Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಅಕ್ಟೋಬರ್ 29 ಧನ ತ್ರಯೋದಶಿ: ದುಬಾರಿಯಾಯ್ತು ಚಿನ್ನ, ಈ ದಿನ ಗ್ರಾಂಗೆ ಎಷ್ಟಿದೆ?
ದೀಪಾವಳಿ ಸಮಯದಲ್ಲಿ ಫಳ ಫಳ ಹೊಳೆಯುವ ಚಿನ್ನದ ಬೆಲೆ ನಮ್ಮ ಹಬ್ಬೇರುವಂತೆ ಮಾಡುತ್ತದೆ. ಏಕೆಂದರೆ ದೀಪಾವಳಿಯಲ್ಲಿ ಬಹುತೇಕರು ಚಿನ್ನದ ಆಭರಣ ಖರೀದಿ ಮಾಡುತ್ತಾರೆ. ಏಕೆಂದರೆ ಧನ್ತೇರಸ್, ಈ ದಿನ ಒಂದು ಗ್ರಾಂ ಚಿನ್ನವಾದರೂ ಖರೀದಿಸಬೇಕೆಂಬುವುದು ಹಲವರ ಆಸೆ, ನಂಬಿಕೆಯಾಗಿರುತ್ತದೆ.
ಧನ ತ್ರಯೋದಶಿಯ ಮಹತ್ವ: ಧನ್ ತೆರೇಸ್ ಅಥವಾ ಧನ ತ್ರಯೋದಶಿಯಂದು ಆಭರಣಗಳನ್ನು ಖರೀದಿಸಿದರೆ ಸಂಪತ್ತು ವೃದ್ಧಿಸುತ್ತದೆ ಎಂಬುವುದು ನಂಬಿಕೆ, ಹಾಗಾಗಿ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಲಾಗುವುದು.

ಅಕ್ಟೋಬರ್ 29
1 ಗ್ರಾಂ ಚಿನ್ನದ ಬೆಲೆ
22 ಕ್ಯಾರೆಟ್ ₹ 7,314
24 ಕ್ಯಾರೆಟ್ ಚಿನ್ನದ ಬೆಲೆ
1ಗ್ರಾಂಗೆ ₹ 7,979
18 ಕ್ಯಾರೆಟ್ ಗೋಲ್ಡ್ ಬೆಲೆ
1ಗ್ರಾಂ ₹ 5,984
ದುಬಾರಿಯಾದ ಚಿನ್ನದ ಬೆಲೆ
ದೀಪಾವಳಿ, ಮದುವೆ ಸೀಸನ್‌ಗಳು ಅಂತ ಚಿನ್ನದ ಬೆಲೆ ದುಬಾರಿಯಾಗುತ್ತಿದೆ. ಇದೀಗ 1 ಗ್ರಾಂಗೆ ₹ 7,314(22 ಕ್ಯಾರೆಟ್) ಆಗಿರುವುದರಿಂದ ಚಿನ್ನ ಖರೀದಿಗೆ ಹಿಂದೆ ಮುಂದೆ ಆಲೋಚಿಸುವಂತಾಗಿದೆ.
ಬಡ, ಮಧ್ಯಮವರ್ಗದವರಿಗೆ ಕನಸಾಗುತ್ತಿರುವ ಚಿನ್ನ
ದೊಡ್ಡ ಚಿನ್ನದ ನೆಕ್ಲೆಸ್ ಬೇಡ, ಒಂದು ಮೂಗುತಿ ಖರೀದಿ ಮಾಡುವ ಎಂದರೆ ಅದಕ್ಕೆ 7-8 ಸಾವಿರ ಎಂದರೆ ಆಲೋಚಿಸುವಂತಾಗಿದೆ, ಸಾಮಾನ್ಯ ಜನರು ಚಿನ್ನದಂಗಡಿಗೆ ಹೋಗಲು ಹಿಂದೆ ಮುಂದೆ ನೋಡುವವಂಥ ಪರಿಸ್ಥಿತಿ ಬಂದಿದೆ. ಚಿನ್ನ ಬೆಳ್ಳಿ ದುಬಾರಿಯಾಗುತ್ತಿದ್ದಂತೆ ಮಕ್ಕಳಿಗೆ ಮದುವೆ ಸಮಯದಲ್ಲಿ ಚಿನ್ನ ಖರೀದಿ ಮಾಡುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ.
ಬೆಳ್ಳಿ ಬೆಲೆ
ಚಿನ್ನ ದುಬಾರಿ ಹಾಗಾಗಿ ಈ ಶುಭ ದಿನದಂದು ಬೆಳ್ಳಿ ಖರೀದಿ ಮಾಡೋಣ ಎಂದರೆ ಅದು ಕೂಡ ದುಬಾರಿಯಾಗುತ್ತಿದೆ.
ಬೆಳ್ಳಿಗೆ ಗ್ರಾಂಗೆ ₹ 96.90, ಒಂದು ಕೆಜಿಗೆ ₹ 96,900 ಇದೆ.
