Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಾಸ ಫಲ: ಕುಂಭ ರಾಶಿಯವರಿಗೆ ಡಿಸೆಂಬರ್ ತಿಂಗಳು ವೃತ್ತಿ ಜೀವನ, ಆರ್ಥಿಕ ಸ್ಥಿತಿ ಹೇಗಿರಲಿದೆ?
ಡಿಸೆಂಬರ್ ತಿಂಗಳಿನಲ್ಲಿ ಕುಂಭ ರಾಶಿಯವರು ಆರೋಗ್ಯ ಮತ್ತು ವೃತ್ತಿಜೀವನದ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗುತ್ತದೆ, ಏಕೆಂದರೆ ಈ ತಿಂಗಳು ಪ್ರಮುಖ ಗ್ರಹಗಳ ಸ್ಥಾನವು ಅನುಕೂಲಕರವಾಗಿಲ್ಲ. ಶನಿಯು ಮೊದಲ ಮನೆಯಲ್ಲಿ, ಗುರು 3ನೇ ಮನೆಯಲ್ಲಿದೆ ಇದರಿಂದ ಖರ್ಚು ಹೆಚ್ಚಾಗುವುದು. ಹಣ ನಷ್ಟದ ಸಾಧ್ಯತೆಯೂ ಇದೆ.
ಈ ತಿಂಗಳು, ರಾಹು ಎರಡನೇ, ಕೇತು ಎಂಟನೇ ಮನೆಯಲ್ಲಿ ಇದೆ, ಶನಿಯು ಮೊದಲ ಮನೆಯಲ್ಲಿ ಇರುವುದರಿಂದ ವೃತ್ತಿಯಲ್ಲಿ ಸವಾಲುಗಳು, ಜವಾಬ್ದಾರಿಗಳು ಮತ್ತು ತೊಂದರೆಗಳನ್ನು ಉಂಟುಮಾಡಬಹುದು. ಆದರೆ ಮಂಗಳವು 11ನೇ ಮನೆಯಲ್ಲಿ ಇರುವುದರಿಂದ ಇದು ಉತ್ತಮ ಫಲಿತಾಂಶ ನೀಡಲಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸ್ಥಾನವು ನಮ್ಮ ರಾಶಿಯ ಮೇಲೆ ಪ್ರಭಾವ ಬೀರುತ್ತದೆ. ಡಿಸೆಂಬರ್ ತಿಂಗಳಿನಲ್ಲಿ ಗ್ರಹಗಳ ಪ್ರಭಾವ ಕುಂಭ ರಾಶಿಯವರ ಮೇಲೆ ಹೇಗಿರಲಿದೆ ಎಂದು ನೋಡೋಣ ಬನ್ನಿ....

ವೃತ್ತಿ ಜೀವನ
ಕುಂಭ ರಾಶಿಯವರಿಗೆ ಡಿಸೆಂಬರ್ ತಿಂಗಳು ವೃತ್ತಿ ಜೀವನದಲ್ಲಿ ಹಲವು ಸಮಸ್ಯೆಗಳು ಎದುರಾಗಬಹುದು. ಕೆಲಸದಲ್ಲಿ ಅಧಿಕ ಒತ್ತಡವಿರಲಿದೆ. ನಿಮ್ಮ ಕೆಲಸಕ್ಕೆ ಉತ್ತಮ ಪ್ರತಿಫಲ ಸಿಗದೇ ಇರುವುದರಿಂದ ನಿಮಗೆ ಬೇಸರ ಉಂಟಾಗಬಹುದು. ಆದರೆ 11ನೇ ಮನೆಯಲ್ಲಿ ಮಂಗಳನ ಸ್ಥಾನ ವೃತ್ತಿಜೀವನಕ್ಕೆ ಅನುಕೂಲಕರವಾಗಿದೆ.ಈ ಕಾರಣದಿಂದಾಗಿ ನೀವು ನಿಮ್ಮ ವೃತ್ತಿಜೀವನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ವ್ಯಾಪಾರ ಮಾಡುವ ಜನರು ಹೆಚ್ಚಿನ ಲಾಭವನ್ನು ಪಡೆಯದಿರಬಹುದು. ಈ ತಿಂಗಳು ನಿಮಗೆ ಲಾಭ-ನಷ್ಟವಿಲ್ಲದ ಪರಿಸ್ಥಿತಿ . ಶನಿಯು ಮೊದಲ ಮನೆಯಲ್ಲಿರುವುದರಿಂದ ಮಧ್ಯಮ ಫಲಿತಾಂಶಗಳನ್ನು ಪಡೆಯುತ್ತೀರಿ.
