Wow: ಭಾರತದಲ್ಲಿವೆ 'ಶ್ರೀನಗರ' ಹೆಸರಿನ 16 ಸ್ಥಳಗಳು! ಕರ್ನಾಟಕದಲ್ಲೂ ಇದೆ.. ಈ ಬಗ್ಗೆ ನಿಮಗೆಷ್ಟು ಗೊತ್ತು?

'ಶ್ರೀನಗರ' ಎಂಬ ಹೆಸರನ್ನು ಕೇಳಿದ ತಕ್ಷಣ, ಬಹುತೇಕ ಜನರ ಮನಸ್ಸಿನಲ್ಲಿ ಮೂಡುವುದು ಜಮ್ಮು ಮತ್ತು ಕಾಶ್ಮೀರದ ಸುಂದರ ಕಣಿವೆಗಳು. ಆದರೆ, ಭಾರತದಲ್ಲಿ 'ಶ್ರೀನಗರ' ಎಂಬ ಹೆಸರಿನ ಒಟ್ಟು 16 ಸ್ಥಳಗಳಿವೆ (16 Srinagar in India) ಎಂಬ ಸಂಗತಿ ನಿಮಗೆ ಗೊತ್ತಿದ್ಯಾ? ಇವೆಲ್ಲವೂ ವಿಭಿನ್ನ ರಾಜ್ಯಗಳಲ್ಲಿ ನೆಲೆಗೊಂಡಿವೆ. ಹಾಗೆಯೇ ವಿಶಿಷ್ಟ ಇತಿಹಾಸ, ಸಂಸ್ಕೃತಿ ಮತ್ತು ಹೆಸರಿನ ಅರ್ಥವನ್ನು ಹೊಂದಿವೆ. ನಾವಿಂದು ಈ ಲೇಖನದಲ್ಲಿ ರಾಜ್ಯಗಳ ಪ್ರಕಾರ ಶ್ರೀನಗರದ (Srinagar) ಪಟ್ಟಿ ಮತ್ತು ಅವುಗಳ ಹಿಂದಿನ ಆಸಕ್ತಿದಾಯಕ ಕಥೆಗಳ ಬಗ್ಗೆ ನಿಮಗೆ ತಿಳಿಸಲಿದ್ದೇವೆ.

ನಮ್ಮ ರಾಜ್ಯದಲ್ಲೂ 'ಶ್ರೀನಗರ' ಎಂಬ ಹೆಸರಿನ ಸ್ಥಳವಿದೆ. ಇದಕ್ಕೂ ಮುನ್ನ ಶ್ರೀನಗರ ಪದದ ಅರ್ಥವೇನು? ಎಂಬುವುದನ್ನು ತಿಳಿಯೋಣ. ಶ್ರೀನಗರ ಎಂಬ ಪದವು ಎರಡು ಭಾಗಗಳಿಂದ ಕೂಡಿದೆ. 'ಶ್ರೀ' ಎಂದರೆ ಸಮೃದ್ಧಿ, ಲಕ್ಷ್ಮಿ, ಸೌಂದರ್ಯ ಅಥವಾ ವೈಭವ ಎಂದರ್ಥ. ಹಾಗೆಯೇ 'ನಗರ' ಎಂದರೆ ಪಟ್ಟಣ (ಸಿಟಿ). ಹೀಗಾಗಿ, ಶ್ರೀನಗರ ಎಂಬ ಪದದ ಅರ್ಥ 'ಸಮೃದ್ಧಿಯ ಪಟ್ಟಣ' ಅಥವಾ 'ಸೊಬಗು ಮತ್ತು ಸೌಂದರ್ಯದಿಂದ ತುಂಬಿರುವ ನಗರ' ಎಂದು ಹೇಳಬಹುದು.

Srinagar

'ಶ್ರೀನಗರ' ಹೆಸರಿನ 16 ಸ್ಥಳಗಳು ಇಲ್ಲಿವೆ

ಶ್ರೀನಗರ ಹೆಸರಿನ ಪಟ್ಟಣಗಳು, ಗ್ರಾಮಗಳು ಅಥವಾ ನಗರಗಳು ಎಲ್ಲೆಲ್ಲಿ ನೆಲೆಗೊಂಡಿವೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ನೀವು ಒಂದೊಂದಾಗಿ ಅದರ ಸ್ಥಳ ಮತ್ತು ಆಸಕ್ತಿದಾಯಕ ಸ್ಟೋರಿ ತಿಳಿಯಬಹುದು.

1. ಶ್ರೀನಗರ: ಇದು ಜಮ್ಮು ಮತ್ತು ಕಾಶ್ಮೀರದಲ್ಲಿದೆ. ಇದು ಅತ್ಯಂತ ಪ್ರಸಿದ್ಧ ಮತ್ತು ಸುಂದರವಾದ ನಗರವಾಗಿದೆ. ದಾಲ್ ಸರೋವರ, ಹೌಸ್ ಬೋಟ್‌ಗಳು, ಹಿಮದಿಂದ ಆವೃತವಾದ ಪರ್ವತಗಳು ಮತ್ತು ಮೊಘಲ್ ಗಾರ್ಡನ್ಸ್‌ಗೆ (ಉದ್ಯಾನಗಳಿಗೆ) ಇದು ಹೆಸರುವಾಸಿ.

