Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
26ರ ಸಂಸದೆಯ ಜೊತೆ ರಿಂಕು ಸಿಂಗ್ ನಿಶ್ಚಿತಾರ್ಥ: ಯಾರು ಈ ಪ್ರಿಯಾ ಸರೋಜ್?
ಭಾರತ ಕ್ರಿಕೆಟ್ ತಂಡದ ಆಟಗಾರ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಮ್ಯಾಜ್ ವಿನ್ನರ್ ಎಂದೇ ಕರೆಸಿಕೊಳ್ಳುವ ರಿಂಕು ಸಿಂಗ್ ನಿಶ್ಚಿತಾರ್ಥ ಇಂದು ಮುಗಿದಿದೆ. ಅವರು ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇಂದು ಲಕ್ನೋದ ಪಂಚತಾರಾ ಹೋಟೆಲ್‌ನಲ್ಲಿ ನಿಶ್ಚಿತಾರ್ಥ ನೆರವೇರಿದೆ. ಹಾಗೆ ನವೆಂಬರ್‌ನಲ್ಲಿ ಅವರು ವಿವಾಹವಾಗಲಿದ್ದಾರೆ ಎಂದು ತಿಳಿದುಬಂದಿದೆ.
ಈ ಸಮಾರಂಭದಲ್ಲಿ ಅಖಿಲೇಶ್ ಯಾದವ್, ಡಿಂಪಲ್ ಯಾದವ್, ಜಯಾ ಬಚ್ಚನ್, ಶಿವಪಾಲ್ ಯಾದವ್ ಮತ್ತು ಪ್ರವೀಣ್ ಕುಮಾರ್ ಸೇರಿದಂತೆ ಸಮಾಜವಾದಿ ಪಕ್ಷದ ಹಿರಿಯ ನಾಯಕರು ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಮಾರಂಭದಲ್ಲಿ ಹೊಸ ಜೋಡಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದರು. ಬಿಳಿ ಗುಲಾಭಿ ಬಣ್ಣದ ಉಡುಗೆಯಲ್ಲಿ ಇಬ್ಬರೂ ಕಾಣಿಸಿಕೊಂಡರು.

ಲಕ್ನೋದ ಫುಲ್ಕರ್ನ್ ಹಾಲ್‌ನಲ್ಲಿ ಕಂಗೊಳಿಸುವಂತಹ ಹೂವಿನ ಅಲಂಕಾರ, ಲೈಟಿಂಗ್ಸ್‌ನಿಂದ ಹೊಳೆಯುತ್ತಿತ್ತು. ಈ ಸಮಾರಂಭದಲ್ಲಿ ಕಾಣಿಸಿಕೊಂಡ ಅತಿಥಿಗಳು ಸಮಾರಂಭದ ಸೌಂದರ್ಯ ಮತ್ತಷ್ಟು ಮೆರುಗುಗೊಳಿಸುವಲ್ಲಿ ನೆರವಾದರು. ಹಾಗೆ ರಿಂಕು ಸಿಂಗ್ ಮತ್ತು ಪ್ರಿಯಾ ಸರೋಜ್ ಅವರ ಕುಟುಂಬಸ್ಥರು ಕೂಡ ಭಾಗಿಯಾಗಿದ್ದರು. ಈ ಸಮಾರಂಭಕ್ಕೂ ಮುನ್ನ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿರುವ ಚೌಧೇರಾ ವಾಲಿ ವಿಚಿತ್ರಾ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.
ಈ ಸಮಾರಂಭದಲ್ಲಿ 300ಕ್ಕೂ ಹೆಚ್ಚು ಆಪ್ತರು ಭಾಗಿಯಾಗಿದ್ದರು. ಹಾಗೆ ಭಾಗಿಯಾಗಿದ್ದ ಮಂದಿಗೆ ಅದ್ದೂರಿಯ ಊಟ ಹಾಗೂ ಉಪಚಾರ ಗಮನ ಸೆಳೆದಿದೆ. ಪ್ರಾದೇಶಿಕ ರುಚಿಯಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದ ಅಡುಗೆ ಖಾದ್ಯಗಳು ಅಲ್ಲಿ ಸಿದ್ದಗೊಂಡಿತ್ತು. ರಸಗುಲ್ಲಾ ಮತ್ತು ಕಾಜು-ಪನೀರ್ ರೋಲ್‌ಗಳಂತಹ ಬಂಗಾಳಿ ಸಿಹಿತಿಂಡಿಗಳು ಮತ್ತು ಯುರೋಪಿಯನ್‌ನಿಂದ ಏಷ್ಯನ್ ಪಾಕಪದ್ಧತಿಯವರೆಗೆ ವಿವಿಧ ಬಗೆಯ ಖಾದ್ಯಗಳು ಗಮನ ಸೆಳೆದವು.
