Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಆರ್ಡರ್ ಮಾಡಿದ್ದು ಒಂದು, ಮನೆಗೆ ಬಂದಿದ್ದೇ ಮತ್ತೊಂದು..! ಆನ್‌ಲೈನ್ ಶಾಪಿಂಗ್ ಕರಾಮತ್ತು..!
ನಾವಿಂದು ಡಿಜಿಟಲ್ ಜಗತ್ತಿನಲ್ಲಿ ಒದುಕುತ್ತಿದ್ದೇವೆ. ಯಾವ ವಿಚಾರವಾದ್ರು ಇಂಟರ್‌ನೆಟ್ ಮೂಲಕ ನೋಡುತ್ತೇವೆ. ಆನ್‌ಲೈನ್ ಮೂಲಕವೇ ಹೆಚ್ಚು ಕಡಿಮೆ ನಮ್ಮೆಲ್ಲಾ ಇಷ್ಟ ಕಷ್ಟಗಳು ಪರಿಹಾರವಾಗತ್ತಿವೆ. ಇನ್ನು ಶಾಪಿಂಗ್ ವಿಚಾರಕ್ಕೆ ಬಂದರೂ ಅಷ್ಟೆ, ಅಂಗಡಿಗೆ ತೆರಳಿ ನಮಗೆ ಬೇಕಾದ ವಸ್ತು ಕೊಳ್ಳುವ ಅಭ್ಯಾಸವೇ ಮರೆಯಾಗುತ್ತಿದೆ.
ನಮ್ಮ ನಿತ್ಯ ಬಳಕೆ ವಸ್ತುವಿನಿಂದ ಹಿಡಿದು ಆಹಾರ, ಐಷಾರಾಮಿ ವಸ್ತು, ಔಷಧಿ, ಬಟ್ಟೆ, ಎಲೆಕ್ಟ್ರಾನಿಕ್ ವಸ್ತುಗಳು ಹೀಗೆ ಆನ್‌ಲೈನ್‌ನಲ್ಲಿ ಸಿಗದ ವಸ್ತುಗಳೇ ಇಲ್ಲ. ಇತ್ತೀಚಿಗೆ ಆನ್‌ಲೈನ್ ಆರ್ಡರ್ ಎಷ್ಟು ಸುಲಭಗಾಗಿದೆ ಎಂದರೆ ನಿಮಗೆ 5 ರೂಪಾಯಿಯ ಸ್ನ್ಯಾಕ್ಸ್ ಬೇಕಾದರೂ 10 ನಿಮಿಷದಲ್ಲಿ ಕೈಸೇರುತ್ತೆ. ಅಷ್ಟರ ಮಟ್ಟಿಗೆ ಡಿಜಿಟಲ್ ಮತ್ತು ಆನ್‌ಲೈನ್ ಜನರ ಜೀವನದ ಜೊತೆ ಬೆರೆತುಹೋಗಿದೆ.
ಆದರೆ ನೀವು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದ ವಸ್ತುಗಳೆ ನಿಮಗೆ ಸಿಗುತ್ತವೆ ಎಂಬ ಗ್ಯಾರಂಟಿ ಇಡುವಂತಿಲ್ಲ. ಹೌದು ಹಲವು ಬಾರಿ ನಾವು ಆರ್ಡರ್ ಮಾಡಿದ್ದ ವಸ್ತುವಿನ ಬದಲು ಬೇರೆ ವಸ್ತುಗಳು ನಮ್ಮ ಕೈಸೇರುತ್ತವೆ. ಇದರಲ್ಲಿ ಕೆಲವೊಮ್ಮೆ ನಮಗೆ ಲಾಭವಾಗಬಹುದು, ಮತ್ತೆ ಕೆಲ ಸಮಯ ನಷ್ಟವಾಗಬಹುದು. ಈ ರೀತಿ ಲಾಭ ಮಾಡಿಕೊಂಡವರಿಗಿಂತ ನಷ್ಟ ಅನುಭವಿಸಿದವರೇ ಹೆಚ್ಚು ಎಂದು ಹೇಳಬಹುದು.

