿಷಯದಲ್ಲಿ ಸ್ವಲ್ಪ ಒತ್ತಡವನ್ನು ಅನುಭವಿಸುತ್ತಿದ್ದರೆ ಸ್ವಲ್ಪ ಬಿಡುವು ಸಿಗಬಹುದು. ಈ ದಿನ ನಿಮ್ಮ ಕೆಲವು ದೊಡ್ಡ ಸಮಸ್ಯೆಗಳು ಬಗೆಹರಿಯುವ ಸಾಧ್ಯತೆಯಿದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಸಂಗಾತಿಯ ಮನಸ್ಥಿತಿ ಅಷ್ಟು ಸರಿಯಿರಲ್ಲ. ಅಂತಹ ಪರಿಸ್ಥಿತಿಯಲ್ಲಿ, ನೀವು ಯಾವುದೇ ವಿವಾದಾತ್ಮಕ ವಿಷಯಗಳ ಬಗ್ಗೆ ತರ್ಕ ಮಾಡಬೇಡಿ. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 20
ಅದೃಷ್ಟದ ಸಮಯ: ಬೆಳಿಗ್ಗೆ 7:15 ರಿಂದ ಮಧ್ಯಾಹ್ನ 2:05 ರವರೆಗೆ

ಕರ್ಕ ರಾಶಿ
ಇಂದು ನೀವು ಕಚೇರಿಯಲ್ಲಿ ನೀಡಿದ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗುವುದು. ನಿಮ್ಮ ಕಾರ್ಯಕ್ಷಮತೆಯಿಂದಾಗಿ ಕೆಲಸದಲ್ಲಿ ಗುರುತಿಸಿಕೊಳ್ಳುವಿರಿ. ಉದ್ಯಮಿಗಳು ಇಂದು ಅಪಾಯಕಾರಿ ನಿರ್ಧಾರವನ್ನು ತೆಗೆದುಕೊಳ್ಳಬಹುದು, ಆದರೆ ಅನುಭವಿಗಳ ಸಲಹೆ ಪಡೆದ ಬಳಿಕ ತೆಗೆದುಕೊಳ್ಳುವುದು ಒಳ್ಳೆಯದು. ನಿಮ್ಮ ಕೆಲವು ಕೆಲಸಗಳಲ್ಲಿ ಅಡಚಣೆಯಾಗುವ ಸಂಭವವಿದೆ. ಆರೋಗ್ಯವಾಗಿರಲು, ನೀವು ಅನಗತ್ಯ ಚಿಂತೆಗಳಿಂದ ದೂರವಿರಬೇಕು.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 24
ಅದೃಷ್ಟದ ಸಮಯ: ಮಧ್ಯಾಹ್ನ 12 ರಿಂದ 2:45

ಸಿಂಹ ರಾಶಿ
ನೀವು ಕಚೇರಿಯಲ್ಲಿ ಉನ್ನತ ಸ್ಥಾನದಲ್ಲಿ ಕೆಲಸ ಮಾಡುತ್ತಿದ್ದರೆ, ಇಂದು ನೀವು ನಿಮ್ಮ ಕಿರಿಯರಿಗೆ ಕೆಲವು ಉತ್ತಮ ಕೆಲಸಕ್ಕೆ ಸಂಬಂಧಿಸಿದ ಸಲಹೆಗಳನ್ನು ನೀಡಬಹುದು. ಇದಲ್ಲದೆ, ನಿಮ್ಮ ಸಕಾರಾತ್ಮಕತೆ, ಕೆಲಸ ಎಲ್ಲರನ್ನು ಮೆಚ್ಚಿಸುತ್ತದೆ. ಆಸ್ತಿಯಲ್ಲಿ ಕೆಲಸ ಮಾಡುವವರಿಗೆ ಇಂದು ಅನುಕೂಲಕರ ದಿನವಾಗಲಿದೆ. ಕೌಟುಂಬಿಕ ಜೀವನದಲ್ಲಿ ಸ್ವಲ್ಪ ಏರುಪೇರು ಉಂಟಾಗುವುದು. ಇಂದು ನೀವು ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಆರೋಗ್ಯದ ವಿಷಯದಲ್ಲಿ, ದಿನವು ಏರಿಳಿತಗಳಿಂದ ತುಂಬಿರುತ್ತದೆ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 15
ಅದೃಷ್ಟದ ಸಮಯ: ಸಂಜೆ 6 ರಿಂದ 8:05 ರವರೆಗೆ

