Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Horoscope Today 11 April 2023: ಮಂಗಳವಾರ: ಈ ದಿನ 12 ರಾಶಿಗಳ ರಾಶಿಫಲ ಹೇಗಿದೆ?
ಶುಭೋದಯ..... ವೈದಿಕ ಶಾಸ್ತ್ರದ ಪ್ರಕಾರ ಏಪ್ರಿಲ್ 11ರ ರಾಶಿಫಲ ನೋಡೋಣ:
ಸಂವತ್ಸರ: ಶುಭಕೃತ್
ಆಯನ: ಉತ್ತರಾಯಣ
ಋತು: ವಸಂತ
ಮಾಸ: ವೈಶಾಖ
ಪಕ್ಷ: ಕೃಷ್ಣಪಕ್ಷ
ತಿಥಿ: ಪಂಚಮಿ
ನಕ್ಷತ್ರ: ಮಧ್ಯಾಹ್ನ 12:58ರವರೆಗೆ ಜ್ಯೇಷ್ಠ ನಂತರ ಮೂಲ
ರಾಹುಕಾಲ: ಮಧ್ಯಾಹ್ನ 03:26ರಿಂದ ಸಂಜೆ 04:59ರವರೆಗೆ

ಮೇಷ ರಾಶಿ
ಇಂದು ನೀವು ಕೆಲಸದ ಮುಂಭಾಗದಲ್ಲಿ ಹೆಚ್ಚು ಜಾಗರೂಕರಾಗಿರಿ. ಗ್ರಹಗಳ ಸ್ಥಾನಗಳ ಋಣಾತ್ಮಕ ಪರಿಣಾಮಗಳಿಂದಾಗಿ, ನಿಮ್ಮ ಕೆಲವು ಪ್ರಮುಖ ಕೆಲಸಗಳಿಗೆ ಇಂದು ಅಡ್ಡಿಯಾಗಬಹುದು. ಇಂದು ನೀವು ಮಾನಸಿಕವಾಗಿ ಸಾಕಷ್ಟು ಒತ್ತಡವನ್ನು ಅನುಭವಿಸುವ ಸಾಧ್ಯತೆಯಿದೆ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ನೀವು ಸಾಲ ಅಥವಾ ಕ್ರೆಡಿಟ್ ವಹಿವಾಟುಗಳನ್ನು ತಪ್ಪಿಸಬೇಕು. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಸಮನ್ವಯವು ಇನ್ನೂ ಉತ್ತಮವಾಗಿರುತ್ತದೆ. ನೀವು ಪರಸ್ಪರ ಸಂಪೂರ್ಣವಾಗಿ ಸಮರ್ಪಿತರಾಗುತ್ತೀರಿ. ಈ ದಿನ ಆರೋಗ್ಯದ ಕಡೆಗೆ ಗಮನ ನೀಡಿ.
