Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
Horoscope Today 22 April 2023: ಶನಿವಾರ: ಅಕ್ಷಯ ತೃತೀಯ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
ಶುಭೋದಯ..... ವೈದಿಕ ಶಾಸ್ತ್ರದ ಪ್ರಕಾರ ಏಪ್ರಿಲ್ 22ರ ರಾಶಿಫಲ ನೋಡೋಣ:
ಸಂವತ್ಸರ: ಶುಭಕೃತ್
ಆಯನ: ಉತ್ತರಾಯಣ
ಋತು: ವಸಂತ
ಮಾಸ: ವೈಶಾಖ
ಪಕ್ಷ: ಶುಕ್ಲಪಕ್ಷ
ತಿಥಿ: ಬಿದಿಗೆ
ನಕ್ಷತ್ರ: ಕೃತಿಕಾ
ರಾಹುಕಾಲ: ಬೆಳಗ್ಗೆ 09:04ರಿಂದ 10:42ರವರೆಗೆ

ಮೇಷ ರಾಶಿ
ಈ ದಿನ ನಿಮಗೆ ಒಳ್ಳೆಯದಿದೆ. ಬಹಳ ಸಮಯದ ನಂತರ, ನಿಮ್ಮ ಕೌಟುಂಬಿಕ ಜೀವನದಲ್ಲಿ ನೀವು ಸರಿಯಾಗಿ ಗಮನಹರಿಸಲು ಸಾಧ್ಯವಾಗುತ್ತದೆ. ನಿಮ್ಮ ಮನೆಯ ಅಲಂಕಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ನೀವು ಆಲೋಚಿಸಬಹುದು. ಕೆಲಸದಲ್ಲಿ ಇಂದು ನಿಮಗೆ ಸರಾಸರಿ ದಿನವಾಗಲಿದೆ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಇಂದು ನೀವು ಹಣಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಕೆಲಸಗಳನ್ನು ಮಾಡಬಹುದು. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 9
ಅದೃಷ್ಟದ ಸಮಯ: ಮಧ್ಯಾಹ್ನ 3 ರಿಂದ ಸಂಜೆ 7 ರವರೆಗೆ
ವೃಷಭ ರಾಶಿ
ನ್ಯಾಯಾಲಯದಲ್ಲಿ ಏನಾದರೂ ಪ್ರಕರಣವಿದ್ದರೆ ಅದರ ಚಿಂತೆ ಕಾಡಬಹುದು. ಕೆಲಸದ ಬಗ್ಗೆ ಮಾತನಾಡುವಾಗ, ಉದ್ಯೋಗಿಗಳು ಕಚೇರಿಯಲ್ಲಿ ತಪ್ಪುಗಳನ್ನು ಮಾಡದಂತೆ ಎಚ್ಚರವಹಿಸಿ. ವ್ಯಾಪಾರಸ್ಥರಿಗೆ ಲಾಭದ ದಿನ. ನೀವು ಇಂದು ನಿಮ್ಮ ಕಠಿಣ ಪರಿಶ್ರಮಕ್ಕೆ ಸರಿಯಾದ ಫಲಿತಾಂಶವನ್ನು ಪಡೆಯುವ ಸಾಧ್ಯತೆಯಿದೆ. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಉತ್ತಮ ಹೊಂದಾಣಿಕೆ ಇರುತ್ತದೆ. ಹಣದ ವಿಷಯದಲ್ಲಿ ದಿನವು ದುಬಾರಿಯಾಗಲಿದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ, ನೀವು ಸ್ನಾಯುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರಬಹುದು.
