Latest Updates
-
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್
ಸೈನಿಕನ ಮದುವೆಯಾದ ಒಂದೇ ದೇಹ ಎರಡು ತಲೆಯ ಸಹೋದರಿಯರು..!
ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಅನ್ನೋ ಮಾತಿದೆ. ಯಾಕಂದ್ರೆ ನಾವು ನಿಶ್ಚಯಿಸುವ ಮೊದಲೇ ಸ್ವರ್ಗಲೋಕದಲ್ಲಿ ಮದುವೆ ನಿಶ್ಚಯವಾಗಿರುತ್ತೆ ಅದನ್ನು ತಪ್ಪಿಸಲು ಯಾರಿಂದ ಸಾಧ್ಯವಿಲ್ಲ ಅನ್ನೋದು ಈ ಮಾತಿನ ತಾತ್ಪರ್ಯವಾಗಿದೆ. ಆದ್ರೆ ಇಲ್ಲೊಂದು ಜೋಡಿಯ ವಿವಾಹ ನೋಡಿದರೆ ನಿಮಗೂ ಆಶ್ಚರ್ಯವಾಗುತ್ತದೆ.
ಅಬ್ಬಿ ಹೆನ್ಸೆಲ್ ಎಂಬ ಇಬ್ಬರು ಸಹೋದರಿಯರು ಒಬ್ಬನನ್ನೇ ವಿವಾಹವಾಗಿದ್ದಾರೆ. ಒಬ್ಬನನ್ನೇ ವಿವಾಹವಾಗಲೂ ಅವರಿಗೆ ಕಾರಣವೂ ಇದೆ. ಅವರಿಗೆ ಒಂದೇ ದೇಹ ಎರಡು ತಲೆಗಳಿರುವ ಅಪರೂಪದ ದೇಹವದು. ಹೀಗಾಗಿ ಇಬ್ಬರೂ ಒಬ್ಬನನ್ನೇ ವಿವಾಗವಾಗಿದ್ದಾರೆ. ಅವರು 1996ರಲ್ಲಿ ದಿ ಓಪ್ರಾ ವಿನ್‌ಫ್ರೇ ಶೋನಲ್ಲಿ ಕಾಣಿಸಿಕೊಂಡ ಬಳಿಕ ವಿಶ್ವದೆಲ್ಲೆಡೆ ಫೇಮಸ್ ಆಗಿದ್ದರು.

ಅವರು ಅಮೆರಿಕದ ಸ್ಟೇಟ್ಸ್ ಆರ್ಮಿ ನಿವೃತ್ತಾ ಸೈನಿಕ ಜೋಶ್ ಬೌಲಿಂಗ್ ಎಂಬಾತನನ್ನು ವಿವಾಹವಾಗಿದ್ದಾರೆ. ಹೆನ್ಸೆಲ್‌ಗಳ ಫೇಸ್‌ಬುಕ್ ಪ್ರೊಫೈಲ್ ಫೋಟೋದಲ್ಲಿ ಅವರ ಮದುವೆಯ ಚಿತ್ರಗಳನ್ನು ಹಂಚಿಕೊಂಡಿದ್ದಾಳೆ. ಆಕೆ ಈಗ ಸ್ಟೇಟ್ಸ್‌ನ 5ನೇ ದರ್ಜೆ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.
ಅಬ್ಬಿ ಮತ್ತು ಬ್ರಿಟಾನಿ ಹೆನ್ಸೆಲ್ ಡಿಸೆಫಾಲಸ್ ಸಂಯೋಜಿತ ಅವಳಿಗಳಾಗಿದ್ದು, ಒಂದೇ ಹೃದಯದಿಂದ ಎಲ್ಲಾ ರಕ್ತನಾಳಗಳು ಎಲ್ಲಾ ಭಾಗಗಳು ಒಂದೇ ಆಗಿವೆ. ಆದರೆ ತಲೆ ಮಾತ್ರ ಬೇರೆ ಬೇರೆಯಾಗಿದ್ದು, ವೈದ್ಯಕೀಯ ಲೋಕದ ಅಚ್ಚರಿಯಾಗಿದ್ದಾರೆ. ಆದ್ರೆ ಅಬ್ಬಿ ಅವರ ಬಲಗೈ ಮತ್ತು ಕಾಲನ್ನು ನಿಯಂತ್ರಿಸಿದರೆ, ಬ್ರಿಟಾನಿ ಎಡವನ್ನು ನಿಯಂತ್ರಿಸುತ್ತಾರೆ.
ಅಬ್ಬಿ ಮತ್ತು ಬ್ರಿಟಾನಿ ಹೆನ್ಸೆಲ್ 1990 ರಲ್ಲಿ ಜನಿಸಿದರು. ಅವರ ಜನನದ ಸಮಯದಲ್ಲಿ, ಅವರ ಪೋಷಕರು - ಪ್ಯಾಟಿ ಮತ್ತು ಮೈಕ್ ಹೆನ್ಸೆಲ್ - ಈ ರೀತಿಯ ಮಕ್ಕಳಿಗೆ ಜನ್ಮ ನೀಡಿದ್ದರು. ಅಂದು ಇಬ್ಬರನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಬೇರ್ಪಡಿಸಲು ಮುಂದಾಗಲಾಗಿತ್ತಾದರೂ ಇದರಿಂದ ಆಗುವ ಅಪಾಯ ಮತ್ತು ಗಣನೀಯವಾಗಿ ವೈದ್ಯರು ಸಹ ಶಿಫಾರಸು ಮಾಡದ ಕಾರಣ ಅವರು ಶಸ್ತ್ರಚಿಕಿತ್ಸೆ ಮಾಡದೆ ಹಾಗೆ ಉಳಿಯಲು ಮುಂದಾದರು.
