Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಮೇ 5: ಭಾನುವಾರ 12 ರಾಶಿಗಳಲ್ಲಿ ಈ 5 ರಾಶಿಯವರಿಗೆ ಆರ್ಥಿಕ ತೊಂದರೆ ಇರಲ್ಲ
ವೈದಿಕ ಶಾಸ್ತ್ರದ ಪ್ರಕಾರ ಮೇ 5 ನಿಮಗೆ ಹೇಗಿರಲಿದೆ ಎಂದು ನೋಡೋಣ...
ಮೇಷ ರಾಶಿ
ಆರ್ಥಿಕವಾಗಿ ಯಾವುದೇ ಸಮಸ್ಯೆ ಇರಲ್ಲ. ವ್ಯಾಪಾರಿಗಳು ನಿರೀಕ್ಷೆ ಮಾಡಿದಂತೆ ಫಲಿತಾಂಶ ಪಡೆಯಲು ಸಾಧ್ಯವಾಗುವುದು. ಇನ್ನು ನಿಮ್ಮ ಕೆಲಸದಲ್ಲಿ ನಿರ್ಲಕ್ಷ್ಯ ಬೇಡ, ಕುಟುಂಬ ಜೀವನ ಚೆನ್ನಾಗಿರಲಿದೆ. ಆರೋಗ್ಯದ ದೃಷ್ಟಿಯಿಂದ ದಿನವು ಅನುಕೂಲಕರವಾಗಿರುತ್ತದೆ.

ವೃಷಭ ರಾಶಿ
ವ್ಯಾಪಾರಿಗಳಿಗೆ ಈ ದಿನ ತುಂಬಾ ಉತ್ತಮವಾಗಿರಲಿದೆ. ವ್ಯಾಪಾರಸ್ಥರಿಗೆ ಈ ದಿನ ಉತ್ತಮವಾಗಿರಲಿದೆ. ನಿಮ್ಮ ಕೆಲಸವು ಯಾವುದೇ ಅಡೆತಡೆಯಿಲ್ಲದೆ ಪೂರ್ಣವಾಗಲಿದೆ.
ಆರ್ಥಿಕವಾಗಿ ಈ ದಿನ ತುಂಬಾ ಚೆನ್ನಾಗಿರಲಿದೆ. ನೀವು ಬಯಸಿದಂತೆ ಶಾಪಿಂಗ್ ಮಾಡಬಹುದು, ಆರೋಗ್ಯದ ಕಡೆ ಸ್ವಲ್ಪ ಗಮನಹರಿಸಿ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಆರ್ಥಿಕ ತೊಂದರೆಯಿದೆ, ನೀವು ಖರ್ಚು ನಿಯಂತ್ರಿಸಿದರೆ ಒಳ್ಳೆಯದು. ಇಲ್ಲದಿದ್ದರೆ ಆರ್ಥಿಕ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು. ವ್ಯಾಪಾರಿಗಳು ಈ ದಿನ ಯಾವುದೇ ವ್ಯಾಪಾರ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ವೈವಾಹಿಕ ಜೀವನ ಚೆನ್ನಾಗಿರಲಿದೆ.
ಕರ್ಕ ರಾಶಿ
ಪ್ರೇಮಿಗಳಿಗೆ ಈ ದಿನ ತುಂಬಾ ವಿಶೇಷವಾಗಿರಲಿದೆ. ವಿವಾಹಿತರ ವೈವಾಹಿಕ ಜೀವನ ಖುಷಿಯಾಗಿರಲಿದೆ. ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರಲಿದೆ. ಉದ್ಯಮಿಗಳಿಗೆ ಈ ದಿನ ಸಾಮಾನ್ಯವಾಗಿರಲಿದೆ. ವ್ಯಾಪಾರಿಗಳು ಉತ್ತಮ ಲಾಭವನ್ನು ಪಡೆಯಲು ನೀವು ಸರಿಯಾದ ದಿಕ್ಕಿನಲ್ಲಿ ಪ್ರಯತ್ನ ಮಾಡಬೇಕು.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ದಿನ ಅಷ್ಟೊಂದು ಅನುಕೂಲಕರವಲ್ಲ, ಆತುರದಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಸಂಸಾರದಲ್ಲಿ ಅನಗತ್ಯ ಕೋಪ ಮತ್ತು ಅಹಂ ತೊಂದರೆ ಉಂಟು ಮಾಡಬಹುದು. ಖರ್ಚು ಅಧಿಕವಿರಲಿದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.
ಕನ್ಯಾ ರಾಶಿ
ಉದ್ಯೋಗ ಅಥವಾ ವ್ಯವಹಾರವಾಗಿರಲಿ ಈ ದಿನ ಉತ್ತಮವಾಗಿರಲಿದೆ. ನೀವು ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ ಶೀಘ್ರದಲ್ಲಿಯೇ ಉತ್ತಮ ಫಲಿತಾಂಶ ಪಡೆಯುತ್ತೀರಿ. ಆರ್ಥಿಕವಾಗಿಯೂ ಈ ದಿನ ಉತ್ತಮವಾಗಿರಲಿದೆ. ಆರೋಗ್ಯ ಚೆನ್ನಾಗಿರಲಿದೆ.
