Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Dina Bhavishya 10th Aug 2023: ದಿನ ಭವಿಷ್ಯ: ಧನು ರಾಶಿಯವರಿಗೆ ಅದ್ಭುತವಾಗಿದೆ, ಈ ದಿನ ನಿಮ್ಮ ರಾಶಿಫಲ ಹೇಗಿದೆ?
ವೈದಿಕ ಶಾಸ್ತ್ರದ ಪ್ರಕಾರ ಆಗಸ್ಟ್ 10ರ ರಾಶಿಫಲ ನೀಡಿದ್ದು ಈ ದಿನ ನಿಮ್ಮ ರಾಶಿಗೆ ಹೇಗಿದೆ ಎಂದು ನೋಡೋಣ...
ದಿನಾಂಕ: ಆಗಸ್ಟ್ 10
ತಿಥಿ: ದಶಮಿ
ನಕ್ಷತ್ರ: ರೋಹಿಣಿ
ಪಕ್ಷ: ಕೃಷ್ಣ ಪಕ್ಷ
ರಾಹುಕಾಲ: ಮಧ್ಯಾಹ್ನ 02:03ರಿಂದ 03:39ರವರೆಗೆ

ಮೇಷ ರಾಶಿ
ಪ್ರೇಮಿಗಳಿಗೆ ಈ ದಿನ ಅನುಕೂಲಕರವಲ್ಲ. ಸಣ್ಣ ವಿಚಾರಕ್ಕೆ ನಿಮ್ಮ ನಡುವೆ ಮನಸ್ತಾಪ ಉಂಟಾಗಬಹುದು. ನೀವು ಕೋಪಗೊಳ್ಳುವುದನ್ನು ತಪ್ಪಿಸಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಹಣಕಾಸಿನ ಸ್ಥಿತಿ ಚೆನ್ನಾಗಿರಲಿದೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರಲಿದೆ. ಇಂದು ನೀವು ಮನೆಯ ಸದಸ್ಯರಿಂದ ಉಡುಗೊರೆಯನ್ನು ಸಹ ಪಡೆಯಬಹುದು. ಉದ್ಯೋಗಿಗಳಿಗೆ, ವ್ಯವಹಾರಸ್ಥರಿಗೆ ಈ ದಿನ ಸಾಮಾನ್ಯವಾಗಿರಲಿದೆ.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 10
ಅದೃಷ್ಟದ ಸಮಯ: ಬೆಳಗ್ಗೆ 10 ರಿಂದ ಮಧ್ಯಾಹ್ನ 1:20 ರವರೆಗೆ
ವೃಷಭ ರಾಶಿ
ಅವಸರದಲ್ಲಿ ಯಾವುದೇ ಕೆಲಸವನ್ನು ಮಾಡಬೇಡಿ, . ಇಲ್ಲದಿದ್ದರೆ ನಿಮಗೆ ನಷ್ಟವಾಗುವುದು. ಹಣದ ವಿಷಯದಲ್ಲಿ ಈ ದಿನ ಮಿಶ್ರಫಲ. ನಿಮ್ಮ ಆದಾಯ ಚೆನ್ನಾಗಿರಲಿದೆ, ನಿಮ್ಮ ಖರ್ಚುಗಳು ಹೆಚ್ಚಾಗಬಹುದು. ಮನೆಯ ಸದಸ್ಯರೊಂದಿಗೆ ನಿಮ್ಮ ನಡವಳಿಕೆಯನ್ನು ಚೆನ್ನಾಗಿ ಇಟ್ಟುಕೊಳ್ಳಲು ಪ್ರಯತ್ನಿಸಿ. ಚಿಕ್ಕ ವಿಷಯಕ್ಕೆ ಕೋಪ ಮಾಡಿಕೊಳ್ಳಬೇಡಿ, ಇದರಿಂದ ನೆಮ್ಮದಿ ಹಾಳಾಗುವುದು.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 29
