Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಾಸ ಫಲ: ಧನು ರಾಶಿಯವರಿಗೆ ಡಿಸೆಂಬರ್ ತಿಂಗಳು ಈ ವಿಷಯಗಳಲ್ಲಿ ತುಂಬಾನೇ ಶುಭವಾಗಿದೆ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸ್ಥಾನವು ನಮ್ಮ ರಾಶಿಯ ಮೇಲೆ ಪ್ರಭಾವ ಬೀರುತ್ತದೆ. ಡಿಸೆಂಬರ್ ತಿಂಗಳಿನಲ್ಲಿ ಗ್ರಹಗಳ ಪ್ರಭಾವ ಧನು ರಾಶಿಯವರ ಮೇಲೆ ಹೇಗಿರಲಿದೆ ಎಂದು ನೋಡೋಣ ಬನ್ನಿ....
ಡಿಸೆಂಬರ್ ತಿಂಗಳಿನಲ್ಲಿ ಗುರುವು ಐದನೇ ಮನೆಯಲ್ಲಿ ಸ್ಥಿತರಿರುವುದರಿಂದ ಧನು ರಾಶಿಯವರಿಗೆ ಉತ್ತಮ ಫಲಿತಾಂಶಗಳನ್ನು ನೀಡಬಹುದು. ಶನಿಯು ಎರಡನೇ ಮತ್ತು ಮೂರನೇ ಮನೆಗಳ ಅಧಿಪತಿಯಾಗಿ ಮೂರನೇ ಮನೆಯಲ್ಲಿ ಇರಲಿದೆ. ಡಿಸೆಂಬರ್ ತಿಂಗಳಲ್ಲಿ, ಆರನೇ ಮನೆಯ ಅಧಿಪತಿ ಶುಕ್ರನು ಅನುಕೂಲಕರ ಸ್ಥಾನದಲ್ಲಿರುತ್ತಾನೆ. ಬುಧದ ಈ ಸ್ಥಾನವುಅನೇಕ ರೀತಿಯಲ್ಲಿ ಲಾಭವನ್ನು ನೀಡುತ್ತದೆ. ಮಂಗಳ ಈ ತಿಂಗಳಲ್ಲಿ ಅಶುಭ ಸ್ಥಾನದಲ್ಲಿರುತ್ತಾನೆ.

ಶನಿಯು ನಿಮ್ಮ 3ನೇ ಮನೆಯಲ್ಲಿ ಇರಲಿದೆ. ಶನಿಯ ಈ ಸ್ಥಾನ ಆರ್ಥಿಕ ಸದೃಢತೆ ತರುತ್ತದೆ. ಮೂರನೇ ಮನೆಯಲ್ಲಿ ಶನಿಯ ಉಪಸ್ಥಿತಿಯು ಅನುಕೂಲಕರವಾಗಿರುತ್ತದೆ. ಆದ್ದರಿಂದ ವಿದೇಶದಲ್ಲಿ ಕೆಲಸಕ್ಕೆ ಪ್ರಯತ್ನಿಸುತ್ತಿರುವವರೆಗೆ ಈ ಅವಧಿ ಫಲಪ್ರದವಾಗಿದೆ. ವೃತ್ತಿ ಜೀವನದ ದೃಷ್ಟಿಯಿಂದಲೂ ಈ ಅವಧಿ ಅನುಕೂಲಕರವಾಗಿದೆ
ವೃತ್ತಿ ಜೀವನ
ಡಿಸೆಂಬರ್ ಮಾಸಿಕ ಭವಿಷ್ಯ 2023 ರ ಪ್ರಕಾರ, ಧನು ರಾಶಿಯವರು ತಮ್ಮ ವೃತ್ತಿಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ವೃತ್ತಿಜೀವನದ ಗ್ರಹವಾದ ಶನಿಯು ನಿಮ್ಮ ಮೂರನೇ ಮನೆಯಲ್ಲಿ ಇರುವುದರಿಂದ ಈ ಅವಧಿ ಅನುಕೂಲಕರವಾಗಿದೆ. ಶನಿಯ ಈ ಸ್ಥಾನವು ಈ ಜನರ ವೃತ್ತಿಜೀವನದಲ್ಲಿ ಸ್ಥಿರತೆಯನ್ನು ಸೂಚಿಸುತ್ತದೆ, ಇದರ ಪರಿಣಾಮವಾಗಿ ಅವರು ವಿದೇಶದಿಂದ ಹೊಸ ಉದ್ಯೋಗಾವಕಾಶಗಳನ್ನು ಪಡೆಯಬಹುದು. ಕೇತು 10ನೇ ಮನೆಯಲ್ಲಿ ಇರಲಿದೆ. ಕೇತುವಿನ ಈ ಸ್ಥಾನವು ಕೂಡ ನಿಮಗೆ ಅನುಕೂಲಕರವಾಗಿದೆ, ಈ ಅವಧಿಯಲ್ಲಿ ನಿಮ್ಮ ಕೌಶಲ್ಯ ಹೆಚ್ಚಾಗುವುದು.
