Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮಾಸ ಫಲ: ಮಕರ ರಾಶಿಯವರಿಗೆ ಡಿಸೆಂಬರ್ ತಿಂಗಳು ಅದೃಷ್ಟದ ತಿಂಗಳಾ?
ಡಿಸೆಂಬರ್ ಮಾಸಿಕ ಭವಿಷ್ಯ 2023 ರ ಪ್ರಕಾರ, ಮಕರ ರಾಶಿಯವರಿಗೆ ಡಿಸೆಂಬರ್ ತಿಂಗಳು ಮಿಶ್ರಫಲ. ಮಕರ ರಾಶಿಯಲ್ಲಿ ಗುರು ನಾಲ್ಕನೇ ಮನೆಯಲ್ಲಿದೆ, ಶನಿಯು ಎರಡನೇ ಮನೆಯಲ್ಲಿ ಇರಲಿದೆ ಶುಕ್ರ 10ನೇ, 11ನೇ ಮನೆಯಲ್ಲಿ ಇರಲಿದೆ. ಹನ್ನೊಂದನೇ ಮನೆಯ ಅಧಿಪತಿಯಾದ ಮಂಗಳವನ್ನು ಡಿಸೆಂಬರ್ 2023 ರ ಕೊನೆಗೆ ಹನ್ನೆರಡನೇ ಮನೆಯಲ್ಲಿಯೇ ಇರಲಿದೆ.
ಶನಿಯ ಪ್ರತಿಕೂಲ ಸ್ಥಾನದಿಂದ ಹಣ ಗಳಿಕೆ ಕಡಿಮೆಯಾಗುವುದು. ಈ ತಿಂಗಳಿನಲ್ಲಿ ಅನಗತ್ಯ ಮನೆಯ ಖರ್ಚುಗಳು ಹೆಚ್ಚಾಗಬಹುದು. ಇದರೊಂದಿಗೆ, ಪ್ರಯಾಣದ ಸಮಯದಲ್ಲಿ ಆರ್ಥಿಕ ನಷ್ಟದ ಸಾಧ್ಯತೆಯೂ ಇದೆ. ವಸ್ತುಗಳು ಕಳ್ಳತನವಾಗಬಹುದು, ಆದ್ದರಿಂದ ನೀವು ಜಾಗರೂಕರಾಗಿರಬೇಕು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸ್ಥಾನವು ನಮ್ಮ ರಾಶಿಯ ಮೇಲೆ ಪ್ರಭಾವ ಬೀರುತ್ತದೆ. ಡಿಸೆಂಬರ್ ತಿಂಗಳಿನಲ್ಲಿ ಗ್ರಹಗಳ ಪ್ರಭಾವ ಮಕರ ರಾಶಿಯವರ ಮೇಲೆ ಹೇಗಿರಲಿದೆ ಎಂದು ನೋಡೋಣ ಬನ್ನಿ....
ಕೆಲಸದ ಪ್ರದೇಶ
ವೃತ್ತಿ ಜೀವನದ ದೃಷ್ಟಿಯಿಂದ ನೋಡುವುದಾದರೆ ಈ ತಿಂಗಳ ಮಿಶ್ರಫಲ. ಶನಿಯು ಎರಡನೇ ಮನೆಯಲ್ಲಿ ಕೇತು ಒಂಬತ್ತನೇ ಮನೆಯಲ್ಲಿರುತ್ತಾನೆ. ಎರಡನೇ ಮನೆಯಲ್ಲಿ ಶನಿಯ ಸ್ಥಾನವು ಸಾಡೇ ಸತಿಯ ಕೊನೆಯ ಎರಡೂವರೆ ವರ್ಷಗಳಿದೆ. ಗುರು ಉಪಸ್ಥಿತಿಯು ವೃತ್ತಿಜೀವನದ ಬಗ್ಗೆ ವಿದೇಶದಲ್ಲಿ ಹೊಸ ಅವಕಾಶಗಳನ್ನು ಉಂಟುಮಾಡುವ ಸಾಧ್ಯತೆಯಿದೆ.