ಅದೃಷ್ಟದ ಬಣ್ಣ: ಗಾಢ ಕೆಂಪು
ಶುಭ ದಿನ: 23
ಅದೃಷ್ಟದ ಸಮಯ: ಮಧ್ಯಾಹ್ನ 1:30 ರಿಂದ ಸಂಜೆ 7:15ರವರೆಗೆ
ವೃಷಭ ರಾಶಿ
ಇಂದು ನಿಮ್ಮ ಸಮಸ್ಯೆಗೆ ಪರಿಹಾರ ಸಿಗಲಿದೆ. ಕಛೇರಿಯ ವಾತಾವರಣ ಇಂದು ಉತ್ತಮವಾಗಿರಲಿದೆ. ಕೆಲಸದ ಹೊರೆಯೂ ಕಡಿಮೆ ಆಗಿರಲಿದೆ. ಇಂದು ನಿಮಗಾಗಿ ಸಾಕಷ್ಟು ಸಮಯ ಸಿಗಲಿದೆ. ವ್ಯಾಪಾರಕ್ಕೆ ಸಂಬಂಧಿಸಿದಂತೆ ದೊಡ್ಡ ಖರ್ಚಾಗಳಾಗಬಹುದು. ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ಈ ದಿನ ಅಷ್ಟು ಅನುಕೂಲಕರವಲ್ಲ.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 18
ಅದೃಷ್ಟದ ಸಮಯ: ಮಧ್ಯಾಹ್ನ 3 ರಿಂದ 6:30 ರವರೆಗೆ
ಮಿಥುನ ರಾಶಿ
ಇಂದು ನೀವು ಯಾರನ್ನೂ ಕುರುಡಾಗಿ ನಂಬಬೇಡಿ. ನಿಮ್ಮ ವಿದ್ಯಾಭ್ಯಾಸದಲ್ಲಿ ಯಾವುದೇ ಅಡೆತಡೆಗಳಿದ್ದರೆ ಇಂದು ನಿಮ್ಮ ಸಮಸ್ಯೆಯನ್ನು ಪರಿಹಾರವಾಗಬಹುದು. ಹಣದ ವಿಚಾರದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಮಾಡಬೇಡಿ. ಯಾವುದೇ ಹಣಕಾಸಿನ ವ್ಯವಹಾರವನ್ನು ತರಾತುರಿಯಲ್ಲಿ ಮಾಡುವುದನ್ನು ತಪ್ಪಿಸಿ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಆಕಾಶ ನೀಲಿ
ಅದೃಷ್ಟದ ಸಂಖ್ಯೆ: 18
ಅದೃಷ್ಟದ ಸಮಯ: ಬೆಳಿಗ್ಗೆ 7:30 ರಿಂದ ಮಧ್ಯಾಹ್ನ 2 ರವರೆಗೆ
ಕರ್ಕ ರಾಶಿ
ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ ಈ ದಿನ ಶುಭವಾಗಿರಲಿದೆ. ಸಂಪತ್ತು ವೃದ್ಧಿಯಾಗಲಿದೆ. ಮನೆಯ ವಾತಾವರಣ ಶಾಂತವಾಗಿರಲಿದೆ. ನೀವು ಉದ್ಯಮಿಯಾಗಿದ್ದರೆ ಮತ್ತು ಹಲವಾರು ಪ್ರಯತ್ನಗಳ ಹೊರತಾಗಿಯೂ, ನೀವು ನಿರೀಕ್ಷಿತ ಫಲಿತಾಂಶಗಳನ್ನು ಪಡೆಯುತ್ತಿಲ್ಲ ಆದರೆ ನೀವು ಹೆಚ್ಚು ಚಿಂತಿಸಬೇಕಾಗಿಲ್ಲ. ನಿಮ್ಮ ಕಠಿಣ ಪರಿಶ್ರಮದಿಂದ ಬಯಸಿದ ಫಲಿತಾಂಶ ಸಿಗುವಿರಿ. ಉದ್ಯೋಗಿಗಳಿಗೆ ಈ ದಿನವು ಸಾಮಾನ್ಯವಾಗಿರಲಿದೆ. ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಯಿದ್ದರೆ ಆರೋಗ್ಯ ಸರಿಯಿರಲ್ಲ.
