Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಡಿಸೆಂಬರ್ ತಿಂಗಳಿನಲ್ಲಿ ದ್ವಾದಶ ರಾಶಿಗಳ ಆರ್ಥಿಕ ಭವಿಷ್ಯ ಹೇಗಿರಲಿದೆ?
ಡಿಸೆಂಬರ್ ತಿಂಗಳ ದ್ವಾದಶ ರಾಶಿಗಳ ಆರ್ಥಿಕ ಭವಿಷ್ಯ ನೀಡಲಾಗಿದ್ದು, ಈ ತಿಂಗಳು ಯಾವ ರಾಶಿಯವರಿಗೆ ಹೇಗಿರಲಿದೆ ಎಂದು ನೋಡೋಣ ಬನ್ನಿ:
ಮೇಷ ರಾಶಿ: ಮಿಶ್ರಫಲ
ಆರ್ಥಿಕವಾಗಿ ಈ ತಿಂಗಳು ಅನುಕೂಲಕರವಲ್ಲ. ಆದರೆ ನಿಮ್ಮ ಗಳಿಕೆಯು ಕಡಿಮೆಯಾಗುವುದಿಲ್ಲ, ಖರ್ಚು ಹೆಚ್ಚಾಗಲಿದೆ. ನೀವು ಈ ತಿಂಗಳು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಸಾಲ ತೆಗೆದುಕೊಳ್ಳಬೇಕಾಗಬಹುದು. ಇದರ ಹೊರತಾಗಿ, ನೀವು ಪ್ರಯಾಣ ಮಾಡುವಾಗ ಹಣವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ, ಜಾಗ್ರತೆವಹಿಸಿ,. ವ್ಯಹಾರದಲ್ಲಿನ ಲಾಭ ನಿಮಗೆ ತೃಪ್ತಿ ನೀಡುವುದಿಲ್ಲ ಮೊದಲ ಮನೆಯಲ್ಲಿ ಗುರುವಿನ ಉಪಸ್ಥಿತಿ. ಶನಿಯು ಹನ್ನೊಂದನೇ ಮನೆಯಲ್ಲಿದೆ. ಇದರಿಂದ ನೀವು ಹಣವನ್ನು ಗಳಿಸಲು, ಉಳಿಸಲು ಸಾಧ್ಯವಾಗುವುದು.

ವೃಷಭ ರಾಶಿ: ಸಾಮಾನ್ಯವಾಗಿರಲಿದೆ
ವೃಷಭ ರಾಶಿಯವರಿಗೆ ಆರ್ಥಿಕವಾಗಿ ಸಾಮಾನ್ಯವಾಗಿರುತ್ತದೆ. ಈ ತಿಂಗಳು ನಿಮ್ಮ ಖರ್ಚುಗಳು ಅಧಿಕವಿರಲಿದೆ, ಆದರೆ ಆದಾಯವೂ ಇರುವುದರಿಂದ ದೊಡ್ಡ ಸಮಸ್ಯೆ ಇರಲ್ಲ. ಪ್ರಯಾಣದ ಸಮಯದಲ್ಲಿ ನೀವು ಹಣವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ, ಆದ್ದರಿಂದ ಜಾಗ್ರತೆವಹಿಸಿ. ಪೂರ್ವಜರ ಆಸ್ತಿಯಿಂದ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ವ್ಯವಹಾರದಲ್ಲಿ ದೊಡ್ಡ ಲಾಭಗಳು ಇರುವುದಿಲ್ಲ, ಆದರೆ ತಿಂಗಳ ಕೊನೆಯಲ್ಲಿ ನಿಮ್ಮ ಪರಿಸ್ಥಿತಿ ಉತ್ತಮವಾಗಿರುತ್ತದೆ.