ನವೆಂಬರ್‌ನಲ್ಲಿ ವಿವಾಹ
ಇಬ್ಬರು ಈಗ ನಿಶ್ಚಿತಾರ್ಥ ಮಾಡಿಕೊಂಡಿದ್ದು ಈ ವರ್ಷ ನವೆಂಬರ್‌ನಲ್ಲಿ ವಿವಾಹವಾಗಲಿದ್ದಾರೆ. ನವೆಂಬರ್ 18ರಂದು ಇಬ್ಬರು ಹೊಸ ಜೀವನ ಆರಂಭಿಸುವುದು ಖಚಿತವಾಗಿದೆ. ಈ ಸಮಾರಂಭವು ವಾರಣಾಸಿಯಲ್ಲಿರುವ ಐಷಾರಾಮಿ ತಾಜ್ ಹೋಟೆಲ್‌ನಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ. ಕ್ರಿಕೆಟ್ ಬಾಲಿವುಡ್, ರಾಜಕೀಯ ಗಣ್ಯರು, ಉದ್ಯಮಿಗಳು ಸೇರಿ ಪ್ರಮುಖ ಮಂದಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿದೆ.
27 ವರ್ಷದ ರಿಂಕು ಸಿಂಗ್, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಆಡುತ್ತಾರೆ. ಹಾಗೆ ಅವರು ಭಾರತ ತಂಡದ ಪರವಾಗಿ 2 ಏಕದಿನ ಪಂದ್ಯ 33 ಟಿ20 ಪಂದ್ಯಗಳನ್ನು ಕೂಡ ಆಡಿದ್ದಾರೆ. ಹಾಗೆ ಪ್ರಿಯಾ ಸರೋಜ್ 26 ವರ್ಷದವರಾಗಿದ್ದು, ಇತ್ತೀಚಿಗೆ ನಡೆದಿದ್ದ ಚುನಾವಣೆಯಲ್ಲಿ ಜೌನ್‌ಪುರದ ಮಚ್ಲಿಶಹರ್ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ, ಅವರು ಸಮಾಜವಾದಿ ಪಕ್ಷದಿಂದ ಸಂಸತ್ ಚುನಾವಣೆ ಎದುರಿಸಿದ್ದರು.
ಪ್ರಿಯಾ ಸರೋಜ್ ಅವರ ತಂದೆ ಕೂಡ ಸಮಾಜವಾದಿ ಪಕ್ಷದಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಹಾಗೆ ಮೊದಲ ಬಾರಿಗೆ ಚುನಾವಣೆ ಎದುರಿಸಿದ್ದ ಮಗಳು ಕೂಡ ಕಿರಿಯ ವಯಸ್ಸಿನಲ್ಲಿ ಸಂಸದೆಯಾಗಿ ಆಯ್ಕೆಯಾಗಿದ್ದರು.
ಇನ್ನೊಂದು ಕಡೆ ರಿಂಕು ಸಿಂಗ ಕಡು ಬಡತನದಲ್ಲಿ ಬೆಳೆದು ಬಂದ ಯುವಕ. ಆರಂಭದ ದಿನದಲ್ಲಿ ಚಿಕ್ಕ ಮನೆಯಲ್ಲಿ ವಾಸವಾಗಿದ್ದರು, ಆದ್ರೆ ಐಪಿಎಲ್ ಟೂರ್ನಿ ಅವರ ಜೀವನದ ಬದಲಾಯಿಸಿತ್ತು, ಕೋಲ್ಕತ್ತಾ ತಂಡದ ಪರವಾಗಿ ಆಡುವಾಗ ಅವರು ಮ್ಯಾಚ್ ವಿನ್ನಿಂಗ್ ಆಟ ಅವರ ಜೀವನ ಬದಲಾಯಿಸಿತು. rರಿಂಕು ಸಿಂಗ್ ತಂದೆ ಎಲ್‌ಪಿಜಿ ಸಿಲಿಂಡರ್ ಡೆಲಿವರಿ ಮಾಡುವ ಕೆಲಸ ಮಾಡುತ್ತಾರೆ. ಮಗನ ಯಶಸ್ಸಿನ ಬಳಿಕವೂ ಅವರು ಇದೇ ಕಲಸವನ್ನು ಮುಂದುವರೆಸಿದ್ದಾರೆ.



Click it and Unblock the Notifications
