Latest Updates
-
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್
ಆಕಾಶದಲ್ಲಿ ವಿಚಿತ್ರ ಬೆಳಕು ಸೆರೆಹಿಡಿದ ದಂಪತಿ: ನಿಗೂಢ ಬೆಳಕಿನ ಹಿಂದೆ ಹತ್ತಾರು ಕಥೆ!
ಭೂಮಿಯಿಂದ ಆಚೆ ಹೊಸದೊಂದು ಪ್ರಪಂಚವಿದೆ ಅಲ್ಲೊಂದು ಗ್ರಹದಲ್ಲಿ ಜೀವಿಗಳಿವೆ ಎಂದು ನಂಬಲಾಗಿದೆ. ಇದು ಕೇವಲ ಕಾಲ್ಪನಿಕ ಕಥೆಯೋ ಅಥವಾ ಆ ರೀತಿಯ ಸಿದ್ಧಾಂತಿ ನಿಜವಾಗಲು ಇದೆಯೋ ಎಂಬುದು ಇಂದಿಗೂ ನಿಗೂಢವಾಗಿದೆ. ಆಗಾಗ ಯುಎಫ್‌ಓಗಳು ಏಲಿಯನ್ ಕುರಿತ ಚರ್ಚೆಗಳು ಇದಕ್ಕೆ ಪೂರಕವಾಗಿ ನಡೆಯುತ್ತಲೇ ಇರುತ್ತದೆ.
ಬೇರೊಂದು ಗ್ರಹದಲ್ಲಿ ಜೀವಿಗಳಿದ್ದು, ಅವು ನಮಗಿಂತ ಸಾವಿರಾರು ಪಟ್ಟು ಬುದ್ಧಿಶಾಲಿಗಳು ಹಾಗೂ ಅತ್ಯಂತ ಹೆಚ್ಚು ಆಧುನಿಕ ತಂತ್ರಜ್ಞಾನ ಹೊಂದಿರುವ ಜೀವಿಗಳು ಎಂದು ಭಾವಿಸಲಾಗಿದೆ. ಅವು ಆಗಾಗ ಭೂಮಿಗೆ ಬರುತ್ತವೆ ಅಂತಲೂ ನಂಬಲಾಗಿದೆ. ಆದರೆ ಇದಕ್ಕೆ ಸರಿಯಾದ ಪುರಾವೆಗಳು, ಸಾಕ್ಷಿಗಳು ಇಂದಿಗೂ ಸಿಕ್ಕಿಯೇ ಇಲ್ಲ.

ಆದ್ರೆ ಈಗೊಂದು ವಿಡಿಯೋದಲ್ಲಿ ದಂಪತಿ ವಿಚಿತ್ರ ಬೆಳಕಿನ ವಿಡಿಯೋವೊಂದನ್ನು ಸೆರೆ ಹಿಡಿದಿದಿದ್ದಾರೆ. ಕೆನಡಾದ ವಿನ್ನಿಪೆಗ್ ನದಿ ತೀರದಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದೆ. ದೂರದ ಆಕಾಶದಲ್ಲಿ ಲೈಟ್‌ಗಳು ಹೊಳೆಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಜಸ್ಟಿನ್ ಸ್ಟೀವನ್ಸನ್ ಮತ್ತು ಆತನ ಪತ್ನಿ ಡೇನಿಯಲ್ ಡೇನಿಯಲ್ಸ್-ಸ್ಟೀವನ್ಸನ್, ಮೇ 14 ರಂದು ಫೋರ್ಟ್ ಅಲೆಕ್ಸಾಂಡರ್‌ನಿಂದ ತಮ್ಮ ಕಾರಿನಲ್ಲಿ ತೆರಳುವಾಗ ಈ ವಿಚಿತ್ರ ವಿದ್ಯಮಾನವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ರಾತ್ರಿಯ ಸಮಯದಲ್ಲಿ ನದಿಯ ಮತ್ತೊಂದು ತೀರದಲ್ಲಿ ಸೂರ್ಯನಂತೆ ಪ್ರಜ್ವಲಿಸುವ ಬೆಳಕು ಕಂಡು ದಂಪತಿ ಶಾಕ್‌ಗೆ ಒಳಗಾಗಿದ್ದಾರೆ. ನದಿಯ ಉತ್ತರದ ಕಡೆಯಿಂದ ಆ ಬೆಳಕು ದಕ್ಷಿಣದತ್ತ ಸಾಗುತ್ತಿರುವುದು ನೋಡಬಹುದು.
ಆಕಾಶದಲ್ಲಿ ಈ ಬೆಳಕು ಸೂರ್ಯನಂತೆ ಕಾಣಿಸುತ್ತಿದೆ. ಅಲ್ಲದೆ ಎರಡು ಬೆಳಕು ಒಟ್ಟಿಗೆ ಚಲಿಸುತ್ತಿರುವುದು ಸಹ ನಾವು ನೋಡಬಹುದು. "ಆಕಾಶದಲ್ಲಿ ಬೆಂಕಿಯಂತೆ ಸೂಪರ್ ಪ್ರಕಾಶಮಾನವಾಗಿ ಗೋಚರಿಸುತ್ತವೆ' "ಅದು ಏನು ?" ಎಂದು ವಿಡಿಯೋ ರೆಕಾರ್ಡ್ ಮಾಡುವಾಗ ಆತ ಹೇಳಿತ್ತಿರುವುದು ಕೇಳಬಹುದು.
