Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಮಗಳಿಗೆ 11 ತಿಂಗಳು, ಸೆಪ್ಟೆಂಬರ್‌ನಲ್ಲಿ 2ನೇ ಮಗುವಿನ ನಿರೀಕ್ಷೆಯಲ್ಲಿರುವ ಧ್ರುವ ಸರ್ಜಾ ದಂಪತಿ: ಕ್ಯೂಟ್ ವೀಡಿಯೋ ವೈರಲ್
ಕನ್ನಡ ನಟ ಧ್ರುವ ಸರ್ಜಾ ಕುಟುಂಬ 2ನೇ ಮಗುವಿನ ನಿರೀಕ್ಷೆಯಲ್ಲಿದೆ, ಮೊದಲ ಮಗು ಜನಿಸಿ ವರ್ಷ ತುಂಬುವುದರೊಳಗೆ ಮತ್ತೊಂದು ಮಗು ಆಗಮನದ ಖುಷಿ ವಿಷಯವನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ ಧ್ರುವ ಸರ್ಜಾ. ಅತ್ಯಂತ ಸುಂದರವಾದ ವೀಡಿಯೋವೊಂದನ್ನು ಮಾಡಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ವರಮಹಾಲಕ್ಷ್ಮಿ ಹಬ್ಬದಂದೇ ಈ ವೀಡಿಯೋ ಹಂಚಿಕೊಂಡಿರುವುದು ಇನ್ನೂ ಸ್ಪೆಷಲ್ ಆಗಿದೆ.

ಧ್ರುವ ಸರ್ಜಾ ದಂಪತಿ 2022 ಅಕ್ಟೋಬರ್ 02ಕ್ಕೆ ಮಗಳ ಜನನವಾಗಿತ್ತು. ಈ ಪುಟ್ಟ ಕಾಲುಗಳ ಜೊತೆ ಇನ್ನೆರಡು ಪುಟ್ಟ ಕಾಲುಗಳು ಈ ಸೆಪ್ಟೆಂಬರ್‌ನಲ್ಲಿ ಸೇರಲಿವೆ ಎಂಬ ಖುಷಿಯ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಶಾರ್ಟ್ ಮೂವಿ ರೀತಿಯಲ್ಲಿ ವೀಡಿಯೋ ಮಾಡಿ ಆ ವೀಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ತುಂಬಾ ಸುಂದರವಾದ ವೀಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಧ್ರುವ ಸರ್ಜಾ ಫ್ಯಾನ್ಸ್ ಅಂತೂ ಖುಷಿಯ ವಿಚಾರ ಕೇಳಿ ತುಂಬಾ ಖುಷಿಯಾಗಿದ್ದಾರೆ.
ಮಗಳಿಗೆ ವರ್ಷ ತುಂಬುವುದರೊಳಗೆ 2ನೇ ಮಗುವಿನ ಜನನ
ಧ್ರುವಸರ್ಜಾ ಅವರ ಮೊದಲ ಮಗುವಿಗೆ ಈಗ 11 ತಿಂಗಳು, ಮೊದಲ ಹುಟ್ಟು ಹಬ್ಬ ಆಚರಿಸುವ ಮೊದಲ ತಮ್ಮ ಅಥವಾ ತಂಗಿಯ ಆಗಮನವಾಗಲಿದೆ. ವರ್ಷ ತುಂಬುವುದರೊಳಗೆ ಅಕ್ಕ ಪಟ್ಟ ಸಿಗಲಿದೆ.
ರಾಧಿಕಾ ಪಂಡಿತ್ ಅವರಿಗೂ ಮೊದಲ ಮಗುವಿಗೆ ವರ್ಷ ತುಂಬುವುದರೊಳಗೆ 2ನೇ ಮಗುವಾಗಿತ್ತು
ಮೊದಲ ಮಗುವಾಗಿ ಎರಡನೇ ಮಗುವಿಗೆ ಪ್ಲ್ಯಾನ್ ಮಾಡುವುದಾದರೆ ಕನಿಷ್ಠ ಒಂದು ವರ್ಷವಾದರೂ ಅಂತರ ಇರಬೇಕು, ದೇಹ ಮೊದಲ ಹೆರಿಗೆಯಿಂದ ಚೇತರಿಸಿಕೊಳ್ಳಲು ಸ್ವಲ್ಪ ಸಮಯ ಬೇಕು ಎಂದು ಎಕ್ಸ್‌ಪರ್ಟ್ ಹೇಳುತ್ತಾರೆ. ಆದರೆ ರಾಧಿಕಾ ಪಂಡಿತ್ ಮಗಳಿಗೆ ಒಂದು ವರ್ಷ ತುಂಬುವುದರೊಳಗೆ ಮಗನಿಗೆ ಜನ್ಮ ನೀಡಿದ್ದರು. ರಾಧಿಕಾ ಪಂಡಿತ್ 2ನೇ ಮಗುವಿಗೆ ಗರ್ಭಧಾರಣೆಯಾದಾಗ ವರ್ಷದೊಳಗೆ ಗರ್ಭಧಾರಣೆಯಾದರೆ ಏನಾದರೂ ಸಮಸ್ಯೆವಿದೆಯೇ ಎಂಬುವುದರ ಬಗ್ಗೆ ಹಲವು ಚರ್ಚೆಗಳೇ ನಡೆದಿತ್ತು.
ಧ್ರುವ ಸರ್ಜಾ ಪತ್ನಿ ಪ್ರೇರಣಾ ಕೂಡ ಮಗಳಿಗೆ ವರ್ಷ ತುಂಬುವುದರೊಳಗೆ ಎರಡನೇ ಮಗುವಿಗೆ ಜನ್ಮ ನೀಡುತ್ತಿದ್ದಾರೆ. ಆರೋಗ್ಯಕರವಾದ, ಮುದ್ದಾದ ಮಗು ವಿನ ಜನನವಾಗಲಿ ಎಂಬುವುದೇ ಧ್ರುವ ಸರ್ಜಾ ಕುಟುಂಬದ ಹಾಗೂ ಫ್ಯಾನ್ಸ್ ಹಾರೈಕೆಯಾಗಿದೆ.



Click it and Unblock the Notifications