ಡಿಸೆಂಬರ್ 2023 ರ ಮಾಸಿಕ ಭವಿಷ್ಯದ ಪ್ರಕಾರ, ಈ ತಿಂಗಳು ನಿಮ್ಮ ಆರ್ಥಿಕ ಜೀವನದಲ್ಲಿ ನೀವು ಮಿಶ್ರ ಫಲಿತಾಂಶ. ಶನಿಯು ಎರಡನೇ ಮನೆಯಲ್ಲಿರುತ್ತಾನೆ ಈ ಕಾರಣದಿಂದ ಆರ್ಥಿಕ ಲಾಭವನ್ನು ಸುಲಭವಾಗಿ ಸಾಧಿಸಲಾಗುವುದಿಲ್ಲ. ಗುರು ನಾಲ್ಕನೇ ಮನೆಯಲ್ಲಿ ಇರುವುದರಿಂದ ಕುಟುಂಬದಲ್ಲಿ ಖರ್ಚು ಹೆಚ್ಚಾಗಲಿದೆ. ಈ ತಿಂಗಳು ನೀವು ಬಯಸಿದ ಲಾಭವನ್ನು ಗಳಿಸಲು ಸಾಧ್ಯವಾಗದಿರಬಹುದು. ಹಣವನ್ನು ಕಳೆದುಕೊಳ್ಳುವ ಸಾಧ್ಯತೆಯೂ ಇದೆ, ಆದ್ದರಿಂದ ಈ ತಿಂಗಳು ಹೆಚ್ಚು ಜಾಗರೂಕರಾಗಿರಬೇಕು. ವ್ಯಾಪಾರಿಗಳು ತಮ್ಮ ಪ್ರತಿಸ್ಪರ್ಧಿಗಳಿಂದ ಕಠಿಣ ಸ್ಪರ್ಧೆಯನ್ನು ಎದುರಿಸಬೇಕಾಗಬಹುದು, ಇದರಿಂದಾಗಿ ಹೆಚ್ಚಿನ ಲಾಭವನ್ನು ಗಳಿಸಲು ಕಷ್ಟವಾಗಬಹುದು.
ಆರೋಗ್ಯ ಜೀವನ
ಆರೋಗ್ಯದ ಬಗ್ಗೆ ನೋಡುವುದಾದರೆ ಈ ತಿಂಗಳಿನಲ್ಲಿ ದೊಡ್ಡ ಆರೋಗ್ಯ ಸಮಸ್ಯೆಗಳಿರಲ್ಲ. ಹಲ್ಲುನೋವು ಈ ಬಗೆಯ ಸಮಸ್ಯೆ ಕಾಡಬಹುದು. ರಾಹು ಮೂರನೇ ಮನೆಯಲ್ಲಿ ಮತ್ತು ಕೇತು ಒಂಬತ್ತನೇ ಮನೆಯಲ್ಲಿ ಸಂಚಾರ ಮಾಡುವುದರಿಂದ ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು.
ಪ್ರೀತಿ, ಮದುವೆ, ಕುಟುಂಬ ಜೀವನ
ವೈವಾಹಿಕ ಜೀವನದ ದೃಷ್ಟಿಕೋನದಿಂದ ನೋಡುವುದಾದರೆ ಈ ತಿಂಗಳು ನಿಮ್ಮ ಸಂಗಾತಿಯೊಂದಿಗೆ ವಿವಾದದ ಸಾಧ್ಯತೆಯಿದೆ. ಮಂಗಳವು ಪ್ರತಿಕೂಲವಾದ ಸ್ಥಾನದಲ್ಲಿದೆ, ಇದು ಪ್ರೀತಿ ಮತ್ತು ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಕುಟುಂಬದಲ್ಲಿಯೂ ಈ ತಿಂಗಳು ನೀವು ಏರಿಳಿತಗಳನ್ನು ಎದುರಿಸಬೇಕಾಗಬಹುದು.
ಪರಿಹಾರ
ಸೋಮವಾರ ಶಿವನಿಗೆ ರುದ್ರಾಭಿಷೇಕ ಮಾಡಿ
ಶನಿವಾರ ಹನುಮಂತನ ಆರಾಧಿಸಿ.



Click it and Unblock the Notifications

