Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮತ್ತೆ ನಿಜವಾಯ್ತು ಟ್ರಂಪ್ ಮೇಲೆ ದಾಳಿ ಭವಿಷ್ಯ ನುಡಿದಾತನ ಊಹೆ..! ಯಾರು ಈ ವಿಚಿತ್ರ ವ್ಯಕ್ತಿ!
ಭೂಮಿ ಮೇಲೆ ಏನೆಲ್ಲಾ ಘಟನೆಗಳು ನಡೆಯಲಿವೆ ಎಂಬುದನ್ನು ಹಲವರು ಮೊಲದೇ ಊಹಿಸಿರುವುದು ನೋಡಬಹುದು. ಅದರಲ್ಲೂ ನಾಸ್ಟ್ರಾಡಾಮನ್, ಬಬಾ ವಂಗಾ ಅವರ ಭವಿಷ್ಯವಾಣಿಗಳ ಕುರಿತು ನಾವು ಆಗಾಗ ಕೇಳುತ್ತಲೇ ಇರುತ್ತವೆ. ಅವರು ಭೂಮಿ ಮೇಲೆ ಮುಂದೆ ಸಂಭವಿಸಲಿರುವ ದುರಂತಗಳ ಕುರಿತು ಭವಿಷ್ಯ ನುಡಿದಿದ್ದಾರೆ. ಈ ಭವಿಷ್ಯವಾಣಿಗಳು ನಿಜವಾಗುವುದು ಸಹ ನಾವು ನೋಡುತ್ತಲೇ ಇರುತ್ತೇವೆ.
ಆದ್ರೆ ಇಲ್ಲೊಬ್ಬ ಈ ವರ್ಷ ಸಂಭವಿಸಬಹುದಾದ ದುರಂತಗಳ ಕುರಿತು ಭವಿಷ್ಯ ನುಡಿದಿದ್ದು, ಎಲ್ಲರಲ್ಲು ಅಚ್ಚರಿ ಮೂಡಿಸುವ ಜೊತೆಗೆ ಆಘಾತ ಉಂಟು ಮಾಡಿದೆ. ಕ್ರೇಗ್ ಹ್ಯಾಮಿಲ್ಟನ್ ಎಂಬ ವ್ಯಕ್ತಿ ಹಲವು ವರ್ಷದಿಂದಲೂ ಈ ರೀತಿ ಭವಿಷ್ಯವಾಣಿಗಳ ನುಡಿಯುವ ಕೆಲಸ ಮಾಡುತ್ತಿದ್ದಾರೆ. ಇತ್ತೀಚಿಗೆ ಡೊನಾಲ್ಡ್ ಟ್ರಂಪ್ ಹತ್ಯೆಯ ಕುರಿತು ಮೊದಲೇ ಭವಿಷ್ಯ ನುಡಿದಿದ್ದ.

ಆತ ಹೇಳಿದಂತೆ ಡೊನಾಲ್ಟ್ ಟ್ರಂಪ್ ಮೇಲೆ ದಾಳಿಯೂ ನಡೆದಿತ್ತು. ಅವರು ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಭವಿಷ್ಯವಾಣಿಯ ಬಳಿಕ ಆತನ ಹೆಸರು ಎಲ್ಲಾ ಕಡೆಗಳಲ್ಲೂ ಫೇಮಸ್ ಆಗಿತ್ತು. ಹಾಗೆ ನಾನು ಹೇಳುವ ಎಲ್ಲಾ ಭವಿಷ್ಯವಾಣಿಗಳು ನಿಜವಾಗಲಿದೆ ಎಂದಿದ್ದ. ಯೂಟ್ಯೂಬ್ ವಿಡಿಯೋದಲ್ಲಿ ಆತ ಮುಂದೆ ನಡೆಯುವ ಘಟನೆಗಳನ್ನು ಊಹಿಸುವ ಕಾರ್ಯ ಮಾಡುತ್ತಿದ್ದಾನೆ.
ಇತ್ತೀಚಿಗೆ ಇಂಗ್ಲೆಂಡ್ ನಾರ್ಥ್ ಸಮುದ್ರದಲ್ಲಿ ನಡೆದ ಎರಡು ಹಡಗುಗಳ ಅಪಾಯಕಾರಿ ಡಿಕ್ಕಿ ಹಾಗೂ ಸಮುದ್ರ ಪರಿಸರ ಹಾನಿಯ ಕುರಿತಂತೆಯೂ ಆತ ಭವಿಷ್ಯ ನುಡಿದಿದ್ದ. ಈ ಹೇಳಿಕೆಯ ಕೆಲವೇ ದಿನಗಳಲ್ಲಿ ಇಂಗ್ಲೆಂಡ್ ಸಮುದ್ರದಲ್ಲಿ ಎರಡು ತೈಲ ತುಂಬಿದ ಹಡಗುಗಳ ಡಿಕ್ಕಿ ಸಂಭವಿಸಿ ತೈಲ ಸಮುದ್ರ ಪಾಲಾಗಿದ್ದು ನೋಡಬಹುದು.
