Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕರಿ & ಸೈನಡ್ ಡಾಕ್ಯೂಮೆಂಟರಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಕೇರಳದ ಸೀರಿಯಲ್ ಕೊಲೆಗಾರ್ತಿ ಜೋಲ್ಲಿಯ ಕತೆ
ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಕರಿ ಅಮಡ್ ಸೈನಡ್ ಡಾಕ್ಯೂಮೆಂಟರಿ ತುಂಬಾನೇ ಸದ್ದು ಮಾಡುತ್ತಿದೆ, ಕೇರಳದಲ್ಲಿ ನಡೆದ ನೈಜ ಕತೆಯೇ ಈ ಡಾಕ್ಯೂಮೆಂಟರಿ. ಈ ಸೀರಿಯಲ್ ಮರ್ಡರ್ ಬರೀ ಕೇರಳವನ್ನಷ್ಟೇ ಅಲ್ಲ ಇಡೀ ದೇಶವನ್ನೇ ನಡುಗಿಸಿತ್ತು, ಒಬ್ಬರ ಆದ ಮೇಲೆ ಒಬ್ಬರಂತೆ 2002-1016ರಷ್ಟರಲ್ಲಿ ತುಂಬಾನೇ ನಿಗೂಢವಾಗಿ ಆ ಕುಟುಂಬದಲ್ಲಿ ಚಿಕ್ಕ ಮಗು ಸೇರಿ 6 ಜನ ಸಾವನ್ನಪ್ಪಿದ್ದರು. ತನ್ನ ಇಡೀ ಕುಟುಂಬದವರನ್ನು ಮರ್ಡರ್ ಮಾಡಿದ ರಾಕ್ಷಸಿ, ನರಹಂತಕಿಯ ಕತೆಯಿದೆ.

ಜೋಲ್ಲಿ ಎಂಬು ಸುಳ್ಳುಗಾರ್ತಿ, ಹಂತಕಿ
ಜೋಲ್ಲಿ ಸುಂದರ ಮುಖ, ಸ್ನೇಹ ಮುಖವಾಡ ಹಾಕಿಕೊಂಡಿರುವ ರಾಕ್ಷಿಸಿ, ಕೇರಳದ ಇಡುಕ್ಕಿ ಜಿಲ್ಲೆಯವಳು. ಅವಳು ಶ್ರೀಮಂತ ಕುಟುಂಬದಲ್ಲಿ ಜನಿಸಿದವಳು, ಅವಳ ತಂದೆ ಏಲಕ್ಕಿ ಬೆಳೆಗಾರರು. ಅವಳ ಕುಟುಂಬದಲ್ಲಿ ಕಾಲೇಜ್ ಮೆಟ್ಟಿಲು ಹತ್ತಿದ ಮೊದಲ ಹುಡುಗಿ, ಅವಳಿಗೆ ಭವಿಷ್ಯದ ಬಗ್ಗೆ ಸಾಕಷ್ಟು ಕನಸುಗಳಿತ್ತು. ಯೌವನ ಪ್ರಾಯದಲ್ಲಿ ರಾಯ್ ಥಾಮಸ್‌ನ ಭೇಟಿಯಾಗುತ್ತಾಳೆ, ಇವರಿಬ್ಬರ ನಡುವೆ ಪ್ರೇಮ ಅರಳುತ್ತದೆ. ರಾಯ್ ಥಾಮಸ್ ಕೇರಳದ ಕೂಡತಾಯಿಯ ಪೊನ್ನಮಟ್ಟಂ ಕುಟುಂಬಕ್ಕೆ ಸೇರಿದ ವ್ಯಕ್ತಿ. ರಾಯ್ ತಂದೆ ಟಾಮ್ ಸೀನಿಯರ್ ಕ್ಲರ್ಕ್ ಆಗಿದ್ದರು, ತಾಯಿ ಟೀಚರ್ ಕುಟುಂಬ ಆರ್ಥಿಕವಾಗಿ ಚೆನ್ನಾಗಿತ್ತು. ರಾಯ್‌ಗೆ ಒಬ್ಬ ತಂಗಿ, ಒಬ್ಬ ತಮ್ಮ, ರಾಯ್ ಹೈದರಾಬಾದ್‌ನಲ್ಲಿ ಒಳ್ಳೆಯ ಕೆಲಸದಲ್ಲಿದ್ದಾನೆ ಎಂದು ಹೇಳಲಾಗಿತ್ತು. ಎರಡೂ ಕುಟುಂಬದವರು ಒಪ್ಪಿ ಇಬ್ಬರಿಗೆ ಮದುವೆಯಾಯ್ತು.