ಕನ್ಯಾ ರಾಶಿ
ಈ ರಾಶಿಯ ವಿದ್ಯಾರ್ಥಿಗಳಿಗೆ ಇಂದು ಬಹಳ ಒಳ್ಳೆಯ ದಿನ. ನಿಮ್ಮ ವಿದ್ಯಾಭ್ಯಾಸದಲ್ಲಿ ಇದ್ದ ಅಡೆತಡೆ ನಿವಾರಣೆಯಾಗುತ್ತದೆ. ನಿಮ್ಮ ಹಿರಿಯರು ಮತ್ತು ಶಿಕ್ಷಕರ ಸಹಾಯದಿಂದ ನಿಮ್ಮ ಈ ಸಮಸ್ಯೆ ಬಗೆಹರಿಯಲಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯ ಲಕ್ಷಣಗಳಿವೆ. ನಿಮ್ಮ ಆದಾಯ ಹೆಚ್ಚಾಗಬಹುದು. ಉದ್ಯೋಗಸ್ಥರಿಗೆ ಕಚೇರಿಯಲ್ಲಿ ಮೇಲಧಿಕಾರಿಗಳ ಮಾರ್ಗದರ್ಶನ ದೊರೆಯಲಿದೆ. ಇಂದು ನೀವು ನಿಮ್ಮ ಪ್ರತಿಭೆಯನ್ನು ತೋರಿಸಲು ಉತ್ತಮ ಅವಕಾಶವನ್ನು ಪಡೆಯಬಹುದು. ಮತ್ತೊಂದೆಡೆ, ಉದ್ಯಮಿಗಳು ತರಾತುರಿಯಲ್ಲಿ ಯಾವುದೇ ಕೆಲಸ ಮಾಡುವುದನ್ನು ತಪ್ಪಿಸಬೇಕು. ಸಂಗಾತಿಯೊಂದಿಗೆ ಪರಸ್ಪರ ತಿಳುವಳಿಕೆ ಉತ್ತಮವಾಗಿರುತ್ತದೆ. ನಾವು ಆರೋಗ್ಯದ ಬಗ್ಗೆ ಹೇಳುವುದಾದರೆ ಹೊಟ್ಟೆಯ ಸೊಂಕಿನ ಸಮಸ್ಯೆವಿರಬಹುದು.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 21
ಅದೃಷ್ಟದ ಸಮಯ: ಬೆಳಿಗ್ಗೆ 11 ರಿಂದ ಮಧ್ಯಾಹ್ನ 2:30 ರವರೆಗೆ

ತುಲಾ ರಾಶಿ
ಮನೆಯ ಹಿರಿಯರೊಂದಿಗೆ ಮಾತನಾಡುವಾಗ, ನಿಮ್ಮ ಮಾತುಗಳನ್ನು ಬಹಳ ಎಚ್ಚರಿಕೆಯಿಂದ ಬಳಸಲು ಸಲಹೆ ನೀಡಲಾಗಿದ, ಅಹಂಕಾರದ ಮಾತುಗಳು ಅವರ ಮನಸ್ಸು ನೋಯಿಸುವುದು, ಆದ್ದರಿಂದ ಮಾತಿನ ಬಗ್ಗೆ ನಿಗಾ ಇರಲಿ. ಕಚೇರಿಯಲ್ಲಿ ಸಹೋದ್ಯೋಗಿಗಳ ಮೇಲೆ ಅತಿಯಾಗಿ ಅವಲಂಬಿಸುವುದು ಒಳ್ಳೆಯದು. ಉದ್ಯಮಿಗಳು ಯಾವುದೇ ಹಳೆಯ ನ್ಯಾಯಾಲಯದ ಪ್ರಕರಣವಿದ್ದರೆ ಅದರಿಂದ ಮುಕ್ತರಾಗಬಹುದು. ಭವಿಷ್ಯದಲ್ಲಿ ನೀವು ತುಂಬಾ ಜಾಗರೂಕರಾಗಿರಬೇಕು. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ನೋಡುವುದಾದರೆ ನೀವು ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರಬಹುದು.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 28
ಅದೃಷ್ಟ ಸಮಯ: ಬೆಳಿಗ್ಗೆ 9:20 ರಿಂದ ಮಧ್ಯಾಹ್ನ 12:05 ರವರೆಗೆ

