Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಅಂಬಾನಿ ಕಿಸೆಗೆ ಕೈ ಹಾಕಿದ್ದಾನೆ ದೆಹಲಿ ವ್ಯಕ್ತಿ..! ಆತನ ಐಡಿಯಾ ಕೇಳಿದ್ರೆ ನಿಮಗೂ ಶಾಕ್ ಆಗುತ್ತೆ..!
ರಿಲಯನ್ಸ್ ಜಿಯೋ ಅಂಬಾನಿ ಗ್ರೂಪ್‌ನ ಅತ್ಯಂತ ದೊಡ್ಡ ಪಾಲು ಹೊಂದಿರುವ ಸಂಸ್ಥೆ. ಟೆಲಿಕಾಮ್ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅತೀ ಹೆಚ್ಚು ಷೇರುಗಳ ಹೊಂದಿರುವ ರಿಲಯನ್ಸ್‌ನ ಭಾಗವಾಗಿದೆ. ಇತ್ತೀಚಿಗೆ ಲೈವ್ ಸ್ಟ್ರೀಮಿಂಗ್, ಸಿನಿಮಾ, ಒರಿಜಿನಲ್ಸ್ ನೀಡುತ್ತಿದ್ದ ಜಿಯೋ ಸಿನಿಮಾ ಅಂತ್ಯಗೊಳ್ಳಲಿ ಎಂಬ ವರದಿಗಳಾಗಿತ್ತು. ಜಿಯೋ ಸಿನಿಮಾ ಡಿಸ್ನಿ ಹಾಟ್‌ಸ್ಟಾರ್ ಜೊತೆ ವಿಲೀನವಾಗಲಿದೆ ಎಂದು ವರದಿಯಾಗಿದೆ.
ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಬಹುಕೋಟಿ ಕಂಪನಿಯ ಭಾಗವಾಗಿದೆ. ಭಾರತದಲ್ಲಿ ಕೆಲವೊಂದು ಕಂಪನಿಯನ್ನು ಈಗಾಗಲೇ ವಿಲೀನ ಮಾಡಿಕೊಂಡಿದೆ. ಈಗ ಜಿಯೋ ಸಿನಿಮಾದ ಮೇಲೂ ಕಣ್ಣಿಟ್ಟಿದೆ. ಇನ್ನು ಜಿಯೋ ಮೂಲಕ ಉಚಿತವಾಗಿ ಜನರಿಗೆ ಲಭ್ಯವಿತ್ತು, ಹಾಗೆ ತಿಂಗಳಿಗೆ ಕೇವಲ 28 ರೂಪಾಯಿಯ ಚಂದಾದಾರಿಕೆಯಲ್ಲಿ ಪ್ರೀಮಿಯಂ ಮೆಂಬರ್‌ಶಿಪ್ ನೀಡುತ್ತಿತ್ತು.

ಆದರೆ ಐಪಿಎಲ್ ಆರಂಭಕ್ಕೂ ಮುನ್ನ ಡಿಸ್ನಿ ಜೊತೆ ವಿಲೀನಾಗಲಿದ್ದು, ಮುಂದೆ ದುಬಾರಿ ಮೊತ್ತ ನೀಡಿ ಚಂದಾದಾರರಾಬೇಕಾದ ಅನಿವಾರ್ಯತೆ ಬರುವ ಸಾಧ್ಯತೆ ಇದೆ. ಇದೆಲ್ಲಾ ಆಗು ಹೋಗುಗಳ ನಡುವೆ ದೆಹಲಿಯ ವ್ಯಕ್ತಿಯೊಬ್ಬ ಅಂಬಾನಿ ಕಿಸೆಯಿಂದಲೇ ಹಣ ಎಗರಿಸುವ ಐಡಿಯಾ ಮಾಡಿದ್ದಾನೆ. ಜಿಯೋ ಸಿನಿಮಾ ಡಿಸ್ನಿ ಜೊತೆ ವಿಲೀನ ಆಗಲಿದೆ ಎಂಬ ಸುದ್ದಿ ತಿಳಿದ ಆತ ಖತರ್ನಾಕ್ ಐಡಿಯಾ ಮಾಡಿ ಹಣ ಮಾಡಲು ಮುಂದಾಗಿದ್ದಾನೆ.
ಡಿಸ್ನಿ ಜೊತೆಗೆ ಜಿಯೋ ಸಿನಿಮಾ ವಿಲೀನವಾದರೆ ಭಾರತದಲ್ಲಿ ಅದರ ಸೇವೆ ಹೊಸದೊಂದು ಡೊಮೈನ್ ಮೂಲಕ ಆರಂಭಿಸಬೇಕಾಗುತ್ತದೆ. ಹೀಗಾಗಿ ಈ ಡೊಮೈನ್ ಅನ್ನು ವ್ಯಕ್ತಿಯೊಬ್ಬ ಹಣ ನೀಡಿ ಖರೀದಿಸಿ ಬಿಟ್ಟಿದ್ದಾನೆ. JioHotstar.com ಎಂಬ ಡೊಮೈನ್ ಅನ್ನು ದೆಹಲಿಯ ವ್ಯಕ್ತಿ ಖರೀದಿಸಿದ್ದಾನೆ. ಈಗ ಡಿಸ್ನಿ ಈ ಡೊಮೈನ್ ಬಳಸಲು ಸಾಧ್ಯವಿಲ್ಲ, ಒಂದಿಷ್ಟು ಬದಲಾವಣೆ ಮಾಡಿಕೊಂಡು ಇದೇ ಹೆಸರು ಹೋಲುವ ಡೊಮೈನ್ ಬಳಸಬಹುದು. ಆದ್ರೆ ಒಂದೇ ರೀತಿಯ ಎರಡು ಹೆಸರಿನ ಡೊಮೈನ್ ಬಳಸಲು ಆಗುವುದಿಲ್ಲ.