ಎಲ್ಲವೂ ಅಂದುಕೊಂಡಂತೆ ಇರಲಿಲ್ಲ
ರಾಯ್‌ಗೆ ಒಳ್ಳೆಯ ಕೆಲಸವಿದೆಯೆಂದು ಜೋಲ್ಲಿಯನ್ನು ಮದುವೆ ಮಾಡಿಕೊಡಲಾಗಿತ್ತು, ಮದುವೆಯಾಗುವಾಗ ಜೋಲ್ಲಿ ಎಂ.ಕಾಂ ಮಾಡಿದ್ದಾಳೆ ಎಂದು ರಾಯ್ ಮನೆಯವರಿಗೆ ಹೇಳಲಾಗಿತ್ತು, ಆದರೆ ಇದೆರಡೂ ಸುಳ್ಳಾಗಿತ್ತು. ರಾಯ್‌ಗೆ ಕೆಲಸವಿಲ್ಲ ಎಂದು ತಿಳಿದಾಗ ಜೋಲ್ಲಿಗೆ ತುಂಬಾನೇ ಅಸಮಧಾನ ಉಂಟಾಗಿತ್ತು.
ಜೋಲ್ಲಿಯ ರಾಕ್ಷಸ ಕೃತ್ಯಕ್ಕೆ ಮೊದಲು ಬಲಿಯಾಗಿದ್ದು ಅತ್ತೆ ಅನ್ನಮ್ಮ
ಅನ್ನಮ್ಮ ಥಾಮಸ್ ಟೀಚರ್ ಆಗಿದ್ದರು, ಅವರು ತಮ್ಮ ಸೊಸೆಗೆ ನೀನು ಎಂ. ಕಾಂ ಮಾಡಿದ್ದೆಯೆಲ್ಲಾ ಟೀಚರ್ ಕೆಲಸಕ್ಕೆ ಟ್ರೈ ಮಾಡು ಎಂದು ಹೇಳಿದ್ದರು. ಆದರೆ ನಾನು ಡಿಗ್ರಿ ಕಂಪ್ಲೀಟ್ ಮಾಡಿಲ್ಲ ಎಂದು ಹೇಳುವುದು ಹೇಗೆ? ಹಾಗಾಗಿ ಮತ್ತೊಂದು ಸುಳ್ಳು ಹೇಳುತ್ತಾಳೆ. ನನಗೆ ಕೋಟಾಯ ಕಾಲೇಜಿನಲ್ಲಿ ಕೆಲಸ ಸಿಕ್ಕಿದೆ ಎಂದು ಕೋಟಾಯಂನಲ್ಲಿದ್ದು ವೀಕೆಂಡ್‌ನಲ್ಲಿ ಮನೆಗೆ ಬರುತ್ತಿದ್ದಳು, ಆದರೆ ಅತ್ತೆಗೆ ತನ್ನ ಸೊಸೆ ಡಿಗ್ರಿ ಕಂಪ್ಲೀಟ್ ಮಾಡಿಲ್ಲ, ಲೆಕ್ಚರ್ ಆಗಿ ಕೆಲಸವೂ ಮಾಡುತ್ತಿಲ್ಲ ಎಂಬ ಸತ್ಯ ಗೊತ್ತಾಗುತ್ತದೆ, ಆವಾಗ ಜೋಲ್ಲಿ ತನ್ನ ಅತ್ತೆಯನ್ನು ಮುಗಿಸಲು ಯೋಚಿಸುತ್ತಾಳೆ, ಅದು 2002, ಸಮೀಪದ ವೆಟನರಿ ಆಸ್ಪತ್ರೆಗೆ ಹೋಗಿ ನಾಯಿಯನ್ನು ಕೊಲ್ಲುವ ಔಷಧ ತಂದು ಅದನ್ನು ತನ್ನ ಅತ್ತೆಗೆ ಸೂಪ್‌ನಲ್ಲಿ ಮಿಕ್ಸ್ ಮಾಡಿ ಕೊಡುತ್ತಾಳೆ, ಹೀಗೆ ಅತ್ತೆಯನ್ನು ಕೊಲ್ಲುತ್ತಾಳೆ, ಮೊದಲ ಕೊಲೆ ಮಾಡಿದ್ದು ಆಕೆಗೆ ಮಾತ್ರ ಗೊತ್ತಿರುತ್ತದೆ, ಬೇರೆಯವರಿಗೆ ಯಾರಿಗೂ ಸಂಶಯ ಕೂಡ ಬರಲಿಲ್ಲ.
