Latest Updates
-
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು!
ಕಿವಿ ಕೇಳದ ಬಾಯಿ ಬಾರದ ಅಭಿಮಾನಿಯೊಂದಿಗೆ ದೋನಿ ನಡೆದುಕೊಂಡ ರೀತಿಗೆ ಎಲ್ಲರೂ ಫಿದಾ: ವೀಡಿಯೋ ವೈರಲ್
ಮಹೇಂದ್ರ ಸಿಂಗ್ ಧೋನಿ ಅದ್ಭುತ ಕ್ರಿಕಟಿಗ ಮಾತ್ರವಲ್ಲ ಅದ್ಭುತ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ. ಅನೇಕ ಸಂದರ್ಭಗಳಲ್ಲಿ ಧೋನಿ ತಮ್ಮ ನಡತೆಯ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.
ಸಿಎಸ್‌ಕೆಗೆ ಆರ್‌ಸಿಬಿ ರೀತಿಯೇ ದೊಡ್ಡ ಫ್ಯಾನ್ ಫಾಲೋವಿಂಗ್ ಇದ್ದಾರೆ, ನಮ್ಮ ಕರ್ನಾಟಕದಿಂದಲೇ ಅನೇಕ ಜನರು ಸಿಎಸ್‌ಕೆ ಅಭಿಮಾನಿಗಳ, ಅದಕ್ಕೆ ಕಾರಣ ಸಿಎಸ್‌ಕೆ ಅಲ್ಲ, ಒನ್ ಅಂಡ್ ಒನ್ಲಿ ಧೋನಿ.
ಧೋನಿ ಡೌನ್ ಟು ಅರ್ಥ್ ಸ್ವಭಾವದವರು, ಯಾವ ಅಭಿಮಾನಿಗೂ ನೋವುಂಟು ಮಾಡಲ್ಲ, ಅಭಿಮಾನಿಯನ್ನು ಅವರ ಗೌರವಿಸುವ ಮತ್ತೊಂದು ವೀಡಿಯೋ ವೈರಲ್ ಆಗುತ್ತಿದೆ. ಈ ವೀಡಿಯೋ ನೋಡಿದರೆ ಧೋನಿ ಮೇಲಿನ ಪ್ರೀತಿ ಮತ್ತಷ್ಟು ಹೆಚ್ಚುವುದು.

ಧೋನಿಯ ಒಂದೇ ಒಂದು ಆಟೋಗ್ರಾಫ್ ಬೇಕೆಂಬುವುದು ಬಹುತೇಕರ ಕನಸು, ಆಟೋಗ್ರಾಫ್ ಪಡೆಯಲು ತುಂಬಾನೇ ಕಷ್ಟಪಡುತ್ತಾರೆ, ಧೋನಿ ಸ್ಟೇಡಿಯಂಗೆ ಬಂದರೆ ಅಭಿಮಾನಿಗಳ ಕಣ್ಣು ಮಾತ್ರವಲ್ಲ ಕ್ಯಾಮರಾ ಕಣ್ಣುಗಳು ಧೋನಿ ಮೇಲಿರುತ್ತದೆ, ಏಕೆಂದರೆ ಧೋನಿಯ ಆಟ, ವರ್ತನೆ ಎಲ್ಲವೂ ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗುತ್ತದೆ, ಧೋನಿಯ ಫವರ್ ಅದು.
This fan cannot hear or speak, he stood there to get his artwork noticed by MS Dhoni. So MS stopped while going back after Practice and asked Ground staff to collect that artwork and gave off the Autograph !! 💛 pic.twitter.com/RX4m8UfTAE
— 🎰 (@StanMSD) April 20, 2024
ವಿಶೇಷ ಚೇತನ ಅಭಿಮಾನಿ
ಧೋನಿಯ ಈ ಅಭಿಮಾನಿಗೆ ಕಿವಿ ಕೇಳಿಸಲ್ಲ, ಮಾತು ಬರಲ್ಲ, ಆದರೆ ಧೋನಿಯ ಸ್ಕೆಚ್ ಫೋಟೋವನ್ನು (ಅದು ಅವರೇ ಬಿಡಿಸಿರುವುದಾ ಎಂದು ಗೊತ್ತಿಲ್ಲ, ಆದರೆ ಅವರ ಕೈಯಲ್ಲಿ ಧೋನಿಯ ಚಿತ್ರವಿದೆ) ಹಿಡಿದು ಧೋನಿ ಪ್ರಾಕ್ಟಿಸ್ ಮಾಡುತ್ತಿರುವ ಕಡೆ ಬರುತ್ತಾನೆ.
ತನ್ನ ಚಿತ್ರವನ್ನು ಹಿಡಿದು ನಿಂತಿರುವ ವ್ಯಕ್ತಿಯನ್ನು ಧೋನಿ ಗಮನಿಸುತ್ತಾರೆ. ಗ್ರೌಂಡ್ ಸ್ಟಾಫ್ ಬಳಿ ಆ ಚಿತ್ರವನ್ನು ತರುವಂತೆ ಸೂಚಿಸುತ್ತಾರೆ, ಅವರು ಅದನ್ನು ತಂದು ಧೋನಿ ಕೈಗೆ ಕೊಡುತ್ತಾರೆ, ಧೋನಿಯ ಆ ಚಿತ್ರದ ಮೇಲೆ ತಮ್ಮ ಅಟೋಗ್ರಾಫ್ ಹಾಕುತ್ತಾರೆ!! ಈ ವೀಡಿಯೋ ವೈರಲ್ ಆಗುತ್ತಿದೆ.