ಆತ ಮಾರ್ಚ್ 4ರಂದು ಪ್ರಕಟಿಸಿರುವ ವಿಡಿಯೋದಲ್ಲಿ ನಾನು ಭೀಕರ ಹಡಗು ದುರಂತವನ್ನು ನೋಡುತ್ತಿದ್ದೇನೆ. ಇದು ತೈಲ ಟ್ಯಾಂಕರ್ ಸಮಸ್ಯೆ ಆಗಿರಬಹುದು. ಒಂದು ಹಡಗು ಸಮಸ್ಯೆಯಲ್ಲಕಿ ಸಿಲುಕಬಹುದು. ಅದು ಮಾಲೀನ್ಯಕ್ಕೂ ಕಾರಣವಾಗಬಹುದು ಎಂದು ಆತ ಹೇಳಿದ್ದ. ಇದಾದ ಕೆಲವೇ ದಿನದಲ್ಲಿ ಭಾರೀ ತೈಲ ತುಂಬಿದ್ದ ಹಡಗು ಮತ್ತೊಂದು ಹಡಗಿಗೆ ಡಿಕ್ಕಿಯಾಗಿತ್ತು. ಇದು ಸಮುದ್ರದಲ್ಲಿ ತೈಲ ಸೋರಿಕೆಯಾಗಿತ್ತು.
ಆತ ಮಾರ್ಚ್ 4ರಂದು ಈ ಕುರಿತಂತೆ ಭವಿಷ್ಯ ನುಡಿದಿದ್ದ, ಆದ್ರೆ ಮಾರ್ಚ್ 11ರಂದು MV ಸೊಲಾಂಗ್ ಸರಕು ಹಡಗು 18,000 ಟನ್ ಜೆಟ್ ಇಂಧನವನ್ನು ಸಾಗಿಸುತ್ತಿದ್ದ US ಧ್ವಜ ಹೊತ್ತ ತೈಲ ಟ್ಯಾಂಕರ್ MV ಸ್ಟೆನಾ ಇಮ್ಯಾಕ್ಯುಲೇಟ್‌ಗೆ ಡಿಕ್ಕಿ ಹೊಡೆದಿತ್ತು. ಇದರಿಂದ ಎರಡು ಹಡಗುಗಳಿಗೆ ಬೆಂಕಿ ಹೊತ್ತಿಕೊಳ್ಳಲು ಕಾರಣವಾಗಿತ್ತು. ಹಾಗೆ ಬೃಹತ್ ರಕ್ಷಣಾ ಕಾರ್ಯಾಚರಣೆಗೆ ಕಾರಣವಾಯಿತು. ಹಡಗಿನಲ್ಲಿದ್ದ 13 ಜನರ ರಕ್ಷಿಸಲಾಗಿದ್ದು ಓರ್ವ ಸಿಬ್ಬಂದಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಈ ದುರಂತದ ಪರಿಣಾಮವಾಗಿ ಸೊಲಾಂಗ್ ಹಡಗಿನ ಕ್ಯಾಪ್ಟನ್ ಆಗಿದ್ದ 59 ವರ್ಷದ ವ್ಯಕ್ತಿಯನ್ನು ನಿರ್ಲಕ್ಷ್ಯ ಹಾಗೂ ನರಹತ್ಯೆಯ ಆರೋಪದ ಮೇಲೆ ಬಂಧಿಸಲಾಗಿದೆ. ಈ ಘಟನೆಗೆ ಕಾರಣವೇನೆಂದು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಹಾಗೆ ಕ್ಯಾಪ್ಟನ್ ಅನ್ನು ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ. ಸದ್ಯ ಈ ಘಟನೆಯ ಬಳಿಕ ಕ್ರೇಗ್ ಹ್ಯಾಮಿಲ್ಟನ್ ಹೇಳಿಕೆ ಬಹಳ ವೈರಲ್ ಆಗಿದ್ದು ಆತ ನುಡಿಯುತ್ತಿರುವ ಎಲ್ಲಾ ಘಟನೆಗಳು ನಿಜವಾಗುತ್ತಿರುವುದು ಅಚ್ಚರಿ ಮೂಡಿಸುತ್ತಿದೆ.
ಕ್ರೇಗ್ ಹ್ಯಾಮಿಲ್ಟನ್-ಪಾರ್ಕರ್ ಅವರ ಭವಿಷ್ಯವಾಣಿಗಳು ಈ ಹಿಂದೆಯೂ ನಿಜವಾಗಿವೆ. ಕಳೆದ ಜುಲೈ 2024 ರಲ್ಲಿ ಡೊನಾಲ್ಡ್ ಟ್ರಂಪ್ ಮೇಲೆ ಸಂಭಾವ್ಯ ದಾಳಿ ನಡೆಯಲಿದೆ ಎಂದಿದ್ದ. ಈ ಕುರಿತು ಹೇಳಿಕೆ ನೀಡಿದ್ದ ಕೆಲ ದಿನದಲ್ಲಿ ಟ್ರಂಪ್ ಚುನಾವಣಾ ಪ್ರಚಾರದಲ್ಲಿ ಭಾಷಣ ಮಾಡುವಾಗ ಗುಂಡಿನ ದಾಳಿ ನಡೆದಿತ್ತು. ಆದ್ರೆ ಅವರ ಕಿವಿಗೆ ಸಣ್ಣದಾಗಿ ಗಾಯಗೊಂಡು ಬದುಕುಳಿದಿದ್ದರು. ಇದಕ್ಕು ಮೊದಲು ಕೋವಿಡ್ ಸಾಂಕ್ರಾಮಿಕ ಕುರಿತಂತೆ ಹಾಗೂ ರಾಣಿ ಎಲಿಜಬೆತ್ II ರ ಸಾವನ್ನು ಕೂಡ ಅವರು ಊಹಿಸಿದ್ದರಯ. ಈ ಎಲ್ಲಾ ಘಟನೆಗಳು ಕಣ್ಣ ಮುಂದೆ ನಿಜವಾಗಿವೆ. ಹೀಗಾಗಿ ಅವರ ಭವಿಷ್ಯವಾಣಿಗಳು ಬಹಳ ಕುತೂಹಲ ಮೂಡಿಸುತ್ತವೆ.



Click it and Unblock the Notifications