Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಕಾಡೆಮ್ಮೆ vs ಮೊಸಳೆ ಫೈಟ್, ಗೆದ್ದವರು ಯಾರು?: ವೈರಲ್ ವೀಡಿಯೋ
ಎರಡು ಬಲಿಷ್ಠ ಜೀವಿಗಳ ನಡುವೆ ಹೋರಾಟ ನಡೆಯುವಾಗ ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಕಾಡುವುದು. ಕೆಲವೊಮ್ಮೆ ಸೋಲುಂಟಾಗುತ್ತದೆ ಎಂದು ಊಹಿಸಿದ ಕಡೆ ಜಯ ಉಂಟಾದಾಗ ತುಂಬಾನೇ ರೋಚಕವಾಗಿರುತ್ತದೆ. ಅಂಥದ್ದೊಂದು ವೀಡಿಯೋ ಸಾಮಾಜಿಕ ತಾಣದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.
ಮೊಸಳೆ ಹಾಗೂ ಕಾಡೆಮ್ಮೆ ನಡುವೆ ನಡೆದ ಫೈಟ್ ಅದು, ಎರಡೂ ತಮ್ಮ -ತಮ್ಮ ಪ್ರಾಣಕ್ಕಾಗಿ ನಡೆಸಿದ ಫೈಟ್. ಮೊಸಳೆ ಆಹಾರ ಸಿಗದಿದ್ದರೆ ಹಸಿವಿನಿಂದ ಸಾಯಬೇಕಾಗುತ್ತದೆ, ಕಾಡೆಮ್ಮೆಗೆ ಮೊಸಳೆ ಬಾಯಿಂದ ತಪ್ಪಿಸಿಕೊಳ್ಳದಿದ್ದರೆ ಪ್ರಾಣ ಹೋಗುತ್ತೆ, ಎರಡೂ ಜೀವಿಗಳು ತಮ್ಮ-ತಮ್ಮ ಬದುಕಿಗಾಗಿ ನಡೆಸಿದ ಹೋರಾಟ ಅದು. ಆ ಹೋರಾಟದ ವೀಡಿಯೋ ನೆಟ್ಟಿಗರ ಮನಗೆದ್ದಿದೆ.

ನೀರು ಕುಡಿಯಲು ಬಂದ ಕಾಡೆಮ್ಮೆಯ ಬಾಯಿಯನ್ನು ಮೊಸಳೆ ಕಚ್ಚಿ ಹಿಡಿಯುತ್ತದೆ. ಮೊಸಳೆ ನೀರಿನ ಕಡೆಗೆ ಎಳೆಯುತ್ತದೆ, ಕಾಡೆಮ್ಮೆ ದಡದ ಕಡೆಗೆ ಎಳೆಯುತ್ತದೆ, ಮೊಸಳೆ ತನ್ನ ಪ್ರಯತ್ನ ಬಿಡುವುದಿಲ್ಲ, ಕಾಡೆಮ್ಮೆ ತನ್ನ ಭರವಸೆ ಬೀರುವುದಿಲ್ಲ, ಕಾಡೆಮ್ಮೆ ಹಿಂದೆಕ್ಕೆ ಹಿಂದೆಕ್ಕೆ ಸರಿಯುತ್ತದೆ, ಆದರೂ ಮೊಸಳೆ ತನ್ನ ಹಿಡಿತ ಬಿಡುವುದಿಲ್ಲ, ಕೊನೆಗೆ ಮೊಸಳೆಗೆ ತನ್ನ ಪ್ರಯತ್ನ ನಡೆಯಲ್ಲ, ಇದು ನನ್ನ ಪಾಲಿಗಿಲ್ಲ ಎಂಬುವುದು ತಿಳಿಯುತ್ತದೆ, ಮೊಸಳೆ ಕಾಡೆಮ್ಮೆಯನ್ನು ಬಿಟ್ಟು ಹೊಳೆ ಕಡೆಗೆ ಹೋಗುತ್ತದೆ.
ಈ ವೀಡಿಯೋ ತುಂಬಾನೇ ವೈರಲ್ ಆಗುತ್ತಿದ್ದು ಬದುಕಿನ ತತ್ವಕ್ಕೆ ಕೂಡ ಇದನ್ನು ಹೋಲಿಸಬಹುದು, ಎಂಥದ್ದೇ ಪರಿಸ್ಥಿತಿ ಬರಲಿ ಧೈರ್ಯದಿಂದ ಎದುರಿಸಿದರೆ ಕಾಡೆಮ್ಮೆ ರೀತಿ ಗೆಲುವು ನಮ್ಮದಾಗುವುದು ಎಂಬ ನೀತಿಪಾಠ ಈ ನಿಜ ಸ್ಟೋರಿಯಲ್ಲಿದೆ.



Click it and Unblock the Notifications