ಅದೃಷ್ಟದ ಬಣ್ಣ: ಗಾಢ ಹಳದಿ
ಅದೃಷ್ಟದ ಸಂಖ್ಯೆ: 31
ಅದೃಷ್ಟದ ಸಮಯ: ಬೆಳಗ್ಗೆ 8:15 ರಿಂದ ಸಂಜೆ 6ಗಂಟೆಯವರೆಗೆ
ಮಿಥುನ ರಾಶಿ
ಹವಾಮಾನ ಬದಲಾವಣೆಯಿಂದ ಇಂದು ನಿಮ್ಮ ಆರೋಗ್ಯ ಕ್ಷೀಣಿಸುವ ಸಾಧ್ಯತೆ ಇದೆ. ಇಂದು ಕೆಲಸವನ್ನು ಬದಿಗಿಟ್ಟು ವಿಶ್ರಾಂತಿಯತ್ತ ಗಮನ ಹರಿಸುವುದು ಉತ್ತಮ. ನಿಮ್ಮ ಜೀವನ ಸಂಗಾತಿಯ ಮೇಲೆ ನೀವು ನಂಬಿಕೆಯನ್ನು ಬಲವಾಗಿ ಇರಿಸಿಕೊಳ್ಳಲು ಪ್ರಯತ್ನಿಸಬೇಕು. ಅನುಮಾನ ಮಾಡಿದರೆ ವೈವಾಹಿಕ ಜೀವನದಲ್ಲಿ ಸಮಸ್ಯೆ ಹೆಚ್ಚಾಗಬಹುದು. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುತ್ತದೆ.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 44
ಅದೃಷ್ಟದ ಸಮಯ: ಸಂಜೆ 6 ರಿಂದ ರಾತ್ರಿ 9 ರವರೆಗೆ
ಕರ್ಕ ರಾಶಿ
ಪ್ರತಿಕೂಲ ಪರಿಸ್ಥಿತಿಗಳಲ್ಲಿಯೂ ನೀವು ನಿಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವುದರಿಂದ ನಿಮ್ಮ ಕಾರ್ಯಕ್ಷಮತೆಯನ್ನು ಮೇಲಾಧಿಕಾರಿಗಳು ಮೆಚ್ಚಿಕೊಳ್ಳುತ್ತಾರೆ. ನಿಮ್ಮ ಕಾರ್ಯ ವೈರಿಯಿಂದ ನೀವು ನೀಡಿದರೆ, ಶೀಘ್ರದಲ್ಲೇ ನೀವು ದೊಡ್ಡ ಪ್ರಗತಿಯನ್ನು ಸಾಧಿಸಬಹುದು. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರು ಆರ್ಥಿಕ ಲಾಭವನ್ನು ಗಳಿಸುವ ಸಾಧ್ಯತೆಯಿದೆ. ಸಂಗಾತಿಯೊಂದಿಗಿನ ನಿಮ್ಮ ಹೊಂದಾಣಿಕೆಯೂ ಉತ್ತಮವಾಗಿರಲಿದೆ. ತಂದೆಯ ಕಡೆಯಿಂದ ಆರ್ಥಿಕ ಲಾಭ ಸಾಧ್ಯ. ಆರೋಗ್ಯದ ವಿಷಯದಲ್ಲಿ ಈ ದಿನ ಮಿಶ್ರಫಲ.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 13
ಅದೃಷ್ಟದ ಸಮಯ: ಬೆಳಿಗ್ಗೆ 6 ರಿಂದ ಮಧ್ಯಾಹ್ನ 12:45 ರವರೆಗೆ
ಸಿಂಹ ರಾಶಿ
ರಾಜಕಾರಣಿಗಳಿಗೆ ಸವಾಲಿನ ದಿನ. ಪ್ರತಿಕೂಲ ಸಂದರ್ಭಗಳಲ್ಲಿ ಸಹ ತಾಳ್ಮೆಯಿಂದ ಕೆಲಸ ಮಾಡಲು ಸಲಹೆ ನೀಡಲಾಗಿದೆ. ವಿದೇಶಿ ಕಂಪನಿಗಳಿಗೆ ಸಂಬಂಧಿಸಿದ ವ್ಯಾಪಾರ ಮಾಡುವವರು ಇಂದು ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗಬಹುದು. ಹಣದ ವಿಷಯದಲ್ಲಿ ದಿನವು ಉತ್ತಮವಾಗಿರುತ್ತದೆ. ನಿಮ್ಮ ಬಜೆಟ್ ಅನ್ನು ಗಮನದಲ್ಲಿಟ್ಟುಕೊಂಡು ಖರ್ಚು ಮಾಡಿ. ಕೌಟುಂಬಿಕ ಜೀವನದಲ್ಲಿ ಖುಷಿ ಇರಲಿದೆ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 11
ಅದೃಷ್ಟದ ಸಮಯ: ಸಂಜೆ 4:40 ರಿಂದ ರಾತ್ರಿ 8:05 ರವರೆಗೆ
ಕನ್ಯಾ ರಾಶಿ
ಮಗುವಿನ ಅನಾರೋಗ್ಯದ ಚಿಂತೆ ಕಾಡಬಹುದು. ಕಚೇರಿಯಲ್ಲಿ ನಿಮ್ಮ ಪ್ರಮುಖ ಕೆಲಸವನ್ನು ಮಾಡುವಾಗ ಯಾವುದೇ ರೀತಿಯ ಆತುರವನ್ನು ಮಾಡಬೇಡಿ. ಸ್ವಲ್ಪ ನಿರ್ಲಕ್ಷ್ಯವು ನಿಮ್ಮ ಎಲ್ಲಾ ಶ್ರಮವನ್ನು ಹಾಳುಮಾಡುತ್ತದೆ. ಉದ್ಯಮಿಗಳು ಇಂದು ಉತ್ತಮ ಆರ್ಥಿಕ ಲಾಭವನ್ನು ಪಡೆಯಬಹುದು. ನೀವು ಯಾವುದೇ ಬದಲಾವಣೆಯ ಬಗ್ಗೆ ಯೋಚಿಸುತ್ತಿದ್ದರೆ, ಖಂಡಿತವಾಗಿಯೂ ನಿಮ್ಮ ಆಪ್ತರಿಂದ ಸಲಹೆ ಪಡೆಯಿರಿ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ಬಿಡುವಿಲ್ಲದ ದಿನಚರಿಯ ನಡುವೆಯೂ ವಿಶ್ರಾಂತಿ ಕಡೆಗೆ ಗಮನಹರಿಸುವುದು ಒಳ್ಳೆಯದು.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 7