ಆ ಅಭಿಮಾನಿಗೆ ಎಷ್ಟು ಖುಷಿಯಾಗಿರಬೇಡ, ಸಾವಿರಾರು ಜನ ಧೋನಿ ಧೋನಿ ಅಂತ ಸ್ಟೇಡಿಯಂನಲ್ಲಿ ಕೂಗುತ್ತಾರೆ, ಎಲ್ಲರಿಗೂ ಆಟೋಗ್ರಾಫ್ ನೀಡಲು ಸಾಧ್ಯವಿಲ್ಲ, ಈ ರೀತಿ ಕೆಲವೊಂದು ಅದೃಷ್ಟವಂತರಿಗೆ ಮಾತ್ರ ಆಟೋಗ್ರಾಫ್ ಸಿಗುವುದು, ಧೋನಿ ಆಟೋಗ್ರಾಫ್ ಪಡೆಯಲು ಈ ವ್ಯಕ್ತಿ ನಿಜಕ್ಕೂ ಪುಣ್ಯ ಮಾಡಿದ್ದ ಅಲ್ವಾ?
MS Dhoni giving the ball to a young fan at Wankhede.
— CricketMAN2 (@ImTanujSingh) April 14, 2024
- Beautiful gesture by Dhoni, He's winning hearts of everyone...!!!! ❤️🐐 pic.twitter.com/kSIQMLOXOV
ತಂದೆಯ ಭುಜದಲ್ಲಿ ಕೂತು ಧೋನಿ ನೋಡುತ್ತಿದ್ದ ಪುಟಾಣಿಗೆ ಬಾಲ್ ನೀಡಿದ ಧೋನಿ
ಧೋನಿಯ ಈ ರೀತಿಯ ನಡುವಳಿಕೆ ಇದೇ ಮೊದಲ ಬಾರಿಯಲ್ಲ, ಸಿಎಸ್‌ಕೆ ಮ್ಯಾಚ್‌ನಲ್ಲಿ ಬ್ಯಾಕ್ ಟು ಬ್ಯಾಕ್ 3 ಸಿಕ್ಸ್ ಹೊಡೆದ ಧೋನಿ ತಾವು ಕೂರುವ ಕಡೆಗೆ ಹೋಗುತ್ತಿರುವಾಗ ಅಲ್ಲಿ ಬಾಲ್ ಬಿದ್ದಿರುವುದು ಕಾಣುತ್ತೆ, ಅದನ್ನು ಎತ್ತಿ ತಂದೆಯ ಭುಜದಲ್ಲಿ ಕುಳಿತಿದ್ದ ಪುಟ್ಟ ಬಾಲಕಿಗೆ ನೀಡುತ್ತಾರೆ.
ಧೋನಿ ತನ್ನ ಸ್ಪೆಷಲ್ ಅಭಿಮಾನಿಯೊಂದಿಗೆ ಫೋಟೋಗೆ ಪೋಸ್ ನೀಡಿರುವುದು'
ಕೂಲ್ ಕ್ಯಾಪ್ಟನ್ ಆಗಿದ್ದ ಧೋನಿ ತಮ್ಮ ಆಟ ಹಾಗೂ ಎಲ್ಲಿಯೂ ತಾಳ್ಮೆ ಕಳೆದುಕೊಳ್ಳದೆ ವರ್ತಿಸುವ ಸ್ವಭಾವದಿಂದ ತುಂಬಾನೇ ಗಮನ ಸೆಳೆದ ವ್ಯಕ್ತಿ. ಸ್ಟೈಲ್ ಅಂತ ಬಂದರೆ ಧೋನಿ ಸ್ಟೈಲ್ ಸ್ಟೇಟ್‌ಮೆಂಟ್ ಯಾವ ಸೆಲೆಬ್ರಿಟಿಗೂ ಕಡಿಮೆಯಿರಲ್ಲ, ಅವರು ಹೆಚ್ಚಾಗಿ ತಮ್ಮ ಹೇರ್ ಸ್ಟೈಲ್‌ನಿಂದಾಗಿ ಸುದ್ದಿಯಲ್ಲಿರುತ್ತಾರೆ.
Dhoni's sweet gesture for a special fan😍💛@msdhoni #MSDhoni #WhistlePodu pic.twitter.com/WJ3qdBzq8x
— Jyoti Dhoni💛 (@JyotiDhoni74) June 5, 2021
ಧೋನಿ ಕಷ್ಟದಿಂದ ಮೇಲಕ್ಕೆ ಬಂದಿರುವ ವ್ಯಕ್ತಿ, ಹಾಗಾಗಿ ಅವರಿಗೆ ಇತರರ ಕಷ್ಟ ಸುಲಭವಾಗಿ ಅರ್ಥವಾಗುತ್ತದೆ, ಹೀಗಾಗಿಯೇ ಇಷ್ಟೊಂದು ಎತ್ತರಕ್ಕೆ ಬೆಳೆದರೂ ಒಂದಿಷ್ಟೂ ಅಹಂಕಾರವಿಲ್ಲ, ತುಂಬಾನೇ ತಾಳ್ಮೆ.... ಅವರ ತಂಡದೊಂದಿಗೆ ನಡೆದುಕೊಳ್ಳುವ ರೀತಿ, ಸಾರ್ವಜನಿಕವಾಗಿ ನಡೆದುಕೊಳ್ಳುವು ರೀತಿ ಎಲ್ಲವೂ ಮಾದರಿ, ಅವರೊಬ್ಬರು ಪರ್ಫೆಕ್ಟ್ ಜಂಟಲ್‌ಮ್ಯಾನ್. ಹೀಗಾಗಿಯೇ ನಮ್ಮೆಲ್ಲರ ಹೃದಯಕ್ಕೆ ಧೋನಿ ಹತ್ತಿರ... ತುಂಬಾ ಹತ್ತಿರ...



Click it and Unblock the Notifications











