Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ವಿಡಿಯೋ KYC ಮೂಲಕ ವಿವಾಹ ನೋಂದಣಿ: ಮದುವೆಗೂ ಆಧುನಿಕ ಟಚ್!
ಟೆಕ್ನಾಲಜಿ ಎಷ್ಟು ಮುಂದುವರೆದಿದೆ ಅನ್ನೋದು ನಿಮಗೆಲ್ಲಾ ತಿಳಿದಿರಬಹುದು. ನಾವಿಂದು ಪ್ರತಿಯೊಂದು ವಿಚಾರದಲ್ಲು ಟೆಕ್ನಾಲಜಿ ಬಳಕೆ ಮಾಡುವುದು ಸಾಮಾನ್ಯ ಎನ್ನುವಂತಾಗಿದೆ. ಮಾನವ ಮಾಡುತ್ತಿದ್ದ ಬಹುತೇಕ ಕೆಲಸಗಳಲ್ಲಿ ಈಗ ತಂತ್ರಜ್ಞಾನ ಬಳಕೆಯಾಗುತ್ತಿದೆ. ಇದು ಎಲ್ಲಾ ಕ್ಷೇತ್ರಕ್ಕೂ ನಿಧಾನವಾಗಿ ಕಾಲಿಡುತ್ತಿದೆ.
ನಿತ್ಯ ಹೊಸ ಹೊಸ ಆವಿಷ್ಕಾರಗಳು, ಹೊಸ ಅನ್ವೇಷಣೆಯೊಂದಿಗೆ ಬರುತ್ತಿರುವ ತಂತ್ರಜ್ಞಾನವು ಎಲ್ಲರ ಕೈಗೂ ಸುಲಭವಾಗಿ ಸಿಗುತ್ತಿದೆ. ಈಗ ಇಲ್ಲೊಂದು ಕಡೆ ಮದುವೆಯು ಕೂಡ ವಿಡಿಯೋ ಕೆವೈಸಿ ಮೂಲಕ ನಡೆದಿದೆ. ನೀವು ಬ್ಯಾಂಕಿಂಗ್ ವ್ಯವಹಾರದಲ್ಲಿ ಅಥವಾ ಹಲವು ಕಡೆಗಳಲ್ಲಿ ಈ ವಿಡಿಯೋ ಕೆವೈಸಿ ತಂತ್ರಜ್ಞಾನ ಬಳಸುವುದು ನೋಡಿರಬಹುದು. ಆದ್ರೆ ಈಗ ಮದುವೆಯಲ್ಲೂ ಈ ತಂತ್ರಜ್ಞಾನ ಬಳಕೆಯಾಗಿದೆ.

ಕೇರಳದಲ್ಲಿ ಇಂತಹ ಅಪರೂಪದ ಮದುವೆಯೊಂದು ನಡೆದಿದೆ. ಲಾವಣ್ಯ ಹಾಗೂ ವಿಷ್ಣು ಎಂಬ ನವ ದಂಪತಿ ವಿಡಿಯೋ ಕೆವೈಸಿ ಮೂಲಕ ತಮ್ಮ ಮದುವೆಯನ್ನು ನೋಂದಣಿ ಮಾಡಿಕೊಂಡಿದ್ದು, ಹೊಸ ರೀತಿಯ ಮೆಚ್ಚುಗೆಗೆ ಪಾತ್ರವಾಗಿದೆ. ಇತ್ತೀಚೆ ಕವಸ್ಸೇರಿಯ ಸ್ಥಳೀಯ ಪಂಚಾಯತ್‌ನಲ್ಲಿ, ನವವಿವಾಹಿತ ದಂಪತಿ K-Smart ನ ವೀಡಿಯೊ KYC ವ್ಯವಸ್ಥೆಯನ್ನು ಬಳಸಿಕೊಂಡು ತಮ್ಮ ವಿವಾಹ ನೋಂದಣಿಯನ್ನು ತಕ್ಷಣವೇ ಪೂರ್ಣಗೊಳಿಸಿದರು, ಅದೇ ದಿನ ಸಂಪೂರ್ಣವಾಗಿ ಪರಿಶೀಲಿಸಿದ ಡಿಜಿಟಲ್ ಪ್ರಮಾಣಪತ್ರವನ್ನು ಸಹ ಪಡೆದರು.
ಈ ಪ್ರಕ್ರಿಯೆಗೆ ವಾರಗಳ ಕಾಲ ತೆಗೆದುಕೊಳ್ಳುತ್ತಿತ್ತು. ಈ ಹೊಸ K-Smart ತಂತ್ರಜ್ಞಾನವು ನಿಮಿಷದಲ್ಲಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಹಾಯ ಮಾಡಲಿದೆ. ಲಾವಣ್ಯ ಮತ್ತು ವಿಷ್ಣು ದಂಪತಿಗಳು ತಮ್ಮ KYC ಪರಿಶೀಲನೆಯನ್ನು ಪೂರ್ಣಗೊಳಿಸಿದ್ದಾರೆ. ಈ ವೀಡಿಯೊವನ್ನು ಎಕ್ಸ್ ನಲ್ಲಿ ಹಂಚಿಕೊಳ್ಳಲಾಗಿದೆ, "ಕೇರಳದ ಕವಸ್ಸೇರಿಯಲ್ಲಿ, ಲಾವಣ್ಯ ಮತ್ತು ವಿಷ್ಣು ವಿವಾಹವಾದರು ಮತ್ತು ವೀಡಿಯೊ KYC ಮೂಲಕ ತಕ್ಷಣವೇ ತಮ್ಮ ಮದುವೆಯನ್ನು ನೋಂದಾಯಿಸಿಕೊಂಡರು" ಎಂಬ ಬರೆದುಕೊಳ್ಳಲಾಗಿದೆ.
