Latest Updates
-
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು?
ವಿಶ್ರಾಂತಿಗೆಂದು ಸಮುದ್ರ ತೀರಕ್ಕೆ ಬಂದ ದಂಪತಿ..! ಕ್ವಿಕ್ ಸ್ಯಾಂಡ್‌ಗೆ ಸಿಲುಕಿದ ಪತ್ನಿ
ನೀವು ಕ್ವಿಕ್ ಸ್ಯಾಂಡ್ ಬಗ್ಗೆ ಕೇಳಿರುತ್ತೀರಿ. ಅಂದ್ರೆ ಆ ಜಾಗದಲ್ಲಿ ಮಣ್ಣು ಅತ್ಯಂತ ಮೃದುವಾಗಿರುತ್ತೆ. ಅಂದರೆ ಅದರ ಮೇಲೆ ನಿಂವು ನಿಂತರೆ ಅಲ್ಲಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಏಕೆಂದರೆ ಈ ಮರಳು ನಿಮ್ಮನ್ನು ಒಳಗೆ ಎಳೆದುಕೊಳ್ಳುತ್ತದೆ. ಅದರಿಂದ ಹೊರಬರಲು ಸಹ ಸಾಧ್ಯವಾಗುವುದಿಲ್ಲ. ನಾವು ಈ ರೀತಿ ಕ್ವಿಕ್ ಸ್ಯಾಂಡ್ ಘಟನೆಯನ್ನ ಸಿನಿಮಾಗಳಲ್ಲಿ ನೋಡಿರಬಹುದು.
ಆದ್ರೆ ಇಲ್ಲೊಂದು ಕಡೆ ನಿಜ ಜೀನದಲ್ಲೂ ನಡೆದಿದ್ದು, ಸಮುದ್ರ ದಡದಲ್ಲಿ ವಿಶ್ರಾಂತಿಗೆಂದು ತೆರಳಿದ್ದ ದಂಪತಿ ಕ್ವಿಕ್ ಸ್ಯಾಂಡ್‌ಗೆ ಸಿಲುಕಿದ್ದ ಘಟನೆ ನಡೆದಿದೆ. ವೀಕೆಂಡ್‌ನಲ್ಲಿ ಸಮುದ್ರ ತೀರಕ್ಕೆ ಪ್ರವಾಸ ಹೊರಟ್ಟಿದ್ದಾಗ ಈ ಘಟನೆ ನಡೆದಿದೆ. ಪ್ಯಾಟ್ರಿಕ್ ಮತ್ತು ಜೇಮೀ ಅಕಾರ್ಡ್ ಅವರು ಮೈನೆನ ಫಿಪ್ಸ್‌ಬರ್ಗ್‌ನಲ್ಲಿರುವ ಪೋಫಮ್ ಬೀಚ್ ಸ್ಟೇಟ್ ಪಾರ್ಕ್‌ನಲ್ಲಿ ನೀರಿನ ಅಂಚಿನಲ್ಲಿ ನಡೆದುಕೊಂಡು ಹೋಗುತ್ತಿದ್ದರು, ಈ ವೇಳೆ ಸೊಂಟದಷ್ಟು ಆಳದ ಗುಂಡಿಯಲ್ಲಿ ಸಿಲುಕಿದ್ದಾಳೆ ಎಂದು ತಿಳಿದುಬಂದಿದೆ.

ಪ್ಯಾಟ್ರಿಕ್ ಜೇಮಿಯನ್ನು ಮರಳಿನ ಗುಂಡಿಯಿಂದ ಆತ ಹರಸಾಹಸ ಪಟ್ಟು ಮೇಲೆ ಎತ್ತಿದ್ದಾನೆ. ಆತ ನನ್ನನ್ನು ಹೊರಗೆಳೆದ ತಕ್ಷಣ, ಏನಾಯಿತು ಎಂದು ನೋಡಲು ನಾವು ತಿರುಗಿದೆವು ಏಕೆಂದರೆ ನಾನು ನಿಜವಾಗಲೂ ಗುಂಡಿಯಲ್ಲಿ ಬಿದ್ದಿದ್ದೆ ಆದರೆ ಏನಾಯಿತು ತಿಳಿಯಲಿಲ್ಲ ಎಂದುದ್ದಾಳೆ.
ಸೂಪರ್‌ಸ್ಯಾಚುರೇಟೆಡ್ ಮರಳು ಎಂದೂ ಕರೆಯಲ್ಪಡುವ ಕ್ವಿಕ್‌ಸಾಂಡ್ ನಿಮ್ಮನ್ನು ಸಂಪೂರ್ಣವಾಗಿ ಮುಳುಗಿಸುವುದಿಲ್ಲ. ಆದರೆ ಈ ಸಮುದ್ರ ತೀರದ ಕ್ವಿಕ್ ಸ್ಯಾಂಡ್ ಸಹ ಹೂದಲು ಮಣ್ಣಿನಂತೆ ಕಂಡರು ದೊಡ್ಡ ರಂಧ್ರ ಇರುವುದಿಲ್ಲ. ಇದರಲ್ಲಿ ಒಂದು ರಂಧ್ರವಷ್ಟೇ ನಿರ್ಮಾಣವಾಗಿತ್ತದೆ ಎಂದು ತಿಳಿದುಬಂದಿದೆ.