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ: 34
ಅದೃಷ್ಟದ ಸಮಯ: ಬೆಳಿಗ್ಗೆ 8 ರಿಂದ ಮಧ್ಯಾಹ್ನ 3:35 ರವರೆಗೆ
ಸಿಂಹ ರಾಶಿ
ದಾಂಪತ್ಯ ಜೀವನದಲ್ಲಿ ಸಂತಸ ಇರಲಿದೆ. ನವ ದಂಪತಿಗಳ ದಾಂಪತ್ಯ ಜೀವನದಲ್ಲಿ ಹೊಸ ತಿರುವು ಮೂಡಬಹುದು. ಸ್ವಲ್ಪ ಸಮಯದಿಂದ ಕೆಲಸದ ಹೊರೆ ಸ್ವಲ್ಪ ಹೆಚ್ಚಿದ್ದರೆ ಈ ದಿನ ಕೆಲಸ ಕಡಿಮೆ ಇರಲಿದೆ. ಉದ್ಯೋಗಿಗಳಿಗೆ ಕೆಲಸದಲ್ಲಿ ಇಂದು ಉತ್ತಮವಾಗಲಿದೆ. ಹಣದ ವಿಷಯದಲ್ಲಿ ಇಂದು ನಿಮಗೆ ದುಬಾರಿಯಾಗಲಿದೆ. ಆದರೂ ಯಾವುದೇ ದೊಡ್ಡ ಸಮಸ್ಯೆ ಇರಲ್ಲ.
ಅದೃಷ್ಟದ ಬಣ್ಣ: ಕಡು ನೀಲಿ
ಅದೃಷ್ಟದ ಸಂಖ್ಯೆ: 11
ಅದೃಷ್ಟದ ಸಮಯ: ಬೆಳಿಗ್ಗೆ 5:05 ರಿಂದ ಮಧ್ಯಾಹ್ನ 2 ರವರೆಗೆ
ಕನ್ಯಾ ರಾಶಿ
ಇಂದು ಹಣದ ಖರ್ಚು ಇರಬಹುದು. ಇಂದು ನೀವು ಬಾಕಿ ಉಳಿದಿರುವ ಕಾರ್ಯಗಳನ್ನು ಪೂರ್ಣಗೊಳಿಸಲು ಶ್ರಮಿಸುವುದು ಒಳ್ಳೆಯದು. ನಿಮ್ಮ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ನಿಮ್ಮ ಸೌಕರ್ಯಗಳಲ್ಲಿ ಹೆಚ್ಚಳವಾಗಲಿದೆ. ಹಿರಿಯರ ಸಲಹೆ ಪಾಲಿಸಿ. ಆರೋಗ್ಯದ ವಿಷಯದಲ್ಲಿ ದಿನವು ಸರಾಸರಿಯಾಗಲಿದೆ.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 26
ಅದೃಷ್ಟದ ಸಮಯ: ಮಧ್ಯಾಹ್ನ 12 ರಿಂದ ಸಂಜೆ 6:30 ರವರೆಗೆ
ತುಲಾ ರಾಶಿ
ಆರ್ಥಿಕ ಪರಿಸ್ಥಿತಿ ಹದಗೆಡುವ ಲಕ್ಷಣಗಳಿವೆ. ಹಣವನ್ನು ನೋಡಿಕೊಂಡು ಖರ್ಚು ಮಾಡಿದರೆ ಒಳ್ಳೆಯದು. ಉದ್ಯಮಿಗಳು ಇಂದು ಹೂಡಿಕೆಗೆ ಉತ್ತಮ ಅವಕಾಶವನ್ನು ಪಡೆಯಬಹುದು. ಉದ್ಯೋಗಸ್ಥರು ಕೆಲಸದ ಕಡೆಗೆ ಅಧಿಕ ಗಮನಹರಿಸಬೇಕು. ಕೌಟುಂಬಿಕ ಜೀವನ ಚೆನ್ನಾಗಿರಲಿದೆ. ನಿಮ್ಮ ಪ್ರೀತಿಪಾತ್ರರ ಬೆಂಬಲವನ್ನು ನೀವು ಪಡೆಯುತ್ತೀರಿ. ಆಹಾರಕ್ರಮದ ಕಡೆಗೆ ಗಮನಹರಿಸಿ.
