Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇಡೀ ದೇಶಕ್ಕೆ ಸೌತೆಕಾಯಿ ಕೊರತೆ..! ಕಾರಣವಾಗಿದ್ದು ಅದೊಂದು ವಿಡಿಯೋ..!
ಇಂಟರ್‌ನೆಟ್‌ನಿಂದ ಈಗ ಏನು ಬೇಕಾದರು ಸಂಭವಿಸಬಹುದು. ಏನು ಇಲ್ಲದವರನ್ನ ಹೀರೋ ಆಗಿಸೋ ಶಕ್ತಿ ಇರೋದು ಇಂಟರ್‌ನೆಟ್‌ಗೆ. ಅಲ್ಲಿ ಏನೆಲ್ಲಾ ನೋಡಲು ಸಿಗುತ್ತೆ ಅಂದ್ರೆ ಊಹಿಸಲು ಸಹ ಸಾಧ್ಯವಾಗೋದಿಲ್ಲ. ಇದರ ಜೊತೆಗೆ ಇಂಟರ್‌ನೆಟ್‌ನಿಂದ ನೀವು ಏನು ಬೇಕಾದರು ಮಾಹಿತಿ ಪಡೆಯಬಹುದು. ರಾತ್ರೋರಾತ್ರಿ ಇಂಟರ್‌ನೆಟ್ ಏನು ಬೇಕಾದರೂ ಮಾಡಬಹುದು.
ಈಗ ಇದೇ ಇಂಟರ್‌ನೆಂಟ್ ಒಂದು ಇಡೀ ದೇಶದಲ್ಲಿ ಸೌತೆಕಾಯಿ ಕೊರತೆಗೆ ಕಾರಣವಾಗಿದೆ ಅಂದ್ರೆ ನಂಬುತ್ತೀರಾ? ಹೌದು ಒಂದೇ ಒಂದು ವಿಡಿಯೋ ಈಗ ದೇಶದಲ್ಲಿ ಸೌತೆಕಾಯಿ ಕೊರತೆಗೆ ಕಾರಣವಾಗಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಐಸ್‌ಲ್ಯಾಂಡ್‌ನಲ್ಲಿ ಸೌತೆಕಾಯಿಯ ಕೊರತೆ ಉಂಟಾಗಿದ್ದು, ಇರುವ ಸೌತೆಕಾಯಿಯ ಬೆಲೆಯು ಗಗನಕ್ಕೇರಿದೆ.

ಈ ರೀತಿಯ ಸಮಸ್ಯೆ ಉಂಟಾಗಲು ಒಂದು ಕಾರಣವೂ ಇದೆ. ನಾವು ಭಾರತೀಯರು ಬೇಸಿಗೆಯಲ್ಲಿ ಹೆಚ್ಚು ಈ ಸೌತೆಕಾಯಿ ಸವಿಯುತ್ತೇವೆ. ಅದ್ರಲ್ಲೂ ಸಲಾಡ್‌ಗೆ ಹೆಚ್ಚಾಗಿ ಬಳಸುತ್ತೇವೆ. ಸೌತೆಕಾಯಿ ತೆಳುವಾಗಿ ಹೆಚ್ಚಿಕೊಂಡು ಅದಕ್ಕೆ ಉಪ್ಪು, ಖಾರದ ಪುಡಿ ಬೆರೆಸಿ ಬೇಸಿಗೆಯ ಬಿಸಿಲಿನಲ್ಲಿ ಸವಿಯುತ್ತೇವೆ. ಇದರಲ್ಲಿ ನಮಗೇನು ಹೊಸತನವಿಲ್ಲ.
ಆದ್ರೆ ಐಸ್‌ಲ್ಯಾಂಡ್‌ನಲ್ಲಿ ಬೇಸಿಗೆಯೇ ಮರಿಚಿಕೆ. ಹೀಗಿರುವಾಗ ಅಲ್ಲಿ ಸೌತೆಕಾಯಿ ಬಳಕೆಯೇ ಕಡಿಮೆ. ಇಷ್ಟಾದರು ಅಲ್ಲಿ ಸೌತೆಕಾಯಿ ನಾಪತ್ತೆಯಾಗಿದೆ. ಏಕೆ ಹೀಗಾಗಿದೆ ಎಂದು ಹುಡುಕಲು ಹೊರಟರೆ ಒಬ್ಬ ಈ ಸೌತೆಕಾಯಿ ಬಳಸಿ ಮಾಡಿದ್ದ ಟಿಕ್‌ಟಾಕ್ ವಿಡಿಯೋ ವೈರಲ್ ಆಗಿದ್ದು, ಎಲ್ಲರು ಈಗ ಸೌತೆಕಾಯಿ ಹಿಂದೆ ಬಿದ್ದಿದ್ದಾರೆ.
