Latest Updates
-
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ!
ಸೆಪ್ಟೆಂಬರ್‌ನಲ್ಲಿ ಒಟಿಟಿಗೆ ಕೂಲಿ, ಸು ಫ್ರಮ್ ಸೋ: ಯಾವಾಗ? ಎಲ್ಲಿ ನೋಡಬಹುದು?
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಆಕ್ಷನ್ ಸಿನಿಮಾ ಕೂಲಿ ಚಿತ್ರಮಂದಿರಲ್ಲಿ ಕೋಟಿ ಲೆಕ್ಕದಲ್ಲಿ ಕಲೆಕ್ಷನ್ ಮಾಡಿದೆ. ಹಾಗೆ ಚಿತ್ರದಲ್ಲಿ ಬಹುಭಾಷ ನಟರಿದ್ದ ಕಾರಣ ರಿಲೀಸ್ ಆದ ಎಲ್ಲಾ ಕಡೆಯೂ ಉತ್ತಮ ಪ್ರದರ್ಶನ ಕಂಡಿದೆ. ಸದ್ಯ ಕೂಲಿ ಸಿನಿಮಾ ಈಗ ಒಟಿಟಿ ರಿಲೀಸ್‌ಗೆ ಸಿದ್ದವಾಗಿದೆ. ಸಿನಿಮಾ ರಿಲೀಸ್ ಆಗಿ ಇನ್ನು ಹಲವು ಕಡೆ ಪ್ರದರ್ಶನ ಕಾಣುತ್ತಿರುವ ನಡುವೆಯೂ ಒಟಿಟಿ ರಿಲೀಸ್ ಕುರಿತಾದ ಸುದ್ದಿಗಳು ಹರಿದಾಡುತ್ತಿವೆ.
ಲೋಕೇಶ್ ಕನಕರಾಜ್ ನಿರ್ದೇಶನದ ಕೂಲಿ ಚಿತ್ರದಲ್ಲಿ ರಜನಿಕಾಂತ್, ಆಮಿರ್ ಖಾನ್, ರಿಯಲ್ ಸ್ಟಾರ್ ಉಪೇಂದ್ರ, ನಾಗಾರ್ಜುನ, ಸೌಬಿನ್ ಶಾಹಿರ್, ರಚಿತಾ ರಾಮ್ ಸೇರಿ ಹಲವರು ನಟಿಸಿದ್ದರು. ಬಾಕ್ಸ್ ಆಫಿಸ್‌ನಲ್ಲಿ 500 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿರುವ ಸಿನಿಮಾ ಸದ್ಯ ಈಗ ಒಟಿಟಿಗೆ ಬರಲು ಸಿದ್ದತೆ ನಡೆಸಿದೆ.

ಕೂಲಿ ಸಿನಿಮಾದ ಡಿಜಿಟಲ್ ಒಟಿಟಿ ಹಕ್ಕನ್ನು ಅಮೇಜಾನ್ ಪ್ರೈಮ್ ವಿಡಿಯೋ ಪಡೆದುಕೊಂಡಿದೆ ಎಂದು ವರದಿಯಾಗಿದೆ. ಹಾಗೆ ಈ ಸಿನಿಮಾವು ಸೆ್ಪ್ಟೆಂಬರ್ 11ರಂದು ಒಟಿಟಿಯಲ್ಲಿ ರಿಲೀಸ್ ಆಗಲಿದೆ ಎಂದು ತಿಳಿದುಬಂದಿದೆ. ಚಿತ್ರವು ಚಿತ್ರಮಂದಿರದಲ್ಲಿ ಬಿಡುಗಡೆಯಾದ ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಒಟಿಟಿಗೆ ಲಗ್ಗೆ ಇಡುತ್ತಿದೆ. ಆದ್ರೆ ಪ್ರೈಮ್‌ನಲ್ಲಿ ರಿಲೀಸ್ ಆಗುತ್ತಿರುವ ಕುರಿತಾಗಿ ಅಧಿಕೃತ ಮಾಹಿತಿಗಳು ಹೊರಬಿದ್ದಿಲ್ಲ.
ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಲಾಗದೆ ಇದ್ದವರು, ಹಾಗೆ ಒಮ್ಮೆ ನೋಡಿದವರು ಕೂಡ ಈಗ ಒಟಿಟಿ ರಿಲೀಸ್‌ಗಾಗಿ ಕಾಯುತ್ತಿದ್ದಾರೆ. ಚಿತ್ರಮಂದಿರದಲ್ಲಿ ರಿಲೀಸ್ ಆದಾಗ ಮಾಡಿದ್ದಂತಹ ಹೈಪ್ ಅನ್ನೇ ಒಟಿಟಿ ರಿಲೀಸ್ ವೇಳೆಯು ಕಾಯ್ದುಕೊಂಡಿದೆ. ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿ ಎಲ್ಲಾ ವರ್ಗದ ಜನರಿಗೆ ಇಷ್ಟವಾಗಿದೆ. ಆದ್ರೆ ಎ ಸರ್ಟಿಫಿಕೆಟ್ ಪಡೆದಿರುವ ಕಾರಣ ಒಂದಿಷ್ಟು ಹಿನ್ನಡೆ ಅನುಭವಿಸಿದ್ದು ಸಹ ನೋಡಬಹುದು.