ಡೊಮೈನ್ ಬೇಕಾದರೆ ತೀರಿಸಬೇಕು ಆತನ ಆಸೆ..!
ಮೀಡಿಯಾದಲ್ಲಿ ಡಿಸ್ನಿ ಹಾಗೂ ಜಿಯೋ ಸಿನಿಮಾ ವಿಲೀನದ ಸುದ್ದಿ ನೋಡಿದ್ದ ಆತ ತಕ್ಷಣ ತಲೆ ಓಡಿಸಿ JioHotstar.com ಡೊಮೈನ್ ಇದೆಯೇ ಎಂದು ಪರಿಶೀಲನೆ ಮಾಡಿದ್ದಾನೆ. ಆದ್ರೆ ಆಗ ಈ ಡೊಮೈನ್ ಯಾರ ಮಾಲಿಕತ್ವದಲ್ಲೂ ಇರಲಿಲ್ಲ. ತಕ್ಷಣ ಆಗ ಹಣ ನೀಡಿ ಖರೀದಿಸಿದ್ದಾನೆ. ಏಕೆಂದರೆ ಆತನಿಗೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯಕ್ಕೆ ಹೋಗಿ ಉನ್ನತ ವ್ಯಾಸಾಂಗ ಮಾಡಬೇಕು ಎಂಬ ಆಸೆ ಇದೆಯಂತೆ. ಒಂದು ವೇಳೆ ತನ್ನ ಆಸೆ ಈಡೇರಿಸುವುದಾದರೆ ಈ ಹೆಸರಿನ ಡೊಮೈನ್ ಬಿಟ್ಟು ಕೊಡುತ್ತೇನೆ ಎಂದಿದ್ದಾನೆ.
ವಿದೇಶಿ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸದ ಖರ್ಚು ಅಂದ್ರ ಕೋಟಿಗಳ ಲೆಕ್ಕದಲ್ಲಿ ಎಣಿಸಬೇಕಾಗುತ್ತದೆ. ಅಷ್ಟೊಂದು ದೊಡ್ಡ ಮೊತ್ತಕ್ಕೆ ಆತ ಮನವಿ ಮಾಡಿದ್ದಾನೆ. ಆದ್ರೆ ಜಿಯೋ ಸಿನಿಮಾ ಹಾಗೂ ಡಿಸ್ನಿ ನಡುವೆ ವಿಲೀನಮತೆ ಮಾತು ಎರಡೂ ಕಂಪನಿಗಳ ಮೂಲದಿಂದ ಹೊರಬಂದಿಲ್ಲ. ಐಪಿಎಲ್ ಆರಂಭಕ್ಕೂ ಮುನ್ನವೇ ವಿಳಿನ ನಡೆಯಲಿದೆ ಎಂಬ ಸುದ್ದಿಗಳು ಹರಿದಾಡಿದೆ.
ಈಗ ದೆಹಲಿಯ ವ್ಯಕ್ತಿ ಈ ಸುದ್ದಿ ಕೇಳಿ ಜಿಯೋ ಡಿಸ್ನಿ ಹೆಸರಿನ ಡೊಮೈನ್ ಕೂಡ ಖರೀದಿಸಿ ತನ್ನ ಬಳಿ ಇಟ್ಟುಕೊಂಡಿದ್ದಾನೆ. ಆತ ನೀಡದೆ ಹೋದರೆ ಬೇರೆ ಹೆಸರಿನ ಡೊಮೈನ್ ಅನ್ನು ಅವರು ಪಡೆಯಬೇಕಾಗುತ್ತದೆ. ಇಲ್ಲವೆ ಆತನ ಆಸೆ ಈಡೇರಿಸಬೇಕಾಗುತ್ತದೆ.
ಈ ಹಿಂದೆ Saavn ಮ್ಯೂಸಿಕ್ ಸ್ಟ್ರೀಮಿಂಗ್ ಅನ್ನು ಜಿಯೋ ಸಮೂಹ ಖರೀದಿಸಿ ಅದಕ್ಕೆ JioSaavn.com ಎಂಬ ಹೆಸರಿನ ಡೊಮೈನ್ ಮೂಲಕ ಗ್ರಾಹಕರಿಗೆ ತಲುಪುವಂತೆ ಮಾಡಿತ್ತು. ಇದೇ ಐಡಿಯಾದಲ್ಲಿ ಈಗಲೂ JioHotstar.comಗೆ ಸಂಸ್ಥೆ ಮುಂದಾಗಲಿದೆ ಎಂದು ಆತ ಈ ಕೆಲಸ ಮಾಡಿದ್ದಾನೆ. ಒಂದು ವೇಳೆ ಈ ವಿಲೀನ ಪ್ರಕ್ರಿಯೆ ನಡೆದರೆ ಆತನ ಅದೃಷ್ಟ ಬದಲಾಗಬಹುದು.



Click it and Unblock the Notifications