ತುಲಾ ರಾಶಿ
ಕೆಲವು ದಿನಗಳಿಂದ ನೀವು ತುಂಬಾ ಒತ್ತಡಕ್ಕೆ ಒಳಗಾಗಿರಬಹುದು, ಆದರೆ ಒತ್ತಡ ಕಡಿಮೆಯಾಗುವ ಸೂಚನೆಯಿದೆ. ಹಣಕಾಸಿನ ಪರಿಸ್ಥಿತಿ ಚೆನ್ನಾಗಿರಲಿದೆ. ಆರೋಗ್ಯದ ದೃಷ್ಟಿಯಿಂದ ದಿನವು ಸರಾಸರಿಯಾಗಿರುತ್ತದೆ, ಕುಟುಂಬ ಜೀವನದಲ್ಲಿ ಸಂತೋಷ, ನೆಮ್ಮದಿ ಇರಲಿದೆ.
ವೃಶ್ಚಿಕ ರಾಶಿ
ನೀವು ವ್ಯಾಪಾರಸ್ಥರಾಗಿದ್ದರೆ ಮತ್ತು ಪಾಲುದಾರಿಕೆಯಲ್ಲಿ ಯಾವುದೇ ಕೆಲಸವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದರೆ ಸ್ವಲ್ಪ ಸಮಯ ಕೂಡ ಕಾಯುವುದು ಒಳ್ಳೆಯದು. ಕುಟುಂಬ ಜೀವನದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿರಲಿದೆ. ಆರ್ಥಿಕ ದೃಷ್ಟಿಯಿಂದ ಈ ದಿನ ನಿಮಗೆ ಮಿಶ್ರಫಲ. ಆರೋಗ್ಯ ಸಮಸ್ಯೆಯಿದ್ದರೆ ನೀವು ನಿಮ್ಮ ಆರೋಗ್ಯದ ಕಡೆಗೆ ಗಮನಹರಿಸಿ.
ಧನು ರಾಶಿ
ಉದ್ಯೋಗೊಗಳಿಗೆ ಆತ್ಮವಿಶ್ವಾಸ ಹೆಚ್ಚಾಗಲಿದೆ. ಪ್ರೇಮಿಗಳಿಗೆ ಈ ದಿನ ತುಂಬಾ ವಿಶೇಷವಾಗಿರಲಿದೆ. ನೀವು ನಿಮ್ಮ ಪ್ರೀತಿಯ ಬಗ್ಗೆ ಮನೆಯವರೊಂದಿಗೆ ಮಾತನಾಡಲು ಕೂಡ ಈ ದಿನ ನಿಮಗೆ ಉತ್ತಮವಾಗಿದೆ. ಆರ್ಥಿಕ ಸ್ಥಿತಿ, ಆರೋಗ್ಯ ಚೆನ್ನಾಗಿರಲಿದೆ.
ಮಕರ ರಾಶಿ
ಕುಟುಂಬದಲ್ಲಿನ ಪರಿಸ್ಥಿತಿ ನಿಮ್ಮ ಮನಸ್ಸಿನ ನೋವು ಹೆಚ್ಚಿಸಬಹುದು. ಕೆಲಸದ ವಿಷಯದಲ್ಲಿ ನಿರ್ಲಕ್ಷ್ಯ ಮಾಡಬೇಡಿ. ವ್ಯಾಪಾರಿಗಳಿಗೆ ಈ ದಿನ ಲಾಭದಾಯಕವಾಗಿರಲಿದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಹಣಕ್ಕೆ ಸಂಬಂಧಿಸಿದ ಯಾವುದೇ ವಹಿವಾಟು ಮಾಡಲು ಹೋಗಬೇಡಿ.
ಕುಂಭ ರಾಶಿ
ನಿಮಗೆ ಸಂಬಂಧಿಸಿದ ರಹಸ್ಯ ಇತರರ ಜೊತೆ ಹಂಚಿಕೊಳ್ಳದಿದ್ದರೆ ಉತ್ತಮ. ವ್ಯಾಪಾರಿಗಳಿಗೆ ಈ ದಿನ ಉತ್ತಮವಾಗಿರಲಿದೆ, ಲಾಭ ಗಳಿಸಲು ಸಾಧ್ಯವಾಗುವುದು. ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರಲಿದೆ. ನೀವು ಆರೋಗ್ಯದ ಕಡೆಗೆ ಗಮನಹರಿಸಬೇಕು.
ಮೀನ ರಾಶಿ
ನೀವು ಇಂದು ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯಲು ಸಾಧ್ಯವಾಗುವುದು. ಆರ್ಥಿಕ ವಿಷಯದಲ್ಲಿ ಜಾಗ್ರತೆವಹಿಸಿ. ವ್ಯಾಪಾರಿಗಳಿಗೆ ಈ ದಿನ ಧನ ಲಾಭವಿದೆ. ನಿಮ್ಮ ಆರೋಗ್ಯದ ಬಗ್ಗೆ ಹೇಳುವುದಾದರೆ, ನಿಮಗೆ ಹೊಟ್ಟೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳಿರಬಹುದು, ಆಹಾರಕ್ರಮದ ಬಗ್ಗೆ ಜಾಗ್ರತೆವಹಿಸಿ.



Click it and Unblock the Notifications
