Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಮಾಸ ಫಲ: ವೃಶ್ಚಿಕ ರಾಶಿಯವರಿಗೆ ಡಿಸೆಂಬರ್ ತಿಂಗಳು ಹೇಗಿರಲಿದೆ?
ವೃಶ್ಚಿಕ ರಾಶಿಯವರಲ್ಲಿ ಗುರು ನಿಮ್ಮ ಆರನೇ ಮನೆಯಲ್ಲಿರಲಿದೆ, ಶನಿ ನಾಲ್ಕನೇ ಮನೆಯಲ್ಲಿ ಇರಲಿದೆ. ಈ ತಿಂಗಳಿನಲ್ಲಿ ಶುಕ್ರ, ಬುಧ, ಮಂಗಳನ ಸ್ಥಾನ ನಿಮಗೆ ಅನುಕೂಲಕರವಲ್ಲ. 12ನೇ ಮನೆಯಲ್ಲಿ ಕೇತು ಇರಲಿದೆ. ಗುರು 6ನೇ ಮನೆಯಲ್ಲಿ ಇರಲಿದೆ, ಆದ್ದರಿಂದ ಹಣಕಾಸಿನ ವಿಷಯದಲ್ಲಿ ತುಂಬಾನೇ ಜಾಗ್ರತೆವಹಿಸಬೇಕು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸ್ಥಾನವು ನಮ್ಮ ರಾಶಿಯ ಮೇಲೆ ಪ್ರಭಾವ ಬೀರುತ್ತದೆ. ಡಿಸೆಂಬರ್ ತಿಂಗಳಿನಲ್ಲಿ ಗ್ರಹಗಳ ಪ್ರಭಾವ ವೃಶ್ಚಿಕ ರಾಶಿಯವರ ಮೇಲೆ ಹೇಗಿರಲಿದೆ ಎಂದು ನೋಡೋಣ ಬನ್ನಿ....

ಡಿಸೆಂಬರ್ ಮಾಸಿಕ ಭವಿಷ್ಯ 2023 ರ ಪ್ರಕಾರ, ವೃಶ್ಚಿಕ ರಾಶಿಯವರಿಗೆ ಮಿಶ್ರ ಫಲಿತಾಂಶ. ಶನಿಯು ನಿಮ್ಮ ನಾಲ್ಕನೇ ಮನೆಯಲ್ಲಿರುತ್ತಾನೆ. ಈ ಸ್ಥಾನ ನಿಮಗೆ ಅನುಕೂಲಕರವಲ್ಲ, ಈ ಕಾರಣದಿಂದಾಗಿ ತಮ್ಮ ಕೆಲಸವನ್ನು ಪೂರ್ಣಗೊಳಿಸಲು ಸಮಯ ತೆಗೆದುಕೊಳ್ಳಬಹುದು. ನಾಲ್ಕನೇ ಮನೆಯಲ್ಲಿ ಶನಿಯ ಉಪಸ್ಥಿತಿಯಿಂದಾಗಿ, ವೃಶ್ಚಿಕ ರಾಶಿಯವರು ಏಕಾಗ್ರತೆಯ ಕೊರತೆಯನ್ನು ಹೊಂದಿರಬಹುದು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು. ಈ ತಿಂಗಳಲ್ಲಿ, ಗುರುವು ನಿಮ್ಮ ಆರನೇ ಮನೆಯಲ್ಲಿರುತ್ತಾನೆ, ಇದರ ಪರಿಣಾಮವಾಗಿ ಈ ಜನರು ವೃತ್ತಿಯಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಏಕೆಂದರೆ ಪ್ರಸ್ತುತ ಕೆಲಸದಲ್ಲಿ ಅಸಮಾಧಾನ ಉಂಟಾಗುವುದು, ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆಯಿದೆ. ವೃಶ್ಚಿಕ ರಾಶಿಯವರು ಕೆಲಸದ ಬಗ್ಗೆ ಜಾಗರೂಕರಾಗಿರಬೇಕು, ಆತುರದಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.
ಆರ್ಥಿಕ ಜೀವನ
ಡಿಸೆಂಬರ್ ಮಾಸಿಕ ಜಾತಕ 2023 ರ ಪ್ರಕಾರ, ವೃಶ್ಚಿಕ ರಾಶಿಯವರು ಡಿಸೆಂಬರ್ ತಿಂಗಳಿನಲ್ಲಿ ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಮಿಶ್ರ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ. ಶುಭ ಗ್ರಹವಾದ ಶುಕ್ರ ಈ ತಿಂಗಳಿನಲ್ಲಿ ಅಶುಭ ಸ್ಥಾನದಲ್ಲಿದ್ದು, ಅನಗತ್ಯ ವೆಚ್ಚಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಜನರು ಹಣವನ್ನು ಖರ್ಚು ಮಾಡುವಾಗ ಎಚ್ಚರಿಕೆ ವಹಿಸಬೇಕು.