ಅದೃಷ್ಟದ ಸಮಯ: ಮಧ್ಯಾಹ್ನ 2 ರಿಂದ ರಾತ್ರಿ 9 ರವರೆಗೆ
ತುಲಾ ರಾಶಿ
ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಸಾಮಾನ್ಯವಾಗಿರಲಿದೆ. ಹಣದ ವಿಷಯದಲ್ಲಿಈ ದಿನ ಉತ್ತಮವಾಗಿರಲಿದೆ. ಹಣವನ್ನು ಮಿತಿಯಲ್ಲಿ ಖರ್ಚು ಮಾಡುವುದು ಒಳ್ಳೆಯದು. ಕಚೇರಿಯಲ್ಲಿ ಪ್ರಮುಖ ಸಭೆಯ ಭಾಗವಾಗಲು ನಿಮಗೆ ಅವಕಾಶ ಸಿಗುತ್ತದೆ. ವ್ಯಾಪಾರಸ್ಥರಿಗೆ ಮಿಶ್ರ ಲಾಭ ದೊರೆಯಲಿದೆ. ಆರೋಗ್ಯದ ವಿಷಯದಲ್ಲಿ, ದಿನವು ಏರಿಳಿತಗಳಿಂದ ಕೂಡಿರಲಿದೆ.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 12
ಅದೃಷ್ಟದ ಸಮಯ: ಬೆಳಗ್ಗೆ 4:15ರಿಂದ ಸಂಜೆ 5 ಗಂಟೆಯವರೆಗೆ
ವೃಶ್ಚಿಕ ರಾಶಿ
ಹಣದ ವಿಷಯದಲ್ಲಿ ಈ ದಿನ ಉತ್ತಮವಾಗಿರಲಿದೆ. ಮನೆಯವರೊಂದಿಗೆ ಶಾಪಿಂಗ್ ಅಂತ ಸಮಯ ಕಳೆಯುವಿರಿ. ಯಾರಾದರೂ ನಿಮಗೆ ಸಲಹೆ ನೀಡಿದರೆ, ಅವರ ಮಾತುಗಳನ್ನು ನಿರ್ಲಕ್ಷಿಸುವ ತಪ್ಪನ್ನು ಮಾಡಬೇಡಿ. ಕೆಲಸದ ದೃಷ್ಟಿಯಿಂದ ಈ ದಿನವು ಕಾರ್ಯನಿರತವಾಗಿರುತ್ತದೆ. ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡಲು ಹೋಗಬೇಡಿ.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 35
ಅದೃಷ್ಟದ ಸಮಯ: ಮಧ್ಯಾಹ್ನ 2:30 ರಿಂದ ಸಂಜೆ 6 ರವರೆಗೆ
ಧನು ರಾಶಿ
ಇಂದು ನಿಮಗೆ ತುಂಬಾ ಅದೃಷ್ಟದ ದಿನ. ನಿಮ್ಮ ಗೌರವ ಹೆಚ್ಚಾಗುತ್ತದೆ. ಉದ್ಯಮಿಗಳು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಿದರೆ, ನೀವು ಉತ್ತಮ ಯಶಸ್ಸನ್ನು ಪಡೆಯಬಹುದು. ಉದ್ಯೋಗಸ್ಥರು ಕಚೇರಿಯಲ್ಲಿ ಕೆಲವು ಕಷ್ಟಕರ ಕೆಲಸಗಳನ್ನು ಮಾಡಬೇಕಾಗಬಹುದು. ಆದರೆ ಬಲವಾದ ಆತ್ಮವಿಶ್ವಾಸದಿಂದ ನಿಮ್ಮ ಕೆಲಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗುತ್ತದೆ. ಸಂಗಾತಿಯು ಉತ್ತಮ ಮನಸ್ಥಿತಿಯಲ್ಲಿರುತ್ತಾರೆ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಹೇಳುವುದಾದರೆ ಈ ದಿನ ಉತ್ತಮವಾಗಿರಲಿದೆ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 20
ಅದೃಷ್ಟದ ಸಮಯ: ಬೆಳಿಗ್ಗೆ 10:35 ರಿಂದ ಸಂಜೆ 7 ರವರೆಗೆ
ಮಕರ ರಾಶಿ
ಇಂದು ನೀವು ಧಾರ್ಮಿಕ ಚಟುವಟಿಕೆಗಳಲ್ಲಿತೊಡಗಿಕೊಳ್ಳಬಹುದು. ಉದ್ಯೋಗಿಗಳಿಗೆ ಇಂದು ಕಷ್ಟದ ದಿನ ಎಂದು ನಿರೀಕ್ಷಿಸಲಾಗಿದೆ .ಉದ್ಯೋಗಿಗಳು ಕೆಲಸದ ವಿಷಯದಲ್ಲಿ ನಿರ್ಲಕ್ಷ್ಯ ಮಾಡಬೇಡಿ. ಉದ್ಯಮಿಗಳು ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗಬಹುದು. ನೀವು ಸಾಲ ತೆಗೆದುಕೊಳ್ಳಲು ಅಥವಾ ಎರವಲು ಪಡೆಯಲು ಯೋಚಿಸುತ್ತಿದ್ದರೆ, ಅಗತ್ಯಕ್ಕಿಂತ ಹೆಚ್ಚಿನ ಹಣವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಆಹ್ಲಾದಕರವಾಗಿರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಎಚ್ಚರವಿರಲಿ.
