Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
24 ಕ್ಯಾರೆಟ್ ಚಿನ್ನ ಹಾಕಿ ದಾಲ್ ತಡ್ಕಾ..! ಇನ್ನು ಏನೇನ್ ಬರುತ್ತೋ..!?
ನೀವು ಇತ್ತೀಚಿಗೆ ಐಷಾರಾಮಿ ಖಾದ್ಯಗಳ ಕುರಿತು ಕೇಳಿರುತ್ತೀರಿ. ಕೆಲವು ಬಾರಿ ಸಾಮಾನ್ಯ ಖಾದ್ಯಕ್ಕೂ ಬಂಗಾರದ ದರ ಇರುತ್ತೆ, ಅಂತಹ ಹೋಟೆಲ್‌ಗಳು ಸಹ ಇವೆ. ಆದರೆ ಕೆಲವು ಬಾರಿ ಚಿನ್ನವನ್ನೇ ಹಾಕಿ ಖಾದ್ಯಗಳ ತಯಾರು ಮಾಡಲಾಗುತ್ತದೆ. ಹೌದು ಚಿನ್ನದ ಲೇಪನವಿರುವ ಹಲವು ರೀತಿಯ ಖಾದ್ಯಗಳು ಹೆಸರಾಂತ ರೆಸ್ಟೋರೆಂಟ್‌ಗಳಲ್ಲಿ ಈಗ ಖಾದ್ಯಗಳಾಗಿವೆ.
ಇನ್ನು ಬಂಗಾರವನ್ನು ಆಹಾರ ತಯಾರಿಕೆಯಲ್ಲಿ ಬಳಸುವ ಪ್ರಕ್ರಿಯೆ ಹೆಚ್ಚಾಗುತ್ತಿವೆ. ನಾವು ಬಂಗಾರದ ಲೇಪನವಿರುವ ದೋಸೆ, ರಸಂ ಸೇರಿ ಹಲವು ರೀತಿಯ ಸಿಹಿ ತಿಂಡಿಗಳು ಗೋಲ್ಡ್ ಪ್ಲೇಟೆಡ್ ಮೂಲಕ ಮಾಡಿರುವುದನ್ನು ನಾವು ನೋಡಿದ್ದೇವೆ. ಅದೇ ರೀತಿ ಇಲ್ಲೊಂದು ರೆಸ್ಟೋರೆಂಟ್‌ನಲ್ಲಿ ಚಿನ್ನವನ್ನು ಹಾಕಿ ದಾಲ್ ಮಾಡಿಕೊಡಲಾಗುತ್ತಿದೆ.

ಚಿನ್ನ ಅತ್ಯಂತ ದುಬಾರಿಯಾಗಿದ್ದರೂ ಅದರ ಖರೀದಿ ಮತ್ತು ಬಳಕೆ ಎರಡೂ ಕಡಿಮೆಯಾಗಿಲ್ಲ. ಅದರಲ್ಲೂ ಭಾರತದಲ್ಲಿ ಚಿನ್ನದ ಬಳಕೆ ಮತ್ತು ಅದರ ಬೆಲೆ ಎರಡೂ ಉತ್ತುಂಗದಲ್ಲಿದೆ. ಆದರೆ ಹೋಟೆಲ್‌ನಲ್ಲಿ ಸಿಗುವ ಖಾದ್ಯಗಳಿಗೂ ಈಗ ಚಿನ್ನ ಬಳಸುತ್ತಿದ್ದಾರೆ. ಸೆಲೆಬ್ರಿಟಿ ಚೆಫ್ ರಣವೀರ್ ಬ್ರಾರ್ ಅವರ ದುಬೈನಲ್ಲಿರುವ ಮೊದಲ ರೆಸ್ಟೋರೆಂಟ್‌ನಲ್ಲಿ ದಾಲ್ ಮಾಡುವಾಗ ಚಿನ್ನ ಬಳಸಲಾಗುತ್ತದೆ.
ಹೌದು ನೀವು ಕೇಳಿದ್ದು ಸರಿಯಾಗಿದೆ. ಅಲ್ಲಿ ಮರದ ಪೆಟ್ಟಿಗೆಯಲ್ಲಿ ಇಟ್ಟಿರುವ ದಾಲ್‌ಗೆ ಚಿನ್ನದ ನೀರು ಹಾಕಿ ಗ್ರಾಹಕರಿಗೆ ನೀಡಲಾಗುತ್ತದೆ. ಅಚ್ಚರಿ ಆದರೂ ಇದು ಸತ್ಯ. ಈ ರೀತಿಯ ಖಾದ್ಯ ಸಿಕ್ಕಾಪಟ್ಟೆ ಫೇಮಸ್ ಕೂಡ ಆಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದರ ಬೆಲೆ ಸುಮಾರು 58 ದಿರ್ಹಮ್‌ಗಳಾಗಿದೆ. ಅಂದರೆ ಭಾರತೀಯ ರೂಪಾಯಿಯಲ್ಲಿ 1,300 ರೂ. ಆಗಿದೆ.