ಸು ಫ್ರಮ್ ಸೋ ಕೂಡ ಒಟಿಟಿಗೆ
ಈ ವರ್ಷ ಬಿಡುಗಡೆಯಾಗಿ ಅಚ್ಚರಿಯ ಫಲಿತಾಂಶದ ಜೊತೆಗೆ ಬಾಕ್ಸ್ ಆಫೀಸ್ ಲೆಕ್ಕಾಚಾರವನ್ನೇಲ್ಲ ಬುಡಮೇಲು ಮಾಡಿದ್ದ ಸಿನಿಮಾ ಸು ಫ್ರಮ್ ಸೋ. ಈ ಸಿನಿಮಾ ಬಿಡುಗಡೆಯಾದಾಗ ದೊಡ್ಡ ಸಿನಿಮಾಗಳಿಗೂ ಸೆಡ್ಡು ಹೊಡೆದು ಎಲ್ಲಾ ಕಡೆಯೂ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಕೇವಲ 5 ಕೋಟಿ ರೂಪಾಯಿ ಬಜೆಟ್‌ನಲ್ಲಿ ಸಿದ್ದಗೊಂಡ ಸಿನಿಮಾವು ಬರೋಬ್ಬರಿ 90ರಿಂದ 100 ಕೋಟಿ ರೂಪಾಯಿ ಗಳಿಕೆ ಕಂಡಿತು ಎಂದು ವರದಿಯಾಗಿದೆ.
ಸಿನಿಮಾದಲ್ಲಿದ್ದ ಕ್ಲೀನ್ ಕಾಮಿಡಿಯನ್ನು ಜನರು ಕೂಡ ಮೆಚ್ಚಿಕೊಂಡಿದ್ದರು. ಹಾಗೆ ರಿಲೀಸ್ ಎಲ್ಲಾ ಕಡೆಯೂ ಹೌಸ್‌ಫುಲ್ ಪ್ರದರ್ಶನದೊಂದಿಗೆ ಕಲೆಕ್ಷನ್ ಕೂಡ ಡಬಲ್ ಆಗಿತ್ತು. ಸದ್ಯ ಈ ಸಿನಿಮಾ ಈಗ ಒಟಿಟಿಗೆ ಲಗ್ಗೆ ಇಡಲು ಮುಂದಾಗಿದೆ. ಜುಲೈ 25ರಂದು ರಿಲೀಸ್ ಆಗಿದ್ದ ಸಿನಿಮಾ ಈ ಸೆಪ್ಟೆಂಬರ್ 05 ಅಥವಾ 08ರಂದು ಒಟಿಟಿ ರಿಲೀಸ್ ಆಗಬಹುದು ಎಂದು ಅಂದಾಜಿಸಲಾಗಿದೆ. ಜಿಯೋ ಹಾಟ್‌ಸ್ಟಾರ್‌ನಲ್ಲಿ ಸೂಪರ್ ಹಿಟ್ ಸಿನಿಮಾ ವೀಕ್ಷಿಸಬಹುದು.
ರಾಜ್ ಬಿ ಶೆಟ್ಟಿ ನಿರ್ಮಿಸಿ ನಟಿಸಿದ್ದ ಸು ಫ್ರಮ್ ಸೋ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆದಿದೆ. ಸ್ಟಾರ್ ನಟರಿಲ್ಲದೆ ಕ್ಲೀನ್ ಕಾಮಿಡಿಯಿಂದ ಮನಗೆದ್ದ ಸಿನಿಮಾ ಬೇರೆ ಭಾಷೆಗಳಿಲ್ಲೂ ರಿಲೀಸ್ ಆಗಿ ಪ್ರಶಂಸೆ ಪಡೆಯಿತು. ಈಗ ಒಟಿಟಿ ಮೂಲಕ ಮತ್ತೆ ಸಿನಿ ಪ್ರೇಮಿಗಳ ಎದುರು ಬರಲು ಸಿದ್ದವಾಗಿದೆ. ಅಜಯ್ ದೇವಗನ್, ಕಿಚ್ಚ ಸುದೀಪ್ ಸೇರಿದಂತೆ ಖ್ಯಾತನಾಮರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಸದ್ಯ ಒಟಿಟಿಗೆ ಯಾವಾಗ ಬರಲಿದೆ ಎಂಬ ಅಭಿಮಾನಿಗಳ ಬಯಕೆಗೆ ಈಗ ಅಂತ್ಯ ಬಿದ್ದಿದೆ.



Click it and Unblock the Notifications