ಗುರು 5ನೇ ಮನೆಯಲ್ಲಿ ಇರಲಿದೆ, ಈ ಅವಧಿಯಲ್ಲಿ ನೀವು ಕಷ್ಟಕರವಾದ ಕೆಲಸವನ್ನು ಕೂಡ ಸುಲಭದಲ್ಲಿ ಮಾಡಬಹುದು. ಡಿಸೆಂಬರ್‌ನಲ್ಲಿ ತಮ್ಮ ವ್ಯಾಪಾರವನ್ನು ವಿಸ್ತರಿಸಲು ಯೋಚಿಸುತ್ತಿರುವ ಜನರಿಗೆ ಈ ಸಮಯವು ಉತ್ತಮವಾಗಿರುತ್ತದೆ. ವ್ಯಾಪಾರಸ್ಥರು ಉತ್ತಮ ಲಾಭ ಗಳಿಸುತ್ತೀರಿ. ಹೊಸ ವ್ಯಾಪಾರ ವ್ಯವಹಾರಗಳಿಗೆ ಈ ಸಮಯ ಅನುಕೂಲಕರವಾಗಿದೆ.
ಆರ್ಥಿಕ ಜೀವನ
ಆರ್ಥಿಕವಾಗಿ ಡಿಸೆಂಬರ್ ತಿಂಗಳು ಉತ್ತಮವಾಗಿದೆ. ಶನಿಯು ಮೂರನೇ ಮನೆಯಲ್ಲಿರುವುದರಿಂದ ಉತ್ತಮ ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ. ಮೂರನೇ ಮನೆಯು ಬೆಳವಣಿಗೆಯ ಮನೆಯಾಗಿದೆ ಮತ್ತು ಪರಿಣಾಮವಾಗಿ, ಸಂಪತ್ತಿನ ಹೆಚ್ಚಳವನ್ನು ಕಾಣಬಹುದು. ಗುರುವಿನ ಈ ಸ್ಥಾನವು ಈ ಜನರಿಗೆ ಅನುಕೂಲಕರವಾಗಿರುತ್ತದೆ , ಗುರು 5ನೇ ಮನೆಯಲ್ಲಿ ಇರುವುದರಿಂದ ಆರ್ಥಿಕವಾಗಿ ಒಳ್ಳೆಯದಿದೆ.
ಷೇರು ಮಾರುಕಟ್ಟೆಯಲ್ಲಿ ತೊಡಗಿಸಿಕೊಂಡವರು ಉತ್ತಮ ಲಾಭ ಗಳಿಸುತ್ತೀರಿ. ಷೇರುಗಳ ಮೂಲಕ ಲಾಭ ಗಳಿಸಲು ಈ ತಿಂಗಳು ಉತ್ತಮವಾಗಿರುತ್ತದೆ. ಹಣಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳಿಗೆ ಈ ತಿಂಗಳು ಅನುಕೂಲಕರವಾಗಿರುತ್ತದೆ.
ಆರೋಗ್ಯ ಜೀವನ
ಡಿಸೆಂಬರ್ ತಿಂಗಳಿನಲ್ಲಿ ಮೂರನೇ ಮನೆಯಲ್ಲಿ ಶನಿಯ ಸ್ಥಾನದಿಂದಾಗಿ, ಧನು ರಾಶಿಯವರ ಆರೋಗ್ಯವು ಉತ್ತಮವಾಗಿರುತ್ತದೆ. ಗುರುವಿನ ಸ್ಥಾನವೂ ನಿಮಗೆ ಅನುಕೂಲಕರವಾಗಿದೆ, ಆದ್ದರಿಂದ ಆರೋಗ್ಯದ ದೃಷ್ಟಿಯಿಂದ ಈ ಅವಧಿ ನಿಮಗೆ ತುಂಬಾನೇ ಉತ್ತಮವಾಗಿದೆ.
ಪ್ರೀತಿ , ಮದುವೆ, ಕುಟುಂಬ ಜೀವನ
ಡಿಸೆಂಬರ್ ತಿಂಗಳು ಪ್ರೀತಿ, ಮತ್ತು ವೈವಾಹಿಕ ಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಯಾರನ್ನಾದರೂ ಪ್ರೀತಿಸುವವರು ಈ ಅವಧಿಯಲ್ಲಿ ತುಂಬಾನೇ ಖುಷಿಯಾಗಿರುತ್ತಾರೆ. ವೈವಾಹಿಕ ಜೀವನದಲ್ಲಿ ಏನಾದರೂ ಸಮಸ್ಯೆಯಿದ್ದರೆ ಎಲ್ಲವೂ ಬಗೆಹರಿಯಲಿದೆ. ಅವಾಹಿತರಿಗೆ ಮದುವೆಗೆ ಸಂಬಂಧ ಕೂಡಿ ಬರಬಹುದು. ಕುಟುಂಬದಲ್ಲಿಯೂ ಸಂತೋಷದ ವಾರಾವರಣ ಇರುತ್ತದೆ. ಒಟ್ಟಿನಲ್ಲಿ ಈ ಅವಧಿ ನಿಮಗೆ ತುಂಬಾನೇ ಚೆನ್ನಾಗಿದೆ.
* ಗುರುವಾರದಂದು ಬಡವರಿಗೆ ಅನ್ನದಾನ ಮಾಡಿ.
* "ಓಂ ಗುರ್ವೇ ನಮಃ" ಎಂದು ಪ್ರತಿದಿನ 108 ಬಾರಿ ಜಪಿಸಿ.



Click it and Unblock the Notifications