ಈ ತಿಂಗಳು, ಆರನೇ ಮನೆಯಲ್ಲಿ ಗುರುವಿನ ಸ್ಥಾನವು ಖರ್ಚು ಹೆಚ್ಚಿಸುತ್ತದೆ. ಗ್ರಹಗಳ ಈ ಸ್ಥಾನವು ನಿಮ್ಮನ್ನು ಸಾಲ ತೆಗೆದುಕೊಳ್ಳಲು ಒತ್ತಾಯಿಸಬಹುದು. ಗ್ರಹಗಳ ಈ ಸ್ಥಾನದಿಂದಾಗಿ ಸಾಲ ಮಾಡಬೇಕಾಗಬಹುದು. ಶನಿಯು ನಾಲ್ಕನೇ ಮನೆಯಲ್ಲಿರುವುದರಿಂದ, ವೃಶ್ಚಿಕ ರಾಶಿಯವರು ಆರ್ಥಿಕ ಸವಾಲು ಎದುರಾಗಬಹುದು, ಆರೋಗ್ಯಕ್ಕಾಗಿ ಹೆಚ್ಚು ಹಣ ಖರ್ಚು ಮಾಡಬೇಕಾಗುವುದು. ಈ ಅವಧಿಯಲ್ಲಿ ಯಾವುದೇ ಹೊಸ ವ್ಯಾಪಾರ ವ್ಯವಹಾರಗಳನ್ನು ಮಾಡುವುದನ್ನು ತಪ್ಪಿಸಲು ಸಲಹೆ ನೀಡಲಾಗುವುದು.
ಆರೋಗ್ಯ ಜೀವನ
ನಿಮ್ಮ ಹನ್ನೊಂದನೇ ಮನೆಯಲ್ಲಿ ಕೇತು ಸ್ಥಿತರಿರುವುದರಿಂದ ವೃಶ್ಚಿಕ ರಾಶಿಯವರು ಉತ್ತಮ ಆರೋಗ್ಯವನ್ನು ಹೊಂದಿರುತ್ತಾರೆ. ಗುರು, ಎರಡನೇ ಮತ್ತು ಐದನೇ ಮನೆಗಳ ಅಧಿಪತಿಯಾಗಿ, ನಿಮ್ಮ ಆರನೇ ಮನೆಯಲ್ಲಿ ಇರುತ್ತಾನೆ. ಶನಿಯು ಈಗಾಗಲೇ ನಾಲ್ಕನೇ ಮನೆಯಲ್ಲಿದೆ. ಈ ಅವಧಿಯಲ್ಲಿ ತಾಯಿಯ ಆರೋಗ್ಯಕ್ಕಾಗಿ ಹಣವನ್ನು ಖರ್ಚು ಮಾಡಬಹುದು.
ಪ್ರೀತಿ, ಮದುವೆ, ಕುಟುಂಬ
ಪ್ರೇಮಿಗಳು ಜಾಗರೂಕರಾಗಿರಬೇಕು, ಶನಿಯು ನಾಲ್ಕನೇ ಮನೆಯಲ್ಲಿರುವುದರಿಂದ ಸಂಬಂಧದಲ್ಲಿ ಪ್ರೀತಿ ಮತ್ತು ಪರಸ್ಪರ ಹೊಂದಾಣಿಕೆಯ ಕೊರತೆ ಉಂಟಾಗಬಹುದು. ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಸಾಧ್ಯವಾಗದೆ ಭಿನ್ನಾಭಿಪ್ರಾಯ ಉಂಟಾಗಬಹುದು. ಅವಾಹಿತರು ಮದುವೆ ನಿರ್ಧಾರವನ್ನು ಆಲೋಚಿಸಿ ತೆಗೆದುಕೊಳ್ಳಿ. ಮದುವೆ ಮುಂದೂಡುವುದು ಒಳ್ಳೆಯದು. ಕುಟುಂಬದಲ್ಲಿ ಸಮಸ್ಯೆಗಳು ಉಂಟಾಗಬಹುದು, ಕೋಪವನ್ನು ನಿಯಂತ್ರಿಸಿ.
ಪರಿಹಾರ
ಶನಿದೇವನನ್ನು ಆರಾಧಿಸಿ



Click it and Unblock the Notifications