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ: 34
ಅದೃಷ್ಟ ಸಮಯ: ಬೆಳಿಗ್ಗೆ 8:55 ರಿಂದ ಮಧ್ಯಾಹ್ನ 2 ರವರೆಗೆ
ವೃಶ್ಚಿಕ ರಾಶಿ
ವಿದ್ಯಾರ್ಥಿಗಳಿಗೆ ಈ ದಿನ ಅನುಕೂಲಕರವಾಗಿದೆ. ಈ ದಿನ ನಿಮ್ಮ ಆತ್ಮವಿಶ್ವಾಸವೂ ಹೆಚ್ಚಾಗುತ್ತದೆ. ಸರ್ಕಾರಿ ಕೆಲಸ ಮಾಡುವವರು ಬಯಸಿದ ವರ್ಗಾವಣೆಯನ್ನು ಪಡೆಯಬಹುದು. ಖಾಸಗಿ ಉದ್ಯೋಗಿಗಳಿಗೆ ಇಂದು ಉತ್ತಮವಾಗಿದೆ. ವ್ಯಾಪಾರಸ್ಥರಿಗೆ ಇಂದು ಸವಾಲಿನ ದಿನವಾಗಿದೆ. ಹಣದ ವಿಷಯದಲ್ಲಿ ಈ ದಿನವು ಸಾಮಾನ್ಯವಾಗಿರಲಿದೆ. ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಆರೋಗ್ಯದ ಕಡೆಗೆ ಗಮನಹರಿಸಿ.
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ: 3
ಅದೃಷ್ಟದ ಸಮಯ: ಸಂಜೆ 6 ರಿಂದ 9:05 ರವರೆಗೆ
ಧನು ರಾಶಿ
ಇಂದು ಹಣಕ್ಕೆ ಸಂಬಂಧಿಸಿದ ಚಿಂತೆ ದೂರವಾಗಲಿದೆ. ಉದ್ಯೋಗದಲ್ಲಿ ಬದಲಾವಣೆಯಾಗಬಹುದು, ಒಳ್ಳೆಯ ಅವಕಾಶಗಳು ದೊರೆಯಲಿದೆ. ವ್ಯಾಪಾರಸ್ಥರ ಆರ್ಥಿಕ ಸ್ಥಿತಿಯಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಈ ಹಿಂದೆ ತೆಗೆದುಕೊಂಡ ಯಾವುದೇ ಪ್ರಮುಖ ನಿರ್ಧಾರದ ಉತ್ತಮ ಫಲಿತಾಂಶ ಇಂದು ದೊರೆಯಲಿದೆ. ಸಂಗಾತಿಯ ನಡವಳಿಕೆ ಮನಸ್ಸಿಗೆ ನೋವುಂಟು ಮಾಡಬಹುದು, ತಾಳ್ಮೆಯಿಂದ ಅವರ ಜೊತೆ ಮಾತನಾಡಿ. ಆರೋಗ್ಯ ಸುಧಾರಿಸಲಿದೆ.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 26
ಅದೃಷ್ಟದ ಸಮಯ: ಮಧ್ಯಾಹ್ನ 12 ರಿಂದ ಸಂಜೆ 6:30 ರವರೆಗೆ
ಮಕರ ರಾಶಿ