ಅದೃಷ್ಟದ ಬಣ್ಣ: ಗಾಢ ಹಸಿರು
ಅದೃಷ್ಟದ ಸಂಖ್ಯೆ: 4
ಅದೃಷ್ಟದ ಸಮಯ: ಸಂಜೆ 5 ರಿಂದ ರಾತ್ರಿ 8:30 ರವರೆಗೆ
ಕುಂಭ ರಾಶಿ
ಇಂದು ನೀವು ಕೆಲಸದ ಸ್ಥಳದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ತುಂಬಾ ಸಮಯದಿಂದ ಆದಾಯ ಹೆಚ್ಚಿಸಲು ಯೋಚಿಸುತ್ತಿದ್ದರೆ ಈ ದಿನ ಶುಭ ಫಲ ಪಡೆಯಬಹುದು. ಶೀಘ್ರದಲ್ಲೇ ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲು ನಿಮಗೆ ಅವಕಾಶ ಸಿಗುತ್ತದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ, ಇಂದು ನೀವು ನಿಮ್ಮ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು.
ಅದೃಷ್ಟದ ಬಣ್ಣ: ಕೆನೆ
ಅದೃಷ್ಟದ ಸಂಖ್ಯೆ: 18
ಅದೃಷ್ಟದ ಸಮಯ: ಮಧ್ಯಾಹ್ನ 3 ರಿಂದ ರಾತ್ರಿ 9 ರವರೆಗೆ
ಮೀನ ರಾಶಿ
ಉದ್ಯೋಗಸ್ಥರು ಕಚೇರಿಯಲ್ಲಿ ಜಾಗೃತರಾಗಿರಲು ಸೂಚಿಸಲಾಗಿದೆ. ನಿಮ್ಮ ಯಾವುದೇ ಕೆಲಸವನ್ನು ನಾಳೆಗೆ ಮುಂದೂಡಬೇಡಿ. ವ್ಯಾಪಾರಸ್ಥರು ದೂರ ಪ್ರಯಾಣ ಮಾಡಬೇಕಾಗಬಹುದು. ನಿಮ್ಮ ಈ ಪ್ರಯಾಣವು ತುಂಬಾ ಆಯಾಸದಾಯಕವಾಗಿರುತ್ತದೆ. ಹಣದ ವಿಷಯದಲ್ಲಿ ನೀವು ಅದೃಷ್ಟಶಾಲಿಯಾಗುತ್ತೀರಿ. ಕಡಿಮೆ ಶ್ರಮದಿಂದ ಉತ್ತಮ ಹಣವನ್ನು ಪಡೆಯಬಹುದು. ಇಂದು ನೀವು ಯಾವುದೇ ಹಳೆಯ ಸಾಲವನ್ನು ಮರುಪಾವತಿಸಲು ಸಾಧ್ಯವಾಗುತ್ತದೆ. ಮನೆಯ ವಾತಾವರಣ ಶಾಂತವಾಗಿರುತ್ತದೆ. ಆರೋಗ್ಯದ ವಿಷಯದಲ್ಲಿ, ದಿನವು ಸರಾಸರಿಯಾಗಲಿದೆ.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 23
ಅದೃಷ್ಟದ ಸಮಯ: ಮಧ್ಯಾಹ್ನ 3:25 ರಿಂದ ಸಂಜೆ 5 ರವರೆಗೆ



Click it and Unblock the Notifications