ಹೀಗಾಗಿ ಇಬ್ಬರು ಸಹೋದರಿಯರು ಒಟ್ಟಿಗೆ ಬೆಳೆದರು. ಅಬ್ಬಿ ಮತ್ತು ಬ್ರಿಟಾನಿ ಎಂಬ ರಿಯಾಲಿಟಿ ಸರಣಿಯಲ್ಲಿ ಕಾಣಿಸಿಕೊಂಡ ಬಳಿಕ ಇಬ್ಬರಿ ಹೆಚ್ಚು ಜನಪ್ರೀಯತೆ ಗಳಿಸಿದರು. ಈಗ ಇಬ್ಬರು ವಿವಾಹವಾಗಿರುವ ಕುರಿತು ಭಾರೀ ಸುದ್ದಿಯಾಗಿದೆ. ಮದುವೆಯಾಗಿ ವರ್ಷಗಳು ಕಳೆದ ಬಳಿಕ ಅವರ ಜೋಡಿಯ ಫೋಟೋಗಳು ಹರಿದಾಡುತ್ತಿವೆ. ಜೊತೆಗೆ ಅವರ ಹೋರಾಟದ ಜೀವನಕ್ಕೆ ಭಾರೀ ಮೆಚ್ಚುಗೆ ಕೇಳಿಬಂದಿದೆ.
ಅಬ್ಬಿ ಮತ್ತು ಬ್ರಿಟಾನಿ ಕಾಲೇಜಿನಲ್ಲಿ ಪದವಿ ಪಡೆದ ಸ್ವಲ್ಪ ಸಮಯದ ನಂತರ ಶಿಕ್ಷಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಆದರೆ ಅವರ ವೇತನ ಹಂಚಿಕೊಳ್ಳಲು ಹೇಳಲಾಯಿತು. ಇಬ್ಬರು ಈಗ ಗಣಿತ ಮತ್ತು ವಿಜ್ಞಾನ ವಿಷಯಗಳ ಕಲಿಸುತ್ತಾರೆ.
ಒಂದೇ ದೇಹವಾದರೂ ಆಲೋಚನೆಗಳು ಬೇರೆ
ಇಬ್ಬರ ದೇಹಗಳು ಒಂದೇ ಆಗಿದ್ದರು ಹಲವು ಕ್ರಿಯೆಯಲ್ಲಿ ಭಿನ್ನ ಎನಿಸಿದೆ. ಇಬ್ಬರ ದೇಹದ ಉಷ್ಣಾಂಶ ಸಹ ಭಿನ್ನವಾಗಿದೆ. ಅಬ್ಬಿ ಬ್ರಿಟಾನಿಗಿಂತ ಹೆಚ್ಚು ಉಷ್ಣಾಂಶ ಹೊಂದಿದ್ದಾಳೆ. ಜೊತೆಗೆ ಇಬ್ಬರ ಆಲೋಚನೆಗಳು ಬಹಳ ಭಿನ್ನವಾಗಿದೆ. ಇಬ್ಬರಿಗೂ ಒಮ್ಮೆ ಹಸಿವಾಗುವುದಿಲ್ಲ, ಇಬ್ಬರಿಗೂ ಒಂದೇ ಬಾರಿಗೆ ಜ್ವರ ಕಾಣಿಸಿಕೊಂಡಿಲ್ಲ. ಕೆಲವು ಅಂಗಗಳು ಮಾತ್ರ ಹಂಚಿಕೊಂಡಿದ್ದರು, ಇವರದ್ದು ಎರಡು ದೇಹ ಅಂತಲೇ ವೈದ್ಯಕೀಯ ಲೋಕ ಪರಿಗಣಿಸಿದೆ.
ಅವರು ತಮ್ಮ ಸ್ವಂತ ಹೃದಯ, ಶ್ವಾಸಕೋಶಗಳು, ಹೊಟ್ಟೆ ಮತ್ತು ಮೂತ್ರಪಿಂಡವನ್ನು ಹೊಂದಿದ್ದಾರೆ ಎಂದು ವಿವರಿಸಿದರು. ಆದಾಗ್ಯೂ, ಅವರು ಕೊಲೊನ್, ಗುದನಾಳ, ಸಂತಾನೋತ್ಪತ್ತಿ ಅಂಗಗಳು ಮತ್ತು ಮೂತ್ರಕೋಶವನ್ನು ಇಬ್ಬರೂ ಹಂಚಿಕೊಳ್ಳುತ್ತಾರೆ. ಇದರಲ್ಲಿ ದೇಹದ ಒಂದು ಭಾಗದಲ್ಲಿ ಬೆವರು ಬರುವುದು ಒಂದು ಭಾಗಕ್ಕೆ ಚಳಿ ಎನಿಸುವುದು ಸಹ ನಡೆಯುತ್ತದೆ. ಇದು ನಮ್ಮ ನಿಮ್ಮ ನಡುವಿನ ಎರಡು ದೇಹಗಳ ನಡುವಿನ ಲಕ್ಷಣವಾಗಿದೆ.
ಹೀಗಾಗಿ ಈ ಇಬ್ಬರು ಸಹೋದರಿಯರು ವಿಶ್ವದ ಗಮನ ಸೆಳೆದಿದ್ದಾರೆ. ಈಗ ಮದುವೆಯ ವಿಚಾರದಲ್ಲಿ ಇಬ್ಬರು ಎಲ್ಲರ ಗಮನ ಸೆಳೆದಿದ್ದಾರೆ.



Click it and Unblock the Notifications