ಏನದು ವಿಡಿಯೋ?
ಕೆನಡಾ ಮೂಲದ ಸೋಶಿಯಲ್ ಮೀಡಿಯಾ ಹೀರೋ ಲೋಗನ್ ಮೊಫಿಟ್ ಎಂಬಾತ ಈ ಸೌತೆಕಾಯಿ ಬಳಸಿ ಅತ್ಯುತ್ತಮ ಸಲಾಡ್ ಮಾಡೋದು ಹೇಗೆ ಎಂಬುದನ್ನು ವಿಡಿಯೋದಲ್ಲಿ ವಿವರಿಸಿದ್ದಾನೆ, ಅತ್ಯಂತ ಸುಲಭವಾಗಿ ಮಾಡಲಾಗುವ ಈ ಸೌತೆಕಾಯಿ ಸಲಾಡ್‌ನ ರುಚಿಗೆ ಆತ ಮನಸೋತಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಲ್ಲಡೆ ಸೌತೆಕಾಯಿಗೆ ಭಾರೀ ಬೇಡಿಕೆ ಬಂದುಬಿಟ್ಟಿದೆ.
ಇಂಟರ್‌ನೆಟ್‌ನಲ್ಲಿ ಆತ ಕುಕುಂಬರ್ ಬಾಯ್ ಎಂದೇ ಖ್ಯಾತಿ ಪಡೆದಿದ್ದಾನೆ. ಈ ಸೌತೆಕಾಯಿ ಸಲಾಡ್‌ಗೆ ಆತ ಎಳ್ಳು ಬೀಜಗಳು, ಸೋಯಾ ಸಾಸ್, ಹುಳಿ ಕ್ರೀಮ್, ಸ್ಟೀಕ್, ಮೆಣಸಿನಕಾಯಿ ಎಣ್ಣೆ, ಚೀಸ್, ಟೊಮ್ಯಾಟೊ, ಈರುಳ್ಳಿ, ಕೆಂಪುಮೆಣಸು, ಮೊಟ್ಟೆ, ಸಾಸ್, ಮೇಯನೇಸ್, ಮತ್ತು ಸುವಾಸನೆ-ವರ್ಧಿಸುವ ವಿವಿಧ ಪದಾರ್ಥಗಳಲ್ಲಿ ಅವನು ಸಾಮಾನ್ಯವಾಗಿ ಮಿಶ್ರಣ ಮಾಡುತ್ತಾನೆ. ಬಳಿಕ ಇದನ್ನು ಸವಿಯುತ್ತಾನೆ.
🇮🇸TIKTOK CRAZE CREATES CUCUMBER SHORTAGE IN ICELAND
— Mario Nawfal (@MarioNawfal) August 23, 2024
Logan Moffitt started a trend that has everyone clamoring for cucumbers to recreate Asia-inspired salads, leaving grocery stores struggling to keep up with demand.
As a result, cucumbers have become scarce, with some… pic.twitter.com/3CT7W25z4i
ಈ ಸಾಮಾನ್ಯ ಸುಲಭದ ಸಲಾಡ್ ರೆಸಿಪಿ ಸಿಕ್ಕಾಪಟ್ಟೆ ವೈರಲ್ ಆಗಿ ಜಗತ್ತಿನಾದ್ಯಂತ ಆತ ಫೇಮಸ್ ಆಗಲು ಕಾರಣವಾಯಿತು. ಆದ್ರೆ ಈ ವಿಡಿಯೋ ನೋಡಿದ ಮಂದಿ ಸೌತೆಕಾಯಿ ಸಲಾಡ್ ಮಾಡಿ ಸವಿಯಲು ಮುಂದಾಗಿದ್ದಾರೆ, ಇದು ಐಸ್‌ಲ್ಯಾಂಡ್‌ನಲ್ಲಿ ಸೌತೆಕಾಯಿ ಬೆಲೆ ಗಗನಕ್ಕೇರುವಂತೆ ಮಾಡಿರುವುದಲ್ಲದೆ ಅಲ್ಲಿ ಸೌತೆಕಾಯಿ ಕೊರತೆಗೆ ಕಾರಣವಾಗಿದೆ.
ಕಡಿಮೆ ಜನಸಂಖ್ಯೆ ಹೊಂದಿರುವ ಈ ಐಸ್‌ಲ್ಯಾಂಡ್‌ನಲ್ಲಿ ಈ ವಿಡಿಯೋ ನೋಡಿದವರು ಸೌತೆಕಾಯಿ ಸಲಾಡ್ ಮಾಡಲು ಮುಂದಾಗಿದ್ದಾರೆ. ಇದು ತರಕಾರಿಯ ಕೊರತೆಗೆ ಕಾರಣವಾಗಿದೆ.



Click it and Unblock the Notifications