ಧನ ತ್ರಯೋದಶಿಯಂದು ಚಿನ್ನ ಬೆಳ್ಳಿ ಖರೀದಿಗೆ ಶುಭ ಸಮಯ : ಇಡೀ ದಿನ ಶುಭವಾಗಿದೆ, ನಾಳೆ ಮಧ್ಯಾಹ್ನದವರೆಗೆ ಧನ್ತೇರಸ್ ಮುಹೂರ್ತವಿದೆ, ಹಾಗಾಗಿ ನಾಳೆಯೂ ಚಿನ್ನ, ಬೆಳ್ಳಿ ಖರೀದಿಸಬಹುದು.
ಧನ ತ್ರಯೋದಶಿಯಂದು ಚಿನ್ನ ಬೆಳ್ಳಿ ಖರೀದಿಸಿ ತಂದ ಮೇಲೆ ಈ ಮಂತ್ರಗಳನ್ನು ಹೇಳುತ್ತಾ ಪೂಜಿಸಿ
ಧನ್ವಂತರೀ ಮಂತ್ರ
ಧ್ಯಾನಂ
ಅಚ್ಯುತಾನಂತ ಗೋವಿಂದ ವಿಷ್ಣೋ ನಾರಾಯಣಾಽಮೃತ
ರೋಗಾನ್ಮೇ ನಾಶಯಾಽಶೇಷಾನಾಶು ಧನ್ವಂತರೇ ಹರೇ ।
ಆರೋಗ್ಯಂ ದೀರ್ಘಮಾಯುಷ್ಯಂ ಬಲಂ ತೇಜೋ ಧಿಯಂ ಶ್ರಿಯಂ
ಸ್ವಭಕ್ತೇಭ್ಯೋಽನುಗೃಹ್ಣಂತಂ ವಂದೇ ಧನ್ವಂತರಿಂ ಹರಿಮ್ ॥
ಶಂಖಂ ಚಕ್ರಂ ಜಲೌಕಾಂ ದಧದಮೃತಘಟಂ ಚಾರುದೋರ್ಭಿಶ್ಚತುರ್ಭಿಃ ।
ಸೂಕ್ಷ್ಮಸ್ವಚ್ಛಾತಿಹೃದ್ಯಾಂಶುಕ ಪರಿವಿಲಸನ್ಮೌಳಿಮಂಭೋಜನೇತ್ರಮ್ ।
ಕಾಲಾಂಭೋದೋಜ್ಜ್ವಲಾಂಗಂ ಕಟಿತಟವಿಲಸಚ್ಚಾರುಪೀತಾಂಬರಾಢ್ಯಮ್ ।
ವಂದೇ ಧನ್ವಂತರಿಂ ತಂ ನಿಖಿಲಗದವನಪ್ರೌಢದಾವಾಗ್ನಿಲೀಲಮ್ ॥
ಧನ್ವಂತರೇರಿಮಂ ಶ್ಲೋಕಂ ಭಕ್ತ್ಯಾ ನಿತ್ಯಂ ಪಠಂತಿ ಯೇ ।
ಅನಾರೋಗ್ಯಂ ನ ತೇಷಾಂ ಸ್ಯಾತ್ ಸುಖಂ ಜೀವಂತಿ ತೇ ಚಿರಮ್ ॥
ಮಂತ್ರಂ
ಓಂ ನಮೋ ಭಗವತೇ ವಾಸುದೇವಾಯ ಧನ್ವಂತರಯೇ ಅಮೃತಕಲಶಹಸ್ತಾಯ [ವಜ್ರಜಲೌಕಹಸ್ತಾಯ] ಸರ್ವಾಮಯವಿನಾಶನಾಯ ತ್ರೈಲೋಕ್ಯನಾಥಾಯ ಶ್ರೀಮಹಾವಿಷ್ಣವೇ ಸ್ವಾಹಾ ।
[ಪಾಠಾಂತರಃ]
ಓಂ ನಮೋ ಭಗವತೇ ಮಹಾಸುದರ್ಶನಾಯ ವಾಸುದೇವಾಯ ಧನ್ವಂತರಯೇ ಅಮೃತಕಲಶಹಸ್ತಾಯ ಸರ್ವಭಯವಿನಾಶಾಯ ಸರ್ವರೋಗನಿವಾರಣಾಯ ತ್ರೈಲೋಕ್ಯಪತಯೇ ತ್ರೈಲೋಕ್ಯನಿಧಯೇ ಶ್ರೀಮಹಾವಿಷ್ಣುಸ್ವರೂಪ ಶ್ರೀಧನ್ವಂತರೀಸ್ವರೂಪ ಶ್ರೀ ಶ್ರೀ ಶ್ರೀ ಔಷಧಚಕ್ರ ನಾರಾಯಣಾಯ ಸ್ವಾಹಾ ।
ಗಾಯತ್ರೀ ಮಂತ್ರಂ
ಓಂ ವಾಸುದೇವಾಯ ವಿದ್ಮಹೇ ಸುಧಾಹಸ್ತಾಯ ಧೀಮಹಿ ।
ತನ್ನೋ ಧನ್ವಂತರಿಃ ಪ್ರಚೋದಯಾತ್ ।
ತಾರಕಮಂತ್ರಂ
ಓಂ ಧಂ ಧನ್ವಂತರಯೇ ನಮಃ ।
ಮಂತ್ರದ ಮೂಲ: vignanam.org



Click it and Unblock the Notifications