ಮಿಥುನ ರಾಶಿ: ಒಳ್ಳೆಯದಿದೆ
ಈ ತಿಂಗಳಿನಲ್ಲಿ ನೀವು ಹಠಾತ್ ಆರ್ಥಿಕ ಲಾಭವನ್ನು ಪಡೆಯಬಹುದು. ಈ ತಿಂಗಳು ನೀವು ಷೇರು ಮಾರುಕಟ್ಟೆಯಿಂದಲೂ ಲಾಭ ಗಳಿಸಬಹುದು. ರಾಹುವಿನ ಪ್ರಭಾವದಿಂದಾಗಿ, ನೀವು ಹಣವನ್ನು ಉಳಿಸಲು ಸಾಧ್ಯವಾಗುವುದು. ನಿಮ್ಮ ವೃತ್ತಿಪರ ಜೀವನದಲ್ಲಿಯೂ ರಾಹುವಿನ ಬೆಂಬಲವನ್ನು ಪಡೆಯುತ್ತೀರಿ, ಈ ತಿಂಗಳಿನಲ್ಲಿ ನೀವು ಆರ್ಥಿಕ ಲಾಭ ಪಡೆಯುವಿರಿ. ವ್ಯಾಪಾರ ಮಾಡುವವರು ರಾಹುವಿನ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ, ವ್ಯವಹಾರಸ್ಥರು ಈ ತಿಂಗಳಿನಲ್ಲಿ ಆರ್ಥಿಕ ಲಾಭ ಪಡೆಯುತ್ತೀರಿ.
ಕರ್ಕ ರಾಶಿ: ಖರ್ಚುಗಳು ಹೆಚ್ಚಾಗಲಿದೆ
ಈ ತಿಂಗಳು ನೀವು ಉತ್ತಮ ಹಣವನ್ನು ಗಳಿಸುವ ಅವಕಾಶವನ್ನು ಪಡೆಯಬಹುದು. ಈ ತಿಂಗಳಿನಲ್ಲಿ ನೀವು ಹಣ ಸಂಪಾದಿಸುವುದರ ಜೊತೆಗೆ ಹಣವನ್ನು ಉಳಿಸಲು ಸಾಧ್ಯವಾಗುವುದು. ಈ ತಿಂಗಳಿನಲ್ಲಿ ನಿಮ್ಮ ತಪ್ಪಾದ ನಿರ್ಧಾರದ ಪರಿಣಾಮದಿಂದ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ಸಂಗಾತಿಯ ಆರೋಗ್ಯಕ್ಕಾಗಿ ನೀವು ಹಣವನ್ನು ಖರ್ಚು ಮಾಡಬೇಕಾಗಬಹುದು.
ಸಿಂಹ ರಾಶಿ: ಖರ್ಚು ಹೆಚ್ಚಾಗಲಿದೆ
ಈ ತಿಂಗಳಿನಲ್ಲಿ ನಿಮ್ಮ ಖರ್ಚುಗಳು ಹೆಚ್ಚಾಗುವ ಸಾಧ್ಯತೆಯಿದೆ. ಹೆಚ್ಚುತ್ತಿರುವ ವೆಚ್ಚಗಳಿಂದಾಗಿ ನಿಮ್ಮ ಆರ್ಥಿಕ ಸ್ಥಿತಿಯು ಪರಿಣಾಮ ಬೀರಬಹುದು. ಈ ತಿಂಗಳಿನಲ್ಲಿ ಸಾಲ ಕೂಡ ಮಾಡಬೇಕಾಗುವುದು. ಈ ತಿಂಗಳಿನಲ್ಲಿ ಹಣ ಉಳಿಸಲು ಕಷ್ಟವಾಗಬಹುದು. ರಾಹು-ಕೇತುಗಳ ಉಪಸ್ಥಿತಿಯಿಂದಾಗಿ, ನೀವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬಹುದು. ತಿಂಗಳ ಕೊನೆಯಲ್ಲಿ, ಶುಕ್ರನ ಸ್ಥಾನವು ಅನುಕೂಲಕರಕ್ಕೆ ಬರುವುದರಿಂದ ನೀವು ಹಣವನ್ನು ಗಳಿಸುವ, ಉಳಿಸುವ ಅವಕಾಶವನ್ನು ಪಡೆಯುತ್ತೀರಿ.