2. ಶ್ರೀನಗರ: ಇದು ಉತ್ತರಾಖಂಡದ ಪೌರಿಯಲ್ಲಿದೆ. ಗರ್ವಾಲ್ ಪ್ರದೇಶದಲ್ಲಿರುವ ಈ ಧಾರ್ಮಿಕ ಮತ್ತು ಐತಿಹಾಸಿಕ ನಗರವು 'ಶಂಕರಾಚಾರ್ಯ ಪೀಠ' ಮತ್ತು 'ಗಂಗಾ ದರ್ಶನ'ಕ್ಕೆ ಹೆಸರುವಾಸಿ.

3. ಶ್ರೀನಗರ: ಇದು ಬಿಹಾರದ ಸಹರ್ಸಾನಲ್ಲಿದೆ. ಇದು ಸ್ಥಳೀಯ ಕೃಷಿ ಮತ್ತು ಗ್ರಾಮೀಣ ಸಂಸ್ಕೃತಿಗೆ ಹೆಸರುವಾಸಿಯಾದ ಒಂದು ಸಣ್ಣ ಪಟ್ಟಣವಾಗಿದೆ.

4. ಶ್ರೀನಗರ: ಇದು ಉತ್ತರ ಪ್ರದೇಶದ ಬಲರಾಂಪುರ್‌ನಲ್ಲಿದೆ. ಈ ಗ್ರಾಮವು ಐತಿಹಾಸಿಕ ಸಂಪರ್ಕಗಳು ಮತ್ತು ಜಾನಪದ ಕಥೆಗಳೊಂದಿಗೆ ಸಂಬಂಧ ಹೊಂದಿದೆ.

5. ಶ್ರೀನಗರ: ಇದು ಛತ್ತೀಸ್‌ಗಢದ ಮಹಾಸಮುಂಡ್‌ನಲ್ಲಿ ನೆಲೆಗೊಂಡಿದೆ. ಇದು ಛತ್ತೀಸ್‌ಗಢದ ಸಾಂಪ್ರದಾಯಿಕ ಪರಂಪರೆ ಮತ್ತು ಬುಡಕಟ್ಟು ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ.

6. ಶ್ರೀನಗರ: ಇದು ಒಡಿಶಾದ ಕಿಯೋಂಜರ್‌ನಲ್ಲಿ ನೆಲೆಗೊಂಡಿದೆ. ಗುಡ್ಡಗಾಡು (ಬೆಟ್ಟ) ಪ್ರದೇಶದಲ್ಲಿ ನೆಲೆಗೊಂಡಿರುವ ಈ ಪ್ರದೇಶವು, ನೈಸರ್ಗಿಕ ಸೌಂದರ್ಯ ಮತ್ತು ಖನಿಜ ಸಂಪನ್ಮೂಲಗಳಿಗೆ ಹೆಸರುವಾಸಿ.

Take a Poll

7. ಶ್ರೀನಗರ: ಇದು ಮಧ್ಯಪ್ರದೇಶದ ಮೊರೆನಾದಲ್ಲಿದೆ. ಈ ಸ್ಥಳವು ಪ್ರಾಚೀನ ದೇವಾಲಯಗಳು ಮತ್ತು ಐತಿಹಾಸಿಕ ಪರಂಪರೆಗೆ ಹೆಸರುವಾಸಿ.

8. ಶ್ರೀನಗರ: ಈ ಪ್ರದೇಶವು ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿದೆ. ಚಹಾ ತೋಟಗಳು ಮತ್ತು ಗಡಿ ಪ್ರದೇಶಗಳಿಗೆ ಹತ್ತಿರದಲ್ಲಿರುವ ಒಂದು ಸಣ್ಣ ಪಟ್ಟಣ ಇದು.

9. ಶ್ರೀನಗರ: ಇದು ರಾಜಸ್ಥಾನದ ಅಲ್ವಾರ್‌ನಲ್ಲಿದೆ. ಅರಾವಳಿ ಬೆಟ್ಟಗಳ ಮಡಿಲಿನಲ್ಲಿರುವ ಒಂದು ಐತಿಹಾಸಿಕ ಗ್ರಾಮವಾಗಿದೆ.

10. ಶ್ರೀನಗರ: ಈ ಸ್ಥಳ ಗುಜರಾತ್‌ನ ಪಂಚಮಹಲ್‌ನಲ್ಲಿದೆ. ಇಲ್ಲಿನ 'ಶ್ರೀ' ದೇವಸ್ಥಾನ ಮತ್ತು ಗ್ರಾಮೀಣ ಜೀವನಶೈಲಿ ಇದರ ವಿಶೇಷ ಗುರುತಾಗಿದೆ.