ಉದ್ಯೋಗಸ್ಥರಿಗೆ ಈ ದಿನ ಅನುಕೂಲಕರವಾಗಿದೆ. ಇಂದು ಪ್ರಗತಿಯ ಬಲವಾದ ಸಾಧ್ಯತೆಯಿದೆ. ಈ ದಿನ ನೀವು ದುರಂಕಾರದಿಂದ ವರ್ತಿಸದಿದ್ದರೆ ಒಳ್ಳೆಯದು. ಉದ್ಯಮಿಗಳಿಗೆ ಸವಾಲಿನ ದಿನ. ಇಂದು ಕೋಪವನ್ನು ನಿಯಂತ್ರಿಸಿದರೆ ಮನೆಯ ವಾತಾವರಣ ಹಾಳಾಗದಂತೆ ನೋಡಿಕೊಳ್ಳಬಹುದು, ಚಿಕ್ಕ ವಿಷಯಕ್ಕೆ ಕೋಪಗೊಂಡರೆ ಮನೆಯಲ್ಲಿ ನೆಮ್ಮದಿ ಇಲ್ಲವಾಗುವುದು. ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡಬೇಡಿ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 24
ಅದೃಷ್ಟದ ಸಮಯ: ಬೆಳಿಗ್ಗೆ 11:20 ರಿಂದ ರಾತ್ರಿ 8:30 ರವರೆಗೆ
ಕುಂಭ ರಾಶಿ
ಮಗುವಿನ ಕಡೆಯಿಂದ ಸಂತೋಷ ಇರಲಿದೆ. ಇಂದು ಕಚೇರಿಯಲ್ಲಿ ಕೆಲಸದ ಕಡೆ ಅಧಿಕಗಮನವಿರಲಿ. ಇಲ್ಲದಿದ್ದರೆ ಬಾಸ್‌ನ ಕೋಪ ಎದುರಿಸಬೇಕಾಗಬಹುದು. ವ್ಯಾಪಾರಸ್ಥರು ಅಪೇಕ್ಷಿತ ಲಾಭವನ್ನು ಪಡೆಯಬಹುದು. ಇಂದು ನೀವು ಪ್ರಮುಖ ವ್ಯವಹಾರ ನಿರ್ಧಾರವನ್ನು ತೆಗೆದುಕೊಳ್ಳುತ್ತೀರಿ. ಈ ದಿನ ಕುಟುಂಬದೊಂದಿಗೆ ಮೋಜು-ಮಸ್ತಿಯೊಂದಿಗೆ ಸಮಯ ಕಳೆಯುವಿರಿ. ಆರೋಗ್ಯ ಇಂದು ಉತ್ತಮವಾಗಿರಲಿದೆ.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 21
ಅದೃಷ್ಟದ ಸಮಯ: ಮಧ್ಯಾಹ್ನ 2:55 ರಿಂದ ರಾತ್ರಿ 8:05 ರವರೆಗೆ
ಮೀನ ರಾಶಿ
ನೀವು ಉದ್ಯಮಿಯಾಗಿದ್ದರೆ, ಸರ್ಕಾರದ ನಿಯಮಗಳನ್ನು ಉಲ್ಲಂಘಿಸುವುದು ಮಾಡಬೇಡಿ, ಇಲ್ಲದಿದ್ದರೆ ನೀವು ದೊಡ್ಡ ತೊಂದರೆಗೆ ಒಳಗಾಗಬಹುದು. ಉದ್ಯೋಗಸ್ಥರು ಕಚೇರಿಯಲ್ಲಿ ಹೆಚ್ಚು ತಮಾಷೆ ಮಾಡಲು ಹೋಗದಿದ್ದರೆ ಒಳ್ಳೆಯದು. ನಿಮ್ಮ ತಮಾಷೆಯೇ ಮುಳುವಾಗಬಹುದು. ಇಂದು ವೈವಾಹಿಕ ಜೀವನದಲ್ಲಿ ಖುಷಿ ಇರಲಿದೆ, ಸಂಗಾತಿಗಾಗಿ ತುಂಬಾ ಸಮಯ ಕೊಡುವಿರಿ. ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿದೆ. ಆರೋಗ್ಯ ಸರಿಯಿಲ್ಲದಿದ್ದರೆ ನಿರ್ಲಕ್ಷ್ಯ ಮಾಡಬೇಡಿ.
ಅದೃಷ್ಟದ ಬಣ್ಣ: ಕೆನೆ
ಅದೃಷ್ಟದ ಸಂಖ್ಯೆ: 12
ಅದೃಷ್ಟದ ಸಮಯ: ಸಂಜೆ 4:15 ರಿಂದ ರಾತ್ರಿ 9:50 ರವರೆಗೆ



Click it and Unblock the Notifications