ಪ್ರತಿ ವರ್ಷ 2,25,000 ಕ್ಕೂ ಹೆಚ್ಚು ಜನರು ಪೋಫಮ್ ಬೀಚ್ ಸ್ಟೇಟ್ ಪಾರ್ಕ್‌ಗೆ ಭೇಟಿ ನೀಡುತ್ತಾರೆ. ಈ ಸಮುದ್ರದಲ್ಲಿ ಇದಕ್ಕೂ ಮೊದಲು ಸಹ ಕ್ಬಿಕ್ ಸ್ಯಾಂಡ್ ಘಟನೆಗಳು ನಡೆದಿದೆಯಂತೆ. ಅಂದರೆ ಇಲ್ಲಿನ ವಾತಾವರಣದಲ್ಲಿನ ಬದಲಾವಣೆ ಈ ರೀತಿಯ ಘಟನೆಗೆ ಕಾರಣವಾಗಿದೆಯಂತೆ.
ಸಮುದ್ರ ತೀರದಲ್ಲಿ ಆಗಿದ್ದೇನು?
ವಾರಾಂತ್ಯದ ಕಾರಣದಿಂದಾಗಿ ದಂಪತಿ ಸಮುದ್ರ ತೀರಕ್ಕೆ ಬಂದಿದ್ದರು. ಅಲ್ಲಿ ನಡೆದುಕೊಂಡು ಹೋಗುವಾಗ ಪ್ಯಾಟ್ರಿಕ್ ಪತ್ನಿ ಜೇಮೀ ಅಕಾರ್ಡ್ ಏಕಾಏಕಿ ಮರಳಿನ ಗುಂಡಿಯೊಳಗೆ ಬಿದ್ದಿದ್ದಾಳೆ. ಇದು ಕ್ವಿಕ್ ಸ್ಯಾಂಡ್ ಎಂದು ಆತನ ಗನಮಕ್ಕೆ ಬಂದಿದೆ. ತಕ್ಷಣವೇ ಆತ ಆಕೆಯನ್ನು ಮೇಲೆ ಎತ್ತಲು ಮುಂದಾಗಿದ್ದಾನೆ.
ಏಕೆಂದರೆ ಈ ಗುಂಡಿಗೆ ಬಿದ್ದಾಗ ನೀವು ತಕ್ಷಣ ಕಾರ್ಯಪ್ರವೃತ್ತರಾಗದಿದ್ದರೆ ಅವರ ಜೀವಕ್ಕೆ ಕುತ್ತು ಬರಬಹುದು, ಅವರು ಮತ್ತಷ್ಟು ನೆಲದೊಳಗೆ ಹೋಗಬಹುದು, ಆತ ಒಂದು ಕೈ ಹಿಡಿದು ಆಕೆಯನ್ನು ಮೇಲಕ್ಕೆ ಎಳೆದಿದ್ದಾನೆ. ಆಕೆ ಸುರಕ್ಷಿತವಾಗಿ ಗುಂಡಿಯಿಂದ ಮೇಲೆದ್ದು ಬಂದಿದ್ದಾಳೆ.
ಈ ಘಟನೆಯ ಬಳಿಕ ಪೋಫಮ್ ಬೀಚ್‌ನಲ್ಲಿ ಆತಂಕ ಸೃಷ್ಟಿಯಾಗಿತ್ತು, ಈ ರೀತಿ ಎಲ್ಲೆಲ್ಲಿ ಕ್ವಿಕ್ ಸ್ಯಾಂಡ್ ನಿರ್ಮಾಣವಾಗಿದೆ ಎಂದು ಜನರು ಆತಂಕಕ್ಕೆ ಒಳಗಾಗಿದ್ದರೆ. ಆದರೆ ಅದಾಗಲೇ ಸಂಜೆಯಾಗಿದ್ದ ಹಿನ್ನೆಲೆ ಬೀಚ್ ಬಳಿ ಕೆಲವೇ ಕೆಲವು ಮಂದಿ ಇದ್ದರು. ಆದರೆ ಈ ಘಟನೆಯ ಬಳಿಕ ಈ ಸಮುದ್ರ ತೀರದಲ್ಲಿ ಜನರ ಸಂಖ್ಯೆ ಕಡಿಮೆಯಾಗಿದೆಯಂತೆ.



Click it and Unblock the Notifications