11. ಶ್ರೀನಗರ: ಇದು ಮಹಾರಾಷ್ಟ್ರದ ಬೀಡ್‌ನಲ್ಲಿ ನೆಲೆಗೊಂಡಿದೆ. ಇದು ಕೃಷಿ ಆಧಾರಿತ ಗ್ರಾಮ. ಇಲ್ಲಿನ ಜನರು ಸಾಂಪ್ರದಾಯಿಕ ಜೀವನವನ್ನು ನಡೆಸುತ್ತಾರೆ.

12. ಶ್ರೀನಗರ: ಇದು ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿದೆ. ಇಲ್ಲಿನ ವಾಸ್ತುಶಿಲ್ಪ ಮತ್ತು ದೇವಾಲಯಗಳು ವಿಶಿಷ್ಟವಾಗಿವೆ.

13. ಶ್ರೀನಗರ: ತಮಿಳುನಾಡಿನ ತಂಜಾವೂರಲ್ಲಿ ಈ ಸ್ಥಳವಿದೆ. ಇದು ಸಹ ಪ್ರಾಚೀನ ದೇವಾಲಯಗಳು ಮತ್ತು ಧಾರ್ಮಿಕ ನಾಗರಿಕತೆಯಿಂದ ಸಮೃದ್ಧವಾಗಿದೆ.

14. ಶ್ರೀನಗರ: ಇದು ಆಂಧ್ರ ಪ್ರದೇಶದ ಕಡಪಾದಲ್ಲಿದೆ. ಈ ಪ್ರದೇಶವು ಆಂಧ್ರದ ಸಾಂಸ್ಕೃತಿಕ ಬೇರುಗಳಿಗೆ ಸಂಬಂಧಿಸಿದ ಪ್ರದೇಶವಾಗಿದೆ.

15. ಶ್ರೀನಗರ: ಇದು ಪಕ್ಕದ ತೆಲಂಗಾಣದ ಕರೀಂನಗರದಲ್ಲಿದೆ. ಇದು ಜಾನಪದ ಕಥೆಗಳು ಮತ್ತು ಸಾಂಪ್ರದಾಯಿಕ ಕಲೆಗಳಿಗೆ ಹೆಸರುವಾಸಿ.

16. ಶ್ರೀನಗರ: ಇದು ಜಾರ್ಖಂಡ್‌ನ ಬೊಕಾರೊದಲ್ಲಿ ನೆಲೆಗೊಂಡಿದೆ. ಈ ಪ್ರದೇಶವು ಕೈಗಾರಿಕಾ ಬೆಲ್ಟ್ ಬಳಿ ಇರುವ ಒಂದು ಸಣ್ಣ ಪಟ್ಟಣವಾಗಿದೆ.

'ಶ್ರೀನಗರ' ಕೇವಲ ಒಂದು ನಗರವಲ್ಲ, ಭಾರತದ ಸಂಸ್ಕೃತಿ

ಈ ಎಲ್ಲಾ ಸ್ಥಳಗಳಲ್ಲಿ ಶ್ರೀನಗರ ಎಂಬ ಹೆಸರು ಕೇವಲ ಒಂದು ಗುರುತಲ್ಲ. ಆದರೆ, ಅವುಗಳ ಧಾರ್ಮಿಕತೆ, ಸಂಸ್ಕೃತಿ ಮತ್ತು ಐತಿಹಾಸಿಕ ಪರಂಪರೆಯ ಸಂಕೇತ. ಈ ನಗರಗಳು ದೊಡ್ಡದಾಗಿರದಿದ್ದರೂ, ಅವುಗಳ ಬೇರುಗಳು ಭಾರತದ ವೈವಿಧ್ಯತೆಯಲ್ಲಿ ಆಳವಾಗಿ ಹರಡಿವೆ. ಇದು ಕೇವಲ ಒಂದು ನಗರವಲ್ಲ, ಇದು ಭಾರತದ ಸಂಸ್ಕೃತಿ, ವೈವಿಧ್ಯತೆ ಮತ್ತು ಶ್ರೀಮಂತ ಸಂಪ್ರದಾಯದ ಜೀವಂತ ಉದಾಹರಣೆ. ಇನ್ಮುಂದೆ ನೀವು 'ಶ್ರೀನಗರ' ಹೆಸರನ್ನು ಕೇಳಿದಾಗ, ಈ ಹೆಸರು ಭಾರತದಾದ್ಯಂತ ಹರಡಿದೆ. ಪ್ರತಿಯೊಂದೂ ತನ್ನದೇ ಆದ ಮಹತ್ವವನ್ನು ಹೊಂದಿದೆ ಎಂಬುದನ್ನು ನೆನಪಿಸಿಕೊಳ್ಳಲೇಬೇಕು.

English summary

Did You Know? There are 16 places named Srinagar in India: check full list and their interesting story

Did You Know? There are 16 places named Srinagar in India - check full list and their interesting story
Story first published: Sunday, June 22, 2025, 16:30 [IST]
X
Desktop Bottom Promotion