ಕನ್ಯಾ ರಾಶಿ: ಲಾಭ ಗಳಿಸುವುದು ಕಷ್ಟವಾಗುವುದು
ಖರ್ಚುಗಳು ಹೆಚ್ಚಾಗಲಿದೆ. ಸ್ವಂತ ವ್ಯವಹಾರ ನಡೆಸುತ್ತಿರುವವರು ಈ ತಿಂಗಳಲ್ಲಿ ಹೆಚ್ಚಿನ ಲಾಭವನ್ನು ಗಳಿಸುವುದಿಲ್ಲ. ಮಾರುಕಟ್ಟೆಯಲ್ಲಿ ನಿಮ್ಮ ಪ್ರತಿಸ್ಪರ್ಧಿಗಳಿಂದ ನೀವು ಕಠಿಣ ಸ್ಪರ್ಧೆಯನ್ನು ಎದುರಿಸುವ ಸಾಧ್ಯತೆಯಿದೆ, ಇದರಿಂದಾಗಿ ಉತ್ಪನ್ನದ ಮಾರಾಟವು ಕುಸಿಯುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿರೀಕ್ಷಿತ ಲಾಭವನ್ನು ಗಳಿಸುವುದು ನಿಮಗೆ ಸ್ವಲ್ಪ ಕಷ್ಟವಾಗಲಿದೆ.
ತುಲಾ ರಾಶಿ: ಏರಳಿತಗಳಿರಲಿದೆ
ಈ ತಿಂಗಳಿನಲ್ಲಿ ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಏರಿಳಿತಗಳನ್ನು ಎದುರಿಸಬೇಕಾಗಬಹುದು. ಗುರುವಿನ ಶುಭ ಸ್ಥಾನದಿಂದಾಗಿ ನೀವು ಹಣವನ್ನು ಉಳಿಸಲು ಸಾಧ್ಯವಾಗುತ್ತದೆ. ಆದರೆ ಅವರು ಹೆಚ್ಚು ಹಣವನ್ನು ಉಳಿಸಲು ಸಾಧ್ಯವಾಗುವುದಿಲ್ಲ. ವ್ಯಾಪಾರಿಗಳು ಈ ತಿಂಗಳಲ್ಲಿ ನೀವು ಉತ್ತಮ ಲಾಭವನ್ನು ಗಳಿಸುತ್ತೀರಿ. ತಿಂಗಳ ಕೊನೆಯಲ್ಲಿ ನಿಮಗೆ ಅನುಕೂಲಕರವಾಗಿರಲಿದೆ. ಹಣವನ್ನು ಗಳಿಸುವುದರ ಜೊತೆಗೆ ಹಣವನ್ನು ಉಳಿಸಲು ಸಹ ಸಾಧ್ಯವಾಗುತ್ತದೆ.
ವೃಶ್ಚಿಕ ರಾಶಿ: ಖರ್ಚುಗಳು ಹೆಚ್ಚಾಗಲಿದೆ
ಈ ತಿಂಗಳು ಅನಗತ್ಯ ವೆಚ್ಚಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಜನರು ಹಣವನ್ನು ಖರ್ಚು ಮಾಡುವಾಗ ಎಚ್ಚರಿಕೆ ವಹಿಸಬೇಕು. ಗುರುವಿನ ಸ್ಥಾನವು ಖರ್ಚು ಹೆಚ್ಚಿಸುತ್ತದೆ. ಗ್ರಹಗಳ ಸ್ಥಾನದಿಂದಾಗಿ ಸಾಲ ಮಾಡಬೇಕಾಗಬಹುದು. ಶನಿಯು ನಾಲ್ಕನೇ ಮನೆಯಲ್ಲಿರುವುದರಿಂದ, ವೃಶ್ಚಿಕ ರಾಶಿಯವರು ಆರ್ಥಿಕ ಸವಾಲು ಎದುರಾಗಬಹುದು, ಆರೋಗ್ಯಕ್ಕಾಗಿ ಹೆಚ್ಚು ಹಣ ಖರ್ಚು ಮಾಡಬೇಕಾಗುವುದು.