ಆಸ್ತಿಗಾಗಿ ಮಾವನನ್ನು ಕೊಲ್ಲುತ್ತಾಳೆ
ರಾಯ್ ತಂದೆಯ ಹೆಸರಿನಲ್ಲಿ 1600 sq m ಆಸ್ತಿ ಇರುತ್ತದೆ, ಅದನ್ನು ಅವರು ರಾಯ್ ತಮ್ಮನಿಗೆ ನೀಡಬೇಕೆಂದು ಬಯಸಿರುತ್ತಾರೆ, ರಾಯ್ ತಮ್ಮ ರೋಝೋ ಯುಎಸ್‌ನಲ್ಲಿ ಸೆಟ್ಲ್ ಆಗಿರುತ್ತಾರೆ, ಜೋಲ್ಲಿಗೆ ಆಸ್ತಿ ಕೈತಪ್ಪುವುದು ಇಷ್ಟವಿರಲ್ಲ. ಟೋಮ್ ಕೊಲೊಂಬೋದಲ್ಲಿರುವ ಮಗಳನ್ನು ನೋಡಲು ಹೋಗಿರುತ್ತಾರೆ, ಅಲ್ಲಿಂದ ಯುಎಸ್‌ಗೆ ಮಗನ ಮನೆಗೆ ಹೋಗುವ ಪ್ಲ್ಯಾನ್‌ನಲ್ಲಿರುತ್ತಾರೆ, ಆದರೆ ಜೋಲ್ಲಿ ಕರೆ ಮಾಡಿ ನಾನು ಗರ್ಭಿಣಿ, ನಿಮ್ಮ ಮಗ ವಿಪರೀತ ಕುಡಿದು ಗಲಾಟೆ ಮಾಡುತ್ತಾನೆ, ನೀವು ಇಂಡಿಯಾಗೆ ಬನ್ನಿ ಎಂದು ಕರೆಯುತ್ತಾಳೆ, ಮೊದಲ ಮಗನ ಸಂಸಾರ ಸರಿಮಾಡಿ ನಂತರ ಯುಎಸ್‌ಗೆ ಹೋಗುವ ಎಂದು ಭಾರತಕ್ಕೆ ಮರಳುತ್ತಾರೆ. ಆದರೆ ಮೋಸದಿಂದ ಆಸ್ತಿಗೆ ಸಹಿ ಹಾಕಿಸಿ 2008 ಆಗಸ್ಟ್ 22ಕ್ಕೆ ಮಾವನಿಗೆ ಸೈನಡ್ ಹಾಕಿ ಸಾಯಿಸುತ್ತಾಳೆ, ಮೊದಲ ಕೊಲೆ ಮಾಡಿ 6 ವರ್ಷಕ್ಕೆ ಮತ್ತೊಂದು ಕೊಲೆ ಮಾಡುತ್ತಾಳೆ. ಅವಳೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಮ್ಯಾಥ್ಯೂ ಎಂಬ ವ್ಯಕ್ತಿ ಸೈನಡ್ ತಂದುಕೊಟ್ಟಿರುತ್ತಾನೆ.
ಈ ಎರಡು ಸಾವು ಸಂಭವಿಸಿದಾಗಲೂ ಅಷ್ಟೇನೂ ಸಂಶಯ ಉಂಟಾಗಿರಲಿಲ್ಲ, ಏಕೆಂದರೆ ಅತ್ತೆ-ಮಾವ ಇಬ್ಬರಿಗೂ ವಯಸ್ಸಾಗಿತ್ತು, ಅವರು ವಯೋಸಹಜ ಸಾವನ್ನಪ್ಪಿರಬಹುದು ಎಂದೇ ಎಲ್ಲರೂ ಬಾವಿಸಿದ್ದರು.