ಅದೃಷ್ಟದ ಸಮಯ: ಬೆಳಗ್ಗೆ 7 ರಿಂದ ಮಧ್ಯಾಹ್ನ 12:30 ರವರೆಗೆ
ಮಿಥುನ ರಾಶಿ
ಮಕ್ಕಳ ಕಡೆಯಿಂದ ಖುಷಿಯ ಸುದ್ದಿ ಸಿಗಲಿದೆ. ನಿಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಸಂಗಾತಿಯೊಂದಿಗೆ ಪರಸ್ಪರ ಹೊಂದಾಣಿಕೆ ಇರಲಿದೆ. ಕೆಲಸದ ದೃಷ್ಟಿಯಿಂದ ದಿನವು ಸಾಮಾನ್ಯವಾಗಿರುತ್ತದೆ. ಆರೋಗ್ಯ ಕೂಡ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಗಾಢ ಹಳದಿ
ಅದೃಷ್ಟದ ಸಂಖ್ಯೆ: 14
ಅದೃಷ್ಟದ ಸಮಯ: ಸಂಜೆ 4:05 ರಿಂದ ರಾತ್ರಿ 9 ರವರೆಗೆ
ಕರ್ಕ ರಾಶಿ
ಕುಟುಂಬ ಜೀವನದಲ್ಲಿ ಪರಿಸ್ಥಿತಿ ಚೆನ್ನಾಗಿರಲಿದೆ. ಮನೆಯ ಸದಸ್ಯರಿಂದ ನಿಮಗೆ ಒಳ್ಳೆಯ ಸುದ್ದಿ ಸಿಗಲಿದೆ. ಮನೆಯವರ ಜೊತೆ ಉತ್ತಮ ಸಮಯ ಕಳೆಯಲು ಸಾಧ್ಯವಾಗುವುದು. ತುಂಬಾ ಸಮಯದಿಂದ ಕಚೇರಿಯಲ್ಲಿ ಯಾವುದೇ ಪ್ರಮುಖ ಕೆಲಸ ಬಾಕಿಯಿದ್ದರೆ, ಇಂದು ನೀವು ಅದನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಕೆಲಸದ ಜೊತೆಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 11
ಅದೃಷ್ಟದ ಸಮಯ: ಬೆಳಿಗ್ಗೆ 5:45 ರಿಂದ 10:25 ರವರೆಗೆ
ಸಿಂಹ ರಾಶಿ
ನಿಮ್ಮ ಸಂಗಾತಿಯೊಂದಿಗೆ ಮಾತನಾಡುವಾಗ ತುಂಬಾ ಆಲೋಚಿಸಿ ಮಾತನಾಡುವುದು ಒಳ್ಳೆಯದು, ದುಡುಕಿ ಮಾತನಾಡಿದರೆ ಸಂಸಾರದಲ್ಲಿ ಬಿರುಕು ಉಂಟು ಮಾಡಬಹುದು. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಆದರೆ ನೀವು ಮಿತು ಮೀರಿ ಖರ್ಚು ಮಾಡಲು ಹೋಗಬಾರದು. ಉದ್ಯಮಿಗಳು ಬಯಸಿದ ಲಾಭವನ್ನು ಪಡೆಯಬಹುದು. ಮತ್ತೊಂದೆಡೆ, ಉದ್ಯೋಗಿಗಳಿಗೆ ಈ ದಿನ ಉತ್ತಮವಾಗಿದೆ..