ಮಕರ ರಾಶಿ: ಮಿಶ್ರಫಲ
ಈ ತಿಂಗಳು ನಿಮ್ಮ ಆರ್ಥಿಕ ವಿಷಯದಲ್ಲಿ ಮಿಶ್ರ ಫಲಿತಾಂಶ. ಗುರು ನಾಲ್ಕನೇ ಮನೆಯಲ್ಲಿ ಇರುವುದರಿಂದ ಕುಟುಂಬದಲ್ಲಿ ಖರ್ಚು ಹೆಚ್ಚಾಗಲಿದೆ. ಈ ತಿಂಗಳು ನೀವು ಬಯಸಿದ ಲಾಭವನ್ನು ಗಳಿಸಲು ಸಾಧ್ಯವಾಗದಿರಬಹುದು. ಹಣವನ್ನು ಕಳೆದುಕೊಳ್ಳುವ ಸಾಧ್ಯತೆಯೂ ಇದೆ, ಆದ್ದರಿಂದ ಈ ತಿಂಗಳು ಹೆಚ್ಚು ಜಾಗರೂಕರಾಗಿರಬೇಕು.
ಕುಂಭ ರಾಶಿ: ಸವಾಲಿನ ಸಮಯ
ಈ ತಿಂಗಳಿನಲ್ಲಿ ಆರ್ಥಿಕ ಜೀವನದಲ್ಲಿ ನಿಮಗೆ ಸವಾಲುಗಳು ಎದುರಾಗಬಹುದು. ಈ ತಿಂಗಳಲ್ಲಿ ನೀವು ಆರ್ಥಿಕ ನಷ್ಟವನ್ನು ಎದುರಿಸಬೇಕಾಗಬಹುದು, ಆದ್ದರಿಂದ ಹಣವನ್ನು ನೋಡಿಕೊಂಡು ಖರ್ಚು ಮಾಡುವುದು ಒಳ್ಳೆಯದು. ಸ್ವಂತ ವ್ಯವಹಾರ ಮಾಡುವವರು ಆರ್ಥಿಕ ಲಾಭ ಗಳಿಸಲು ಕಷ್ಟವಾಗುವುದು.
ಮೀನ ರಾಶಿ: ಮಿಶ್ರಫಲ
ಆರ್ಥಿಕ ಜೀವನದ ಬಗ್ಗೆ ಹೇಳುವುದಾದರೆ ಖರ್ಚುಗಳು ಹೆಚ್ಚಾಗಬಹುದು. ಈ ಅವಧಿಯಲ್ಲಿ ನಿಮ್ಮ ಮನೆಯ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಈ ತಿಂಗಳಿನಲ್ಲಿ ಹಣ ಗಳಿಸಲು ಕಷ್ಟವಾಗಬಹುದು. ಹಣವನ್ನು ಅದಕ್ಕೆ ಅನುಗುಣವಾಗಿ ಖರ್ಚು ಮಾಡಬಹುದು,. ಈ ತಿಂಗಳಲ್ಲಿ, ಹೂಡಿಕೆ, ಆಸ್ತಿ ಖರೀದಿ ಮುಂತಾದ ಹಣಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೋಗಬೇಡಿ. ಅದೇ ಸಮಯದಲ್ಲಿ, ತಮ್ಮ ಸ್ವಂತ ವ್ಯವಹಾರವನ್ನು ಮಾಡುತ್ತಿರುವವರು ಕಠಿಣ ಸ್ಪರ್ಧೆಯನ್ನು ಎದುರಿಸಬೇಕಾಗಬಹುದು.



Click it and Unblock the Notifications