ವೃಶ್ಚಿಕ ರಾಶಿ
ಈ ರಾಶಿಯ ನಿರುದ್ಯೋಗಿಗಳಿಗೆ ಇಂದು ಬಹಳ ಒಳ್ಳೆಯ ದಿನವಾಗಲಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಸರಿಯಾದ ಫಲಿತಾಂಶವನ್ನು ಪಡೆಯಬಹುದು. ನಿಮಗೆ ಉದ್ಯೋಗ ಸಿಗುವ ಸಾಧ್ಯತೆ ತುಂಬಾ ಇದೆ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರಿಗೆ ಇಂದು ಸವಾಲಿನ ದಿನವಾಗಿರಲಿದೆ. ನಿಮ್ಮ ಸಂಗಾತಿಯೊಂದಿಗೆ ನೀವು ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ಹಣಕಾಸಿನ ಸ್ಥಿತಿ ಹದಗೆಡುವ ಸಾಧ್ಯತೆ ಇದೆ. ನೀವು ಹಣಕ್ಕೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡಲು ಹೋದರೆ, ನೀವು ಇಂದು ಯಶಸ್ಸನ್ನು ಪಡೆಯದಿರಬಹುದು. ಆದ್ದರಿಂದ ಹಣಕಾಸಿನ ವ್ಯವಹಾರ ಮಾಡದಿರಿ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಸಾಮಾನ್ಯವಾಗಿರುತ್ತದೆ. ಆರೋಗ್ಯದ ಬಗ್ಗೆ ಗಮನಹರಿಸಿ.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 8
ಅದೃಷ್ಟದ ಸಮಯ: ಸಂಜೆ 5 ರಿಂದ 7:20 ರವರೆಗೆ

ಧನು ರಾಶಿ
ಇಂದು, ಉದ್ಯಮಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಹಣದ ವಿಷಯದಲ್ಲಿ ದಿನವು ಉತ್ತಮವಾಗಿರುತ್ತದೆ. ಇಂದು ನೀವು ಹೆಚ್ಚು ಉಳಿಸಲು ಸಾಧ್ಯವಾಗುತ್ತದೆ. ದಿನದ ಎರಡನೇ ಭಾಗದಲ್ಲಿ ಕುಟುಂಬದೊಂದಿಗೆ ಸಮಯ ಕಳೆಯುತ್ತೀರಿ. ಆರೋಗ್ಯದ ಬಗ್ಗೆ ಹೇಳುವುದಾದರೆ ಈ ದಿನ ಉತ್ತಮವಾಗಿರಲಿದೆ.
ಅದೃಷ್ಟದ ಬಣ್ಣ: ಗಾಢ ಕೆಂಪು
ಅದೃಷ್ಟದ ಸಂಖ್ಯೆ: 19
ಅದೃಷ್ಟದ ಸಮಯ: ಬೆಳಿಗ್ಗೆ 7 ರಿಂದ ಸಂಜೆ 6:30 ರವರೆಗೆ