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 31
ಅದೃಷ್ಟದ ಸಮಯ: ಮಧ್ಯಾಹ್ನ 1 ರಿಂದ ಮಧ್ಯಾಹ್ನ 3 ರವರೆಗೆ
ಕನ್ಯಾ ರಾಶಿ
ಕೌಟುಂಬಿಕ ಜೀವನ ಚೆನ್ನಾಗಿರಲಿದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಇಂದು ನೀವು ಹಣಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಕೆಲಸಗಳನ್ನು ಮಾಡುವ ಸಾಧ್ಯತೆಯಿದೆ. ಕೆಲಸದ ಸ್ಥಳದಲ್ಲಿ ನೀವು ಉನ್ನತ ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುತ್ತೀರಿ. ಕಷ್ಟಕರವಾದ ಕೆಲಸವನ್ನು ಪೂರ್ಣಗೊಳಿಸಲು ನೀವು ಅವರ ಸಹಾಯವನ್ನು ಸಹ ಪಡೆಯಬಹುದು.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 15
ಅದೃಷ್ಟದ ಸಮಯ: ಮಧ್ಯಾಹ್ನ 2:15 ರಿಂದ ರಾತ್ರಿ 8:10 ರವರೆಗೆ
ತುಲಾ ರಾಶಿ
ಈ ದಿನ ಮಾನಸಿಕ ಚಿಂತೆಗಳು ಹೆಚ್ಚಾಗಬಹುದು. ಮನಸ್ಸಿನಲ್ಲಿ ಅನೇಕ ರೀತಿಯ ನಕಾರಾತ್ಮಕ ಆಲೋಚನೆಗಳು ಬರುತ್ತವೆ. ಅನಾವಶ್ಯಕವಾಗಿ ಯೋಚಿಸಿ ಸುಮ್ಮನೆ ನಿಮ್ಮ ನೆಮ್ಮದಿ ಹಾಳು ಮಾಡಿಕೊಳ್ಳಬೇಡಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ನೀವು ಕಷ್ಟಪಟ್ಟು ದುಡಿದ ಹಣವನ್ನು ಸರಿಯಾಗಿ ಬಳಸಿದರೆ, ನೀವು ದೊಡ್ಡ ಆರ್ಥಿಕ ಲಾಭವನ್ನು ಪಡೆಯಬಹುದು. ವೈವಾಹಿಕ ಜೀವನ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 20
ಅದೃಷ್ಟದ ಸಮಯ: ಬೆಳಿಗ್ಗೆ 8:40 ರಿಂದ ಮಧ್ಯಾಹ್ನ 12:30 ರವರೆಗೆ
ವೃಶ್ಚಿಕ ರಾಶಿ
ಕೆಲಸದ ವಿಷಯದಲ್ಲಿ ಈ ದಿನ ಉತ್ತಮವಾಗಿರಲಿದೆ. ಉದ್ಯಮಿಗಳ ಆರ್ಥಿಕ ಸಮಸ್ಯೆ ಬಗೆಹರಿಯಲಿದೆ. ಮನೆಯ ಕಿರಿಯ ಸದಸ್ಯರೊಂದಿಗೆ ತುಂಬಾ ಕಟ್ಟುನಿಟ್ಟಾಗಿ ವರ್ತಿಸಬೇಡಿ. ನೀವು ಅವರಿಗೆ ಮಾರ್ಗದರ್ಶನ ನೀಡಬೇಕು. ಹಣದ ವಿಷಯದಲ್ಲಿ ಈ ದಿನ ಮಿಶ್ರಫಲ.
ಅದೃಷ್ಟದ ಬಣ್ಣ: ಕೆನೆ
ಅದೃಷ್ಟದ ಸಂಖ್ಯೆ: 5
ಅದೃಷ್ಟದ ಸಮಯ: ಮಧ್ಯಾಹ್ನ 1:30 ರಿಂದ ಸಂಜೆ 7 ರವರೆಗೆ
ಧನು ರಾಶಿ
ಬಹಳ ಸಮಯದ ನಂತರ ಈ ದಿನ ನಿಮಗೆ ಅದ್ಭುತವಾಗಿರಲಿದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ನೀವು ಹತ್ತಿರವಿರುವ ಯಾರಿಗಾದರೂ ದುಬಾರಿ ಉಡುಗೊರೆಯನ್ನು ಖರೀದಿಸಬಹುದು. ನೀವು ವಿದೇಶಕ್ಕೆ ಹೋಗಿ ಉದ್ಯೋಗ ಮಾಡಲು ಬಯಸಿದರೆ, ಅದಕ್ಕಾಗಿ ಪ್ರಯತ್ನಿಸುತ್ತಿದ್ದರೆ ಈ ದಿನ ಮುಖ್ಯವಾದ ದಿನವಾಗಲಿದೆ. ಯಾವುದೇ ಕಾರಣಕ್ಕೆ ಆರೋಗ್ಯವನ್ನು ನಿರ್ಲಕ್ಷಿಸಬೇಡಿ.