ಈ ವೀಡಿಯೊವನ್ನು ಅಕ್ಟೋಬರ್ 23, 2025 ರಂದು ಹಂಚಿಕೊಳ್ಳಲಾಗಿದೆ. ಹಾಗೆ ಈ ವಿಶೇಷ ವಿಡಿಯೋ ನೊಡಿ ಎಲ್ಲರಿಗೂ ಅಚ್ಚರಿಯ ಜೊತೆಗೆ ಟೆಕ್ನಾಲಜಿಯಲ್ಲಿ ಭಾರತ ಮುಂದುವರೆಯುತ್ತಿರುವುದು ಸಂತಸಕ್ಕೂ ಕಾರಣವಾಗಿದೆ. ವಿವಾಹ ಬಳಿಕ ಅವರು ತಮ್ಮ ವಿವಾಹ ನೋಂದಣಿಗೆ ಹಲವು ವಾರ ಕಾಯಬೇಕಿತ್ತು. ಅದರ ಪ್ರಮಾಣ ಪತ್ರ ಪಡೆಯೋದು ಅಂದ್ರೆ ಬಹಳ ಕಷ್ಟದ ಕೆಲಸ ಎಂಬುದಾಗಿಯೂ ಹೇಳಲಾಗಿತ್ತು. ಆದ್ರೆ ಈ ನವದಂಪತಿಗೆ ವಿಡಿಯೋ ಕೆವೈಸಿ ಮೂಲಕ ನಿಮಿಷದಲ್ಲಿ ಅವರ ಭಾವ ಚಿತ್ರವಿರುವ ಪ್ರಮಾಣ ಪತ್ರ ಕೈ ಸೇರಿದೆ.
ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ತ್ವರಿತವಾಗಿ ಎಲ್ಲರ ಗಮನ ಸೆಳೆಯಿತು. ಹಾಗೆ ಎಲ್ಲರೂ ಈ ಸೇವೆಯನ್ನು ಉಳಿದ ರಾಜ್ಯಗಳಿಗೂ ವಿಸ್ತರಿಸುವ ಅಗತ್ಯತೆ ಕುರಿತು ಹೇಳಿಕೊಂಡಿದ್ದಾರೆ. ಹಾಗೆ ಎಲ್ಲರು ಈ ಹೊಸ ತಂತ್ರಜ್ಞಾನವನ್ನು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ, ಇದು ಪ್ರತಿಯೊಂದು ಹಳ್ಳಿಯಲು ಅಗತ್ಯವಾಗಿ ಜಾರಿಯಾಗಬೇಕಾದ ತಂತ್ರಜ್ಞಾನವಾಗಿದೆ ಎಂದಿದ್ದಾರೆ.
ಏಕೆಂದರೆ ಹಳ್ಳಿಗಳಲ್ಲಿ ಅಥವಾ ಪಟ್ಟಣದಲ್ಲಿ ವಿವಾಹ ನೋಂದಣಿ ಪ್ರಮಾಣ ಪತ್ರ ಪಡೆಯಲು ಸರ್ಕಾರಿ ಕಚೇರಿ ಅಲೆದಾಡಬೇಕಿದೆ. ಹಾಗೆ ಕೆಲವು ಕಡೆ ಬ್ರೋಕರ್‌ಗಳನ್ನು ಹಿಡಿದುಕೊಂಡು ಕೆಲಸ ಮಾಡಿಸಿಕೊಳ್ಳಬೇಕಿದೆ. ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು ಇದು ಸುಲಭದ ಮಾರ್ಗವಾಗಿದೆ ಎಂಬುದು ಹಲವರ ಅಭಿಪ್ರಾಯವಾಗಿದೆ.
ಕೆ-ಸ್ಮಾರ್ಟ್ ತಂತ್ರಜ್ಞಾನ ಜಾರಿ ಮಾಡಿದ ಕೇರಳವು ಆರಂಭವಾದಾಗಿನಿಂದ 1.5 ಲಕ್ಷಕ್ಕೂ ಹೆಚ್ಚು ವಿವಾಹ ನೋಂದಣಿಗಳನ್ನು ದಾಖಲಿಸಿದೆ, ಸುಮಾರು 63,000 ವಿವಾಹ ನೋಂದಣಿಯನ್ನು ವೀಡಿಯೊ KYC ಮೂಲಕ ಪೂರ್ಣಗೊಳಿಸಿದೆ. ಸದ್ಯ ಈ ವ್ಯವಸ್ಥೆ ವಿವಾಹ ನೋಂದಣಿಗೆ ಮಾತ್ರ ಸೀಮಿತವಾಗದೆ ಬೇರೆಲ್ಲಾ ಸರ್ಕಾರಿ ದಾಖಲಾತಿಗಳು, ಕೆಲಗಳಲ್ಲಿಯೂ ಬಳಕೆಯಾದರೆ ನಾಗರೀಕರ ಪರದಾಟ ತಪ್ಪಲಿದೆ.



Click it and Unblock the Notifications