ಇದಕ್ಕೂ ಮೊದಲು ಅಮೆರಿಕದ ಹಲವು ಭಾಗದಲ್ಲಿ ಇದೇ ರೀತಿಯ ಬೆಳಕು ಕಂಡುಬಂದಿರುವುದು ಹಾಗೂ ಅನಾಮಿಕ ವಸ್ತುಗಳ ಹಾರಾಟ ಕಣ್ಣಿಗೆ ಬಿದ್ದಿರುವ ಸಾಕಷ್ಟು ಉದಾಹರಣೆಗಳಿವೆ. ಆದರೆ ಈ ರೀತಿಯಾದ ಬೆಳಕು ಕಂಡಿದ್ದು ಅಪರೂಪದ ಘಟನೆಯಲ್ಲಿ ಒಂದಾಗಿದೆ. ಹೀಗಾಗಿ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ.
ಕೆಲವರು ಈ ವಿಡಿಯೋ ನೋಡಿದ ಬಳಿಕ ಅನ್ಯಗ್ರಹ ಜೀವಿಗಳ ಕುರಿತಾಗಿ ಅಚ್ಚರಿ ಹೊರಹಾಕಿದ್ದಾರೆ. ಮತ್ತೆ ಕೆಲವರು ಇದು ವಿಮಾನ ಅಥವಾ ಸ್ಪೇಸ್ ಎಕ್ಸ್ ಇಲ್ಲವೆ ಯಾವುದಾದರು ಉಪಗ್ರಹ ಉಡಾವಣೆ ಇರಬಹುದು ಎಂದಿದ್ದಾರೆ. ಆದರೆ ಈ ರೀತಿ ಯಾವುದು ಸಹ ಅಲ್ಲಿ ನಡೆದಿರುವ ಸಾಧ್ಯತೆ ಕಡಿಮೆ ಇದೆ. ಒಂದು ವೇಳೆ ಇದು ಲಘು ವಿಮಾನ ಅಥವಾ ಬೇರೆ ಯಾವುದೇ ವಿಮಾನವಾಗಿದ್ದರೆ ಇಷ್ಟೊಂದು ಪ್ರಕಾಶಮಾನವಾದ ಬೆಳಕು ಹೊರಹೊಮ್ಮಲು ಸಾಧ್ಯವಿಲ್ಲ ಎಂಬುದು ಹಲವರ ಮಾತಾಗಿದೆ.
ಮತ್ತೊಬ್ಬ ಬಳಕೆದಾರರು ಈ ಬೆಳಕು ಡ್ರೋನ್ ಅಥವಾ UFO ಆಗಿರಬಹುದು ಎಂದು ಹೇಳಿದ್ದಾರೆ, ಬೇರೊಬ್ಬರು ಹೆಚ್ಚು ತಾರ್ಕಿಕ ವಿವರಣೆಯನ್ನು ನೀಡಿದರು, "ಹವಾಮಾನ ಬಲೂನ್‌ನಿಂದ ಜೌಗು ಅನಿಲವು ಥರ್ಮಲ್ ಪಾಕೆಟ್‌ನಲ್ಲಿ ಸಿಕ್ಕಿಬಿದ್ದಿದೆ ಮತ್ತು ಶುಕ್ರದಿಂದ ಬೆಳಕನ್ನು ವಕ್ರೀಭವನಗೊಳಿಸುತ್ತದೆ" ಎಂದು ವಿವರಿಸಿದ್ದಾರೆ. ಆದರೆ ಈ ರೀತಿ ವಿದ್ಯಮಾನದ ಸಾಧ್ಯತೆ ತೀರ ಅಪರೂಪ.
2023ರಲ್ಲಿ ಈ ರೀತಿ ವಸ್ತುಗಳು ಅಥವಾ ನಿಗೂಢ ರೀತಿಯ ಬೆಳಕು, ವಾಹನ ಕನಿಷ್ಠ 17 ಬಾರಿ ಕಾಣಿಸಿರುವ ವರದಿ ಇದೆ. ಅದು ಸಹ ಕೇವಲ ಕೆನಡಾವೊಂದರಲ್ಲಿಯೇ ಇಷ್ಟೊಂದು ಪ್ರಕರಣ ವರದಿಯಾಗಿದೆ. ಇದರಲ್ಲಿ ಕೆಲವೊಂದು ಪ್ರಕರಣ ವಿಮಾನದ ಪೈಲೆಟ್‌ಗಳು, ಸೇರಿ ವಿಶ್ವಾಸಾರ್ಹ ಮೂಲದಿಂದಲೂ ವರದಿಯಾಗಿದೆ. ಈ ಎಲ್ಲಾ ವರದಿಗಳು ಟ್ರಾನ್ಸ್‌ಪೋರ್ಟ್ ಕೆನಡಾ ನಿರ್ವಹಿಸುವ ಆನ್‌ಲೈನ್ ವಾಯುಯಾನ ಘಟನೆಯ ಡೇಟಾಬೇಸ್‌ನಲ್ಲಿ ದಾಖಲಿಸಲಾಗುತ್ತದೆ.



Click it and Unblock the Notifications