ನೆಕ್ಸ್ಟ್ ಟಾರ್ಗೆಟ್ ಗಂಡ
ಎರಡು ಕೊಲೆ ಮಾಡಿ ಸಿಕ್ಕಿ ಬೀಳದಿದ್ದ ಮೇಲೆ ಅವಳಿಗೆ ಧೈರ್ಯ ಕೂಡ ಹೆಚ್ಚಾಗಿತ್ತು, 2011ರಲ್ಲಿ ತನ್ನ ಗಂಡನನ್ನು ಕೊಲ್ಲಲು ಪ್ಲ್ಯಾನ್ ಮಾಡುತ್ತಾಳೆ. ರಾಯ್ ಸತ್ತಾಗ ಕೆಲವರಿಗೆ ಸಂಶಯ ಉಂಟಾಗುತ್ತೆ. ಏಕೆಂದರೆ ರಾಯ್ ಸತ್ತರೆ ಎಲ್ಲಾ ಆಸ್ತಿ ಜೋಲ್ಲಿ ಪಾಲಾಗುತ್ತೆ, ರಾಯ್ ಪ್ರಜ್ಞೆತಪ್ಪಿದ ಸ್ಥಿತಿಯಲ್ಲಿ ಬಾತ್‌ರೂಂನಲ್ಲಿ ಬಿದ್ದಿರುತ್ತಾನೆ, ಆಸ್ಪತ್ರೆಗೆ ತಂದಾಗ ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಹೇಳಿದಾಗ ರಾಯ್ ಮಾವ ಮ್ಯಾಥ್ಯೂ ( ಆಕೆಯ ಪ್ರೇಮಿಯಲ್ಲ, ಇವರು 68 ವರ್ಷದ ವ್ಯಕ್ತಿ) ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಪೋಸ್ಟ್‌ಮಾರ್ಟಂ ಮಾಡಲು ಹೇಳುತ್ತಾರೆ. ಅದರಂತೆ ರಾಯ್ ಶವವನ್ನು ಪೋಸ್ಟ್‌ಮಾರ್ಟಂ ಮಾಡಿದಾಗ ಆತನ ಹೊಟ್ಟೆಯಲ್ಲಿ ಸೈನಡ್ ಪತ್ತೆಯಾಗಿತ್ತು, ಆದರೆ ಜೋಲ್ಲಿ ರಾಯ್ ತುಂಬಾ ಕುಡಿಯುತ್ತಿದ್ದ, ಖನ್ನತೆ ಹಂತದಲ್ಲಿದ್ದ, ಆತನೇ ಸೈನಡ್ ತೆಗೆದುಕೊಂಡಿರಬಹುದು ಎಂದು ಪೊಲೀಸರನ್ನು ನಂಬಿಸಿದಳು.
ಅಲ್ಲಿಗೂ ಅವಳ ಕೊಲೆ ದಾಹ ಮುಗಿಯಲಿಲ್ಲ
ರಾಯ್ ಮಾವ ಮ್ಯಾಥ್ಯೂಗೆ ಇವಳ ಬಗ್ಗೆ ಸಂಶಯವಿತ್ತು, ಅದು ಇವಳಿಗೂ ಗೊತ್ತಿತ್ತು, ಈತ ಮುಂದೆ ನನ್ನ ಸಿಕ್ಕಿಸಿಹಾಕಬಹುದು ಎಂದು ಊಹಿಸಿ ಆತನಿಗೇ ತಿಳಿಯದೆ ಆತ ಕುಡಿಯುವ ಡ್ರಿಂಕ್‌ನಲ್ಲಿ ಸೈನಡ್ ಹಾಕಿದಳು, ಆತ ಕುಸಿದು ಬಿದ್ದಾಗ ನೆರೆಹೊರೆಯವರ ಜೊತೆಗೆ ಆಸ್ಪತ್ರೆಗೆ ಕರೆದುಕೊಂಡು ಬಂದಳು, ಆದರೆ ಅಷ್ಟೊತ್ತಿಗೆ ಆತ ಸಾವನ್ನಪ್ಪಿದ್ದ, ಈ ಸಾವು ನಡೆದಿದ್ದು 2014ರಲ್ಲಿ. ಈ ಕೊಲೆಯೂ ಬೆಳಕಿಗೆ ಬರಲಿಲ್ಲ.
ಮತ್ತೊಂದು ಅನೈತಿಕ ಸಂಬಂಧ
ಮ್ಯಾಥ್ಯೂ ಜೊತೆ ಅಲ್ಲದೆ ಸಜು ಎಂಬ ರಾಯ್‌ನ ಫಸ್ಟ್ ಕಸಿನ ಜೊತೆಗೆ ಈಕೆಗೆ ಸಂಬಂಧವಿತ್ತು, ಈತ ಶಿಕ್ಷಕನಾಗಿದ್ದ, ಆದ್ದರಿಂದ ಆದಾಯವಿತ್ತು, ಆದರೆ ಈತನನ್ನು ಸಂಪೂರ್ಣ ಪಡೆಯಲು ಆತನ 6 ವರ್ಷದ ಮಗಳನ್ನು ಇಲ್ಲವಾಗಿಸುವ ಪ್ಲ್ಯಾನ್ ಮಾಡುತ್ತಾಳೆ. 2014, ಮೇ 1ಕ್ಕೆ ಆ ಪುಟ್ಟ ಬಾಲಕಿಗೆ ಸೈನಡ್ ನೀಡುತ್ತಾಳೆ, ಆ ಮಗು ಸ್ವಲ್ಪ ದಿನ ಆಸ್ಪತ್ರೆಯಲ್ಲಿ ಹುಷಾರಿಲ್ಲದೆ ಮಲಗು ನಂತರ ಸಾವನ್ನಪ್ಪುತ್ತೆ, ನಂತರ ಇವಳ ಟಾರ್ಗೆಟ್ ಸಜು ಹೆಂಡತಿ ಸಿಲ್ಲಿ.
