Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮನುಕುಲವನ್ನೇ ನಾಶ ಮಾಡಲಿದ್ಯಾ AI..? ವಿಜ್ಞಾನಿಗಳು ತೆರೆದಿಟ್ಟರು ಭಯಾನಕತೆ..!
ನಾವು ಡಿಜಿಟಲ್ ಯುಗದಿಂದ ನಿಧಾನವಾಗಿ AI ಯುಗಕ್ಕೆ ಕಾಲಿಡುತ್ತಿದ್ದೇವೆ. AI ಅಂದರೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಕೃತಕ ಬುದ್ಧಿಮತ್ತೆ ಎನ್ನಲಾಗುತ್ತದೆ. ಇನ್ನು ಸರಳವಾಗಿ ಹೇಳೋದಾದ್ರೆ ನಾವು ನೀವು ಮಾಡುತ್ತಿರೋ ಕೆಲಸಾನ ಬೇರೊಂದು ಯಂತ್ರ ಮಾಡಲು ಆರಂಭಿಸೋದು. ಆದ್ರೆ ಕೃತಕ ಬುದ್ಧಿಮತ್ತೆ ಯಾವಾಗಲೂ ರೋಬೋಟ್‌ನಂತೆ ಇರಬೇಕು ಅಂತ ಏನಿಲ್ಲ ಅದು ತಾವ ರೂಪದಲ್ಲಾದರು ಇರಬಹುದು.
ಈ ಎಐ ಯುಗ ಆರಂಭವಾಗಿ ದಶಕಗಳೇನು ಉರುಳಿಲ್ಲ. ಕೇವಲ ಮೂರ್ನಾಲ್ಕು ವರ್ಷವಾಗಿದೆ ಅಷ್ಟೇ. ಆದ್ರೆ ಈ ವಲಯದಲ್ಲಿ ನಿತ್ಯವು ಮಹತ್ವದ ಬದಲಾವಣೆಯಾಗುತ್ತಿವೆ. ಅದರಲ್ಲೂ ಯಾವು ಊಹಿಸದಷ್ಟು ವೇಗವಾಗಿ ಈ ತಂತ್ರಜ್ಞಾನ ಬೆಳೆಯುತ್ತಿದೆ. ನಾವು, ನೀವು ಮಾಡುವ ಕೆಲಸವನ್ನು ಬೇರೆಯವರು ಮಾಡುತ್ತಾರೆ ಅವರೇ ಎಲ್ಲವನ್ನೂ ನಿರ್ವಹಿಸುತ್ತಾರೆ ಎಂದರೆ ಎಷ್ಟು ವಿಚಿತ್ರ ಎನಿಸುತ್ತೆ ಅಲ್ವಾ.? ಇದಕ್ಕೆ ಉದಾಹರಣೆ ಎಂದರೆ ಇತ್ತೀಚಿಗಷ್ಟೇ ಕೆಲವು ಟಿವಿ ಚಾನಲ್‌ಗಳು ಎಐ ಆಂಕರ್‌ಗಳ ಪರಿಚಯಿಸಿದ್ದವು, ಅವು ಸಾಮಾನ್ಯರಂತೆ ವಾರ್ತೆಗಳ ಪ್ರಸ್ತುತಪಡಿಸುತ್ತಿದ್ದವು.

ಆದ್ರೆ ಆರಂಭದಲ್ಲೇ ಈ ತಂತ್ರಜ್ಞಾನವು ಮಾನವ ಕುಲಕ್ಕೆ ದೊಡ್ಡ ಆತಂಕ ತಂದೊಡ್ಡಿದೆ. ಅದೇನಂದ್ರೆ ಹಿಂದೊಮ್ಮೆ ಉಲ್ಕಾಘಾತ ಉಂಟಾಗಿ ಡೈನೋಸಾರ್ ಯುಗವೇ ನಾಶವಾದಂತೆ ಈ ಎಐನಿಂದ ಮಾನವ ಕುಲ ನಾಶವಾಗಲಿದ್ಯಾ ಎಂಬ ಪ್ರಶ್ನೆಯೊಂದು ಇಡೀ ಜಗತ್ತಿನ ಮುಂದೆ ನಿಂತಿದೆ. ಈ ಪ್ರಶ್ನೆಗೆ ವಿಜ್ಞಾನಿಗಳು ಉತ್ತರ ಹುಡುಕುವ ಯತ್ನವನ್ನೂ ಮಾಡಿ ಮುಗಿಸಿದ್ದಾರೆ.
ಮಾನವರು ಡೈನೋಸಾರ್‌ಗಳಂತೆಯೇ ಅದೇ ಅಪಾಯ ಎದುರಿಸಬಹುದೇ?
ಕೃತಕ ಬುದ್ಧಿಮತ್ತೆಯಿಂದ ಸಂಭವನೀಯ ಅಪಾಯದ ಸುತ್ತ ಇನ್ನೂ ಸಾಕಷ್ಟು ಅನಿಶ್ಚಿತತೆಯಿದ್ದರೂ, ಕೆಲವು ತಜ್ಞರು AI ಮಾನವಕುಲದ ಅವನತಿಗೆ ಕಾರಣವಾಗಬಹುದು ಎಂದು ಕೆಲವು ಕಾಳಜಿಗಳನ್ನು ಹೊಂದಿದ್ದಾರೆ. ಆದರೆ AI ಇನ್ನು ಮುಂದಿನ 20 ವರ್ಷದ ಬಳಿಕ ಮಾನವನಿಗೆ ಶೇ.50ರಷ್ಟು ಅಪಾಯಕಾರಿಯಾಗಿ ಬೆಳೆಯಬಹುದು ಎಂದು ಅಂದಾಜಿಸಿದ್ದಾರೆ.