ಮಕರ ರಾಶಿ
ನಿಮ್ಮ ಪ್ರಸ್ತುತ ಕೆಲಸದಲ್ಲಿ ನೀವು ತೃಪ್ತರಾಗಿಲ್ಲದಿದ್ದರೆ ಬೇರೆ ಕೆಲಸಕ್ಕೆ ಪ್ರಯತ್ನಿಸಲು ಸಮಯ ಅನುಕೂಲಕರವಾಗಿದೆ. ವ್ಯಾಪಾರಸ್ಥರು ಇಂದು ಆರ್ಥಿಕ ಲಾಭವನ್ನು ಪಡೆಯಬಹುದು. ನಿಮ್ಮ ವ್ಯಾಪಾರ ಯೋಜನೆಗಳು ವೇಗವನ್ನು ಪಡೆಯಬಹುದು. ಹಣದ ವಿಷಯದಲ್ಲಿ, ದಿನವು ತುಂಬಾ ದುಬಾರಿಯಾಗಲಿದೆ. ಅನಾವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕದಿದ್ದರೆ ಮುಂದೆ ಆರ್ಥಿಕ ಸಂಕಷ್ಟಬರಬಹುದು. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಒಡಹುಟ್ಟಿದವರೊಂದಿಗಿನ ನಿಮ್ಮ ಸಂಬಂಧವು ಇನ್ನಷ್ಟು ಬಲವಾಗಿರುತ್ತದೆ. ಆರೋಗ್ಯದ ಕಡೆ ಗಮನಹರಿಸಿ.
ಅದೃಷ್ಟದ ಬಣ್ಣ: ಮರೂನ್
ಅದೃಷ್ಟದ ಸಂಖ್ಯೆ: 7
ಅದೃಷ್ಟದ ಸಮಯ: ಮಧ್ಯಾಹ್ನ 2 ರಿಂದ 4:20 ರವರೆಗೆ

ಕುಂಭ ರಾಶಿ
ಉದ್ಯೋಗಸ್ಥರಿಗೆ ಇಂದು ಶುಭದಿನ. ಕಛೇರಿಯಲ್ಲಿನ ಉನ್ನತ ಅಧಿಕಾರಿಗಳಿಂದ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ವ್ಯಾಪಾರಸ್ಥರು ಬಯಸಿದ ಫಲಿತಾಂಶಗಳನ್ನು ಪಡೆಯುತ್ತಾರೆ. ನೀವು ಉತ್ತಮ ಹೂಡಿಕೆ ಅವಕಾಶವನ್ನು ಸಹ ಪಡೆಯಬಹುದು. ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯಗಳು ಹೆಚ್ಚಾಗಬಹುದು, ಕೋಪ ನಿಯಂತ್ರಿಸುವುದು ಒಳ್ಳೆಯದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಆರೋಗ್ಯ ದುರ್ಬಲವಾಗಿರಲಿದೆ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 11
ಅದೃಷ್ಟದ ಸಮಯ: ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ

ಮೀನ ರಾಶಿ
ಮಕ್ಕಳ ಕಾರಣಕ್ಕೆ ಖುಷಿ ಹೆಚ್ಚಾಗಲಿದೆ, ಅವರ ಸಾಧನೆ ಬಗ್ಗೆ ಹೆಮ್ಮೆ ಪಡುತ್ತೀರಿ. ಹಣದ ವಿಷಯದಲ್ಲಿ ಈ ದಿನ ಉತ್ತಮವಾಗಿದೆ. ನೀವು ಹೊಸ ಆದಾಯದ ಮೂಲವನ್ನು ಪಡೆಯಬಹುದು. ಸರ್ಕಾರಿ ನೌಕರಿ ಮಾಡುತ್ತಿರುವವರಿಗೆ ಅಪೇಕ್ಷಿತ ವರ್ಗಾವಣೆ ದೊರೆಯುವ ಸಾಧ್ಯತೆ ಬಲವಾಗಿದೆ. ನೀವು ವ್ಯಾಪಾರಸ್ಥರಾಗಿದ್ದರೆ ನಿಮ್ಮ ಕಷ್ಟಗಳು ಹೆಚ್ಚಾಗಬಹುದು. ಆರೋಗ್ಯದ ದೃಷ್ಟಿಯಿಂದ ದಿನವು ಅನುಕೂಲಕರವಾಗಿರುತ್ತದೆ.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 22
ಅದೃಷ್ಟದ ಸಮಯ: ಬೆಳಿಗ್ಗೆ 7 ರಿಂದ ಮಧ್ಯಾಹ್ನ 1:20 ರವರೆಗೆ

English summary

Dina Bhavishya -April 24 2023 Today Rashi Bhavishya, Daily Horoscope in Kannada

Dina Bhavishya- Get Today's Rashi Bhavishy 24 April 2023 In Kannada, Read daily horoscope prediction of aries, taurus, gemini, cancer, leo, virgo, libra, scorpio, Sagittarius, Capricorn, Aquarius, pisces in Kannada.
Story first published: Monday, April 24, 2023, 4:00 [IST]
X
Desktop Bottom Promotion