ಅದೃಷ್ಟದ ಬಣ್ಣ: ಗಾಢ ಗುಲಾಬಿ
ಅದೃಷ್ಟದ ಸಂಖ್ಯೆ: 4
ಅದೃಷ್ಟದ ಸಮಯ: ಬೆಳಿಗ್ಗೆ 8 ರಿಂದ ಮಧ್ಯಾಹ್ನ 2:30 ರವರೆಗೆ
ಮಕರ ರಾಶಿ
ಇಂದು ನಿಮಗೆ ತುಂಬಾ ರೋಮ್ಯಾಂಟಿಕ್ ಆಗಿರಲಿದೆ. ನಿಮ್ಮ ಸಂಗಾತಿಯೊಂದಿಗೆ ನೀವು ಅದ್ಭುತ ಸಮಯವನ್ನು ಕಳೆಯುತ್ತೀರಿ. ಕೆಲಸದ ಸ್ಥಳದಲ್ಲಿ ನಿಮ್ಮ ಕೋಪವನ್ನು ನಿಯಂತ್ರಿಸಲು ನಿಮಗೆ ಸಲಹೆ ನೀಡಲಾಗಿದೆ. ಮೇಲಾಧಿಕಾರಿಗಳ ಮಾಯನ್ನು ನಿರ್ಲಕ್ಷ್ಯ ಮಾಡುವ ತಪ್ಪು ಮಾಡದಿರಿ. ಹಣದ ವಿಷಯದಲ್ಲಿ ಈ ದಿನ ಮಿಶ್ರಫಲ.
ಅದೃಷ್ಟದ ಬಣ್ಣ: ಆಕಾಶ ನೀಲಿ
ಅದೃಷ್ಟದ ಸಂಖ್ಯೆ: 38
ಅದೃಷ್ಟದ ಸಮಯ: ಬೆಳಿಗ್ಗೆ 7:55 ರಿಂದ 10:30 ರವರೆಗೆ
ಕುಂಭ ರಾಶಿ
ದಾಂಪತ್ಯ ಜೀವನದ ಬಗ್ಗೆ ಹೇಳುವುದಾದರೆ ಸಂಗಾತಿಯು ಕೆಲಸದಲ್ಲಿ ತುಂಬಾ ನಿರತರಾಗಿರುವುದರಿಂದ ನಿಮಗೆ ಸಮಯ ಕೊಡಲು ಸಾಧ್ಯವಾಗುವುದಿಲ್ಲ. ಇದರಿಂದ ನಿಮಗೆ ಒಂಟಿ ಅನಿಸಬಹುದು, ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು, ನಿಮ್ಮ ಹೆಚ್ಚುತ್ತಿರುವ ವೆಚ್ಚಗಳನ್ನು ನಿಗ್ರಹಿಸಲು ಸಲಹೆ ನೀಡಲಾಗಿದೆ. ಇಂದು ಮನೆಗೆ ಕೆಲ ಅತಿಥಿಗಳು ಬರಬಹುದು.
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ: 19
ಅದೃಷ್ಟದ ಸಮಯ: ಮಧ್ಯಾಹ್ನ 1:30 ರಿಂದ ಸಂಜೆ 4 ರವರೆಗೆ
ಮೀನ ರಾಶಿ
ವ್ಯಾಪಾರಸ್ಥರಿಗೆ ಈ ದಿನ ಉತ್ತಮವಾಗಿರಲಿದೆ. ನಿಮ್ಮ ಯಾವುದೇ ಸ್ಥಗಿತಗೊಂಡ ಕೆಲಸವನ್ನು ಮತ್ತೆ ಪ್ರಾರಂಭಿಸಬಹುದು. ಉದ್ಯೋಗಸ್ಥರಿಗೆ ಉನ್ನತ ಅಧಿಕಾರಿಗಳ ಬೆಂಬಲ ದೊರೆಯಲಿದೆ. ವೈವಾಹಿಕ ಜೀವನದಲ್ಲಿ ಪರಿಸ್ಥಿತಿ ಅಷ್ಟು ಸರಿಯಿರಲ್ಲ. ಸಂಗಾತಿ ಜೊತೆಗೆ ಮನಸ್ತಾಪ ಉಂಟಾಗಬಹುದು.
ಅದೃಷ್ಟದ ಬಣ್ಣ: ಕೆನೆ
ಅದೃಷ್ಟದ ಸಂಖ್ಯೆ: 9
ಅದೃಷ್ಟದ ಸಮಯ: ಸಂಜೆ 6 ರಿಂದ 8:15 ರವರೆಗೆ



Click it and Unblock the Notifications