2,778 AI ಸಂಶೋಧಕರನ್ನು ಸಮೀಕ್ಷೆಗೆ ಒಳಪಡಿಸಿದ ಒಂದು ಪತ್ರಿಕೆಯ ಪ್ರಕಾರ, ಬಹುಪಾಲು ವಿಜ್ಞಾನಿಗಳು (58%) ಮಾನವನ ಅಳಿವಿನ ಸಾಧ್ಯತೆ ಅಥವಾ AI ನಿಂದ ಸಂಭವಿಸಬಹುದಾದ ದುರಂತ ಕೇವಲ ಶೇ.5ರಷ್ಟು ಮಾತ್ರ ಎಂದಿದ್ದಾರೆ.
ನಾವಿಲ್ಲಿ ಗಮನಿಸಬೇಕಾದ ಅಂಶವೇನೆಂದರೆ ಕೃತಕ ಬುದ್ಧಿ ಮತ್ತೆಯಿಂದ ಮಾನವ ಕುಲಕ್ಕೆ ಯಾವುದೇ ಅಪಾಯವಿಲ್ಲ ಎಂದು ಅಲ್ಲಗೆಳೆಯಲು ಸಾಧ್ಯವೇ ಇಲ್ಲ. ಇಂದು ಆ ರೀತಿಯ ಯಾವ ಘಟನೆಗಳು ನಡೆಯದಿದ್ದರೂ ಮುಂದೊಂದು ದಿನ ನಡೆಯಲಿದೆ ಎಂಬುದು ವಿಜ್ಞಾನಿಗಳ ವಾದವಾಗಿದೆ.
ನಮ್ಮ ಯಾವ ಕೆಲಸ ಎಐ ಮಾಡಲಿದೆ
ಈಗಾಗಲೆ ಎಐ ಹತ್ತು ಹಲವು ಕ್ಷೇತ್ರದಲ್ಲಿ ತನ್ನ ಬಾಹು ಚಾಚಿದೆ. ಕೋಡಿಂಗ್ ನಮಗಿಂತಲೂ ಹೆಚ್ಚು ವೇಗವಾಗಿ ಮಾಡುವ ಮತ್ತು ಅತ್ಯಂತ ನಿಖರವಾಗಿ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಯಾವುದಾದರು ಹಾಡಿಗೆ ಸ್ವಯಂ ಸಂಗೀತ ಸಂಯೋಜನೆ ಮಾಡುತ್ತಿದೆ. ನಿಮಗೆ ಬೇಕಾದ ಕಥೆ, ಹೊಸ ಕಥೆ, ಔಷಧಿ ಬರವಣಿಗೆ ಹೀಗೆ ಸಣ್ಣ ಪುಟ್ಟ ಕೆಲಸಗಳನ್ನು ಚಿಟಿಕೆ ಹೊಡೆಯುವ ಒಳಗೆ ಮಾಡಿ ಮುಗಿಸಿರುತ್ತದೆ.
ಆದರೆ ಎಐಗೆ ವಿದ್ಯುತ್ ವೈರಿಂಗ್‌ಗಳು, ಕ್ಲಿಷ್ಟ ಗಣಿತದ ಮಾದರಿ ಬಿಡಿಸುವುದು ಇನ್ನೂ ಸುಲಭವಾಗಿಲ್ಲ. ಮುಂದಿನ 20 ವರ್ಷವಾದರೂ ಈ ಕೆಲಸ ಸುಲಭವಾಗಿಸಬಹುದೇ ವಿನಃ ನಮಗಿಂತ ವಿಶಿಷ್ಟವಾಗಿ ಮಾಡಲಿದೆ ಎಂಬ ನಿರೀಕ್ಷೆಯಿಲ್ಲ. 2047 ರ ವೇಳೆಗೆ ಪ್ರತಿ ಕಾರ್ಯದಲ್ಲಿ AI ಮಾನವರನ್ನು ಮೀರಿಸುವ ಸಾಧ್ಯತೆಯನ್ನು ಎಂದು ಶೇ.50ರಷ್ಟು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಇದಲ್ಲದೆ 2116ರ ವೇಳೆಗೆ ಎಲ್ಲಾ ಮಾನವ ಉದ್ಯೋಗಗಳು ಸಂಪೂರ್ಣವಾಗಿ ಸ್ವಯಂಚಾಲಿತವಾಗುವ ಸಾಧ್ಯತೆಗಳು 50% ಆಗಿದೆ. ಆದಾಗ್ಯೂ, ಎರಡೂ ಅಂದಾಜುಗಳು ಒಂದೇ ಸಮೀಕ್ಷೆಯ 2022 ಆವೃತ್ತಿಯಲ್ಲಿ ನೀಡಿದ್ದಕ್ಕಿಂತ ಹಿಂದಿನವುಗಳಾಗಿವೆ.



Click it and Unblock the Notifications