ಮೆಹುಲ್ ಹಿಂಗು ಎಂಬಾತ ಅವರು ಇನ್ಸ್ಟಾಗ್ರಾಮ್ನಲ್ಲಿ 'ದಾಲ್ ಕಶ್ಕನ್' ಖಾದ್ಯದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಕ್ಲಿಪ್‌ನಲ್ಲಿ ರೆಸ್ಟೋರೆಂಟ್‌ನಲ್ಲಿರುವ ಸರ್ವರ್ ಒಂದು ಬೌಲ್‌ನಲ್ಲಿ ಇರಿಸಲಾದ 24 ಕ್ಯಾರೆಟ್ ಚಿನ್ನದ ನೀರನ್ನು ದಾಲ್‌ಗೆ ಹಾಕುತ್ತಿರುವುದ ಕಾಣಬಹುದು. ಈ ದಾಲ್ ಅನ್ನು ಪ್ರೀಮಿಯಂ ಮಸಾಲೆಗಳು ಮತ್ತು ತುಪ್ಪದಿಂದ ತಯಾರಿಸಲಾಗಿದೆ.
ಈ ವಿಡಿಯೋ ನೋಡಿದ ಜನ ನಿಜಕ್ಕೂ ಶಾಕ್ ಆಗಿದ್ದಾರೆ. ಕೇವಲ ಎರಡು ಚಮಚದಷ್ಟು ಚಿನ್ನದ ನೀರು ಹಾಕಿ ಇಷ್ಟೊಂದು ಹಣ ನೀಡಬೇಕಾಗಿದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಜೊತೆಗೆ ಚಿನ್ನದ ನೀರು ಎಂಬುದು ಹೇಗೆ ದೃಢಪಡುತ್ತದೆ ಎಂದು ಸಹ ಪ್ರಶ್ನಿಸಿದ್ದಾರೆ.
ಯಾರು ಗೊತ್ತಾ ಈ ಚೆಫ್ ರಣವೀರ್ ಬ್ರಾರ್?
ರಣವೀರ್ ಬ್ರಾರ್ ಹೆಸರನ್ನು ನೀವು ಕೇಳಿರಬಹುದು. ಈತ ಹೆಸರಾಂತ ಚೆಫ್ ಆಗಿದ್ದಾರೆ. ಹಲವಾರು ಟಿವಿಗಳಲ್ಲಿ ಅಡುಗೆ ಕಾರ್ಯಕ್ರಮಗಳು, ರಿಯಾಲಿಟಿ ಶೋಗಳು ನಡೆಸಿ ಕೊಡುತ್ತಾರೆ. ಇದರ ಮೂಲಕವೇ ಜಗತ್ತಿನಾದ್ಯಂತ ಅವರು ಲಕ್ಷಾಂತರ ಅಭಿಮಾನಿಗಳ ಹೊಂದಿದ್ದಾರೆ. ಫೆಬ್ರವರಿ 8, 1978 ರಂದು ಭಾರತದ ಲಕ್ನೋದಲ್ಲಿ ಜನಿಸಿದ ರಣವೀರ್, ಈಗ ವಿದೇಶದಲ್ಲೂ ತಮ್ಮ ಹೋಟೆಲ್ ಉದ್ಯಮ ಹೊಂದಿದ್ದಾರೆ.
ಭಾರತದ ಖ್ಯಾತ ರಿಯಾಲಿಟಿ ಶೋ ಆಗಿದ್ದ ಮಾಸ್ಟರ್ ಚೆಫ್ ಇಂಡಿಯಾದ ಜಡ್ಜ್ ಸಹ ಆಗಿದ್ದ ಅವರು ಭಾರೀ ಸುದ್ದಿಯಾಗಿದ್ದರು. ಅಲ್ಲದೆ ಆಹಾರ ತಯಾರಿಕೆ ಹಾಗೂ ಖಾದ್ಯಗಳ ಕುರಿತಂತೆ ಅವರು ಪುಸ್ತಕಗಳನ್ನು ಬರೆದು ಹೊರತಂದಿದ್ದಾರೆ. 45 ವರ್ಷದ ಅವರು ಈಗ 5 ಮಿಲಿಯನ್ ಡಾಲರ್ ಆಸ್ತಿ ಹೊಂದಿದ್ದಾರೆ.
ಚೆಫ್ ಆಗಲು ಪ್ರೇರೇಪಿಸಿತು ಕಬಾಬ್ ರೆಸಿಪಿ
ಅವರು ಕಾಲೇಜು ದಿನಗಳಲ್ಲಿ ಇದ್ದಾಗಲೇ ಅಡುಗೆ ಕಡೆಗೆ ಆಸಕ್ತಿ ಹೊಂದಿದ್ದರು. 17ನೇ ವರ್ಷದಲ್ಲಿದ್ದಾಗ ಬ್ರಾರ್ ಕಬಾಬ್ ಮಾಡುವಲ್ಲಿ ಫೇಮಸ್ ಆಗಿದ್ದ ಉಸ್ತಾದ್ ಮುನೀರ್ ಅಹ್ಮದ್ ಅವರನ್ನು ಭೇಟಿಯಾಗಿದ್ದರು. ಅವರಿಂದ ಕೆಲವು ಪಾಕ ವಿಧಾನಗಳನ್ನು ಅವರು ಕಲಿತುಕೊಂಡರು. ಇದಾದ ಬಳಿಕ ಆನ್‌ಲೈನ್‌ನಲ್ಲಿ ಅವರು ಕೆಲವು ಖಾದ್ಯಗಳ ಮಾಡಿ ರುಚಿ ನೋಡುತ್ತಿದ್ದರು. ಈಗ ಅವರು ವಿಶ್ವದ ಖ್ಯಾತ ಚೆಫ್‌ಗಳ ಒಟ್ಟಿಗೂ ವೇದಿಕೆ ಹಂಚಿಕೊಂಡಿದ್ದಾರೆ.



Click it and Unblock the Notifications