ಹಾಗಾದ್ರೆ ನಾವಿಲ್ಲಿ ಹೀಗೆ ತಾವು ಆರ್ಡರ್ ಮಾಡಿದ್ದ ವಸ್ತುವಿನ ಬದಲು ಬೇರೆ ವಸ್ತು ಕೈಸೇರಿ ನಷ್ಟ ಮಾಡಿಕೊಂಡವರ ಬಗ್ಗೆ ತಿಳಿದುಕೊಳ್ಳೋಣ. 2023ರಲ್ಲಿ ಆನ್‌ಲೈನ್ ಡೆಲಿವರಿ ಮಾಡುವ ಇ-ಕಾಮರ್ಸ್ ಸಂಸ್ಥೆಗಳಾದ ಅಮೇಜಾನ್ ಹಾಗೂ ಫ್ಲಿಪ್‌ಕಾರ್ಟ್‌ಗಳಿಂದ ಗ್ರಾಹಕರು ಪಡೆದಿರುವ ಚಿತ್ರ ವಿಚಿತ್ರ ವಸ್ತುಗಳ ಪಟ್ಟಿ ಇಲ್ಲಿದೆ ಓದಿ..
ಕ್ಯಾಮರಾ ಲೆನ್ಸ್ ಬದಲು ಬಂತು ನವಣೆ
ಅರುಣ್ ಕುಮಾರ್ ಎಂಬಾತ ಅಮೇಜಾನ್‌ನಿಂದ ಬರೋಬ್ಬರಿ 90 ಸಾವಿರ ರೂಪಾಯಿ ಮೌಲ್ಯದ ಕ್ಯಾಮರಾ ಲೆನ್ಸ್ ಆರ್ಡರ್ ಮಾಡಿದ್ದ. ಆತನ ವಿಳಾಸಕ್ಕೆ ಕೊರಿಯರ್ ಕೂಡ ಬಂದಿತ್ತು. ಆದರೆ ಪ್ಯಾಕೇಜ್ ಓಪನ್ ಮಾಡಿದಾಗ ಆತನ ಶಾಕ್ ಕಾದಿತ್ತು. ಕ್ಯಾಮರಾ ಲೆನ್ಸ್ ಬದಲು ಅದರಲ್ಲಿ ನವಣೆ ಅಕ್ಕಿ (ಕ್ವಿನಾವೋ ಸೀಡ್ಸ್) ಯ ಪ್ಯಾಕೆಟ್ ಇಡಲಾಗಿತ್ತು. ಸುಮಾರು 1ಕೆ.ಜಿ ತೂಕದ ಪ್ಯಾಕೇಟ್ ಮಾಡಿ ಆತನಿಗೆ ಕಳುಹಿಸಲಾಗಿತ್ತು. ಆತ ಅಮೇಜಾನ್ ವಿರುದ್ಧ ಆಕ್ರೋಶ ಹೊರಹಾಕಿ ಪೋಸ್ಟ್ ಮಾಡಿದ್ದ ಅಮೇಜಾನ್ ಸಹ ತನಿಖೆ ನಡೆಸುವುದಾಗಿ ತಿಳಿಸಿತ್ತು.
ಸೋನಿ ಹೆಡ್‌ಫೋನ್ ಬದಲು ಟೂತ್‌ಪೇಸ್ಟ್
ಯಶ್ ಓಜಾ ಎಂಬ ಗ್ರಾಹಕ ಅಮೇಜಾನ್ ಮೂಲಕ ಸೋನಿ ಕಂಪನಿಯ ಹೆಡ್‌ಫೋನ್ ಬುಕ್ ಮಾಡಿದ್ದ. ಆದರೆ ಪ್ಯಾಕೇಜ್ ತೆರೆದಾಗ ಆತನಿಗೆ ಅಚ್ಚರಿ ಕಾದಿತ್ತು. ಬಾಕ್ಸ್‌ನೊಳಗೆ ಹೆಡ್‌ಫೋನ್ ಬದಲು ಟೂತ್‌ಪೇಸ್ಟ್ ಕಳುಹಿಸಲಾಗಿತ್ತು. ಆತ ಅಮೇಜಾನ್‌ಗೆ ಈ ವಿಚಾರ ಮುಟ್ಟಿಸಿದ್ದ ಕಂಪನಿ ಆತನ ಬಳಿ ಕ್ಷಮೆಯಾಚಿಸಿತ್ತು.