ಜೋಲ್ಲಿ ಸಜು ಮನೆಗೆ ಆಗಾಗ ಬಂದು ಹೋಗುತ್ತಿರುತ್ತಾಳೆ, ಸಿಲ್ಲಿ ಜೊತೆಗೆ ಚೆನ್ನಾಗಿ ಇರುತ್ತಾಳೆ, ಸಿಲ್ಲಿಗೆ ಈ ಅನೈತಿಕ ಸಂಬಂಧ ಗೊತ್ತಿರುವುದಿಲ್ಲ. ಜನವರಿ 11, 2016ರಂದು ಸಿಲ್ಲಿ ಹಲ್ಲು ನೋವೆಂದು ದಂತವೈದ್ಯರಿಗೆ ತೋರಿಸಿ ಕೆಲವು ಔಷಧ ತಂದಿರುತ್ತಾಳೆ, ಆ ಔಷಧ ಜೊತೆಗೆ ಸೈನಡ್ ಬೆರೆಸಿ ಆಕೆಯನ್ನೂ ಕೊಲ್ಲುತ್ತಾಳೆ.
ಈ ಸಾವು ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
6 ಕೊಲೆ ಮಾಡಿದರೂ ಪೊಲೀಸರಿಗೆ ಸಿಕ್ಕಿಹಾಕಿಕೊಂಡಿರಲಿಲ್ಲ. 2016ರಲ್ಲಿ ಸಿಲ್ಲಿ ತೀರಿಹೋದ ಬಳಿಕ ಸಜು ಮನೆಗೆ ಆಗಾಗ ಬರುತ್ತಿರುತ್ತಾಳೆ. ಇವರಿಬ್ಬರು 2017ರಲ್ಲಿ ಮದುವೆಯಾಗುತ್ತಾರೆ. ಆದರೆ ರಾಯ್ ತಮ್ಮ ರೋಝೋಗೆ ಅಣ್ಣನ ಸಾವಿನಿಂದಲೇ ಅತ್ತಿಗೆ ಮೇಲೆ ಸಂಶಯವಿರುತ್ತದೆ. 2019ರಲ್ಲಿ ಆತ ಪೊಲೀಸ್‌ಗೆ ದೂರು ನೀಡುತ್ತಾನೆ, ಸಹಜ ಸಾವೆಂದು ಪೋಸ್ಟ್‌ಮಾರ್ಟಂ ಮಾಡದೆ ಹೂತ್ತಿದ್ದ ಶವಗಳನ್ನು ತೆಗೆದು ಶವ ಪರೀಕ್ಷೆ ಮಾಡಿದಾಗ ಈಕೆ ಮಾಡಿದ ಕೃತ್ಯ ಗೊತ್ತಾಗುತ್ತೆ, ಅಕ್ಟೋಬರ್ 5, 2019ರಂದು ಆಕೆಯನ್ನು ಅರೆಸ್ಟ್ ಮಾಡಲಾಯ್ತು, ಆಕೆ ಜೊತೆಗೆ ಸೈನಡ್ ಸಪ್ಲೈ ಮಾಡಿದ್ದ ಮ್ಯಾಥ್ಯೂ ಕೂಡ ಬಂಧನದಲ್ಲಿದ್ದಾನೆ, ಈ ಸೀರಿಯಲ್ ಕಿಲ್ಲರ್ ಈಗಲೂ ಕಾನೂನು ಬಂಧನದಲ್ಲಿದ್ದಾಳೆ. ಅವಳ ಕುರಿತ ಡಾಕ್ಯೂಮೆಂಟರಿ ಕರಿ ಅಂಡ್ ಸೈನಡ್.



Click it and Unblock the Notifications