ಆರ್ಥಿಕ ಜೀವನ
ಶನಿ, ಕೇತುಗಳ ಸ್ಥಾನವು ಅನುಕೂಲಕರವಾಗಿಲ್ಲದ ಕಾರಣ ಈ ತಿಂಗಳು ಆರ್ಥಿಕ ಜೀವನದಲ್ಲಿ ನಿಮಗೆ ಸವಾಲುಗಳು ಎದುರಾಗಬಹುದು. ಡಿಸೆಂಬರ್ ತಿಂಗಳ ಕೊನೆಯಲ್ಲಿ, ರಾಹು ಎರಡನೇ ಮನೆಯಲ್ಲಿ, ಕೇತು ಎಂಟನೇ ಮನೆಯಲ್ಲಿರುತ್ತಾನೆ. ಇದರಿಂದಾಗಿ ಹಣದ ಕೊರತೆ ಉಂಟಾಗಬಹುದು.ಈ ತಿಂಗಳಲ್ಲಿ ನೀವು ಆರ್ಥಿಕ ನಷ್ಟವನ್ನು ಎದುರಿಸಬೇಕಾಗಬಹುದು, ಆದ್ದರಿಂದ ಹಣವನ್ನು ನೋಡಿಕೊಂಡು ಖರ್ಚು ಮಾಡುವುದು ಒಳ್ಳೆಯದು. ಸ್ವಂತ ವ್ಯವಹಾರ ಮಾಡುವವರು ಆರ್ಥಿಕ ಲಾಭ ಗಳಿಸಲು ಕಷ್ಟವಾಗುವುದು. ಲಾಭ ಗಳಿಸಲು ನಿಮ್ಮ ಯೋಜನೆಗಳನ್ನು ಬದಲಾಯಿಸಿದರೆ ಒಳ್ಳೆಯದು.
ಆರೋಗ್ಯ ಜೀವನ
ಆರೋಗ್ಯದ ದೃಷ್ಟಿಯಿಂದ ಈ ತಿಂಗಳು ನಿಮ್ಮ ಅನುಕೂಲಕರವಲ್ಲ, ನಿದ್ರಾಹೀನತೆ ಸಮಸ್ಯೆ ಕಾಡಬಹುದು. ಗುರು ಮೂರನೇ ಮನೆಯಲ್ಲಿ ಸ್ಥಿತರಿರುವುದರಿಂದ ತಲೆನೋವು, ಅಧಿಕ ರಕ್ತದೊತ್ತಡದಂತಹ ಸಮಸ್ಯೆ ಕಾಡಬಹುದು. ವೈವಾಹಿಕ ಜೀವನದಲ್ಲಿ ಪರಿಸ್ಥಿತಿ ಸಾಧಾರಣವಾಗಿರಲಿದೆ. ವೈವಾಹಿಕ ಜೀವನದಲ್ಲಿ ಸಾಮರಸ್ಯದ ಕೊರತೆಯನ್ನು ಎದುರಿಸಬೇಕಾಗಬಹುದು. ಪ್ರೇಮಿಗಳು ಈ ತಿಂಗಳಿನಲ್ಲಿ ಕೆಲ ಸಮಸ್ಯೆಗಳನ್ನು ಎದುರಿಸಬಹುದು. ಈ ತಿಂಗಳು ನಿಮ್ಮ ಸಂಬಂಧದಲ್ಲಿ ಅಹಂಕಾರದಿಂದಾಗಿ ಸಮಸ್ಯೆಗಳು ಉಂಟಾಗುವುದು. ಕುಟುಂಬದಲ್ಲಿಯೂ ಪರಿಸ್ಥಿತಿ ಅಷ್ಟು ಚೆನ್ನಾಗಿರಲ್ಲ.
ಪರಿಹಾರ
* ಹನುಮಾನ್ ಚಾಲೀಸ ಪಠಿಸಿ.
* ಹನುಮಂತನಿಗೆ ಕೆಂಪು ಹೂಗಳನ್ನು ಅರ್ಪಿಸಿ.



Click it and Unblock the Notifications