ಎಲೆಕ್ಟ್ರಿಕ್ ಬ್ರಷ್ ಬದಲು ಚಾಟ್ ಮಸಾಲಾ
ಅಮೇಜಾನ್ ಮೂಲಕ ಗ್ರಾಹಕರೊಬ್ಬರು ಓರಲ್ ಬಿ ಕಂಒನಿಯ ಎಲೆಕ್ಟ್ರಿಕ್ ಬ್ರಷ್ ಆರ್ಡರ್ ಮಾಡಿದ್ದರು, ಆದರೆ ಅವರ ಮನೆ ತಲುಪಿದ್ದು ಮಾತ್ರ ಎಂಡಿಹೆಚ್ ಮಸಾಲಾ ಪ್ಯಾಕ್‌ಗಳು. ಸುಮಾರು 12 ಸಾವಿರ ರೂಪಾಯಿ ಮೌಲ್ಯದ ಬ್ರಷ್ ಬದಲು ಮಸಾಲಾ ಪ್ಯಾಕ್ ಬಂದಿದ್ದವು. ಆದರೆ ಗ್ರಾಹಕನ ತಾಯಿ ಈ ಪಾರ್ಸೆಲ್ ತೆಗೆದುಕೊಳ್ಳುವಾಗ ತುಂಬಾ ಹಗುರವಾಗಿದ್ದ ಕಾರಣ ಅನುಮಾನಗೊಂಡು ಡೆಲಿವರಿ ಬಾಯ್‌ಗೆ ಹಣ ನೀಡದೆ ಆತನ ಬಳಿಯೇ ಪ್ಯಾಕೇಟ್ ಓಪನ್ ಮಾಡಿಸಿದ್ದರು. ಈ ವೇಳೆ ಅದರಲ್ಲಿ ಮಸಾಲಾ ಪ್ಯಾಕೇಟ್ ಕಂಡುಬಂದಿತ್ತು.
ನಕಲಿ ಆಪಲ್ ವಾಚ್
ಅಮೇಜಾನ್ ಮೂಲಕ ಆಪಲ್ ವಾಚ್ ಆರ್ಡರ್ ಮಾಡಿದಾಗ ಗ್ರಾಹಕನಿಗೆ ನಕಲಿ ವಾಚ್ ಕೈ ಸೇರಿತ್ತು. ವಾಚ್ ಮೇಲೆ 'FitLife' ಎಂದು ಬರೆಯಲಾಗಿತ್ತು. ಘಟನೆ ಕುರಿತು ಆತ ಟ್ವಿಟರ್ ಮೂಲಕ ದೂರು ನೀಡಿದಾಗ ಅಮೇಜಾನ್ ಕ್ಷಮೆ ಕೋರಿ ತನಿಖೆಗೆ ಆದೇಶಿಸುವುದಾಗಿ ತಿಳಿಸಿತ್ತು.
ಬುಕ್ ಬದಲು 'ಕ್ಷಮಾಪಣ' ಪತ್ರ
ಓದಿನಲ್ಲಿ ಆಸಕ್ತಿ ಇದ್ದ ಗ್ರಾಹಕರೊಬ್ಬರು ಅಮೆಜಾನ್ ಮೂಲಕ ಬುಕ್ ಒಂದನ್ನು ಆರ್ಡರ್ ಮಾಡಿದ್ದರು. ಆದರೆ ಅವರ ಪ್ಯಾಕೇಜ್‌ನಲ್ಲಿ ಮಕ್ಕಳ ಕಥೆ ಪುಸ್ತಕ ಬಂದಿತ್ತು. ಈ ಪುಸ್ತಕದ ಜೊತೆ ಕ್ಷಮಾಪಣ ಪತ್ರವೂ ಸೇರಿತ್ತು. ಬುಕ್ ಸೆಲ್ಲರ್ ಈ ಪತ್ರದಲ್ಲಿ ನಮ್ಮ ಬಳಿ ನೀವು ಆರ್ಡರ್ ಮಾಡಿರುವ ಪುಸ್ತಕ ಹಾನಿಗೆ ಒಳಗಾಗಿದೆ. ಅಲ್ಲದೆ ಈ ಆರ್ಡರ್ ವಾಪಾಸು ಕಳುಹಿಸುವಂತೆ ಪತ್ರದಲ್ಲಿ ಬರೆಯಲಾಗಿತ್ತು.



Click it and Unblock the Notifications

